ಕಾಸರಗೋಡು ಭಾಗದ ಅಪರಾಧ ಸುದ್ದಿಗಳು 


Team Udayavani, Mar 9, 2019, 12:40 AM IST

crime-pix.jpg

ಬಂದೂಕು ತೋರಿಸಿ ಅಪಹರಣ:ಓರ್ವ ಕಸ್ಟಡಿಗೆ, ನಾಲ್ವರಿಗಾಗಿ ಶೋಧ
ಕುಂಬಳೆ:
ಬಂದ್ಯೋಡ್‌ನ‌ಲ್ಲಿ ಮಾ. 7ರಂದು ರಾತ್ರಿ ಗೂಂಡಾ ತಂಡವೊಂದು ಇಬ್ಬರು ಯುವಕರಿಗೆ ಹಲ್ಲೆ ಮಾಡಿ ಓರ್ವನನ್ನು ಅಪಹರಿಸಿದ ಘಟನೆ ನಡೆದಿದೆ. ಕ್ಷಿಪ್ರ ಪೊಲೀಸ್‌ ಕಾರ್ಯಾಚರಣೆಯಲ್ಲಿ ಓರ್ವನನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು, ನಾಲ್ವರಿಗಾಗಿ ಶೋಧ ನಡೆಯುತ್ತಿದೆ.ಮಾ. 7ರಂದು ರಾತ್ರಿ 9.30ಕ್ಕೆ ಬಂದ್ಯೋಡ್‌ನ‌ ಖಾಸಗಿ ಆಸ್ಪತ್ರೆಯ ಮುಂದೆ ಬೊಲೇರೋ ಕಾರಿನಲ್ಲಿ ಇಬ್ಬರು ಯುವಕರು ಕುಳಿತಿದ್ದರು. ಈ ಸಂದರ್ಭದಲ್ಲಿ ಈ ಹಿಂದೆ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ವ್ಯಕ್ತಿಯ ನೇತೃತ್ವದಲ್ಲಿ ಐದು ಮಂದಿ ತಂಡ ಆಲ್ಟೋ ಕಾರಿನಲ್ಲಿ ಬಂದು ಬೊಲೇರೋ ಕಾರಿನಲ್ಲಿದ್ದ ಇಬ್ಬರು ಯುವಕರಿಗೆ ಬಂದೂಕು ತೋರಿಸಿ ಹಲ್ಲೆ ಮಾಡಿ ಓರ್ವನನ್ನು ಅಪಹರಿಸಿ ಪರಾರಿಯಾಯಿತು. 

ಕಾರಿನಲ್ಲಿದ್ದ ಇನ್ನೋರ್ವ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ತತ್‌ಕ್ಷಣ ಸ್ಥಳಕ್ಕೆ ಧಾವಿಸಿ ಕುಬಣೂರು ಭಾಗಕ್ಕೆ ಪರಾರಿಯಾದ ತಂಡವನ್ನು ಬೆನ್ನಟ್ಟಿ ಪಚ್ಚಂಬಳ ದರ್ಗಾ ಸಮೀಪದಿಂದ ಓರ್ವನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಅಪಹೃತ ಯುವಕನನ್ನು ಪೊಲೀಸರು ರಕ್ಷಿಸಿದ್ದಾರೆ. ಪರಾರಿಯಾದ ನಾಲ್ವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಗಾಂಜಾ ಸಹಿತ ಬಂಧನ
ಕುಂಬಳೆ:
ಬಂದ್ಯೋಡ್‌ನಿಂದ 150 ಗ್ರಾಂ ಗಾಂಜಾ ಸಹಿತ ಉಪ್ಪಳ ಬಳಿಯ ಸಂತಡ್ಕ ನಿವಾಸಿ ಮುನೀರ್‌ ಯಾನೆ ಅಬ್ದುಲ್‌ ರಹ್ಮಾನ್‌(42)ನನ್ನು ಕುಂಬಳೆ ಅಬಕಾರಿ ದಳ ಬಂಧಿಸಿದೆ. ಈತ ಸಂಚರಿಸುತ್ತಿದ್ದ  ಬೈಕ್‌ನ್ನು ವಶಪಡಿಸಿಕೊಳ್ಳಲಾಗಿದೆ.

