Udayavni Special

ಜೋಡುಪಾಲ ಸಂತ್ರಸ್ತರಿಗೆ ಮಾದರಿ ಮನೆ: ಖಾದರ್‌

Team Udayavani, Sep 30, 2018, 4:08 PM IST

kadar.jpg

ಅರಂತೋಡು: ಪ್ರಕೃತಿ ವಿಕೋಪಕ್ಕೆ ಸಿಲುಕಿ ನಿರಾಶ್ರಿತರಾಗಿರುವ ಜೋಡುಪಾಲ, ಮೊಣ್ಣಂಗೇರಿಯ ಸಂತ್ರಸ್ತರಿಗೆ ಗೃಹ ಮಂಡಳಿಯಿಂದ ಮಾದರಿ ಮನೆ ನಿರ್ಮಾಣ ನಡೆಯುತ್ತಿದ್ದು. 10 ದಿನಗಳಲ್ಲಿ ಮಡಿಕೇರಿಯ ಎರಡು ಕಡೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಸಚಿವ ಯು.ಟಿ. ಖಾದರ್‌ ಹೇಳಿದರು.

ಕಲ್ಲುಗುಂಡಿ, ಕೊಡಗು ಸಂಪಾಜೆಯ ಪ್ರಕೃತಿ ದುರಂತ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮಾದರಿ ಮನೆಗಳು ಸಂತ್ರಸ್ತರಿಗೆ ಇಷ್ಟವಾದರೆ ಅದೇ ರೀತಿಯ ಮತ್ತಷ್ಟು ಮನೆಗಳನ್ನು ಕಟ್ಟಿಸಿಕೊಡಲು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಗೃಹ ಮಂಡಳಿಗೆ ಆದೇಶ ನೀಡಿದ್ದಾರೆ ಎಂದರು.

ಪರಿಹಾರ ಕೇಂದ್ರದಲ್ಲಿ 164 ಮಂದಿ
ಸಂತ್ರಸ್ತ 51 ಕುಟುಂಬಗಳ ಸುಮಾರು 164 ಮಂದಿ ಈಗಲೂ ಪರಿಹಾರ ಕೇಂದ್ರಗಳಲ್ಲಿದ್ದಾರೆ. ಬಸ್‌ ಪಾಸ್‌ ವಿತರಣೆಯಲ್ಲಿ ಕೆಲವರಿಗೆ ಅನ್ಯಾಯ ಆಗಿದೆ ಎಂಬ ಕೂಗು ಕೇಳಿ ಬಂದಿದೆ. ಜಿಲ್ಲಾಧಿಕಾರಿ ಮತ್ತು ಕೆಎಸ್‌ಆರ್‌ಟಿಸಿ ಡಿಸಿಯವರೊಂದಿಗೆ ಮಾತನಾಡಿ ಸರಿಪಡಿಸುವೆ. ಸಂಪಾಜೆ – ಮಡಿಕೇರಿ ಹೆದ್ದಾರಿ ಸಂಪೂರ್ಣ ಹದಗೆಟ್ಟಿದೆ. ತ್ವರಿತಗತಿಯಲ್ಲಿ ಹೆದ್ದಾರಿ ಕೆಲಸ ಮುಗಿಸಲು ಸೂಚನೆ ನೀಡಲಾಗಿದೆ. ತಿಂಗಳ ಒಳಗಾಗಿ ಮಡಿಕೇರಿ ಹೆದ್ದಾರಿ ಸಂಚಾರಕ್ಕೆ ಮುಕ್ತಗೊಳಿಸುವುದಾಗಿ ಭರವಸೆ ನೀಡಿದರು.

