ಮತದಾನ ಜಾಗೃತಿಗೆ ಕಳಹೆಯೂದಿದ ಬೀದಿನಾಟಕ:ನಾಟಕಕ್ಕೆ ಧ್ವನಿಯಾದ ಪಟ್ಲ ಸತೀಶ್ ಶೆಟ್ಟರು

Team Udayavani, Apr 8, 2019, 4:38 PM IST

7

ಕಾಸರಗೋಡು: “ಬಂತು ಚುನಾವಣೆ…ಬಂತು ಚುನಾವಣೆ..” ಹೀಗೊಂದು ಜಾನಪದೀಯ ಶೈಲಿಯ ಹಾಡು, ಯಕ್ಷಗಾನೀಯ ಹಿನ್ನೆಲೆಯಲ್ಲಿ ಮೊಳಗಿದಾಗ ತಮ್ಮ ಕಾಯಕದಲ್ಲಿ ನಿರತರಾಗಿದ್ದ ಜನರ ಕಿವಿನಿಮಿರಿತ್ತು. ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಅವರ ಕಂಚಿನ ಕಂಠದಲ್ಲಿ ಮೊಳಗಿದ ಈ  ಹಾಡನ್ನು ಪ್ರಧಾನವಾಗಿರಿಸಿ ಮತದಾನ ಜಾಗೃತಿ ಉದ್ದೇಶದಿಂದ ನಾಡಿನಾದ್ಯಂತ ಪ್ರಸ್ತುತಗೊಳ್ಳುತ್ತಿರುವ “ನನ್ನ ಮತದಾನ, ನನ್ನ ಹಕ್ಕು” ಎಂಬ ಬೀದಿ ನಾಟಕ ಜನಮನ ಸೆಳೆದಿದೆ.

ಕನ್ನಡ ನಾಟಕವಾಗಿದ್ದರೂ, ನಮ್ಮ ನಾಡಿನ ಗಂಧವನ್ನು ಉಳಿಸಿಕೊಂಡು ತುಳು ಮಲೆಯಾಳಂ ಭಾಷೆಗಳ ಬಳಕೆಯೂ ಅಲ್ಲಲ್ಲಿ ನಾಟಕಕ್ಕೆ ಹೆಚ್ಚುವರಿ ಮೆರುಗು ತಂದಿದೆ. ನಾಟಕಕ್ಕೆ ಮುನ್ನ ಖ್ಯಾತ ಹಿನ್ನೆಲೆ ಗಾಯಕಿ ಕೆ.ಎಸ್.ಚಿತ್ರಾ ಹಾಡಿರುವ ಚುನಾವಣೆ ಜಾಗೃತಿ ಹಾಡು ಕೂಡ ಗಮನ ಸೆಳೆಯುತ್ತದೆ.

ಸ್ವೀಪ್ ನ ನೋಡೆಲ್ ಅಧಿಕಾರಿ ಮಹಮ್ಮದ್ ನೌಷಾದ್ ಅವರು ರಚಿಸಿರುವ ಈ ನಾಟಕದಲ್ಲಿ ಕಲಾವಿದ, ಕೋಟೆಕ್ಕಾರು ಜ್ಞಾನದೀಪ ಕಲಾಸಾಂಸ್ಕೃತಿಕ ಸಮಿತಿಯ ಪಿ.ನಾರಾಯಣ ಅವರು ನಿರ್ದೇಶಕರಾಗಿದ್ದು, ಪ್ರಧಾನವಾಗಿರುವ ಎರಡು ಪಾತ್ರಗಳನ್ನೂ ಪ್ರಸ್ತುತ ಪಡಿಸಿದ್ದಾರೆ. ಉಳಿದಂತೆ ಕೀರ್ತಿಪ್ರಭಾ, ಕೆ.ಸೂರ್ಯನಾರಾಯಣ, ಕೆ.ವಿ.ಕಿರಣ, ಕೆ.ಪ್ರಜ್ವಲ್, ನಿತೇಷ್ ನಾಟಕದ ವಿವಿಧ ಪಾತ್ರಗಳಿಗೆ ಜೀವಂತಿಕೆ ತುಂಬಿದ್ದಾರೆ.

