Udayavni Special

ಒಂದು ವಾರ ಸರಣಿ ಸತ್ಯಾಗ್ರಹ, ಸಹಿ ಸಂಗ್ರಹ ಅಭಿಯಾನ


Team Udayavani, May 19, 2018, 7:35 AM IST

18ksde3.jpg

ಕಾಸರಗೋಡು: ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಒಂದನೇ ತರಗತಿಯಿಂದ ಹತ್ತನೇ ತರಗತಿಯ ವರೆಗೆ ಮಲಯಾಳ ಕಲಿಕೆ ಕಡ್ಡಾಯಗೊಳಿಸಿದ ಕೇರಳ ಸರಕಾರದ ಆದೇಶವನ್ನು ಪ್ರತಿಭಟಿಸಿ ಕನ್ನಡ ಹೋರಾಟ ಸಮಿತಿ ನೇತೃತ್ವದಲ್ಲಿ ಮೇ 23ರಿಂದ 29ರ ವರೆಗೆ ಒಂದು ವಾರ ಕಾಲ ಸರಣಿ ಸತ್ಯಾಗ್ರಹ ಮತ್ತು ಸಹಿ ಸಂಗ್ರಹ ಅಭಿಯಾನ ನಡೆಸಲು ತೀರ್ಮಾನಿಸಲಾಯಿತು.

ಬೀರಂತಬೈಲ್‌ನಲ್ಲಿರುವ ಕನ್ನಡ ಅಧ್ಯಾಪಕ ಭವನದಲ್ಲಿ ಮೇ 18ರಂದು ಬೆಳಗ್ಗೆ ನಡೆದ ಕನ್ನಡ ಹೋರಾಟ ಸಮಿತಿ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಯಿತು.

ಪ್ರಥಮ ಹಂತದಲ್ಲಿ ಸರಣಿ ಸತ್ಯಾಗ್ರಹ, ಸಹಿ ಸಂಗ್ರಹ ಅಭಿಯಾನ ನಡೆಯಲಿದ್ದು, ಮುಂದಿನ ದಿನಗಳಲ್ಲಿ ವಿವಿಧ ರೀತಿಯಲ್ಲಿ ತೀವ್ರ ಹೋರಾಟ ನಡೆಸುವ ಕುರಿತಾಗಿ ಚರ್ಚಿಸಲಾಯಿತು. ಕಳೆದ ವರ್ಷ ಮೇ 23 ರಂದು ಮಲಯಾಳ ಕಲಿಕೆ ಕಡ್ಡಾಯ ಹೇರಿಕೆಯ ವಿರುದ್ಧ ಕನ್ನಡ ಹೋರಾಟ ಸಮಿತಿ ನೇತೃತ್ವದಲ್ಲಿ ಐತಿಹಾಸಿಕ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ದಿಗ್ಬಂಧನ ನಡೆಸಲಾಗಿತ್ತು. ಇದೀಗ ಮೇ 23 ರಿಂದ ಕನ್ನಡಿಗರ ಸರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದ್ದು, ಒಂದು ವಾರ ಕಾಲ ನಡೆಯಲಿದೆ. 

ಕಾಸರಗೋಡು ಹೊಸ ಬಸ್‌ ನಿಲ್ದಾಣ ಪರಿಸರದಲ್ಲಿ ದಿನಾ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯ ವರೆಗೆ ಧರಣಿ ಸತ್ಯಾಗ್ರಹ ನಡೆಸಲಾಗುವುದು. ಈ ಮೂಲಕ ಕೇರಳ ಸರಕಾರದ ಕಣ್ಣು ತೆರೆಸುವ ಪ್ರಯತ್ನ ನಡೆಯಲಿದೆ. ಮಲ ಯಾಳ ಕಡ್ಡಾಯದ ಬಗ್ಗೆ ವಿರೋಧವಿಲ್ಲ. ಆದರೆ ಕಾಸರಗೋಡಿನ ಭಾಷಾ ಅಲ್ಪ ಸಂಖ್ಯಾಕ‌ರನ್ನು ಕಡ್ಡಾಯ ಮಲಯಾಳ ಕಲಿಕೆ ಹೇರಿಕೆಯಿಂದ ರಿಯಾಯಿತಿ ನೀಡಬೇಕೆಂದು ಸರಕಾರವನ್ನು ಒತ್ತಾಯಿಸಲಾಗುವುದು.