ಪೋಕೊÕà ಪ್ರಕರಣ: 
ಆರೋಪಿ ತಪ್ಪಿತಸ್ಥ
ಕಾಸರಗೋಡು:
ಏಳು ವರ್ಷ ಪ್ರಾಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಲೆತ್ನಿಸಿದ ಪ್ರಕರಣದ ಆರೋಪಿ ಚೀಮೇನಿ ಕರಿಮಣಲ್‌ಪಾರ ಕೋಕ್ಕರ ಪೆಟ್ಟಿಕುಂಡ್‌ ಚೆನ್ನಡ್ಕಂ  ಪುದಿಯವೀಟಿಲ್‌ ಹೌಸ್‌ನ ರಾಜೀವನ್‌ ಪಿ.ವಿ. (45) ತಪ್ಪಿತಸ್ಥನೆಂದು ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್‌ ನ್ಯಾಯಾಲಯ (ಪ್ರಥಮ) ತೀರ್ಪು ನೀಡಿದೆ.

2016ರ ಎಪ್ರಿಲ್‌ 10ರಂದು ಚೀಮೇನಿ ಪೊಲೀಸ್‌ ಠಾಣೆಯ ವ್ಯಾಪ್ತಿಗೊಳಪಟ್ಟ ಪ್ರದೇಶದ ಕ್ವಾರ್ಟರ್ಸ್‌ವೊಂದರಲ್ಲಿ ಏಳು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಲೆತ್ನಿಸಿದ ದೂರಿನಂತೆ ಚೀಮೇನಿ ಪೊಲೀಸರು ರಾಜೀವನ್‌ ವಿರುದ್ಧ ಪೋಕೊÕà ಕಾನೂನು ಪ್ರಕಾರ ಕೇಸು ದಾಖಲಿಸಿದ್ದರು.

ವಾಹನ, ಜುವೆಲರಿಗೆ 
ಹಾನಿಗೊಳಿಸಿದ ಆರೋಪಿ ಬಂಧನ
ಉಪ್ಪಳ: ಉಪ್ಪಳ ರೈಲು ನಿಲ್ದಾಣ ರಸ್ತೆ ಬದಿ ನಿಲ್ಲಿಸಲಾಗಿದ್ದ 5 ವಾಹನಗಳು ಮತ್ತು ಜುವೆಲರಿ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್‌ಗೆ ಹಾನಿಗೈದ ಪ್ರಕರಣಕ್ಕೆ ಸಂಬಂಧಿಸಿ ಉಪ್ಪಳ ಮಣಿಮುಂಡ ನಿವಾಸಿ ಮೊಹಮ್ಮದ್‌ ಶರೀಫ್‌ (40)ನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.

ಚಿನ್ನದಂಗಡಿಯಿಂದ ಕಳವು:
ಒಂದೂವರೆ ವರ್ಷ ಸಜೆ
ಕಾಸರಗೋಡು
: 2015ರ ಅ. 29ರಂದು ಬದಿಯಡ್ಕ ಮೇಲಿನ ಪೇಟೆಯ ಕೇಶವ ಆಚಾರಿ ಅವರ ಮಾಲಕತ್ವದ ಪವಿತ್ರ ಜುವೆಲರಿ ವರ್ಕ್ಸ್ನ ಬೀಗ ಮುರಿದು ಒಳನುಗ್ಗಿ 93 ಸಾವಿರ ರೂ. ಮೌಲ್ಯದ ಚಿನ್ನವನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಕಣ್ಣೂರು ಆಲಕ್ಕೋಡು ನೆಲ್ಲಂಕುನ್ನು ತೆಕ್ಕೇಮುರಿಯಿಲ್‌ ಹೌಸ್‌ನ ಥೋಮಿಚ್ಚನ್‌ ಮ್ಯಾಥ್ಯೂ (50)ಗೆ ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್‌ ನ್ಯಾಯಾಲಯ (1) ಒಂದೂವರೆ ವರ್ಷ ಸಜೆ ವಿಧಿಸಿ ತೀರ್ಪು ನೀಡಿದೆ.

ಮಾವೋವಾದಿಗಳ ಬೇಟೆಗಾಗಿ 
“ಆಪರೇಷನ್‌ ಅನಕೊಂಡಾ’
ಕಾಸರಗೋಡು:
ರಾಜ್ಯದಲ್ಲಿ ಮಾವೋವಾದಿ ಚಟುವಟಿಕೆಗಳು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಾವೋ ವಾದಿಗಳ ವಿರುದ್ಧ ಕೇರಳ ಪೊಲೀಸರು ಆಪರೇಷನ್‌ ಅನಕೊಂಡಾ ಎಂಬ ಹೆಸರಿನಲ್ಲಿ ಕಾರ್ಯಾಚರಣೆಗೆ ಚಾಲನೆ ನೀಡಿದ್ದಾರೆ.

