ಭಾರತೀಯ ಸಂಸ್ಕೃತಿಯಲ್ಲಿ ದೀಪಕ್ಕೆ ಮಹತ್ವದ ಸ್ಥಾನ : ಎಚ್‌. ಆಸ್ರಣ್ಣ


Team Udayavani, Mar 27, 2018, 9:40 AM IST

Deepa-26-3.jpg

ಉಪ್ಪಳ: ಬೆಳಕು ಅಂಧಕಾರದಿಂದ ಮೇಲೆತ್ತಿ ಜ್ಞಾನದ ಸುಜ್ಞಾನ ನೀಡಿ ಉದ್ಧರಿಸುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ದೀಪಕ್ಕೆ ಮಹತ್ವದ ಸ್ಥಾನವಿದ್ದು, ಪರಂಪರೆಯಿಂದ ಮನೆ-ಮನಗಳಲ್ಲಿ ‘ಜ್ಯೋತಿ’ ಸುಜ್ಞಾನವನ್ನು ಬೀರಿ ಯಶಸ್ಸಿಗೆ ಕಾರಣವಾಗುತ್ತಿದೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಪ್ರಧಾನ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು. ಉಪ್ಪಳದ ಅಗ್ನಿ ಫ್ರೆಂಡ್ಸ್‌ ಇದರ ದಶಮಾನೋತ್ಸವದ ಅಂಗವಾಗಿ ಐಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರ ಹಾಗೂ ಮೈದಾನದಲ್ಲಿ ಹಮ್ಮಿಕೊಳ್ಳಲಾದ ಲಕ್ಷದೀಪೋತ್ಸವ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಸುರೇಂದ್ರನ್‌ ಮಾತನಾಡಿ, ಸನಾತನ ಧರ್ಮ ಪುನರುತ್ಥಾನಕ್ಕೆ ಯುವ ಸಮೂಹ ಧಾರ್ಮಿಕ – ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ಬೆಳೆಸುವ ಯತ್ನಗಳು ಸ್ತುತ್ಯರ್ಹವಾಗಿದ್ದು, ಧಾರ್ಮಿಕ ಪ್ರಜ್ಞೆ ಇನ್ನಷ್ಟು ವಿಸ್ತರಿಸಲ್ಪಡಬೇಕು ಎಂದು ತಿಳಿಸಿದರು. ಧಾರ್ಮಿಕ ಶ್ರದ್ಧಾಕೇಂದ್ರಗಳನ್ನು ಕೇಂದ್ರವಾಗಿರಿಸಿ ಪ್ರತಿಯೊಂದು ಕುಟುಂಬಗಳೂ ಧರ್ಮ ಸಂರಕ್ಷಣೆ, ಸಂಸ್ಕೃತಿ ಸಂವರ್ಧನೆಗೆ ಕಟಿಬದ್ಧರಾಗಿರಬೇಕು. ಇದರಿಂದ ಸಮೃದ್ಧ ರಾಷ್ಟ್ರ ನಿರ್ಮಾಣ ಸಾಧ್ಯವಾಗುವುದೆಂದು ಅವರು ತಿಳಿಸಿದರು.

