ಜ. 26ರಿಂದ ಸೆಕ್ರೆಟರಿಯೇಟ್‌ ಮುಂಭಾಗ ನಿರಾಹಾರ ಸತ್ಯಾಗ್ರಹ


Team Udayavani, Dec 13, 2018, 12:17 PM IST

13-december-7.gif

ಕಾಸರಗೋಡು : ಮಾರಕ ಕೀಟನಾಶಕ ಎಂಡೋಸಲ್ಫಾನ್‌ ಬ್ಯಾರೆಲ್‌ ಅವಧಿ ಮೀರಿದ್ದು, ಈ ಬ್ಯಾರೆಲ್‌ಗ‌ಳಲ್ಲಿರುವ ಎಂಡೋಸಲ್ಫಾನ್‌ ಕೀಟನಾಶಕ ನಿಷ್ಕ್ರಿಯಗೊಳಿಸಲು ಸಂಬಂಧಪಟ್ಟವರು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಸಹಿತ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಎಂಡೋಸಲ್ಫಾನ್‌ ಸಂತ್ರಸ್ತ ಜನಪರ ಒಕ್ಕೂಟದ ನೇತೃತ್ವದಲ್ಲಿ ಜನವರಿ 26 ರಿಂದ ಸೆಕ್ರೆಟರಿಯೇಟ್‌ ಮುಂಭಾಗ ಅನಿರ್ದಿಷ್ಟಾವಧಿ ಮುಷ್ಕರ ಹೂಡುವುದಾಗಿ ಒಕ್ಕೂಟದ ಪದಾಧಿಕಾರಿಗಳು ತಿಳಿಸಿದ್ದಾರೆ.

ಕಾಸರಗೋಡು ಜಿಲ್ಲೆಯ ತೋಟಗಾರಿಕಾ ನಿಗಮದ ಗೇರು ತೋಟದ ಗೋದಾಮುಗಳಲ್ಲಿ ಹಾಗೂ ಪಾಲ್ಘಾಟ್‌ನಲ್ಲಿ ಎಂಡೋಸಲ್ಫಾನ್‌ ಕೀಟನಾಶಕ ಉಳಿದುಕೊಂಡಿದೆ. ಇವುಗಳನ್ನು ವೈಜ್ಞಾನಿಕ ರೀತಿಯಲ್ಲಿ ನಿಷ್ಕ್ರಿಯಗೊಳಿಸಬೇಕೆಂದು ಆಗ್ರಹಿಸಿದೆ. ಶಿಥಿಲಗೊಂಡಿದ್ದ ಕಬ್ಬಿಣದ ಬ್ಯಾರೆಲ್‌ಗ‌ಳಲ್ಲಿ ದಾಸ್ತಾನಿದ್ದ ಎಂಡೋಸಲ್ಫಾನ್‌ ಕೀಟನಾಶಕವನ್ನು ‘ಎಂಡೋ ರಹಿತ ಕೇರಳ’ ಯೋಜನೆಯನ್ವಯ ಆರು ವರ್ಷಗಳ ಹಿಂದೆ ಸುರಕ್ಷಿತ ಬ್ಯಾರೆಲ್‌ಗ‌ಳಿಗೆ ವರ್ಗಾಯಿಸಲಾಗಿತ್ತು. ಆದರೆ ಈ ಬ್ಯಾರೆಲ್‌ಗ‌ಳ ಕಾಲಾವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ದಾಸ್ತಾನಿರುವ ಎಂಡೋಸಲ್ಫಾನ್‌ನನ್ನು ವೈಜ್ಞಾನಿಕ ರೀತಿಯಲ್ಲಿ ನಿಷ್ಕ್ರಿಯಗೊಳಿಸುವ ಅಥವಾ ಬೇರೆ ಸುರಕ್ಷಿತ ಬ್ಯಾರೆಲ್‌ಗ‌ಳಿಗೆ ವರ್ಗಾಯಿಸಲು ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದೆ.

