ಪರಂಪರಾಗತ ಭತ್ತದ ಕೃಷಿ ಯೋಜನೆಗೆ ತೆರೆದುಕೊಂಡ ಪಿಲಿಕೋಡ್‌

Team Udayavani, Feb 1, 2019, 1:00 AM IST

paddy.jpg

ಕಾಸರಗೋಡು: ಅತ್ಯುತ್ತಮ ಫಲ ನೀಡುತ್ತಿದ್ದರೂ, ಹೊಸ ತಲೆಮಾರಿನಿಂದ ದೂರ ಸರಿಯುತ್ತಿರುವ ಪರಂಪರಾಗದ ಭತ್ತದ ಕೃಷಿ ಯೋಜನೆ ಅನುಷ್ಠಾನ ನಡೆಸಿ ಯಶಸ್ವಿಯಾಗುವ ಯತ್ನದಲ್ಲಿ ಪಿಲಿಕೋಡ್‌ ಗ್ರಾಮ ಪಂಚಾಯತ್‌ ರಂಗಕ್ಕಿಳಿದಿದೆ.

2018ರ ಅಕ್ಟೋಬರ್‌ ತಿಂಗಳ ಕೊನೆಯಲ್ಲಿ ಈ ಯೋಜನೆ ಪ್ರಕಾರ ಕೃಷಿಗೆ ಹೊರಟಿದೆ. ರಾಜ್ಯ ಸರಕಾರದ ಕನಸಾಗಿರುವ ಯೋಜನೆಗಳಲ್ಲಿ ಒಂದಾದ ಹಸುರು ಕೇರಳ ಮಿಷನ್‌ ನೇತೃತ್ವದಲ್ಲಿ ಪರಂಪರಾಗತ ಭತ್ತದ ಯೋಜನೆ ಇಲ್ಲಿ ಸಾಕಾರಗೊಳ್ಳುತ್ತಿದೆ. ಗದ್ದೆ ಸಮಿತಿಯ 15 ಕೃಷಿಕರು ಯೋಜನೆಯ ಫಲಾನುಭವಿಗಳಾಗಿದ್ದಾರೆ. ಯೋಜನೆಯ ಅಂಗವಾಗಿ ಅಪೂರ್ವ ತಳಿಯಾಗಿರುವ 30 ರೀತಿಯ ಭತ್ತದ ಬೀಜವನ್ನು ಇವರಿಗೆ ಮೊದಲ ಹಂತವಾಗಿ ವಿತರಿಸಲಾಗಿದೆ. ಪ್ರತಿ ಕೃಷಿಕ 15 ಸೆಂಟ್ಸ್‌ ಜಾಗವನ್ನು ಬಿತ್ತನೆ ನಡೆಸಬೇಕು. ಮುಂದಿನ ಹಂತದಲ್ಲಿ ಅಪೂರ್ವ ತಳಿಗೆ ಸೇರಿದ 15 ರೀತಿಯ ಭತ್ತದ ಬೀಜವನ್ನು ವಿತರಿಸಲಾಗುತ್ತದೆ. ಈ ಮೂಲಕ ಪ್ರತಿ ಕೃಷಿಕನಿಗೆ 30 ಕಿಲೋ ಭತ್ತದ ಬೀಜ ಉತ್ಪಾದನೆ ಸಾಧ್ಯವಾಗಲಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ನಿರೀಕ್ಷಿಸಿದ್ದಾರೆ. ಈ ವರ್ಷ ಆಗಸ್ಟ್‌ ತಿಂಗಳ ವೇಳೆಗೆ 45 ರೀತಿಯ ಪರಂಪರಾಗತ ಭತ್ತದ ಬೀಜಗಳನ್ನು ಉತ್ಪಾದಿಸಲು ಸಾಧ್ಯವಾಗಲಿದೆ ಎಂದು ಅಂದಾಜಿಸಲಾಗಿದೆ.

ಮಾರಾಟಕ್ಕೆ ಬೀಜ ಮೇಳ

ಈ ರೀತಿ ಬೆಳೆಯುವ ಬೀಜಗಳ ಮಾರಾಟ ಉದ್ದೇಶದಿಂದ ‘ಬೀಜ ಮೇಳ’ ಏರ್ಪಡಿಸಲಾಗುವುದು. ಒಂದು ಕಿಲೋ ಬೀಜಕ್ಕೆ ಕನಿಷ್ಠ 40 ರೂ. ಬೆಲೆ ಈ ಮೂಲಕ ಲಭಿಸಲಿದೆ. ಪ್ರತಿ ಕಿಲೋ ಮಾರಾಟದಲ್ಲಿ ಕೃಷಿಕನಿಗೆ 5 ರಿಂದ 10 ರೂ. ಇನ್ಸೆಂಟೀವ್‌ ಕೂಡ ಲಭಿಸಲಿದೆ. ಕೃಷಿಕ ತನಗೆ ಬೇಕಾದ ಬೀಜವನ್ನು ಖರೀದಿಸಲೂ ಮೇಳದಲ್ಲಿ ಅವಕಾಶಗಳಿವೆ.