ಕನ್ನಡ ಹೋರಾಟ ಸಮಿತಿ ಅಧ್ಯಕ್ಷ ನ್ಯಾಯವಾದಿ ಮುರಳೀಧರ ಬಳ್ಳುಕ್ಕುರಾಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಕೆ.ಭಾಸ್ಕರ, ಕನ್ನಡ ಸಾಹಿತ್ಯ ಪರಿಷತ್‌ ಕೇರಳ ಗಡಿನಾಡ ಅಧ್ಯಕ್ಷ ಎಸ್‌.ವಿ. ಭಟ್‌, ಗಮಕ ಪರಿಷತ್‌ ಅಧ್ಯಕ್ಷ ಟಿ. ಶಂಕರನಾರಾಯಣ ಭಟ್‌, ವಿ.ಬಿ. ಕುಳಮರ್ವ, ಎಂ.ವಿ. ಮಹಾಲಿಂಗೇಶ್ವರ ಭಟ್‌, ತಾರಾನಾಥ ಮಧೂರು, ಸತ್ಯನಾರಾಯಣ ಕಾಸರ ಗೋಡು, ಗುರುಪ್ರಸಾದ್‌ ಕೋಟೆಕಣಿ, ಸತೀಶ್‌ ಮಾಸ್ಟರ್‌ ಕೂಡ್ಲು, ಡಾ| ಬೇ.ಸೀ. ಗೋಪಾಲಕೃಷ್ಣ ಭಟ್‌, ಅಬ್ದುಲ್‌ ರಹಿಮಾನ್‌, ಸುಬ್ರಹ್ಮಣ್ಯ ಭಟ್‌, ಪ್ರದೀಪ್‌ ಕುಮಾರ್‌ ಪಿ.ವಿ., ಗೋವಿಂದ ಬಳ್ಳಮೂಲೆ, ಶ್ಯಾಮ್‌ ಪ್ರಸಾದ್‌ ಕೆ, ಪ್ರಶಾಂತ್‌ ಹೊಳ್ಳ, ಡಾ| ರತ್ನಾಕರ ಮಲ್ಲಮೂಲೆ ಮೊದಲಾದವರು ಮಲಯಾಳ ಹೇರಿಕೆಯ ವಿರುದ್ಧ ಹೋರಾಟ ಅನಿವಾರ್ಯ ಎಂಬು ದಾಗಿ ತಮ್ಮ ಅಭಿಪ್ರಾಯ ಮಂಡಿಸಿದರು. ಕೇರಳ ಸರಕಾರ ಭಾಷಾ ಅಲ್ಪಸಂಖ್ಯಾಕರ ಸಂವಿಧಾನಬದ್ಧ ಹಕ್ಕುಗಳನ್ನು ಕಸಿದುಕೊಳ್ಳುವ ಉದ್ದೇಶದಿಂದ ಮಲಯಾಳ ಕಲಿಕೆ ಕಡ್ಡಾಯಗೊಳಿಸುತ್ತಿದೆ. ಈ ಮೂಲಕ ಕನ್ನಡ ಭಾಷೆ, ಸಂಸ್ಕೃತಿ ನಾಶವನ್ನು ಎದುರುನೋಡುತ್ತಿದೆ. ಮಲಯಾಳ ಕಲಿಕೆ ಕಡ್ಡಾಯಗೊಳಿಸುವ ಮೂಲಕ ಕಾಸರಗೋಡಿನ ಭಾಷಾ ಅಲ್ಪಸಂಖ್ಯಾಕರ ಭಾಷೆ, ಸಂಸ್ಕೃತಿಯ ಮೇಲೆ ದುಷ್ಪರಿಣಾಮ ಬೀರಲಿದೆ. ಅಲ್ಲದೆ ಕೆಲವೇ ವರ್ಷಗಳಲ್ಲಿ ಕಾಸರಗೋಡಿನಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಸರ್ವನಾಶವಾಗಲಿದೆ ಎಂದು ಆತಂಕ ವ್ಯಕ್ತವಾಯಿತು.

