Udayavni Special

ಕಾಸರಗೋಡಿನ ಸಾಹಿತ್ಯ ಲೋಕ: ತಂತ್ರ ರತ್ನ ದಿ| ವಿ. ಗೋವಿಂದ ಭಟ್ಟ


Team Udayavani, May 28, 2018, 6:00 AM IST

v-govinda-bhatta.jpg

ಶ್ರೀ ಮದ್‌ ಜಗದ್ಗುರು ಶಂಕರ ಭಗವತ್ಪಾದಾಚಾ ರ್ಯರು ಈಶ್ವರಾಂಶ ಸಂಭೂತರಾಗಿ ಕೇರಳದ ಕಾಲಡಿಯಲ್ಲಿ ಜನಿಸಿ ಕೇವಲ 32 ವರ್ಷಗಳ ಜೀವಿತಾವಧಿಯಲ್ಲಿ ಅಮಾನುಷವಾದ ಕೆಲಸವನ್ನು ಪೂರೈಸಿದವರಾಗಿ ಅನೇಕ ಪ್ರಕರಣ ಗ್ರಂಥಗಳನ್ನೂ ಪ್ರಸ್ಥಾನತ್ರಯ ಭಾಷ್ಯಗಳನ್ನು ರಚಿಸಿ ಜ್ಞಾನಾವತಾರ ಪುರುಷರಾಗಿ ಅಂತರ್ದಾನ ಹೊಂದಿದವರು. 

ಪ್ರಕೃತ ಆ ಮೇರು ಪುರುಷರ ಸಾಲಿಗೆ ಹೋಲಿಸಬಹುದಾದ ಒಂದು ಹೆಸರು ದಿ| ಬಡಕ್ಕೇಕರೆ ಗೋವಿಂದ ಭಟ್ಟರದ್ದಾಗಿದೆ.ಕಾಸರಗೋಡು ತಾಲೂಕು ಕಾರಡ್ಕ ಗ್ರಾಮದ ಪ್ರತಿಷ್ಠಿತ ಕರ್ಹಾಡ ಬ್ರಾಹ್ಮಣ ಮನೆತನದ ಬಡಕ್ಕೇಕರೆ ಅಚ್ಯುತ ಭಟ್‌-ಚಂದ್ರಾವತಿ ದಂಪತಿಯ ಮೂವರು ಪುತ್ರರಲ್ಲಿ ಹಿರಿಯವರಾಗಿ ಗೋವಿಂದ ಭಟ್ಟರು 1967 ಜೂನ್‌ 17ರಂದು ಜನಿಸಿದರು. 

ಮಧು ಸೂದನ(ಕುಶಾಲನಗರದಲ್ಲಿ ಯೋಗ ಶಿಕ್ಷಕರು), ರವೀಂದ್ರ (ಹೈದರಾಬಾದ್‌ನಲ್ಲಿ ವ್ಯಾಪಾರಿ) ಸೋದರರು.
ದಿ| ಬಡಕ್ಕೇಕರೆ ಗೋವಿಂದ ಭಟ್ಟರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕಾರಡ್ಕ ಶಾಲೆಯಲ್ಲಿ ಹಾಗೂ ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮುಳ್ಳೇರಿಯದ ವಿದ್ಯಾಲಯದಲ್ಲಿ ಪಡೆ ದರು. ಚಿಕ್ಕಂದಿನಲ್ಲಿಯೇ ಪೌರೋಹಿತ್ಯ ಮತ್ತು ತಾಂತ್ರಿಕ ಪೂಜಾವಿಧಿ ಗಳಲ್ಲಿ ವಿಶೇಷ ಒಲವಿದ್ದ ಅವರು ಕೇರಳದ ಆಲುವಾ ತಂತ್ರ ವಿದ್ಯಾಪೀಠದಲ್ಲಿ ಎಂಟು ವರ್ಷಗಳ ತಾಂತ್ರಿಕ ವಿದ್ಯಾಭ್ಯಾಸಗೈದು “ತಂತ್ರರತ್ನ’ ಪದವಿ ಪಡೆದು ಸಂಸ್ಕೃತ ಮತ್ತು ಮಲಯಾಳ ಭಾಷೆಗಳಲ್ಲೂ ಪಾಂಡಿತ್ಯ ಗಳಿಸಿದರು.
ಆಲುವಾ ತಂತ್ರ ಪೀಠದ ಮುಖ್ಯ ಗುರುಗಳಾದ ದಿವಾಕರನ್‌ ನಂಬೂ ದಿರಿಪ್ಪಾಡರಿಂದ ಸಕಲ ತಾಂತ್ರಿಕ ವಿಧಿವಿಧಾನಗಳನ್ನು, ವೈದಿಕ ಕ್ರಿಯಾ ವಿಧಾನಗಳನ್ನು  ಅಧ್ಯಯನ ಮಾಡಿ ಅನೇಕ ದೇವಾಲಯಗಳಲ್ಲಿ ದೇವತಾ ಪ್ರತಿಷ್ಠೆ, ಬ್ರಹ್ಮಕಲಶಾದಿಗಳ ನೇತೃತ್ವ ವಹಿಸಿ ನೆರವೇರಿಸಿ ಪುಣ್ಯ ಭಾಜನರಾದವರು.