ನರಕ ಯಾತನೆ : ಕಾಸರಗೋಡು ಜಿಲ್ಲೆಯ ವಿವಿಧೆಡೆ ತೋಟಗಾರಿಕಾ ನಿಗಮದ ಗೇರು ತೋಟಗಳಿಗೆ ಮಾರಕ ಕೀಟನಾಶಕ ಎಂಡೋಸಲ್ಫಾನ್‌ ಹೆಲಿಕಾಪ್ಟರ್‌ ಬಳಸಿ ಸಿಂಪಡಿಸಲಾಗಿತ್ತು. ಇದರ ದುಷ್ಪರಿಣಾಮದಿಂದ ನೂರಾರು ಮಂದಿ ಸಾವಿ ಗೀಡಾಗಿ, ಸಾವಿರಾರು ಮಂದಿ ವಿವಿಧ ರೋಗಗಳಿಗೆ ತುತ್ತಾಗಿ ನರಕಯಾತನೆ ಅನುಭವಿಸುತ್ತಿದ್ದಾರೆ. ಎಂಡೋ ಕೀಟನಾಶಕ ನಿಷೇಧ ಆಗ್ರಹಿಸಿ ಸ್ಥಳೀಯರು ನಡೆಸಿದ ಆಂದೋಲನದ ಪರಿಣಾಮವಾಗಿ ಎಂಡೋಸಲ್ಫಾನ್‌ ಕೀಟನಾಶಕ ಬಳಕೆಯನ್ನುನಿಷೇಧಿಸಲಾಗಿದೆ.

ನಾಶಕ್ಕಾಗಿ ಕಾದಿದೆ 1,904 ಲೀ.
ಹೀಗಿದ್ದರೂ ಕೇರಳದಲ್ಲಿ ಒಟ್ಟು 1,904 ಲೀಟರ್‌ ಎಂಡೋಸಲ್ಫಾನ್‌ ಕೀಟನಾಶಕ ದಾಸ್ತಾನಿದ್ದು ಇದನ್ನು ವೈಜ್ಞಾನಿಕ ರೀತಿಯಲ್ಲಿ ನಿಷ್ಕ್ರಿಯಗೊಳಿಸಬೇಕಾಗಿದೆ. ತೋಟಗಾರಿಕಾ ನಿಗಮದ ರಾಜಪುರಂ, ಪೆರಿಯ, ಚೀಮೇನಿ ತೋಟಗಾರಿಕಾ ಎಸ್ಟೇಟ್‌ಗಳಲ್ಲಿ ಕಬ್ಬಿಣದ ಬ್ಯಾರೆಲ್‌ಗ‌ಳಲ್ಲಿ ದಾಸ್ತಾನಿದ್ದ 1600 ಲೀಟರ್‌ ಎಂಡೋಸಲ್ಫಾನ್‌ ಕೀಟನಾಶಕವನ್ನು 2012ರ ಜೂನ್‌ ತಿಂಗಳಲ್ಲಿ ಕಬ್ಬಿಣದ ಬ್ಯಾರೆಲ್‌ಗ‌ಳಿಂದ ಸುರಕ್ಷಿತವಾಗಿ ಇನ್ನೊಂದು ಬ್ಯಾರೆಲ್‌ಗ‌ಳಿಗೆ ವರ್ಗಾಯಿಸುವ ಪ್ರಕ್ರಿಯೆ ನಡೆದಿತ್ತು. ಈ ಬ್ಯಾರೆಲ್‌ಗ‌ಳಿಗೆ ಐದು ವರ್ಷ ಸುರಕ್ಷಿತ ಕಾಲಾವಧಿ ಎಂದು ನಿಗದಿಪಡಿಸಲಾಗಿತ್ತು.