ಸರಣಿ ಸತ್ಯಾಗ್ರಹದ ಅಧ್ಯಕ್ಷರಾಗಿ ನ್ಯಾಯ ವಾದಿ ಮುರಳೀಧರ ಬಳ್ಳಕ್ಕುರಾಯ, ಎಸ್‌. ವಿ. ಭಟ್‌ ಉಪಾಧ್ಯಕ್ಷರಾಗಿಯೂ, ಕೆ. ಭಾಸ್ಕರ, ಗುರುಪ್ರಸಾದ್‌ ಕೋಟೆಕಣಿ ಮತ್ತು ತಾರಾನಾಥ ಮಧೂರು ಸಂಚಾಲಕರನ್ನಾಗಿ ಆರಿಸಲಾಯಿತು.

ಅಭೂತಪೂರ್ವ ಹೋರಾಟಕ್ಕೆ ಕನ್ನಡಿ ಗರು ಸಜ್ಜಾಗಿದ್ದು, ಕಾರ್ಯಕ್ರಮ ದಲ್ಲಿ ಸಾವಿರಾರು ಮಂದಿ ಕನ್ನಡಿಗರು, ಕನ್ನಡಾ ಭಿಮಾನಿಗಳು ಭಾಗವಹಿಸಲಿದ್ದಾರೆ. ಕನ್ನಡ ವನ್ನು ಅಳಿಸಿ ಹಾಕುವ ಪ್ರಯತ್ನದ ಅಂಗವಾಗಿ ಮಲಯಾಳ ಕಡ್ಡಾಯಗೊಳಿಸಿದ್ದು ಇದರ ವಿರುದ್ಧ ಹೋರಾಟಕ್ಕೆ ಕನ್ನಡಿಗರು ಸಜ್ಜುಗೊಂಡಿದ್ದು, ಜಾತಿ, ಮತ, ಧರ್ಮಗಳ ಭೇದಭಾವವಿಲ್ಲದೆ ಸರ್ವ ಕನ್ನಡಿಗರೂ ಭಾಗವಹಿಸಲಿದ್ದಾರೆ.

ಧರಣಿ ಸತ್ಯಾಗ್ರಹದ ಮೂಲಕ ಕಾಸರಗೋಡಿನ ಕನ್ನಡಿಗರ ಶಕ್ತಿಯನ್ನು ಸರಕಾರಕ್ಕೆ ತೋರಿಸಲಿದ್ದಾರೆ. ಜಿಲ್ಲೆಯಾ ದ್ಯಂತ ವಿವಿಧ ಸಂಘಟನೆಗಳಿಂದ, ರಾಜಕೀಯ ಪಕ್ಷಗಳಿಂದ, ಸಂಘ ಸಂಸ್ಥೆಗಳಿಂದ ಬೆಂಬಲ ಲಭಿಸಿದ್ದು, ಈ ಹಿನ್ನೆಲೆಯಲ್ಲಿ ಸತ್ಯಾಗ್ರಹದಲ್ಲಿ ಸಾವಿರಾರು ಮಂದಿ ಭಾಗವಹಿಸಲಿದ್ದಾರೆ. ಸರಣಿ ಧರಣಿ ಸತ್ಯಾಗ್ರಹದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಪರ ಸಂಘಟನೆಗಳು, ಕನ್ನಡಾಭಿಮಾನಿಗಳು ಭಾಗವಹಿಸುವಂತೆ ಸಭೆಯಲ್ಲಿ ವಿನಂತಿಸಲಾಯಿತು.

