ಕಾನೂನಿನ ಅಜ್ಞಾನ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಳಕ್ಕೆ ಕಾರಣ : ಜೋಸ್‌ಫೈನ್‌


Team Udayavani, Jun 14, 2019, 5:52 AM IST

13KSDE8

ಕಾಸರಗೋಡು: ಕಾನೂನಿನ ಬಗ್ಗೆ ಸರಿಯಾದ ಜ್ಞಾನ ಇಲ್ಲದಿರುವುದು, ಸಮಾಜದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಪ್ರಧಾನ ಕಾರಣವಾಗುತ್ತಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಎಂ.ಸಿ. ಜೋಸ್‌ಫೈನ್‌ ಅಭಿಪ್ರಾಯಪಟ್ಟರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಆಯೋಗದ ಮೆಗಾ ಅದಾಲತ್‌ನ ನಂತರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು.,

ಬಟ್ಟೆ ಬದಲಿಸಿದಂತೆ ಪತ್ನಿಯರನ್ನು ಬದಲಿಸುವ ಮನೋಧರ್ಮ ಕೆಲವು ಕಡೆ ಕಂಡುಬರುತ್ತಿದೆ. ಇದು ಕಾನೂನಿನ ಬಗೆಗಿನ ಅಜ್ಞಾನದ ಫಲ. ವಿಚ್ಛೇದನೆ ನಡೆಸದೇ ಮತ್ತೂಬ್ಬರನ್ನು ವಿವಾಹವಾಗಕೂಡದು ಎಂಬುದು ಕಾನೂನಿನ ಸ್ಪಷ್ಟ ಆದೇಶ ಎಂದವರು ತಿಳಿಸಿದರು. ಅದಾಲತ್‌ನಲ್ಲಿ ಪರಿಶೀಲಿಸಿದ ಪ್ರಕರಣವೊಂದರ ಬಗ್ಗೆ ಮಾತನಾಡಿದ ಅವರು 18 ವರ್ಷದಲ್ಲಿ ವಿವಾಹಿತೆಯಾದ ಮಹಿಳೆಯೊಬ್ಬರು ಅನಂತರ ಪತಿಯಿಂದ ಬೇರ್ಪಟ್ಟಿದ್ದು, ಕಾನೂನು ರೀತಿಯ ವಿಚ್ಚೇದನ ನೀಡದೆ ಪತಿ ಮತ್ತೂಬ್ಬ ಮಹಿಳೆಯನ್ನು ವಿವಾಹವಾಗಿ, ವಿದೇಶದಲ್ಲಿ ನೆಲೆಸಿದ್ದಾರೆ. ಮೂವರು ಮಕ್ಕಳ ಸಹಿತ ತಾವು ಅನಾಥೆಯಾಗಿದ್ದು, ಜೀವನಾಂಶ ನೀಡುವಂತೆ ನ್ಯಾಯಾಲಯಕ್ಕೆ ದೂರು ಸಲಿಸಿದರು. ನ್ಯಾಯಾಲಯ ತಿಂಗಳಿಗೆ 4 ಸಾವಿರ ರೂ. ಜೀವನಾಂಶ ನೀಡುವಂತೆ ತೀರ್ಪು ನೀಡಿದ್ದು, ಅದರ ವಿರುದ್ಧ ಮಹಿಳೆ ಮಹಿಳಾ ಆಯೋಗಕ್ಕೆ ಅಹವಾಲು ಸಲ್ಲಿಸಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದರು.

ವಿವಾಹಿತಳ ಆಭರಣ ಹಕ್ಕು
ವಿವಾಹ ವೇಳೆ ತಾಯಿ ಮನೆಯಿಂದ ನೀಡಲಾಗುವ ಬಂಗಾರದ ಆಭರಣ ಮತ್ತು ನಗದು ಅನಂತರ ಪತಿ ಹಾಗೂ ಮನೆಮಂದಿ ಬಳಸುವ ಕ್ರಮ ವ್ಯಾಪಕವಾಗಿ ಕಂಡುಬರುತ್ತಿದೆ. ಈ ಸೊತ್ತುಗಳ ಪೂರ್ಣ ಹಕ್ಕು ಮಹಿಳೆಯರಿಗೆ ಲಭಿಸುವಂತಾಗಬೇಕು. ಇದಕ್ಕೆ ರಾಜ್ಯ ಮಹಿಳಾ ಆಯೋಗ ಯತ್ನಿಸುತ್ತಿದೆ ಎಂದವರು ಹೇಳಿದರು.