ಧಾರ್ಮಿಕ ಮುಂದಾಳು ಡಾ| ಎಂ.ಶ್ರೀಧರ ಭಟ್‌ ಉಪ್ಪಳ ಅಧ್ಯಕ್ಷತೆ ವಹಿಸಿದ್ದರು. ಉದ್ಯಾವರ ಅರಸು ಮಂಜಿಷ್ಣಾರು ದೈವ ಕ್ಷೇತ್ರದ ರಾಜ ಬೆಳ್ಚಪ್ಪಾಡ ಗೌರವ ಉಪಸ್ಥಿತರಿದ್ದರು. ಉಪ್ಲೇರಿ ಮಂತ್ರಮೂರ್ತಿ ಗುಳಿಗ ಸನ್ನಿಧಿಯ ಪ್ರಧಾನ ಕರ್ಮಿ ಗೋಪಾಲಕೃಷ್ಣ ಕುಲಾಲ್‌ ವಾಂತಿಚ್ಚಾಲ್‌, ಐಲ ಶ್ರೀ ಕ್ಷೇತ್ರದ ಮೊಕ್ತೇಸರ ಕೃಷ್ಣಪ್ಪ ಐಲ, ಅಂಬಾರು ಶ್ರೀ ಸದಾಶಿವ ಕ್ಷೇತ್ರದ ಮೊಕ್ತೇಸರ ಡಿ.ಕೃಷ್ಣಪ್ಪ ಪೂಜಾರಿ ದೇರಂಬಳ, ಉದ್ಯಮಿ ಪ್ರಸಾದ್‌ ಶೆಟ್ಟಿ ಮಂಗಳೂರು, ಗೋರಕ್ಷಾ ಪ್ರಮುಖ್‌ ಸಂಚಾಲಕ ಗೋಪಾಲ ಶೆಟ್ಟಿ ಅರಿಬೈಲು, ಉದ್ಯಮಿ ಪಿ.ಆರ್‌.ಶೆಟ್ಟಿ ಕುಳೂರು, ವಾಮಂಜೂರು ಶ್ರೀ ಗುತ್ಯಮ್ಮ ಶ್ರೀ ಭಗವತೀ ಕ್ಷೇತ್ರದ ಕೋಶಾಧಿಕಾರಿ ಶಶಿಕಾಂತ್‌ ಐಲ, ಉಪ್ಪಳ ಶ್ರೀ ಭಗವತೀ ಕ್ಷೇತ್ರದ ಅಧ್ಯಕ್ಷ ಸುಕುಮಾರ್‌, ಉದ್ಯಮಿ ಶ್ರೀಧರ ಶೆಟ್ಟಿ ಮುಟ್ಟ, ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ, ಹಿಂದುಳಿದ ಜಾತಿ ಮೋರ್ಚಾದ ರಾಜ್ಯ ಸಮಿತಿ ಸದಸ್ಯ ನ್ಯಾಯವಾದಿ ನವೀನ್‌ ರಾಜ್‌ ಕೆ. ಜೆೆ., ಲಕ್ಷದೀಪೋತ್ಸವ ಸಮಿತಿ ಅಧ್ಯಕ್ಷ ಕೆ.ಪಿ. ವಲ್ಸರಾಜ್‌ ಉಪ್ಪಳ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು.

ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಹಿರಿಯ ಸಾಧಕರನ್ನು ಗಣ್ಯರ ಸಮಕ್ಷಮ ಗೌರವಿಸಲಾಯಿತು. ಹರೀಶ್‌ ಮಾಡ ಸ್ವಾಗತಿಸಿ, ಪದ್ಮಾ ಮೋಹನದಾಸ್‌ ಐಲ ವಂದಿಸಿದರು. ಸುರೇಶ್‌ ಶೆಟ್ಟಿ ಪರಂಕಿಲ, ಜಗದೀಶ್‌ ಪ್ರತಾಪನಗರ, ರವೀಂದ್ರ ಅಡ್ಕ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಜಿಲ್ಲೆಯಲ್ಲೇ ಮೊತ್ತಮೊದಲ ಬಾರಿಗೆ ಅಭೂತಪೂರ್ವವಾಗಿ ಸಾವಿರಾರು ಜನರ ಪಾಲ್ಗೊಳ್ಳುವಿಕೆಯೊಂದಿಗೆ ಲಕ್ಷ ದೀಪಗಳ ಪ್ರಜ್ವಲನೆ ನೆರವೇರಿತು. ಈ ಸಂದರ್ಭ ಐಲ ಶ್ರೀ ದುರ್ಗಾಪರಮೇಶ್ವರಿ ಕಲಾಸಂಘದವರಿಂದ ಭಜನಾ ಸಂಕೀರ್ತನೆ ನೆರವೇರಿತು. ಬಳಿಕ ವಿಶೇಷ ರಂಗಪೂಜೆ ನಡೆಯಿತು.

ಸಭಾ ಕಾರ್ಯಕ್ರಮಕ್ಕೂ ಮೊದಲು ಸಾಹಿತಿ, ಯಕ್ಷಗಾನ ಪ್ರಸಂಗಕರ್ತ ಯೋಗೀಶ್‌ ರಾವ್‌ ಚಿಗುರುಪಾದೆಯವರ ಅಧ್ಯಕ್ಷತೆಯಲ್ಲಿ “ದೀಪೋತ್ಸವ ಸಾಹಿತ್ಯ ಶಿಖೋಜ್ವಲನ’ ಕವಿ, ಕಾವ್ಯ, ವಾಚನ, ಗಾಯನ ನಡೆಯಿತು. ಅಗ್ನಿ ಫ್ರೆಂಡ್ಸ್‌ನ ಅಧ್ಯಕ್ಷ ಲೋಹಿತ್‌ ಕುಮಾರ್‌ ಉಪ್ಪಳ ಉಪಸ್ಥಿತರಿದ್ದರು. ಬಳಿಕ ಮಂಗಲ್ಪಾಡಿ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಕೆ.ಮೋಹನ್‌ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಅನುದಾನಗಳು ಮತ್ತು ಉದ್ಯೋಗ ವಿನಿಮಯ ದಾಖಲೀಕರಣದ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