ವ್ಯಾಪಕ ಬೆಂಬಲ 
ಮಲಯಾಳ ಕಲಿಕೆ ಕಡ್ಡಾಯಗೊಳಿಸಿದ ಕೇರಳ ಸರಕಾರದ ನೀತಿಯ ವಿರುದ್ಧ ಕನ್ನಡ ಹೋರಾಟ ಸಮಿತಿ ನೇತೃತ್ವದಲ್ಲಿ ಮೇ 23ರಿಂದ 29ರ ವರೆಗೆ ನಡೆಯುವ ಸರಣಿ ಸತ್ಯಾಗ್ರಹಕ್ಕೆ ವಿವಿಧ ಕನ್ನಡ ಪರ ಸಂಘ, ಸಂಸ್ಥೆಗಳು ಬೆಂಬಲ ಘೋಷಿಸಿವೆ. ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿದ್ಯಾರ್ಥಿಗಳ ಸ್ನೇಹರಂಗ, ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಗಿಳಿವಿಂಡು, ಸಿರಿ ಚಂದನ ಕನ್ನಡ ಯುವ ಬಳಗ, ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘ ಕರಂದಕ್ಕಾಡು ಕಾಸರಗೋಡು, ಕನ್ನಡ ಜಾಗೃತಿ ಸಮಿತಿ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ, ರಾಮನಾಥ ಸಾಂಸ್ಕೃತಿಕ ಭವನ ಸಮಿತಿ, ಯಕ್ಷತೂಣೀರ ಸಂಪ್ರತಿಷ್ಠಾನ ಮೊದಲಾದವು ಸರಣಿ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿವೆ.

ಕನ್ನಡಿಗರ ಕತ್ತು ಹಿಚುಕುವ ಕುತಂತ್ರ
ಮಲಯಾಳ ಕಲಿಕೆ ಕಡ್ಡಾಯಗೊಳಿಸುವ ಮೂಲಕ ಕಾಸರಗೋಡಿನ ಭಾಷಾ ಅಲ್ಪಸಂಖ್ಯಾಕರಾಗಿರುವ ಕನ್ನಡಿಗರ ಕತ್ತು ಹಿಚುಕುವ ಕುತಂತ್ರವನ್ನು ಕೇರಳ ಸರಕಾರ ಮಾಡುತ್ತಿದೆ. ಕಡ್ಡಾಯ ಮಲಯಾಳ ಜಾರಿಗೊಳಿಸುವ ಮೂಲಕ ಕಾಸರಗೋಡಿನ ಭಾಷಾ ಅಲ್ಪಸಂಖ್ಯಾಕ ಕನ್ನಡ ಭಾಷೆ, ಸಂಸ್ಕೃತಿಯನ್ನು ನಾಶಮಾಡ ಹೊರಟಿರುವ ಕೇರಳ ಸರಕಾರದ ನೀತಿಯನ್ನು ಪ್ರತಿಭಟಿಸಿ ಕನ್ನಡ ಹೋರಾಟ ಸಮಿತಿ ನೇತೃತ್ವದಲ್ಲಿ ಸರಣಿ ಸತ್ಯಾಗ್ರಹ ನಡೆಯಲಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಆರೋಪ ಸಾಬಿತಾದರೆ ರಾಜಕೀಯ ನಿವೃತ್ತಿ : ಆಂಜನೇಯ ಹೇಳಿಕೆಗೆ ಸಚಿವ ಪ್ರಭು ಚವ್ಹಾಣ್ ತಿರುಗೇಟು