ಸಾಹಿತ್ಯ ಸೇವೆ
ದಿ| ಗೋವಿಂದ ಭಟ್ಟರು ಆಸಕ್ತ ಆಸ್ತಿಕ ಮಹನೀಯ ರಿಗೂ, ವಿದ್ಯಾರ್ಥಿಗಳಿಗೂ ಉಪಯುಕ್ತವಾದ “ದೇವಾರ್ಚನಾ ಕಲ್ಪ’, “ದುರ್ಗಾ ಪೂಜಾವಿಧಿ ’ ಇತ್ಯಾದಿ ಮಹತ್‌ ಕೃತಿಗಳನ್ನಲ್ಲದೆ ಸ್ತ್ರೀ-ಪುರುಷ ಭೇದವಿಲ್ಲದೆ ಎಲ್ಲರೂ ತಮ್ಮತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಶ್ರೀ ಮದ್‌ ಜಗದ್ಗುರು ಶಂಕರಾಚಾರ್ಯರಿಂದ ರಚಿತವಾದ “ಸೌಂದರ್ಯ ಲಹರಿ’ ಎಂಬ ಕೃತಿಯಿಂದ ಮಂತ್ರ ಸಮಾನವಾದ ಕೆಲವು ಶ್ಲೋಕಗಳನ್ನು ಉದ್ಧರಿಸಿ ಮಲಯಾಳ ಭಾಷೆಯಲ್ಲಿ “ಸರ್ವೈಶ್ವರ್ಯ ಪೂಜಾ’ ಎಂಬ ಪೂಜಾ ಸಂವಿಧಾನ ಕೃತಿಯನ್ನು ರಚಿಸಿದ್ದು ಅದನ್ನು ಅವರ ಶಿಷ್ಯವೃಂದದವರ ಆಶಯದಂತೆ ಅವರ ಸೋದರ ಸಂಬಂಧಿ ಬಡಕ್ಕೇಕರೆ ಗೋಪಿನಾಥ ಶರ್ಮರು ಪ್ರಕಾಶಿಸಿರುತ್ತಾರೆ.

ಅಲ್ಪ ವಯಸ್ಸಿನಲ್ಲಿಯೇ ಕನ್ನಡ ಸಾಹಿತ್ಯ ಲೋಕಕ್ಕೆ ಮಹತ್ತರವಾದ ಕೃತಿಗಳನ್ನು ರಚಿಸಿ ನೀಡಿದ ಗೋವಿಂದ ಭಟ್ಟರು 2013 ಡಿ. 10ರಂದು  ನಿಧನ ಹೊಂದಿದರು.

– ಲೇ: ಕೇಳು ಮಾಸ್ತರ್‌ ಅಗಲ್ಪಾಡಿ       

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಅಡಿಕೆ ಮಾತ್ರವೇ ಉಪಯೋಗಿಸಿದರೆ ಅಪಾಯವಿಲ್ಲ 

ಅಡಿಕೆ ಮಾತ್ರವೇ ಉಪಯೋಗಿಸಿದರೆ ಅಪಾಯವಿಲ್ಲ 

ಆತಂಕದ ನಡುವೆ ಇಂದಿನಿಂದ ಅಧಿವೇಶನ : 70 ಮಂದಿ ಶಾಸಕರಿಗೆ ಕೋವಿಡ್ ಸೋಂಕು?

ಆತಂಕದ ನಡುವೆ ಇಂದಿನಿಂದ ಅಧಿವೇಶನ : 70 ಮಂದಿ ಶಾಸಕರಿಗೆ ಕೋವಿಡ್ ಸೋಂಕು?

ಬಾಲ್ಯ ವಿವಾಹ ಪಿಡುಗು; ಕೋವಿಡ್ ಕಾಲದಲ್ಲೇ ಹೆಚ್ಚು!

ಬಾಲ್ಯ ವಿವಾಹ ಪಿಡುಗು; ಕೋವಿಡ್ ಕಾಲದಲ್ಲೇ ಹೆಚ್ಚು!

ಇಂದು RCB ಅಖಾಡಕ್ಕೆ; ಹೈದರಾಬಾದ್‌ ಎದುರಾಳಿ

ಇಂದು RCB ಅಖಾಡಕ್ಕೆ; ಹೈದರಾಬಾದ್‌ ಎದುರಾಳಿ

‘ಡ್ಯಾಡ್ಸ್‌ ಆರ್ಮಿ’ಯ ಸಾಹಸಕ್ಕೆ ಧೋನಿ ಖುಷ್‌

‘ಡ್ಯಾಡ್ಸ್‌ ಆರ್ಮಿ’ಯ ಸಾಹಸಕ್ಕೆ ಧೋನಿ ಖುಷ್‌

ಅ.17ರಿಂದ ‘ರಾಮಲೀಲಾ’ ಶೋ

ಅ.17ರಿಂದ ‘ರಾಮಲೀಲಾ’ ಶೋ

Punjab-2

IPL-2020ಯ ಮೊದಲ ಸೂಪರ್ ಓವರ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಚಿವ, ಶಾಸಕರ ರಾಜೀನಾಮೆಗೆ ಬಿಜೆಪಿ ಪಂಜಿನ ಮೆರವಣಿಗೆ