ಇದೀಗ ಈ ಬ್ಯಾರೆಲ್‌ಗ‌ಳ ಕಾಲಾವಧಿ ಪೂರ್ತಿಗೊಂಡಿದೆ. ಈ ಹಿನ್ನೆಲೆಯಲ್ಲಿ ಸಹಜವಾಗಿಯೇ ಜನರು ಮತ್ತೆ ಆತಂಕಿತರಾಗಿದ್ದಾರೆ. ದಾಸ್ತಾನಿರುವ ಎಂಡೋಸಲ್ಫಾನ್‌ ವೈಜ್ಞಾನಿಕ ರೀತಿಯಲ್ಲಿ ನಿಷ್ಕ್ರಿಯಗೊಳಿಸುವ ಅಥವಾ ಬೇರೆ ಬ್ಯಾರೆಲ್‌ಗ‌ಳಿಗೆ ವರ್ಗಾಯಿಸುವ ನಿಟ್ಟಿನಲ್ಲಿ ಹಿಂದುಸ್ತಾನ್‌ ಇನ್‌ಸೆಕ್ಟಿಸೈಡ್‌ ಲಿಮಿಟೆಡ್‌ ಸಂಸ್ಥೆಯ ಅಧಿಕಾರಿಗಳೊಂದಿಗೆ ಕಳೆದ ವರ್ಷ ಚರ್ಚಿಸಲಾಗಿತ್ತು.

ಇದಕ್ಕೂ ಮೊದಲು ತಜ್ಞರು ದಾಸ್ತಾನಿರುವ ಎಂಡೋ ಸಲ್ಫಾನ್‌ ಕೀಟನಾಶಕದ ಮಾದರಿ ಸಂಗ್ರಹಿಸಿ ತಪಾಸಣೆ ನಡೆಸಲಿದ್ದಾರೆಂದು ಸಾಮಾಜಿಕ ಸುರಕ್ಷಾ ಮಿಶನ್‌ ಮುಖ್ಯ ನಿರ್ದೇಶಕ ಡಾ| ಮಹಮ್ಮದ್‌ ಅಶೀಲ್‌ ಅಂದು ಹೇಳಿದ್ದರು. ಕಾಸರಗೋಡು ಜಿಲ್ಲೆಯ 11 ಗ್ರಾಮ ಪಂಚಾಯತ್‌ ಪ್ರದೇಶದ ತೋಟಗಾರಿಕಾ ನಿಗಮದ ಗೇರು ತೋಟಗಳಿಗೆ ನಿರಂತರವಾಗಿ ಮಾರಕ ಕೀಟ ನಾಶಕ ಎಂಡೋಸಲ್ಫಾನನ್ನು ಹೆಲಿಕಾಪ್ಟರ್‌ ಬಳಸಿ ಕೆಲವು ವರ್ಷಗಳ ಕಾಲ ಸಿಂಪಡಿಸಲಾಗಿತ್ತು.

ಸಿಂಪಡನೆ ಪರಿಣಾಮ ಘೋರ
ಹೆಲಿಕ್ಯಾಪ್ಟರ್‌ ಬಳಸಿ ಎಂಡೋಸಲ್ಫಾನ್‌ ಸಿಂಪಡಿಸಿದ ದುಷ್ಪರಿಣಾಮವಾಗಿ ವಾಯು, ನೀರು ಮಾಲಿನ್ಯಗೊಂಡು ಸಾವಿರಾರು ಮಂದಿ ವಿವಿಧ ರೋಗಗಳಿಗೆ ತುತ್ತಾಗಿದ್ದಾರೆ. ನೂರಾರು ಮಂದಿ ಸಾವಿಗೀಡಾಗಿದ್ದಾರೆ. ಹುಟ್ಟುವಾಗಲೇ ಅಂಗವಿಕಲರಾಗಿ ನರಕಯಾತನೆ ಅನುಭವಿಸುತ್ತಿದ್ದಾರೆ. ನೂರಾರು ಮಂದಿ ನಡೆದಾಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದರೆ, ನೂರಾರು ಮಂದಿ ಮಾರಕ ಕ್ಯಾನ್ಸರ್‌ ರೋಗ ಮೊದಲಾದವುಗಳಿಂದ ಬಳಲುತ್ತಿದ್ದಾರೆ. ಎಂಡೋ ದುರಂತದಿಂದಾಗಿ ಜಿಲ್ಲೆಯ ಕರಾಳ ದಿನಗಳೆಂದೇ ಗುರುತಿಸಿಕೊಂಡಿದೆ.

