ಲೋಕಸಭೆ ಚುನಾವಣೆ: ಜಿಲ್ಲೆಯಲ್ಲಿ 10,11,031 ಮತದಾರರು


Team Udayavani, Apr 8, 2019, 6:30 AM IST

kasargod-polling

ಕಾಸರಗೋಡು: ಈ ಬಾರಿಯ ಲೋಕಸಭೆ ಚುನಾವಣೆ ಮೂಲಕ ಜಿಲ್ಲೆಯಿಂದ ತೀರ್ಪು ನೀಡಲಿರುವವರು 10,11,031 ಮತದಾರ‌ರು.

ಇವರಲ್ಲಿ ಮಹಿಳೆಯರೇ ನಿರ್ಣಾಯಕ ಪಾತ್ರ ವಹಿಸಲಿರುವವರು. ಅನಿವಾಸಿ ಭಾರತೀಯರ ಸಹಿತ ಮತದಾರರಲ್ಲಿ ಮಹಿಳೆಯರು 5,15,941 ಮಂದಿ, ಪುರುಷರು 4,95,089 ಮಂದಿ. ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಒಬ್ಬ ಟ್ರಾನ್ಸ್‌ಜೆಂಡರ್‌ ಕೂಡ ಈ ಬಾರಿಯ ಮತದಾತರ ಪಟ್ಟಿಯಲ್ಲಿದ್ದಾರೆ.

115 ಮಹಿಳೆಯರ ಸಹಿತ 3276 ಮಂದಿ ಅನಿವಾಸಿ ಭಾರತೀಯ ಮತದಾರರು ಜಿಲ್ಲೆಯಲ್ಲಿದ್ದಾರೆ. ಕಾಸರಗೋಡು, ಮಂಜೇಶ್ವರ ವಿಧಾನಸಭೆ ಕ್ಷೇತ್ರಗಳಲ್ಲಿ ಪುರುಷ ಮತದಾರರು ಅ ಧಿಕವಾಗಿದ್ದಾರೆ. ಮಂಜೇಶ್ವರದಲ್ಲಿ 1,06,624 ಮಂದಿ ಪುರುಷರೂ, 1,05,462 ಮಂದಿ ಮಹಿಳೆಯರೂ ಮತದಾತರಿದ್ದು, ಒಟ್ಟು 2,12,086 ಮಂದಿ ಮತದಾರರಿದ್ದಾರೆ. ಕಾಸರ ಗೋಡು ವಿಧಾನಸಭೆ ಕ್ಷೇತ್ರದಲ್ಲಿ 96,742 ಪುರುಷರೂ, 96,233 ಮಹಿಳೆಯರು ಮತದಾರರಾಗಿದ್ದು, ಒಟ್ಟು 1,92,975 ಮತದಾರರು ಪಟ್ಟಿಯಲ್ಲಿದ್ದಾರೆ.

ಅನಿವಾಸಿ ಭಾರತೀಯ ಮತದಾರರು ಅತ್ಯಧಿಕ ಪ್ರಮಾಣದಲ್ಲಿರುವ ವಿಧಾನಸಭೆ ಕ್ಷೇತ್ರ ತ್ರಿಕ್ಕರಿಪುರವಾಗಿದೆ. ಇಲ್ಲಿ 1,181 ಮಂದಿ ಈ ಸಾಲಿನ ಮತದಾತರಿದ್ದಾರೆ. ಅತಿ ಕಡಿಮೆ ಅನಿವಾಸಿ ಭಾರತೀಯ ಮತದಾತರು ಇರುವ ವಿಧಾನಸಭೆ ಕ್ಷೇತ್ರ ಕಾಸರಗೋಡು ಆಗಿದೆ. ಇಲ್ಲಿ 239 ಮಂದಿ ಈ ಪಂಗಡದ ಮತದಾತರು. 1,500 ಮಂದಿ ಸರ್ವೀಸ್‌ ಮತದಾತರು ಜಿಲ್ಲೆಯಲ್ಲಿದ್ದಾರೆ.

