Udayavni Special

ಜಿಲ್ಲೆಯಲ್ಲೂ ಸಂಚಾರ ಆರಂಭಿಸಿದ ಪ್ರಕೃತಿ ಸ್ನೇಹಿ ಇ-ಆಟೋಗಳು

ಮಾಲಿನ್ಯ ತಡೆಗೆ ಸಹಕಾರಿ

Team Udayavani, Nov 14, 2019, 4:00 AM IST

vv-1

ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರಿಂದ ಇ-ಆಟೋ ವೀಕ್ಷಣೆ.

ಕಾಸರಗೋಡು: ರಾಜ್ಯದಲ್ಲಿ ಈಗಾಗಲೇ ಕಡಿಮೆ ದರದಲ್ಲಿ ಸಂಚಾರ ಸೇವೆ ಒದಗಿಸುವ ಇ-ಆಟೋ ಜಿಲ್ಲೆಯಲ್ಲೂ ತನ್ನ ಸಂಚಾರಿ ಸೌಲಭ್ಯ ಆರಂಭಿಸಿದೆ. ಜಿಲ್ಲೆಯಲ್ಲಿ ಇ-ಆಟೋದ ಸೇವೆ ಪ್ರಾರಂಭ ವಾಗಿದೆ. 55 ನಿಮಿಷಗಳಲ್ಲಿ ಬ್ಯಾಟರಿಯನ್ನು ಪೂರ್ಣಪ್ರಮಾದಲ್ಲಿ ರೀಚಾರ್ಜ್‌ ನಡೆಸ ಬಹುದಾದ, ಒಮ್ಮೆ ಚಾರ್ಜ್‌ ನಡೆಸಿದರೆ 100 ಕಿ.ಮೀ. ನಿರಾಳವಾಗಿ ಸಂಚಾರ ನಡೆಸಬಹುದು. ಒಂದು ಕಿ.ಮೀ. ಗೆ ಕೇವಲ 50 ಪೈಸೆ ವೆಚ್ಚ ತಗುಲುವುದು. ಪೆಟ್ರೋಲ್‌, ಡೀಸೆಲ್‌ ಇಂಧನ ಬಳಸಿ ಸಂಚಾರ ನಡೆಸುವ ವಾಹನಗಳಿಂದುಂಟಾಗುವ ಪರಿಸರ ಮಾಲಿನ್ಯದ ಭೀತಿಯಿಲ್ಲ ಇತ್ಯಾದಿಗಳು ಗಮನಾರ್ಹವಾಗಿದ್ದು, ಇ-ಆಟೋವನ್ನು ಜನಜನಿತಗೊಳಿಸಲಾಗುತ್ತಿದೆ.

ಅತಿ ವೇಗದಲ್ಲಿ ಬೆಳೆಯುತ್ತಿರುವ ಜಿಲ್ಲೆಯ ಎಲ್ಲ ಪೇಟೆಗಳಿಗೆ ಇ-ಆಟೋಗಳು ಅನುಯೋಜ್ಯ ವಾಗಿವೆ. ಶೀಘ್ರದಲ್ಲೇ ಈ ಕಡೆಗಳಲ್ಲಿ ಇ-ಆಟೋಗಳು ಆಗಮಿಸಿ, ಸಂಚಾರ ನಡೆಸಲಿವೆ. ಪ್ರತಿದಿನ ಇಂಧನ ಬಳಸುವ ವಾಹನಗಳು ನೀಡುವ ಪರಿಸರ ಮಾಲಿನ್ಯದ ಅಡ್ಡಪರಿಣಾಮದ ಪರಿಹಾರಕ್ಕೆ ಶಾಶ್ವತ ಪರಿಹಾರ ಎಂಬಂತೆ ಪ್ರಕೃತಿ ಸ್ನೇಹಿ ವಾಹನವಾಗಿರುವ ಇ-ಆಟೋವನ್ನು ಎಲ್ಲರೂ ಎರಡೂ ಕೈಗಳಿಂದ ಸ್ವಾಗತಿಸುತ್ತಿದ್ದಾರೆ.