ಸೈಬರ್‌ ಆಕ್ರಮಣಕ್ಕೆ ಮಹಿಳೆಯರು ವ್ಯಾಪಕವಾಗಿ ಒಳಗಾಗುತ್ತಿದ್ದಾರೆ ಎಂದು ಆರೋಪಿಸಿದ ಅವರು ಸಾವಿರಾರು ಮಹಿಳೆಯರು ಇದರಿಂದ ಬಳಲುತ್ತಿದ್ದಾರೆ. ದೇಶದ ಇಂದಿನ ಸೈಬರ್‌ ಕಾಯಿದೆ ದುರ್ಬಲವಾಗಿರುವುದು ಇದಕ್ಕೆ ಪ್ರಧಾನ ಕಾರಣ ಎಂದ ಅವರು 120 ಪೊಲೀಸ್‌ ಕಾಯಿದೆ ಈ ನಿಟ್ಟಿನಲ್ಲಿ ಸಾಲದು, ಹೊಸ ಸಬಲ ಕಾಯಿದೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ವೈದ್ಯೆ ದೂರು
ದೂರವಾಣಿ ಮೂಲಕ ಕರೆಮಾಡಿ ಕಿರುಕುಳ ನೀಡುತ್ತಿರುವ ಸಹವರ್ತಿಯೊಬ್ಬರ ವಿರುದ್ಧ ವೈದ್ಯೆಯೊಬ್ಬರು ದೂರು ಸಲ್ಲಿಸಿದ್ದಾರೆ. ಈ ಸಂಬಂಧ ಪೊಲೀಸರು ದೂರು ದಾಖಲಿಸಿದ್ದರೂ ಅದು ದುರ್ಬಲವಾಗಿದೆ. ಈ ಬಗ್ಗೆ 350 ಕಾಯಿದೆ ಪ್ರಕಾರ ದೂರು ದಾಖಲಿಸುವಂತೆ ಆಯೋಗ ಆದೇಶಿಸಿದ್ದು, ವಿಚಾರಣೆ ನಡೆಯುತ್ತಿದೆ. ಇಂಥಾ ಪ್ರಕರಣಗಳು ಎಲ್ಲೆಡೆ ಹೆಚ್ಚುತ್ತಿದ್ದು, ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಮಹಿಳೆಯರು ಈ ನಿಟ್ಟಿನಲ್ಲಿ ಅ ಧಿಕ ಸಂಖ್ಯೆಯಲ್ಲಿ ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ ಎಂದರು.

ಆಸ್ತಿ ತಗಾದೆ ಪ್ರಕರಣವೊಂದಕ್ಕೆ ಸಂಬಂ ಧಿಸಿ ಮಹಿಳೆಯೊಬ್ಬರೊಂದಿಗೆ ಯುವಕನೊಬ್ಬ ಅಸಭ್ಯವಾಗಿ ಮಾತನಾಡಿದ ಸಂಬಂಧ ದೂರು ಸಲ್ಲಿಕೆಯಾಗಿದೆ. ಈ ಸಂಬಂಧ ಇಲಾಖೆಗಳಿಂದ ವರದಿ ಯಾಚಿಸಲಾಗಿದೆ ಎಂದು ಅವರು ನುಡಿದರು. ಪ್ರಕರಣವೊಂದಕ್ಕೆ ಸಂಬಂ ಧಿಸಿ ತಂತಿ ಬೇಲಿಯಲ್ಲಿ ಸೋಲಾರ್‌ ವಿದ್ಯುತ್‌ ಹರಿಸಿದ ಪ್ರಕರಣದಲ್ಲಿ ಸಮಗ್ರ ತನಿಖೆ ನಡೆಸುವಂತೆ ಆಯೋಗ ಸಂಬಂಧಪಟ್ಟವರಿಗೆ ಆದೇಶಿಸಿದೆ. ಸೋಲಾರ್‌ ಇರಲಿ, ಯಾವುದೇ ರೀತಿಯ ವಿದ್ಯುತ್‌ ಇರಲಿ. ಅದನ್ನು ಗಂಭೀರವಾಗಿ ಪರಿಶೀಲಿಸುವಂತೆ ಆಯೋಗ ಆದೇಶಿಸಿದೆ ಎಂದರು.