ಅಗ್ನಿ ಫ್ರೆಂಡ್ಸ್‌ನ ಗೌರವ ಸಲಹೆಗಾರ ರಾದ ಅಶೋಕ್‌ ಹೊಳ್ಳ ಪೆರಿಂಗಡಿ, ಗೋಪಾಲ ಬಂದ್ಯೋಡು, ಅಶೋಕ ಅಂಬಾರು, ಸಹಸಂಚಾಲಕ ಸತೀಶ್‌ ಮುಳಿಂಜ, ಉಪಾಧ್ಯಕ್ಷರುಗಳಾದ ರಾಘವ ಕೊಪ್ಪಳ, ಬಾಬು ಶೆಣೈ, ರತೀಶ್‌ ಐಲ, ಜಯಕುಮಾರ ಬಂಗೇರ, ದಿನೇಶ್‌ ಚೆರುಗೋಳಿ, ಸತ್ಯ ವೀರನಗರ, ಸುಧೀರ್‌ ಕರ್ಕೇರ ಭಗವತಿ, ವಾಸುದೇವ ಹೆಬ್ಟಾರ್‌, ಧನ್‌ರಾಜ್‌ ಪ್ರತಾಪನಗರ, ವಸಂತ ಮಯ್ಯ, ವಿಜಯಕುಮಾರ್‌ ರೈ, ಕೇಶವ ಕೊಂಡೆವೂರು, ಸುರೇಶ್‌ ಶೆಟ್ಟಿ ಹೇರೂರು, ಭರತ್‌ ಕೋಡಿಬೈಲು, ಕಾರ್ಯದರ್ಶಿಗಳಾದ ಶಿವರಾಮ ಬಂಗೇರ, ದೀಕ್ಷಿತ್‌ ಐಲ, ರಾಜ್‌ ಕೋಡಿಬೈಲು, ಸುರೇಶ್‌ ಮುಟ್ಟ, ಕಿಶೋರ್‌ ಬೀಡಿಗದ್ದೆ, ಲೋಕೇಶ್‌ ಕಡಪ್ಪರ, ಕಿಶೋರ್‌ ಭಗವತಿ, ಚಂದ್ರಕಾಂತ ಶೆಟ್ಟಿ, ಅಶ್ವಲ್‌ ಕೋಡಿಬೈಲು, ಸನತ್‌ ಕುಮಾರ್‌ ಯು., ಪ್ರಮೋದ್‌ ಹೇರೂರು, ಕೋಶಾಧಿಕಾರಿ ದಿಲ್‌ರಾಜ್‌ ಸೋಂಕಾಲ್‌, ಲಕ್ಷದೀಪೋತ್ಸವ ಮಹಿಳಾ ಸಮಿತಿ ಅಧ್ಯಕ್ಷೆ ಮೀರಾ ಆಳ್ವ, ಪದಾಧಿಕಾರಿಗಳಾದ ನಿಶಾ ಐಲ, ರಜನೀ ಚಂದ್ರಕಾಂತ್‌, ತ್ರಿವೇಣಿ ಉಪ್ಪಳ, ಜಯಂತಿ ಶೆಟ್ಟಿ, ಕುಸುಮಾ ಕೋಡಿಬೈಲು, ಲಲಿತಾ ಕೊಂಡೆವೂರು, ಸುಗಂಧಿ ಐಲ, ರಾಜೀವಿ ಪೆರಿಂಗಡಿ ಮೊದಲಾದವರು ನೇತೃತ್ವ ನೀಡಿದರು.

ಟಾಪ್ ನ್ಯೂಸ್

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Electric shock: ಯುವಕನ ಸಾವು

Electric shock: ಯುವಕನ ಸಾವು

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Perla, Kasaragod; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Perla; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.