ಆತಂಕ ದೂರವಾಗಿಲ್ಲ
ಎಂಡೋಸಲ್ಫಾನ್‌ ಆತಂಕ ಇನ್ನೂ ದೂರವಾಗಿಲ್ಲ. ಈ ಹಿನ್ನೆಲೆಯಲ್ಲಿ ಬ್ಯಾರೆಲ್‌ಗ‌ಳಲ್ಲಿರುವ ಎಂಡೋಸಲ್ಫಾನ್‌ ನಿಷ್ಕ್ರಿಯಗೊಳಿಸಬೇಕೆಂದು ಎಂಡೋ ಸಂತ್ರಸ್ತ ಜನಪರ ಒಕ್ಕೂಟದ ಪದಾಧಿಕಾರಿಗಳಾದ ದಯಾಬಾಯಿ, ಮುನೀಸಾ ಅಂಬಲತ್ತರ, ಅಂಬಲತ್ತರ ಕುಂಞಿಕೃಷ್ಣನ್‌, ಕೆ.ಚಂದ್ರಾವತಿ ಹೇಳಿದ್ದಾರೆ.

ಒಕ್ಕೂಟದ ಬೇಡಿಕೆಗಳು
.  2017 ರಲ್ಲಿ ನಡೆದ ವಿಶೇಷ ವೈದ್ಯಕೀಯ ಶಿಬಿರದಲ್ಲಿ ಪತ್ತೆಯಾದ ಅರ್ಹರಾದ ಸಂತ್ರಸ್ತರನ್ನು ಎಂಡೋ ಸಂತ್ರಸ್ತರ ಯಾದಿಯಲ್ಲಿ ಸೇರ್ಪಡೆಗೊಳಿಸಿ ಉಚಿತ ಚಿಕಿತ್ಸೆ ಮತ್ತು ಧನಸಹಾಯ ನೀಡಬೇಕು.
.  2011ರಲ್ಲಿ ಪತ್ತೆಯಾದ 1,318 ಮಂದಿ ಪೈಕಿ ಯಾದಿಯಿಂದ  ಕೈಬಿಟ್ಟ 610 ಮಂದಿಗೆ ಸಹಾಯವೊದಗಿಸಬೇಕು.
.  ಎಲ್ಲ ಸಂತ್ರಸ್ತರಿಗೂ 5 ಲಕ್ಷ ರೂ. ಮತ್ತು ಜೀವನಪೂರ್ತಿ ಚಿಕಿತ್ಸೆ .  ಸುಪ್ರೀಂಕೋರ್ಟ್‌ ತೀರ್ಪನ್ನು ಅನುಷ್ಠಾನಗೊಳಿಸಬೇಕು.
. ರಾಷ್ಟ್ರೀಯ ಮಾನವ ಹಕ್ಕು ಕೇಂದ್ರ-ರಾಜ್ಯ ಸರಕಾರಗಳಿಗೆ  ನೀಡಿದ ನಿರ್ದೇಶಗಳ ಪೂರ್ಣವಾಗಿ ಜಾರಿ.
.  ಸಂತ್ರಸ್ತರ ಎಲ್ಲ ಸಾಲ ಮಾನದಂಡ ನೋಡದೆ ಮನ್ನಾ.
. ಬಡ್ಸ್‌ ಶಾಲೆಗಳಿಗೆ ವೈಜ್ಞಾನಿಕ ವ್ಯವಸ್ಥೆ ಏರ್ಪಡಿಸಬೇಕು.
. ಸೂಕ್ತ ರೀತಿಯಲ್ಲಿ ಪುನರ್ವಸತಿ ಕಲ್ಪಿಸಬೇಕು, ಟ್ರಿಬ್ಯೂನಲ್‌ ಸ್ಥಾಪಿಸಬೇಕು, ಸಂತ್ರಸ್ತರಿಗೆ ರೇಶನ್‌ ವ್ಯವಸ್ಥೆ ಪುನರ್‌ ಕಲ್ಪಿಸಬೇಕು.
. ಜಿಲ್ಲೆಯ ಗೋದಾಮುಗಳಲ್ಲಿರುವ ಎಂಡೋಸಲ್ಫಾನ್‌ ಕೀಟನಾಶಕ ನಿಷ್ಕ್ರಿಯಗೊಳಿಸಬೇಕು.
. ಸಂತ್ರಸ್ತ ಕುಟುಂಬದ ಒಬ್ಬರಿಗಾದರೂ ಶಿಕ್ಷಣ ಅರ್ಹತೆಯಂತೆ ಉದ್ಯೋಗ ಕಲ್ಪಿಸಬೇಕು.