ಪ್ರಕೃತಿ ಸ್ನೇಹಿ ವಾಹನ
ರಾಜ್ಯ ಸರಕಾರದ ಇ-ವಾಹನ ನೀತಿಯ ಹಿನ್ನೆಲೆಯಲ್ಲಿ ಇ-ಆಟೋದ ನಿರ್ಮಾಣ ನಡೆದಿದೆ. ರಾಜ್ಯ ಸಾರ್ವಜನಿಕ ಸಂಸ್ಥೆ ಕೇರಳ ಅಟೋಮೊಬೈಲ್ಸ್‌ ನಿಗಮ (ಕೆ.ಎ.ಎಲ್‌.)ಇ-ಆಟೋವನ್ನು ನಿರ್ಮಿಸುತ್ತಿದೆ. ದೇಶದಲ್ಲೇ ಪ್ರಥಮ ಬಾರಿಗೆ ಸಾರ್ವಜನಿಕ ಸಂಸ್ಥೆಯೊಂದು ಇ-ಆಟೋದಂತಹ ವಾಹನ ನಿರ್ಮಾಣಕ್ಕೆ ಪರವಾನಗಿ ಪಡೆದಿದೆ ಎಂಬುದೂ ಗಮನಾರ್ಹ ವಿಚಾರ. ಈ ವಾಹನದ ಎಲ್ಲ ಬಿಡಿ ಭಾಗಗಳೂ ದೇಶದಲ್ಲೇ ನಿರ್ಮಾಣಗೊಳ್ಳುತ್ತಿವೆ. ನೇರನೋಟಕ್ಕೆ ಇತರ ಆಟೋರಿಕ್ಷಾಗಳಂತೆಯೇ ಕಾಣುವ ರೀತಿ ಇ-ಆಟೋಗಳನ್ನು ತಯಾರಿಸಲಾಗಿದೆ. ಶಬ್ದ ಕಡಿಮೆ ಮತ್ತು ಸುರಕ್ಷಿತ ಚಾಲನೆಯ ವ್ಯವಸ್ಥೆಯೂ ಈ ವಾಹನದ ವಿಶೇಷವಾಗಿದೆ. ಚಾಲಕನಲ್ಲದೆ, ಏಕಕಾಲಕ್ಕೆ ಮೂವರು ಪ್ರಯಾಣಿಕರು ಸಂಚರಿಸಬಹುದಾಗಿದೆ.

ಈ ವಾಹನದ ಬೆಲೆ 2.8 ಲಕ್ಷ ರೂ.ಇದೆ. ಆರಂಭದಲ್ಲಿ ನೀಂ ಜೀಂ ಆಟೋಗಳು ಕೆ.ಎ.ಎಲ್‌. ಸಂಸ್ಥೆಯ ಮೂಲಕ ನೇರವಾಗಿ ಮಾರಾಟಗೊಳ್ಳುತ್ತವೆ. ಮುಂದಿನ ಹಂತ ದಲ್ಲಿ ಉಳಿದ ಜಿಲ್ಲೆಗಳಲ್ಲಿ ಡೀಲರ್‌ ಶಿಪ್‌ ನೀಡಲಾಗುವುದು. ಇ-ಆಟೋಗೆ ರಾಜ್ಯ ಸರಕಾರದ ಸಬ್ಸಿಡಿ ಸೌಲಭ್ಯ ಲಭ್ಯ ವಾದರೆ ಬೆಲೆ ಯಲ್ಲಿ 30 ಸಾವಿರ ರೂ. ಕಡಿಮೆಯಾಗಲಿದೆ.

