ಕುಂಬಳೆ : ಯುವಕ ಕೊಲೆ ಪ್ರಕರಣ : ಇಬ್ಬರ ವಿಚಾರಣೆ, 3 ಕಾರುಗಳು ವಶ
Team Udayavani, Jun 29, 2022, 12:12 AM IST
ಕುಂಬಳೆ: ತಂಡವೊಂದು ಅಪಹರಿಸಿ ಕೊಲೆಗೈದ ಪುತ್ತಿಗೆಯ ಮುಗುರೋಡಿನ ಅಬೂಬಕ್ಕರ್ ಸಿದ್ಧಿಖ್ ಹತ್ಯೆಯ ಆರೋಪಿಗಳಲ್ಲಿ ಕೆಲವರು ಗೋವಾಕ್ಕೆ ಪರಾರಿಯಾಗಿರುವುದಾಗಿ ತಿಳಿದು ಬಂದಿದೆ.
ಪೊಲೀಸರಿಗೆ ಎಲ್ಲ ಆರೋಪಿಗಳ ಮಾಹಿತಿ ದೊರೆತಿದ್ದು, ಇಬ್ಬರನ್ನು ವಶಪಡಿಸಿ ತನಿಖೆ ನಡೆಸುತ್ತಿದ್ದಾರೆ. ಕೆಲವು ಆರೋಪಿಗಳು ಗಲ್ಫ್ಗೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿರುವುದಾಗಿ ತಿಳಿದು ಬಂದಿದೆ. ಅಲ್ಲದೆ ಕೊಲೆಗೆ ಬಳಸಿದ ಮೂರು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಿದ್ಧಿಖ್ ಅವರ ಸಹೋದರ ಅನ್ಸಾರಿ ಅವರ ದೂರಿನಂತೆ ನೂಜಿ, ಶಾಫಿ ಸಹಿತ 15 ಮಂದಿಯ ವಿರುದ್ಧ ಮಂಜೇಶ್ವರ ಠಾಣೆಯಲ್ಲಿ ಕೇಸು ದಾಖಲಾಗಿದೆ. ಹಣದ ವಿಚಾರ ಕೊಲೆಗೆ ಕಾರಣವೆಂಬುದಾಗಿ ತಿಳಿದು ಬಂದಿದೆ.
ತಂಡದಿಂದ ಗಂಭೀರ ಹಲ್ಲೆಗೊಳಗಾದ ಅನ್ವರ್ ಮತ್ತು ಅನ್ಸಾರಿ ಆಸ್ಪತ್ರೆಯಲ್ಲಿ ಚೇತರಿಸುತ್ತಿದ್ದಾರೆ. ಕಾಸರಗೋಡು ಡಿವೈಎಸ್‌ಪಿ ಬಾಲಕೃಷ್ಣ ನಾಯರ್ ಅವರ ನೇತೃತ್ವದಲ್ಲಿ 10ಮಂದಿ ಪೊಲೀಸರ ತಂಡವನ್ನು ತನಿಖೆಗೆ ನೇಮಕಗೊಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸುರತ್ಕಲ್ :ಮಿತ್ರಪಟ್ಟಣ ಭಾಗದಲ್ಲಿ ಭಾರಿ ಕಡಲ್ಕೊರೆತ : ಅಪಾಯದ ಅಂಚಿನಲ್ಲಿ ಮೀನುಗಾರಿಕಾ ರಸ್ತೆ
ಪ್ರವೀಣ್ ಹತ್ಯೆ: 16 ದಿನದಲ್ಲೇ ಪ್ರಮುಖ ಆರೋಪಿಗಳ ಬಂಧನ; ಕುಟುಂಬಸ್ಥರು ಹೇಳಿದ್ದೇನು?
ಪದೇ ಪದೇ ಜಾಗ ಬದಲಾಯಿಸುತ್ತಿದ್ದ ಪ್ರವೀಣ್ ಹಂತಕರು : ಆರೋಪಿಗಳ ಮಾಹಿತಿ ಬಿಚ್ಚಿಟ್ಟ ಎಡಿಜಿಪಿ
ಕಿನ್ಯ ಗ್ರಾಮದಲ್ಲಿ ಸಮಸ್ಯೆಗಳೇ ಬಹುದೊಡ್ಡದು
ಬೆಳ್ತಂಗಡಿ ತಾಲೂಕಿನ 18 ಕೆರೆಗಳು ಆಯ್ಕೆ: ಅಮೃತ ಸರೋವರ ಯೋಜನೆ