ಸಚಿವ, ಶಾಸಕರ ರಾಜೀನಾಮೆಗೆ ಬಿಜೆಪಿ ಪಂಜಿನ ಮೆರವಣಿಗೆ

ಕಾಸರಗೋಡು: ಜನಪರ ಹೊಟೇಲ್‌ಗ‌ಳ ಉದ್ಘಾಟನೆ

ಕಾಸರಗೋಡು: ಜನಪರ ಹೊಟೇಲ್‌ಗ‌ಳ ಉದ್ಘಾಟನೆ

mogral

ಮೊಗ್ರಾಲ್‌ ಯುನಾನಿ ಆಸ್ಪತ್ರೆಯ ನೂನತ ಕಟ್ಟಡಕ್ಕೆ ಶಿಲಾನ್ಯಾಸ

ಜಿಲ್ಲಾಧಿಕಾರಿ ಕಚೇರಿಗೆ ಬಿಜೆಪಿ ಮಹಿಳಾ ಮೋರ್ಚಾದಿಂದ ಪ್ರತಿಭಟನೆ ಜಾಥಾ

ಜಿಲ್ಲಾಧಿಕಾರಿ ಕಚೇರಿಗೆ ಬಿಜೆಪಿ ಮಹಿಳಾ ಮೋರ್ಚಾದಿಂದ ಪ್ರತಿಭಟನೆ ಜಾಥಾ

ಪೈನ್‌ ಆ್ಯಂಡ್‌ ಪಾಲಿಯೇಟಿವ್‌ ವಾಹನಕ್ಕೆ ಸಚಿವ ಇ. ಚಂದ್ರಶೇಖರನ್ ರಿಂದ ಹಸುರು ನಿಶಾನೆ

ಪೈನ್‌ ಆ್ಯಂಡ್‌ ಪಾಲಿಯೇಟಿವ್‌ ವಾಹನಕ್ಕೆ ಸಚಿವ ಇ. ಚಂದ್ರಶೇಖರನ್ ರಿಂದ ಹಸುರು ನಿಶಾನೆ

MUST WATCH

udayavani youtube

Dr.Harsha Kamath : ಕಾರ್ಕಳದ ಈ Doctor ಕಲಾ ಕುಸುರಿಯ Master | Udayavani

udayavani youtube

ಮುಂಬೈಯಿಂದ ಡ್ರಗ್ಸ್‌ ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು: ನಗರ ಪೊಲೀಸ್ ಆಯುಕ್ತ

udayavani youtube

ಕುತಂತ್ರಿ ಚೀನಾವನ್ನು ಕಟ್ಟಿ ಹಾಕುವುದು ಹೇಗೆ?

udayavani youtube

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavani

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!ಹೊಸ ಸೇರ್ಪಡೆ

ಅಡಿಕೆ ಮಾತ್ರವೇ ಉಪಯೋಗಿಸಿದರೆ ಅಪಾಯವಿಲ್ಲ 

ಅಡಿಕೆ ಮಾತ್ರವೇ ಉಪಯೋಗಿಸಿದರೆ ಅಪಾಯವಿಲ್ಲ 

ಒತ್ತಡಗಳ ನಡುವೆ… ಮಾನಸಿಕ ಆರೋಗ್ಯ ಬಹಳ ಮುಖ್ಯ

ಒತ್ತಡಗಳ ನಡುವೆ… ಮಾನಸಿಕ ಆರೋಗ್ಯ ಬಹಳ ಮುಖ್ಯ

ಆತಂಕದ ನಡುವೆ ಇಂದಿನಿಂದ ಅಧಿವೇಶನ : 70 ಮಂದಿ ಶಾಸಕರಿಗೆ ಕೋವಿಡ್ ಸೋಂಕು?

ಆತಂಕದ ನಡುವೆ ಇಂದಿನಿಂದ ಅಧಿವೇಶನ : 70 ಮಂದಿ ಶಾಸಕರಿಗೆ ಕೋವಿಡ್ ಸೋಂಕು?

ಬಾಲ್ಯ ವಿವಾಹ ಪಿಡುಗು; ಕೋವಿಡ್ ಕಾಲದಲ್ಲೇ ಹೆಚ್ಚು!

ಬಾಲ್ಯ ವಿವಾಹ ಪಿಡುಗು; ಕೋವಿಡ್ ಕಾಲದಲ್ಲೇ ಹೆಚ್ಚು!

ಇಂದು RCB ಅಖಾಡಕ್ಕೆ; ಹೈದರಾಬಾದ್‌ ಎದುರಾಳಿ

ಇಂದು RCB ಅಖಾಡಕ್ಕೆ; ಹೈದರಾಬಾದ್‌ ಎದುರಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.