ಆದ್ಯತೆ ಇವರಿಗೆ
ಮನೆಯಿಲ್ಲದವರು, ಎಂಡೋಸಲ್ಫಾನ್‌ ಸಂತ್ರಸ್ತರು, ಅಂಗವಿಕಲರು, ಹಿಂದುಳಿದ ಜನಾಂಗದವರು ಮೊದಲಾದವರ ಅಭ್ಯುದಯ ಯೋಜನೆಗಳಿಗೆ, ಮಹಿಳಾ ಸಬಲೀಕರಣ ಯೋಜನೆಗಳಿಗೆ ಆದ್ಯತೆ ನೀಡಲಾಗುವುದು.
– ಎ.ಜಿ.ಸಿ. ಬಶೀರ್‌,
ಅಧ್ಯಕ್ಷರು, ಜಿ. ಪಂಚಾಯತ್‌

2017ರಲ್ಲಿ ನಡೆದ ಪ್ರತ್ಯೇಕ ವೈದ್ಯಕೀಯ ಶಿಬಿರದಲ್ಲಿ ಪತ್ತೆಹಚ್ಚಲಾದ 1,905 ಮಂದಿ ಸಂತ್ರಸ್ತರನ್ನು ಪಟ್ಟಿಯಲ್ಲಿ ಒಳಪಡಿಸಿ ಉಚಿತ ಚಿಕಿತ್ಸೆ ಮತ್ತು ಇತರ ಸೌಲಭ್ಯಗಳನ್ನು ನೀಡಬೇಕು, ಈಗಾಗಲೇ ಪಟ್ಟಿಯಲ್ಲಿ ಒಳಪಟ್ಟಿರುವ 3,547 ಮಂದಿಗೆ ಸರ್ವೋಚ್ಚ ನ್ಯಾಯಾಲಯ ನೀಡಿದ ಆದೇಶದಂತೆ ತಲಾ 5 ಲಕ್ಷ ರೂ. ಕೂಡಲೇ ನೀಡಬೇಕು, ಆವಶ್ಯಕವಾದ ಚಿಕಿತ್ಸಾ ಸೌಕರ್ಯವನ್ನು ಜಿಲ್ಲೆಯಲ್ಲಿಯೇ ಒದಗಿಸಬೇಕು.
ಅಂಬಲತ್ತರ ಕುಂಞಕೃಷ್ಣನ್‌,
ಪ್ರಧಾನ ಕಾರ್ಯದರ್ಶಿ,
ಎಂಡೋಸಲ್ಫಾನ್‌ ಸಂತ್ರಸ ಜನಪರ ಒಕ್ಕೂಟ