ಮಾಜಿ ಸಚಿವ ಆಂಜನೇಯ ಮಾಡಿರುವ ಆರೋಪ ಸಾಬಿತಾದರೆ ರಾಜಕೀಯ ನಿವೃತ್ತಿ : ಸಚಿವ ಪ್ರಭು ಚವ್ಹಾಣ್

ಆಸೀಸ್ ಮಾಜಿ ಕ್ರಿಕೆಟಿಗ, ಕಮೆಂಟೇಟರ್ ಡೀನ್ ಜೋನ್ಸ್ ಮುಂಬೈನಲ್ಲಿ ನಿಧನ

ಆಸೀಸ್ ಮಾಜಿ ಕ್ರಿಕೆಟಿಗ, ಕಮೆಂಟೇಟರ್ ಡೀನ್ ಜೋನ್ಸ್ ಮುಂಬೈನಲ್ಲಿ ನಿಧನ

ಯಮ ಯಾರಿಗೂ ಕರುಣೆ ತೋರುವುದಿಲ್ಲ, ಸುರೇಶ್ ಅಂಗಡಿ ಸಾವು ಅನ್ಯಾಯ: ಡಿ.ಕೆ ಶಿವಕುಮಾರ್

ಯಮ ಯಾರಿಗೂ ಕರುಣೆ ತೋರುವುದಿಲ್ಲ, ಸುರೇಶ್ ಅಂಗಡಿ ಸಾವು ಅನ್ಯಾಯ: ಡಿ.ಕೆ ಶಿವಕುಮಾರ್

ಬಸವಕಲ್ಯಾಣ ಶಾಸಕ ನಾರಾಯಣ ರಾವ್ ಕೋವಿಡ್ ಸೋಂಕಿನಿಂದ ಬಲಿ

ಬಸವಕಲ್ಯಾಣ ಶಾಸಕ ನಾರಾಯಣ ರಾವ್ ಕೋವಿಡ್ ಸೋಂಕಿಗೆ ಬಲಿ

ವಿಜಯಪುರ ಬಹಿರ್ದೆಸೆಗೆ ಹೋಗಿದ್ದ ಯುವಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ವಿಜಯಪುರ ಬಹಿರ್ದೆಸೆಗೆ ಹೋಗಿದ್ದ ಯುವಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಸ್ಯಾಂಡಲ್ ವುಡ್ ಡ್ರಗ್ ಪ್ರಕರಣ ; ನಿರೂಪಕಿ ಅನುಶ್ರೀ ಗೂ ಸಿಸಿಬಿ ನೋಟೀಸ್

ಸ್ಯಾಂಡಲ್ ವುಡ್ ಡ್ರಗ್ ಪ್ರಕರಣ ; ನಿರೂಪಕಿ ಅನುಶ್ರೀ ಗೂ ಸಿಸಿಬಿ ನೋಟೀಸ್

ಕರ್ನಾಟಕ ಗ್ರಾಮೀಣ ಬ್ಯಾಂಕ್ ಗೆ ನುಗ್ಗಿದ ಕಳ್ಳರು: ನಗದು, ಆಭರಣ ಕಳ್ಳತನ

ಕರ್ನಾಟಕ ಗ್ರಾಮೀಣ ಬ್ಯಾಂಕ್ ಗೆ ನುಗ್ಗಿದ ಕಳ್ಳರು: ನಗದು, ಆಭರಣ ಕಳ್ಳತನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವೆಳ್ಳರಿಕುಂಡ್‌ ತಾಲೂಕು ಆನ್‌ಲೈನ್‌ ಅದಾಲತ್‌: 15 ದೂರುಗಳಿಗೆ ತೀರ್ಪು

ವೆಳ್ಳರಿಕುಂಡ್‌ ತಾಲೂಕು ಆನ್‌ಲೈನ್‌ ಅದಾಲತ್‌: 15 ದೂರುಗಳಿಗೆ ತೀರ್ಪು

ಆಸ್ಪತ್ರೆಗಳ ಸಿಬಂದಿಗೆ ಕೋವಿಡ್‌ ತಡೆ ತರಬೇತಿ

ಆಸ್ಪತ್ರೆಗಳ ಸಿಬಂದಿಗೆ ಕೋವಿಡ್‌ ತಡೆ ತರಬೇತಿ

ಆರ್ಲಪದವು – ಕೇರಳ ಅಂತರ್‌ ರಾಜ್ಯ ರಸ್ತೆ ತೆರವು ಕಾರ್ಯಕ್ಕೆ ಇನ್ನೂ ಕೂಡಿ ಬಂದಿಲ್ಲ ಮುಹೂರ್ತ?

ಆರ್ಲಪದವು – ಕೇರಳ ಅಂತರ್‌ ರಾಜ್ಯ ರಸ್ತೆ ತೆರವು ಕಾರ್ಯಕ್ಕೆ ಇನ್ನೂ ಕೂಡಿ ಬಂದಿಲ್ಲ ಮುಹೂರ್ತ?