ಇ-ಆಟೋವನ್ನು ಬೆಂಬಲಿಸಿ : ಜಿಲ್ಲಾಧಿಕಾರಿ
ಇ-ಆಟೋವನ್ನು ನಾವೆಲ್ಲರೂ ಬೆಂಬಲಿಸ ಬೇಕು ಎಂದು ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ ಬಾಬು ಆಗ್ರಹಿಸಿದ್ದಾರೆ. ವಿದ್ಯುನ್ಮಾನ ವಾಹನಗಳ ಬಗ್ಗೆ ನಾವು ತೋರುವ ಆಸಕ್ತಿಯ ಬಲುದೊಡ್ಡ ಹೆಜ್ಜೆಗಾರಿಕೆ ಇ-ಆಟೋಗಳಾಗಿವೆ. ಜಿಲ್ಲೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚುತ್ತಿರುವಂತೆಯೇ ಪರಿಸರ ಮಾಲಿನ್ಯವೂ ನಿಯಂತ್ರಣಾತೀತವಾಗಿ ವರ್ಧಿಸುತ್ತಿದೆ. ಸೌರಶಕ್ತಿ ಮೂಲಕದ ವಿದ್ಯುತ್‌ ಬಳಕೆಗೆ ಆದ್ಯತೆ ನೀಡುತ್ತಿರುವ ನಮ್ಮ ಮಟ್ಟಿಗೆ ಇ-ಆಟೋ ಮಹತ್ವ ಪಡೆಯುತ್ತದೆ. ಹೆಚ್ಚುವರಿ ಆಟೋಚಾಲಕರು ಇ-ಆಟೋಗಳ ಕಡೆಗೆ ವರ್ಗಾವಣೆ ಗೊಳ್ಳಬೇಕು ಎಂದವರು ಆಗ್ರಹಿಸಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ವಿಶ್ವನಾಥನ್ ಆನಂದ್ ರನ್ನು ಬೆರಗುಗೊಳಿಸಿದ್ದ ಪೋರ, ತ್ರಿಶೂರಿನ ಚೆಸ್‌ ಶೂರ ನಿಹಾಲ್‌ ಸರಿನ್‌

ವಿಶ್ವನಾಥನ್ ಆನಂದ್ ರನ್ನು ಬೆರಗುಗೊಳಿಸಿದ್ದ ಪೋರ, ತ್ರಿಶೂರಿನ ಚೆಸ್‌ ಶೂರ ನಿಹಾಲ್‌ ಸರಿನ್‌

ಹಾಸನ: 127 ಜನರಿಗೆ ಕೋವಿಡ್-19 ಸೋಂಕು ದೃಢ, 9 ಮಂದಿ ಸೋಂಕಿತರು ಸಾವು

ಹಾಸನ: 127 ಜನರಿಗೆ ಕೋವಿಡ್-19 ಸೋಂಕು ದೃಢ, 9 ಮಂದಿ ಸೋಂಕಿತರು ಸಾವು

ಗೆಳೆಯನಿಂದ ಮೋಸ: ಭೋಜ್ ಪುರಿ ನಟಿ ಮುಂಬೈ ನಿವಾಸದಲ್ಲಿ ಆತ್ಮಹತ್ಯೆಗೆ ಶರಣು

ಗೆಳೆಯನಿಂದ ಮೋಸ: ಭೋಜ್ ಪುರಿ ನಟಿ ಮುಂಬೈ ನಿವಾಸದಲ್ಲಿ ಆತ್ಮಹತ್ಯೆಗೆ ಶರಣು

 ಸಿದ್ದರಾಮಯ್ಯ ಪುತ್ರ ಶಾಸಕ ಯತೀಂದ್ರಗೂ ಕೋವಿಡ್-19 ಪಾಸಿಟಿವ್

 ಸಿದ್ದರಾಮಯ್ಯ ಪುತ್ರ ಶಾಸಕ ಯತೀಂದ್ರಗೂ ಕೋವಿಡ್-19 ಪಾಸಿಟಿವ್

ಸುಶಾಂತ್ ಪ್ರಕರಣದಲ್ಲಿ ಮುಂಬೈ ಪೊಲೀಸರು ರಿಯಾಗೆ ಸಹಾಯ ಮಾಡಿದ್ದಾರೆ; ಬಿಹಾರ ಪೊಲೀಸ್

ಸುಶಾಂತ್ ಪ್ರಕರಣದಲ್ಲಿ ಮುಂಬೈ ಪೊಲೀಸರು ರಿಯಾಗೆ ಸಹಾಯ ಮಾಡಿದ್ದಾರೆ; ಬಿಹಾರ ಪೊಲೀಸ್

ಕಿಚ್ಚನ ಅಭಿಮಾನಿಗಳಿಗೆ ಶುಭ ಶುಕ್ರವಾರ: ಕೋಟಿಗೊಬ್ಬ-3 ಪೋಸ್ಟರ್ ರಿಲೀಸ್

ಕಿಚ್ಚನ ಅಭಿಮಾನಿಗಳಿಗೆ ಶುಭ ಶುಕ್ರವಾರ: ಕೋಟಿಗೊಬ್ಬ-3 ಪೋಸ್ಟರ್ ರಿಲೀಸ್

ಪ್ರವಾಹ ಸಂಕಷ್ಟ: ರಕ್ಷಣೆಗೆ ಅರಳಿ ಮರವೇರಿದ ಹತ್ತಾರು ಹಾವುಗಳು!