ಟಾಪ್ ನ್ಯೂಸ್

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

ಸಿಡಿದ ಅಸಲಂಕ; ಘರ್ಜಿಸಿದ ಶ್ರೀಲಂಕಾ

ಸಿಡಿದ ಅಸಲಂಕ; ಘರ್ಜಿಸಿದ ಶ್ರೀಲಂಕಾ

Untitled-1

ಕನ್ನಡದಲ್ಲೇ ಸಹಿ ಮಾಡುವ ಅಭ್ಯಾಸ ಬೆಳೆಸಿ ಕೊಳ್ಳೋಣ: ಸಚಿವ ಸುನಿಲ್‌ ಕುಮಾರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6 ಕೋ.ರೂ. ತಿಮಿಂಗಲ ವಾಂತಿ ವಶ; ಇಬ್ಬರ ಬಂಧನ

6 ಕೋ.ರೂ. ತಿಮಿಂಗಲ ವಾಂತಿ ವಶ; ಇಬ್ಬರ ಬಂಧನ

ಮಡಿಕೇರಿ: ವಿಷ ಸೇವಿಸಿ ನಾಲ್ಕು ದಿನದ ಬಳಿಕ ಸಾವೀಗೀಡಾದ ಗ್ರಾಮ ಪಂಚಾಯತ್ ಸದಸ್ಯೆ.!

ಮಡಿಕೇರಿ: ವಿಷ ಸೇವಿಸಿ ನಾಲ್ಕು ದಿನದ ಬಳಿಕ ಸಾವಿಗೀಡಾದ ಗ್ರಾಮ ಪಂಚಾಯತ್ ಸದಸ್ಯೆ.!

ಕುಬಣೂರು ಸೇತುವೆ ಕುಸಿತ; ಸಂಪರ್ಕ ರಸ್ತೆ ತಡೆ

ಕುಬಣೂರು ಸೇತುವೆ ಕುಸಿತ; ಸಂಪರ್ಕ ರಸ್ತೆ ತಡೆ

ಸೀತಾರಾಮ ಕೆದಿಲಾಯ ಅವರ ಗ್ರಾಮಯಾತ್ರೆಯ ವಿಶೇಷ ಸಾಕ್ಷ್ಯಚಿತ್ರ ‘ಪರಿಕ್ರಮ ಸಂತ’ ಅನಾವರಣ

ಸೀತಾರಾಮ ಕೆದಿಲಾಯ ಅವರ ಗ್ರಾಮಯಾತ್ರೆಯ ವಿಶೇಷ ಸಾಕ್ಷ್ಯಚಿತ್ರ ‘ಪರಿಕ್ರಮ ಸಂತ’ ಅನಾವರಣ

Untitled-1

ಕಾಂಗ್ರೆಸ್ ಮಾಡಿದ ಅಭಿವೃದ್ಧಿಯನ್ನು ಬಿಜೆಪಿ ಮಾರಾಟ ಮಾಡುತ್ತಿದೆ : ಸಂಸದ ಡಿ.ಕೆ.ಸುರೇಶ್ ಆರೋಪ

MUST WATCH

udayavani youtube

ದಾಂಡೇಲಿ ನಗರದಲ್ಲಿ ಸಕ್ರೀಯಗೊಳ್ಳುತ್ತಿದೆ ಪೆಟ್ರೋಲ್ ಕಳ್ಳರ ಹಾವಳಿ

udayavani youtube

ಕಾಳಿ ನದಿ ದಂಡೆಯಿಂದ ಬಾಲಕನನ್ನು ಎಳೆದೊಯ್ದ ಮೊಸಳೆ : ಆತಂಕದಲ್ಲಿ ಸ್ಥಳೀಯರು

udayavani youtube

ರಸ್ತೆ ಬದಿ ಮಲಗಿದ್ದ ಗೋವು ಕಳ್ಳತನ : ಘಟನೆ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಬಯಲು

udayavani youtube

ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಪೌಡರ್ ಶುಗರ್ ಪೌಡರ್ ಆಗಿ ಬದಲಾಗಲಿದೆ

udayavani youtube

ಕುಮ್ಕಿ ಹಕ್ಕು ಅಂದ್ರೇನು?

ಹೊಸ ಸೇರ್ಪಡೆ

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.