ಕೆಪಿಸಿಸಿ ಕಾರ್ಯದರ್ಶಿಗಳಾದ ವೆಂಕಪ್ಪ ಗೌಡ, ಟಿ.ಎಂ. ಶಹೀದ್‌, ವಕ್ಫ್ ಮಂಡಳಿ ನಿರ್ದೇಶಕ ಸಂಶುದ್ದೀನ್‌, ರಫೀಕ್‌ ಪಡು, ಯೂಸೂಫ್ ಅಂಜಿಕಾರ್‌ ಉಪಸ್ಥಿತರಿದ್ದರು.

ಸಂತ್ರಸ್ತರ ಕೇಂದ್ರಕ್ಕೆ ಖಾದರ್‌ ಭೇಟಿ
ಕೇಂದ್ರಗಳಿಗೆ ಭೇಟಿ ನೀಡಿದ ವೇಳೆ ಸಂತ್ರಸ್ತರು ಸಹಕಾರಿ ಸಂಘಗಳಲ್ಲಿ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿರುವ ಸಾಲ ಮನ್ನಾ ಮಾಡುವಂತೆ ಸಚಿವರಲ್ಲಿ ಮನವಿ ಮಾಡಿದರು. ಕಲ್ಲುಗುಂಡಿ ಶಾಲೆಯ ಸಂತ್ರಸ್ತರಿಗೆ ಗ್ಯಾಸ್‌ ಒದಗಿಸು ವಂತೆ ಸೂಚಿಸಿದರು.

ಸಂಪಾಜೆ ಸಂತ್ರಸ್ತರ ಕೇಂದ್ರದಲ್ಲಿ ಸಂತ್ರಸ್ತರ ಪರವಾಗಿ ಪ್ರಭಾಕರ ಭಟ್ಟ ಲೈನ್‌ಕಜೆ ಮಾತನಾಡಿ, ನಾವು ಮನೆ ಕಳೆದುಕೊಂಡಿದ್ದೇವೆ. ಸರಕಾರದ ವತಿಯಿಂದ ಸಂತ್ರಸ್ತರಿಗೆ 50 ಸಾವಿರ ರೂ. ಬಿಡುಗಡೆ ಮಾಡಲಾಗಿದೆ ಎಂದು ತಿಳಿದಿದ್ದೇವೆ. ಆದರೆ ಪರಿಹಾರ ಕೈ ಸೇರಿಲ್ಲ. ಶಾಶ್ವತ ಯೋಜನೆಗಳನ್ನು ನೀಡಬೇಕು ಎಂದರು. ಸಹಕಾರಿ ಸಂಘದ ಸಾಲ ಮನ್ನಾದ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ. ಧ.ಗ್ರಾ.ಯೋಜನೆಯ ಸಾಲದ ಬಗ್ಗೆ ವೀರೇಂದ್ರ ಹೆಗ್ಗಡೆಯವರೊಂದಿಗೆ ಮಾತನಾಡುತ್ತೇನೆ ಎಂದು ಖಾದರ್‌ ತಿಳಿಸಿದರು.

ಟಾಪ್ ನ್ಯೂಸ್

ಎಸ್‌ಡಿಪಿಐ, ಪಿಎಫ್ಐ ಸಂಘಟನೆಗಳನ್ನು ನಿಷೇಧಿಸಿ : ಸಚಿವ ಅರವಿಂದ ಲಿಂಬಾವಳಿ ಆಗ್ರಹ

ಎಸ್‌ಡಿಪಿಐ, ಪಿಎಫ್ಐ ಸಂಘಟನೆಗಳನ್ನು ನಿಷೇಧಿಸಿ : ಸಚಿವ ಅರವಿಂದ ಲಿಂಬಾವಳಿ ಆಗ್ರಹ

ಕಾಂಗ್ರೆಸ್‌ ಸೇರಲು ಮುಂದಾದ ಎಂ.ಸಿ. ಮನಗೂಳಿ ಪುತ್ರ

ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲು ಮುಂದಾದ ಅಶೋಕ್‌ ಮನಗೂಳಿ

ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಭದ್ರತೆ ಇಳಿಸಿಲ್ಲ: ಕೇಂದ್ರದ ಸ್ಪಷ್ಟನೆ

ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಭದ್ರತೆ ಇಳಿಸಿಲ್ಲ: ಕೇಂದ್ರದ ಸ್ಪಷ್ಟನೆ

ಪ್ರಸನ್ನಕುಮಾರ್‌ ಮರಳಿ ಕಾಂಗ್ರೆಸ್‌ಗೆ, ಅಖಂಡ ವಿರೋಧ ಇಲ್ಲ ಎಂದ ಡಿಕೆಶಿ

ಪ್ರಸನ್ನಕುಮಾರ್‌ ಮರಳಿ ಕಾಂಗ್ರೆಸ್‌ಗೆ, ಅಖಂಡ ವಿರೋಧ ಇಲ್ಲ ಎಂದ ಡಿಕೆಶಿ

ಶಿವಕಾಶಿಯಲ್ಲಿ ಪಟಾಕಿ ಕಾರ್ಖಾನೆ ಸ್ಫೋಟ: 5 ಸಾವು , 6 ಮಂದಿ ಗಾಯ

ಶಿವಕಾಶಿಯಲ್ಲಿ ಪಟಾಕಿ ಕಾರ್ಖಾನೆ ಸ್ಫೋಟ: 5 ಸಾವು , 6 ಮಂದಿ ಗಾಯ

ಅಂಬಾನಿ ಮನೆ ಬಳಿ ಸ್ಫೋಟಕ ತುಂಬಿದ ಕಾರು ಪತ್ತೆ

ಮುಕೇಶ್ ಅಂಬಾನಿ ಮನೆ ಬಳಿ ಸ್ಫೋಟಕ ತುಂಬಿದ ಕಾರು ಪತ್ತೆ : 20 ಜಿಲೆಟಿನ್‌ ಕಡ್ಡಿಗಳು ವಶ

Ice

ಐಸ್ ಕ್ರೀಮ್ ಸೇವಿಸಿ ಮಗ,ಸಹೋದರಿ ಸಾವು:ನೈಜ ಕಾರಣ ಗೊತ್ತಿದ್ರೂ ತಾಯಿ ಸುಮ್ಮನಿದ್ದಿದ್ದೇಕೆ ?  
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂದು ಬಿಜೆಪಿ ವಿಜಯ ಯಾತ್ರೆಗೆ ಯೋಗಿ ಅದಿತ್ಯನಾಥ್‌ ಚಾಲನೆ : ಪೊಲೀಸರ ಸರ್ಪಗಾವಲು

ಇಂದು ಬಿಜೆಪಿ ವಿಜಯ ಯಾತ್ರೆಗೆ ಯೋಗಿ ಅದಿತ್ಯನಾಥ್‌ ಚಾಲನೆ : ಪೊಲೀಸರ ಸರ್ಪಗಾವಲು

ಶನಿವಾರಸಂತೆ  ರಾಶಿ ರಾಶಿ ಆಲಿಕಲ್ಲು ಮಳೆ!

ಶನಿವಾರಸಂತೆ ರಾಶಿ ರಾಶಿ ಆಲಿಕಲ್ಲು ಮಳೆ!