ಅತ್ಯಧಿಕ ಪ್ರಮಾಣದ ಮತದಾರರಿರುವ ವಿಧಾನಸಭೆ ಕ್ಷೇತ್ರ ಮಂಜೇಶ್ವರವಾಗಿದೆ. ಇಲ್ಲಿ 1,06,624 ಮಂದಿ ಪುರುಷರೂ, 1,05,462 ಮಂದಿ ಮಹಿಳೆಯರೂ ಮತದಾರರಾಗಿದ್ದಾರೆ. ಒಟ್ಟು 2,12,086 ಮಂದಿ ಮತದಾತರು ಮಂಜೇಶ್ವರ ಕ್ಷೇತ್ರದಲ್ಲಿದ್ದಾರೆ. ಜಿಲ್ಲೆಯಲ್ಲಿ ಅತಿ ಕಡಿಮೆ ಮತದಾರ‌ರಿರುವ ಕ್ಷೇತ್ರ ಕಾಸರಗೋಡು ಆಗಿದೆ. ಇಲ್ಲಿ 1,92,975 ಮಂದಿ ಮತದಾತರಾಗಿದ್ದಾರೆ. ಉದುಮ ವಿಧಾನಸಭೆ ಕ್ಷೇತ್ರದಲ್ಲಿ 1,03,684 ಮಂದಿ ಮಹಿಳೆಯರ ಸಹಿತ 2,03,669 ಮತದಾತರಿದ್ದಾರೆ. ಕಾಂಞಂಗಾಡ್‌ ಕ್ಷೇತ್ರದಲ್ಲಿ 1,08.935 ಮಹಿಳೆಯರು, ಒಬ್ಬ ಟ್ರಾನ್ಸ್‌ ಜೆಂಡರ್‌ ಸಹಿತ 2,09,158 ಮಂದಿ ಮತದಾರರಿದ್ದಾರೆ. ತ್ರಿಕ್ಕರಿಪುರದಲ್ಲಿ 1,01,627 ಮಂದಿ ಮಹಿಳೆಯರ ಸಹಿತ 1,93,143 ಮತದಾತರಿದ್ದಾರೆ.

ನೂತನ ಮತದಾರರು
ಈ ಬಾರಿಯ ಲೋಕಸಭೆ ಚುನಾವಣೆಗೆ ಸಂಬಂ ಧಿ ನೂತನವಾಗಿ ಮತದಾರ‌ರ ಪಟ್ಟಿಯಲ್ಲಿ 24,856 ಮಂದಿ ಸೇರ್ಪಡೆಗೊಂಡಿದ್ದಾರೆ. ಮಾ.25 ವರೆಗೆ ಮತದಾರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಸುವ ನಿಟ್ಟಿನಲ್ಲಿ ಆನ್‌ಲೈನ್‌ ಮೂಲಕ ಲಭಿಸಿದ ಅರ್ಜಿಗಳ ಸಹಿತ ಎ. 5ರ ವರೆಗೆ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿದವರ ಗಣನೆ ನೀಡಲಾಗಿದೆ. 2019 ಜ.30ರಂದು ಪ್ರಕಟಿಸಿದ ಗಣನೆ ಪ್ರಕಾರ ಜಿಲ್ಲೆಯಲ್ಲಿ 9,86,172 ಮಂದಿ ಮತದಾರರಿದ್ದರು. ಈಗ ನೂತನವಾಗಿ 24,859 ಮಂದಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇವರಲ್ಲಿ 13,121 ಮಂದಿ ಪುರುಷರು, 11,739 ಮಹಿಳೆಯರು ಇದ್ದಾರೆ.

ಟಾಪ್ ನ್ಯೂಸ್

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-gadaga

Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ

1-qwewweq

K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ 

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.