ಕೇವಲ 20 ನಿಮಿಷಗಳ ಅವಧಿಯಲ್ಲಿ ಗಂಭೀರ ಸ್ವಭಾವದ ಕಥಾವಸ್ತುವನ್ನು ಸಂದೇಶ ರೂಪಕವಾಗಿ ಪ್ರಸ್ತುತಪಡಿಸಿರುವ ಕಲಾತ್ಮಕತೆ ಶ್ಲಾಘನೀಯ. ಪ್ರಜಾಪ್ರಭುತ್ವ ಪ್ರಧಾನ ದೇಶವಾಗಿರುವ ಭಾರತದಲ್ಲಿ ಮತದಾನಕ್ಕೆ ಇರುವ ಮಹತ್ವವನ್ನು ಪುಟ್ಟ ಅವಧಿಯಲ್ಲಿ ನಾಟಕ ಮನಮುಟ್ಟಿಸುತ್ತದೆ.
ಸ್ವಾತಂತ್ರ್ಯದ ಮೊದಲು ಮತ್ತು ನಂತರದ ಎರಡು ದೃಶ್ಯಗಳನ್ನು ಸೃಜನಾತ್ಮಕವಾಗಿ ಪೋಣಿಸಿ ಪ್ರಸ್ತುತಗೊಳಿಸಿರುವುದೂ ಮುದ ತರುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್ ಸಾಮ್ರಾಜ್ಯ ನಮ್ಮನ್ನು ಗುಲಾಮರನ್ನಾಗಿಸಿದರೆ, ಸ್ವಾತಂತ್ರ್ಯಾನಂತರ ಪ್ರಜಾಪ್ರಭುತ್ವ ನೀತಿಯ ಅರಿವು ಇಲ್ಲದೇ ಇರುವುದು ನಮ್ಮ ಹಕ್ಕನ್ನು ಕಸಿಯುತ್ತಿದೆ ಎಂದು ನಾಟಕ ಸೂಚ್ಯವಾಗಿ ತಿಳಿಸುತ್ತದೆ.

ನಾಟಕದಲ್ಲಿ ಬರುವ ಬ್ರಿಟಿಷ್ ದಬ್ಬಾಳಿಕೆಗಾರ, ಜಮೀನ್ದಾರ, ಮೀನು ಮಾರಾಟಗಾರ್ತಿ, ಕೃಷಿ ಕಾರ್ಮಿಕ, ಶಿಕ್ಷಕ, ನ್ಯಾಯವಾದಿ ಹೀಗೆ ವಿವಿಧ ಪಾತ್ರಗಳು ನಮ್ಮದೇ ಪ್ರತಿನಿಧಿಗಳಾಗಿ ಕಂಡುಬರುತ್ತಾರೆ. ನಾಟಕದ ಕೊನೆಯಲ್ಲಿ ಮತದಾನ ಜಾಗೃತಿ ಪ್ರತಿಜ್ಞೆ ಕೈಗೊಳ್ಳುವಲ್ಲಿ ನಾಟಕದ ವೀಕ್ಷಕರಾದ ಜನರೂ ಸೇರುತ್ತಿರುವುದು ಸಕಾರಾತ್ಮಕ ಅಂಶವಾಗಿದೆ.

ಜಿಲ್ಲೆಯ ಕನ್ನಡ ಪ್ರದೇಶಗಳ 8 ಕೇಂದ್ರಗಳಲ್ಲಿ ಈ ನಾಟಕದ ಪರದರ್ಶನ ನಡೆಸುವ ಉದ್ದೇಶದಿಂದ ಈ ಪರ್ಯಟನೆ ಆರಂಭಗೊಂಡಿದ್ದು, ಈಗಾಗಲೇ ಕುಂಬಳೆ, ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಆವರಣಗಳಲ್ಲಿ ಪ್ರಸ್ತುತಿ ನಡೆಸಿ ಮನಮನ್ನಣೆ ಗಳಿಸಿದೆ.

ಟಾಪ್ ನ್ಯೂಸ್

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.