ಬೇರೊಂದು ಜಿಲ್ಲೆಯ ಪ್ರಕರಣವೊಂದಕ್ಕೆ ಸಂಬಂ ಧಿಸಿದ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಲು ಸಿದ್ಧರಾಗದ ಅವರು ಆಯಾ ಜಿಲ್ಲೆಗಳ ಮಹಿಳೆಯರ ಸಮಸ್ಯೆಯನ್ನು ಪ್ರತ್ಯೇಕವಾಗಿ ಪರಿಶೀಲಿಸಿ, ಅವರಿಗೆ ನ್ಯಾಯ ಒದಗಿಸುವ ಪ್ರಯತ್ನ ಆಯೋಗದ್ದು ಎಂದು ಸ್ಪಷ್ಟನೆ ನೀಡಿದರು.

ಇತರ ಜಿಲ್ಲೆಗಳಿಗೆ ಹೋಲಿಸಿದರೆ ಕಾಸರಗೋಡು ಜಿಲ್ಲೆಯಲ್ಲಿ ಮಹಿಳಾ ಆಯೋಗಕ್ಕೆ ಲಭಿಸಿದ ದೂರುಗಳ ಸಂಖ್ಯೆ ಕಡಿಮೆ ಎಂದು ತಿಳಿಸಿದರು. ಉಳಿದ ಜಿಲ್ಲೆಗಳಲ್ಲಿ 100ಕ್ಕಿಂತ ಅಧಿ ಕ ದೂರುಗಳು ಸಲ್ಲಿಕೆಯಾದರೆ, ಕಾಸರಗೋಡು ಜಿಲ್ಲೆಯಲ್ಲಿ 40 ದೂರುಗಳು ಮಾತ್ರ ಲಭಿಸಿವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಆಯೋಗದ ಪ್ರತಿನಿ ಧಿಗಳಾದ ಡಾ.ಶಾಹಿದಾ ಕಮಾಲ್‌, ಪಿ.ಎಂ.ರಾಧಾ, ನ್ಯಾಯವಾದಿ ಷಿಜಿ ಮೊದಲಾದವರು ಉಪಸ್ಥಿತರಿದ್ದರು.

ಮಕ್ಕಳ ಮೇಲೆ, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚುತ್ತಿದೆ. ಇದರ ವಿರುದ್ಧ ಕಾನೂನು ಜಾಗೃತಿ ಮೂಡಿಸುವ ಯತ್ನ ರಾಜ್ಯ ಮಹಿಳಾ ಆಯೋಗದಿಂದ ನಡೆಸಲಾಗುತ್ತಿದೆ. ಇದರ ಅಂಗವಾಗಿ ಪೋಕೊÕà ಕಾಯಿದೆ ಕುರಿತು ರಾಜ್ಯಾದ್ಯಂತ ಮಹಿಳೆಯರಿಗಾಗಿ ತರಗತಿ ನಡೆಸಲಾಗುತ್ತಿದೆ.ತರಗತಿಯ ಪೂರ್ಣ ವೆಚ್ಚವನ್ನು ಆಯೋಗವೇ ವಹಿಸುತ್ತಿದೆ. ರಾಜ್ಯ ಮಹಿಳಾ ಆಯೋಗ ಒಂದು ಅರ್ಧ ನ್ಯಾಯಾಂಗ ವ್ಯವಸ್ಥೆ. ಆದರೂ ರಾಜ್ಯದ ಮಹಿಳೆಯರಿಗೆ ಪೂರ್ಣ ರೂಪದಲ್ಲಿ ನ್ಯಾಯ ಒದಗಿಸುವ ಯತ್ನ ನಡೆಸುತ್ತಿದೆ. ರಾಜಕೀಯೇತರವಾಗಿ ಅದು ತನ್ನ ಕಾರ್ಯವೈಖರಿ ನಡೆಸುತ್ತಿದೆ ಎಂದು ಜೋಸ್‌ಫೈನ್‌ ಅವರು ಹೇಳಿದರು.

ಟಾಪ್ ನ್ಯೂಸ್

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.