45 ರೀತಿಯ ಬೀಜಗಳ ಉತ್ಪಾದನೆ ಯಾದ ನಂತರ ಭತ್ತದ ಕೃಷಿ ನಡೆಯಲಿದೆ. ಈ ಯೋಜನೆಯಲ್ಲಿ 2 ವರ್ಷದ ಅವಧಿಯಲ್ಲಿ 75 ರೀತಿಯ ಭತ್ತದ ಉತ್ಪಾದನೆ ಉದ್ದೇಶಿಸಲಾಗಿದೆ. ಈಗಾಗಲೇ ಈ ಯೋಜನೆ ಪ್ರಕಾರ ಕೆಲವು ಕೃಷಿಕರು ಕೊಯ್ಲು ನಡೆಸಿದ್ದು, ಒಟ್ಟು 350 ಕಿಲೋ ಭತ್ತ ಲಭಿಸಿದೆ. ಫೆಬ್ರವರಿ ಎರಡನೇ ವಾರದ ವೇಳೆ ಇತರ ಕೃಷಿಕರೂ ಕೊಯ್ಲು ನಡೆಸಲಿದ್ದಾರೆ. ಈ ಮೂಲಕ 500 ಕಿಲೋ ಭತ್ತ ಲಭಿಸುವ ನಿರೀಕ್ಷೆಯಿದೆ.

ಕೃಷಿಕರಿಗೆ ಬೇಕಾದ ಎಲ್ಲ ರೀತಿಯ ಸಹಾಯಕ್ಕೆ ಇಲ್ಲಿನ ಕೃಷಿ ಇಲಾಖೆ ಸಿದ್ಧವಿದೆ. ಔಷಧೀಯ ಅಂಶ, ಉತ್ತಮ ಗುಣಮಟ್ಟ ಹೊಂದಿರುವ ಭತ್ತದ ಉತ್ಪಾದನೆಯ ಜೊತೆಗೆ ನೂತನ ಜನಾಂಗವನ್ನು ಕೃಷಿ ವಲಯದತ್ತ ಸೆಳೆಯುವ ಮತ್ತು ಆಹಾರ ಸುರಕ್ಷತೆ ಖಚಿತ ಪಡಿಸುವ ಉದ್ದೇಶವೂ ಪಿಲಿಕೋಡ್‌ ಗ್ರಾ. ಪಂಚಾಯತ್‌ಗೆ ಇದೆ.

ಟಾಪ್ ನ್ಯೂಸ್

Odisha ಕಾಲೇಜಿನ ವಿಡಿಯೋ ಉಡುಪಿಯದ್ದು ಎಂದು ವೈರಲ್: ಕೇಸ್ ದಾಖಲು

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

5-ksrgdu

Crime: ಕಾಸರಗೋಡು ಭಾಗದ ಅಪರಾಧ ಸುದ್ದಿಗಳು 

Kasaragod ಎನ್‌ಡಿಎ ಅಭ್ಯರ್ಥಿ ಅಶ್ವಿ‌ನಿ ಪ್ರಚಾರಕ್ಕೆ ಅಡ್ಡಿ: ಕೇಸು ದಾಖಲು

Kasaragod ಎನ್‌ಡಿಎ ಅಭ್ಯರ್ಥಿ ಅಶ್ವಿ‌ನಿ ಪ್ರಚಾರಕ್ಕೆ ಅಡ್ಡಿ: ಕೇಸು ದಾಖಲು

ಸಿಡಿದ ಗ್ಯಾಸ್‌ ಸಿಲಿಂಡರ್‌; ಪಾರಾದ ಕುಟುಂಬ: ಶೇಣಿ ಬಾರೆದಳದಲ್ಲಿ ಮನೆಗೆ ತಗಲಿದ ಬೆಂಕಿ

ಸಿಡಿದ ಗ್ಯಾಸ್‌ ಸಿಲಿಂಡರ್‌; ಪಾರಾದ ಕುಟುಂಬ: ಶೇಣಿ ಬಾರೆದಳದಲ್ಲಿ ಮನೆಗೆ ತಗಲಿದ ಬೆಂಕಿ

banUppala ಮನೆಯಿಂದ ನಗ, ನಗದು ಕಳವು: ಯುವಕನಿಗೆ ಕೋವಿ ತೋರಿಸಿ ಬೆದರಿಕೆ

Uppala ಮನೆಯಿಂದ ನಗ, ನಗದು ಕಳವು: ಯುವಕನಿಗೆ ಕೋವಿ ತೋರಿಸಿ ಬೆದರಿಕೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Odisha ಕಾಲೇಜಿನ ವಿಡಿಯೋ ಉಡುಪಿಯದ್ದು ಎಂದು ವೈರಲ್: ಕೇಸ್ ದಾಖಲು

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.