ಕಾರ್ಮಿಕರಿಂದ ದೇಶ ನಿರ್ಮಾಣದ ಕೆಲಸ: ಸುಕುಮಾರ ಕೊಜಪ್ಪೆ

ಕಾರ್ಮಿಕರಿಂದ ದೇಶ ನಿರ್ಮಾಣದ ಕೆಲಸ: ಸುಕುಮಾರ ಕೊಜಪ್ಪೆ

ಶಿಕ್ಷಣ ವಲಯಕ್ಕಾಗಿ ನಡೆಸುವ ವೆಚ್ಚ ಮುಂದಿನ ಜನಾಂಗದ ಏಳಿಗೆಗೆ ಮೂಲಭಂಡವಾಳ: ಕಂದಾಯ ಸಚಿವ

ಶಿಕ್ಷಣ ವಲಯಕ್ಕಾಗಿ ನಡೆಸುವ ವೆಚ್ಚ ಮುಂದಿನ ಜನಾಂಗದ ಏಳಿಗೆಗೆ ಮೂಲ ಬಂಡವಾಳ: ಕಂದಾಯ ಸಚಿವ

MUST WATCH

udayavani youtube

Udupi Krishna temple to be open for public from September 28 | Udayavani

udayavani youtube

ಕೋವಿಡ್ ‌ಕಾಲದಲ್ಲಿ ರಸ್ತೆ ರಾಜಕಾರಣ: ಪ್ರತಿಕ್ರಿಯಿಸಿದ ಸಂತ ಅಲೋಶಿಯಸ್ ಸಂಸ್ಥೆ

udayavani youtube

ಮಂಗಳೂರು ನಗರದ ಲೈಟ್ ಹೌಸ್ ರೋಡ್ ಗೆ ‘ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ’ ಎಂದು ಮರುನಾಮಕರಣ

udayavani youtube

District Excise Department seized Millions worth of Marijuana | Udayavani

udayavani youtube

Hospet : Tungabhadra Dam Gates Are Opened | TB Dam | Udayavaniಹೊಸ ಸೇರ್ಪಡೆ

ಪೌರಕಾರ್ಮಿಕರು ದುಶ್ಚಟಗಳಿಂದ ದೂರವಿರಲಿ

ಪೌರಕಾರ್ಮಿಕರು ದುಶ್ಚಟಗಳಿಂದ ದೂರವಿರಲಿ

ಆರೋಪ ಸಾಬಿತಾದರೆ ರಾಜಕೀಯ ನಿವೃತ್ತಿ : ಆಂಜನೇಯ ಹೇಳಿಕೆಗೆ ಸಚಿವ ಪ್ರಭು ಚವ್ಹಾಣ್ ತಿರುಗೇಟು

ಮಾಜಿ ಸಚಿವ ಆಂಜನೇಯ ಮಾಡಿರುವ ಆರೋಪ ಸಾಬಿತಾದರೆ ರಾಜಕೀಯ ನಿವೃತ್ತಿ : ಸಚಿವ ಪ್ರಭು ಚವ್ಹಾಣ್

ಕೋವಿಡ್ ಹಿನ್ನಲೆ : ಪೌಷ್ಟಿಕ ಆಹಾರ ಮನೆಗೇ ತಲುಪಿಸಿ

ಕೋವಿಡ್ ಹಿನ್ನಲೆ : ಪೌಷ್ಟಿಕ ಆಹಾರ ಮನೆಗೇ ತಲುಪಿಸಿ

ಕೆರೆ, ರಾಜಕಾಲುವೆ ಒತ್ತುವರಿ ತೆರವಿಗೆ ಆಗ್ರಹ

ಕೆರೆ, ರಾಜಕಾಲುವೆ ಒತ್ತುವರಿ ತೆರವಿಗೆ ಆಗ್ರಹ

ನಾಡ ಕಚೇರಿಗೆ ಡೀಸಿ ದಿಢೀರ್‌ ಭೇಟಿ

ನಾಡ ಕಚೇರಿಗೆ ಡೀಸಿ ದಿಢೀರ್‌ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.