ವಿಧಾನಸಭಾ ಚುನಾವಣೆಗೆ ಸಿದ್ಧತೆ : ನಾಳೆ ಪ್ರಧಾನಿ ಮೋದಿ ಕೇರಳಕ್ಕೆ

ವಿಧಾನಸಭಾ ಚುನಾವಣೆಗೆ ಸಿದ್ಧತೆ : ನಾಳೆ ಪ್ರಧಾನಿ ನರೇಂದ್ರ ಮೋದಿ ಕೇರಳಕ್ಕೆ

sullia-2w

ಸುಳ್ಯ: ಕಾಣೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

fish-1

ತೊಡಿಕಾನ: ಅಳಿವಿನಂಚಿನಲ್ಲಿರುವ ಮಹಷೀರ್ ಜಾತಿಯ ಮೀನುಗಳಿಗೆ ಬೇಕು ಶಾಶ್ವತ ಸಂರಕ್ಷಣೆ ಯೋಜನೆ

MUST WATCH

udayavani youtube

ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ನೂತನ ಗರ್ಭಗುಡಿಯ ಶಿಲಾನ್ಯಾಸ

udayavani youtube

ಕೋಟ್ಟಾ ಕಾಯ್ದೆಗೆ ಕಾರ್ಮಿಕ ವಿರೋಧಿ ತಿದ್ದುಪಡಿ ವಿರೋಧಿಸಿ ಬೀಡಿ ಕಾರ್ಮಿಕರ ಪ್ರತಿಭಟನೆ

udayavani youtube

ಮಂಗಳೂರು: 22 ಎಟಿಎಂ ಸ್ಕಿಮ್ಮಿಂಗ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಂತಾರಾಜ್ಯ ಚೋರರ ಬಂಧನ

udayavani youtube

ರಾಷ್ಟ್ರಮಟ್ಟದ ಜಾದೂ ದಿನಾಚರಣೆ: ಮಂಗಳೂರಿನಲ್ಲಿ ಮನಸೂರೆಗೊಂಡ ಕುದ್ರೋಳಿ ಗಣೇಶ್ ಮ್ಯಾಜಿಕ್ ಶೋ

udayavani youtube

ದಾನದ ಪರಿಕಲ್ಪನೆಯ ಕುರಿತು ಡಾ.ಗುರುರಾಜ ಕರ್ಜಗಿ ಹೇಳಿದ ಕತೆ ಕೇಳಿ.. Part-1

ಹೊಸ ಸೇರ್ಪಡೆ

ಎಸ್‌ಡಿಪಿಐ, ಪಿಎಫ್ಐ ಸಂಘಟನೆಗಳನ್ನು ನಿಷೇಧಿಸಿ : ಸಚಿವ ಅರವಿಂದ ಲಿಂಬಾವಳಿ ಆಗ್ರಹ

ಎಸ್‌ಡಿಪಿಐ, ಪಿಎಫ್ಐ ಸಂಘಟನೆಗಳನ್ನು ನಿಷೇಧಿಸಿ : ಸಚಿವ ಅರವಿಂದ ಲಿಂಬಾವಳಿ ಆಗ್ರಹ

ಕಾಂಗ್ರೆಸ್‌ ಸೇರಲು ಮುಂದಾದ ಎಂ.ಸಿ. ಮನಗೂಳಿ ಪುತ್ರ

ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲು ಮುಂದಾದ ಅಶೋಕ್‌ ಮನಗೂಳಿ

ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಭದ್ರತೆ ಇಳಿಸಿಲ್ಲ: ಕೇಂದ್ರದ ಸ್ಪಷ್ಟನೆ

ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಭದ್ರತೆ ಇಳಿಸಿಲ್ಲ: ಕೇಂದ್ರದ ಸ್ಪಷ್ಟನೆ

ಪ್ರಸನ್ನಕುಮಾರ್‌ ಮರಳಿ ಕಾಂಗ್ರೆಸ್‌ಗೆ, ಅಖಂಡ ವಿರೋಧ ಇಲ್ಲ ಎಂದ ಡಿಕೆಶಿ

ಪ್ರಸನ್ನಕುಮಾರ್‌ ಮರಳಿ ಕಾಂಗ್ರೆಸ್‌ಗೆ, ಅಖಂಡ ವಿರೋಧ ಇಲ್ಲ ಎಂದ ಡಿಕೆಶಿ

ಖಾಲಿ ಭೂಮಿಗೆ ತೆರಿಗೆ ಆದೇಶ: ವಿರೋಧ

ಖಾಲಿ ಭೂಮಿಗೆ ತೆರಿಗೆ ಆದೇಶ: ವಿರೋಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.