ನಕ್ಸಲ್‌ ನಿಗ್ರಹ ಪಡೆಯ ತಂಡರ್‌ ಬೋಲ್ಟ್ ಕಮಾಂಡೋ ಪಡೆ, ಆ್ಯಂಟಿ ನಕ್ಸಲ್‌ ಸ್ಕಾ Ìಡ್‌ ಮತ್ತು ಸ್ಥಳೀಯ ಪೊಲೀಸರ ಸಹಾಯದೊಂದಿಗೆ ವಿಶೇಷ ಹಾಗೂ ತಜ್ಞ ರೀತಿಯ ತರಬೇತಿ ಪಡೆಯನ್ನು ಸೇರ್ಪಡೆಗೊಳಿಸಿ ಆಪರೇಷನ್‌ ಅನಕೊಂಡಾ ಕಾರ್ಯಾಚರಣೆ ನಡೆಸಲಾಗುತ್ತಿದೆ.

ವಯನಾಡಿನ ವ್ಯತಿರಿಯ ಉಪವನಿ ಎಂಬ ಹೆಸರಿನ ಖಾಸಗಿ ರಿಸೋರ್ಟ್‌ನಲ್ಲಿ ಮಾ. 6 ರಂದು ರಾತ್ರಿ ಮಾವೋವಾದಿಗಳ ವಿರುದ್ಧ ನಡೆದ ಕಾರ್ಯಾಚರಣೆಯ ಸಂದರ್ಭದಲ್ಲಿ ಪೊಲೀಸ್‌ ಗುಂಡಿಗೆ ಮಾವೋವಾದಿಯ ಕಬನಿ ದಳಕ್ಕೆ ಸೇರಿದ ಸಿ.ಪಿ.ಜಲೀಲ್‌(26) ಬಲಿಯಾಗಿದ್ದನು. ಇದರಲ್ಲಿ ಓರ್ವ ಗಾಯಗೊಂಡಿದ್ದ.

ಟಾಪ್ ನ್ಯೂಸ್

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Ireland postponed Aussie series

Dublin; ಆಸೀಸ್‌ ಸರಣಿ ಮುಂದೂಡಿದ ಐರ್ಲೆಂಡ್‌

“Will not play T20 World Cup for West Indies”: Sunil Narine

T20 Cricket: “ವಿಂಡೀಸ್‌ ಪರ ಟಿ20 ವಿಶ್ವಕಪ್‌ ಆಡಲ್ಲ’: ಸುನೀಲ್‌ ನಾರಾಯಣ್‌ ಸ್ಪಷ್ಟ ನುಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-ksrgdu

Crime: ಕಾಸರಗೋಡು ಭಾಗದ ಅಪರಾಧ ಸುದ್ದಿಗಳು 

Kasaragod ಎನ್‌ಡಿಎ ಅಭ್ಯರ್ಥಿ ಅಶ್ವಿ‌ನಿ ಪ್ರಚಾರಕ್ಕೆ ಅಡ್ಡಿ: ಕೇಸು ದಾಖಲು

Kasaragod ಎನ್‌ಡಿಎ ಅಭ್ಯರ್ಥಿ ಅಶ್ವಿ‌ನಿ ಪ್ರಚಾರಕ್ಕೆ ಅಡ್ಡಿ: ಕೇಸು ದಾಖಲು

ಸಿಡಿದ ಗ್ಯಾಸ್‌ ಸಿಲಿಂಡರ್‌; ಪಾರಾದ ಕುಟುಂಬ: ಶೇಣಿ ಬಾರೆದಳದಲ್ಲಿ ಮನೆಗೆ ತಗಲಿದ ಬೆಂಕಿ

ಸಿಡಿದ ಗ್ಯಾಸ್‌ ಸಿಲಿಂಡರ್‌; ಪಾರಾದ ಕುಟುಂಬ: ಶೇಣಿ ಬಾರೆದಳದಲ್ಲಿ ಮನೆಗೆ ತಗಲಿದ ಬೆಂಕಿ

banUppala ಮನೆಯಿಂದ ನಗ, ನಗದು ಕಳವು: ಯುವಕನಿಗೆ ಕೋವಿ ತೋರಿಸಿ ಬೆದರಿಕೆ

Uppala ಮನೆಯಿಂದ ನಗ, ನಗದು ಕಳವು: ಯುವಕನಿಗೆ ಕೋವಿ ತೋರಿಸಿ ಬೆದರಿಕೆ

Kasaragod ವಂದೇ ಭಾರತ್‌ ರೈಲು ಢಿಕ್ಕಿ: ವಿದ್ಯಾರ್ಥಿನಿ ಸಾವು

Kasaragod ವಂದೇ ಭಾರತ್‌ ರೈಲು ಢಿಕ್ಕಿ: ವಿದ್ಯಾರ್ಥಿನಿ ಸಾವು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.