ನಮ್ಮನ್ನೂ ಕಾಪಾಡಿ! ಪ್ರವಾಹ ಸಂಕಷ್ಟದಲ್ಲಿ ರಕ್ಷಣೆಗೆ ಅರಳಿ ಮರವೇರಿದ ಹತ್ತಾರು ಹಾವುಗಳು!
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ಕಾಸರಗೋಡು ಜಿಲ್ಲೆಯಲ್ಲಿ ಮತ್ತೆ 8 ಮಂದಿಗೆ ಸೋಂಕು

ಕಾಸರಗೋಡು ಜಿಲ್ಲೆಯಲ್ಲಿ ಮತ್ತೆ 8 ಮಂದಿಗೆ ಸೋಂಕು

MUST WATCH

udayavani youtube

VP NAGARAದ 75 CENTS ಜಾಗದಲ್ಲಿ ಮಾದರಿ ಕೃಷಿ ತೋಟ| Udayavani

udayavani youtube

ಹೈನುಗಾರಿಕೆಯಿಂದ ಬದುಕು ಕಟ್ಟಿಕೊಂಡ ಕುಟುಂಬ | Interview with successful Dairy Farmer

udayavani youtube

ಮಕ್ಕಳನ್ನು ಬೆಳೆಸಬೇಡಿ; ಬೆಳೆಯಲು ಬಿಡಿ | How to Nurture a Child | Udayavani

udayavani youtube

ಆಸ್ಪತ್ರೆಯಲ್ಲೂ B. S. Yediyurappa ಕರ್ತವ್ಯ ಪ್ರಜ್ಞೆ ; ಪ್ರಮುಖ Files ಪರಿಶೀಲನೆ

udayavani youtube

MGM ಕಾಲೇಜಿನ ನವೀಕೃತ ನೂತನ ರವೀಂದ್ರ ಮಂಟಪದ ಪ್ರಾರಂಭೋತ್ಸವ | Udayavaniಹೊಸ ಸೇರ್ಪಡೆ

Mumbai-tdy-1

1.70 ಲಕ್ಷ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತ

ವಿಶ್ವನಾಥನ್ ಆನಂದ್ ರನ್ನು ಬೆರಗುಗೊಳಿಸಿದ್ದ ಪೋರ, ತ್ರಿಶೂರಿನ ಚೆಸ್‌ ಶೂರ ನಿಹಾಲ್‌ ಸರಿನ್‌

ವಿಶ್ವನಾಥನ್ ಆನಂದ್ ರನ್ನು ಬೆರಗುಗೊಳಿಸಿದ್ದ ಪೋರ, ತ್ರಿಶೂರಿನ ಚೆಸ್‌ ಶೂರ ನಿಹಾಲ್‌ ಸರಿನ್‌

ಹಾಸನ: 127 ಜನರಿಗೆ ಕೋವಿಡ್-19 ಸೋಂಕು ದೃಢ, 9 ಮಂದಿ ಸೋಂಕಿತರು ಸಾವು

ಹಾಸನ: 127 ಜನರಿಗೆ ಕೋವಿಡ್-19 ಸೋಂಕು ದೃಢ, 9 ಮಂದಿ ಸೋಂಕಿತರು ಸಾವು

ಗೆಳೆಯನಿಂದ ಮೋಸ: ಭೋಜ್ ಪುರಿ ನಟಿ ಮುಂಬೈ ನಿವಾಸದಲ್ಲಿ ಆತ್ಮಹತ್ಯೆಗೆ ಶರಣು

ಗೆಳೆಯನಿಂದ ಮೋಸ: ಭೋಜ್ ಪುರಿ ನಟಿ ಮುಂಬೈ ನಿವಾಸದಲ್ಲಿ ಆತ್ಮಹತ್ಯೆಗೆ ಶರಣು

somes

ಸೋಮೇಶ್ವರ ಕಡಲ್ಕೊರೆತ ಪ್ರದೇಶಕ್ಕೆ ದ.ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.