ವೈವಿಧ್ಯಕ್ಕೆ ಸಾಕ್ಷಿಯಾದ  ಪೆರ್ಲ ಹಲಸು ಮೇಳ


Team Udayavani, Jun 12, 2018, 6:55 AM IST

11ksde8.jpg

ಪೆರಡಾಲ: ಜನಸಾಮಾನ್ಯರೇ ಇಂದು ಹಲಸನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದವರು.  ಮೌಲ್ಯವರ್ಧನೆ ಮಾಡಿ ಹಲಸಿಗೆ ಮಾನವನ್ನು ತಂದವರು. ಜನ ಸಾಮಾನ್ಯರ ಆಂದೋಲನ ಇಂದು ವಿಶ್ವವ್ಯಾಪಿಯಾಗಿದೆ. ವಿದೇಶಗಳಲ್ಲಿ ವೈಜ್ಞಾನಿಕವಾಗಿ ಕೃಷಿ ಮಾಡಿ ಇಂದು ಜನಸಾಮಾನ್ಯರ ಮನೆಬಾಗಿಲಿಗೆ ರೆಡಿ ಟು ಕುಕ್‌ ಎಂದು ಆಗಮಿಸಿ ಜನಪ್ರಿಯವಾಗಿದೆ ಹಲಸಿನ ವಿವಿಧ‌ ನಮೂನೆಗಳು ಎಂದು ಜಾಗತಿಕ ಹಲಸಿನ ರಾಯಭಾರಿ ಶ್ರೀಪಡ್ರೆ ತನ್ನ ಸ್ವತಃ ಭೇಟಿ ಮತ್ತು ಸ್ಲೆ$çಡ್‌ ಶೋ ಆಧಾರಿತ ಅನುಭವ ಕಥನವನ್ನು ಪೆರ್ಲದ ಭಾರತಿ ಸದನದಲ್ಲಿ ನಡೆದ ಹಲಸು ಮೇಳಕ್ಕೆ ಬಂದ ಹಲಸು ಪ್ರಿಯರಿಗೆ  ತನ್ನ ಮಾತಿನ ಮೂಲಕ ಉಣಬಡಿಸಿದರು.

ಹಲಸು ಹಲವು ರೋಗಗಳಿಗೆ 
ರಾಮಬಾಣ: ಡಾ| ಸರಿತಾ ಹೆಗ್ಡೆ

ಸಿ.ಪಿ.ಸಿ.ಆರ್‌.ಐ. ಕಾಸರಗೋಡಿನ ಡಾ| ಸರಿತಾ ಹೆಗ್ಡೆ ಹಲಸಿನ ಖಾದ್ಯ ಉತ್ಪನ್ನಗಳ ಪ್ರಾತ್ಯಕ್ಷಿಕೆ ನೀಡಿ ನಮ್ಮ ಆರೋಗ್ಯಕ್ಕೆ ಪೂರಕ ವಸ್ತುಗಳನ್ನು ಹಲಸಿನಿಂದ ತಯಾರಿಸಿ ದೀರ್ಘ‌ಕಾಲ ಕೆಡದಂತೆ ಕಾಪಾಡಬೇಕು. ಹಲಸು   ಕ್ಯಾನ್ಸರನ್ನು    ಮಾತ್ರವಲ್ಲ ಇತರ ಶರೀರದ ರೋಗಗಳನ್ನೂ ಗುಣಮಾಡಬಲ್ಲದು. ಇದ ರಲ್ಲಡಗಿರುವ ನಾರಿನಂಶ ಜೀರ್ಣಾಂಗ ಗಳನ್ನು ಸ್ವತ್ಛ ಮಾಡುತ್ತದೆ. ನಿಧಾನವಾಗಿ ಸಕ್ಕರೆ ಅಂಶವನ್ನು ಶರೀರಕ್ಕೆ ಬಿಡುಗಡೆ ಗೊಳಿಸುವುದರಿಂದ ಮಧುಮೇಹಿಗಳಿಗೂ ಇದರ ಸೇವನೆ ಫಲಕಾರಿಯಾಗಿದೆ. ಶರೀರದ ವಿಷವಸ್ತುಗಳನ್ನು ಇದು ದೇಹದಿಂದ ಹೊರ ಹಾಕುತ್ತದೆ ಎಂದು ನುಡಿದ ಇವರು ಹಲವಾರು ವಿವಿಧ‌ ತಿಂಡಿಗಳನ್ನು ಮಾಡುವ ಪ್ರಾತ್ಯಕ್ಷಿಕೆಯನ್ನು ತೋರಿಸಿ ಕೊಟ್ಟರು.

ಜಾಕ್‌ ಅನಿಲ್‌ ವಿವಿಧ ರೀತಿಯಲ್ಲಿ ಹಲಸಿನ ಸಸಿಗೆ ಕಸಿ ಕಟ್ಟುವ ವಿಧಾನವನ್ನು ತೋರಿಸಿ ಕೊಟ್ಟು, ವಹಿಸಬೇಕಾದ ಎಚ್ಚರಿಕೆ ಮತ್ತು ಹಲಸು ಪ್ರಿಯರ ಸಂಶಯಗಳನ್ನು ನಿವಾರಿಸಿದರು.

2 ಎಕ್ರೆ ಪ್ರದೇಶದಲ್ಲಿ ಹಲಸಿನ 104 ಪ್ರಭೇದಗಳನ್ನು ಬೆಳೆಸಿ ವೈಜ್ಞಾನಿಕ ರೀತಿ ಯಲ್ಲಿ ಹಲಸಿನ ತೋಟ ಬೆಳೆಸಿ, ಈಗ ಫಲ ಪಡೆಯುತ್ತಿರುವ ಕೃಷಿಕ ವರ್ಮುಡಿ ಶಿವಪ್ರಸಾದ್‌ ಅವರನ್ನು  ಈ ಸಂದರ್ಭದಲ್ಲಿ ಗೌರವಿಸಿ ಸಮ್ಮಾನಿಸಲಾಯಿತು.

40ಕ್ಕೂ ಹೆಚ್ಚು ಹಲಸು ಖಾದ್ಯಗಳು ಸ್ಪರ್ಧೆಗಿಳಿದು ಪ್ರದರ್ಶನ ಕಂಡವು.  ಹಲಸಿನ ವಿವಿಧ ತಿಂಡಿಗಳಾದ ಐಸ್‌ ಕ್ರೀಂ, ಹಲ್ವ, ಕ್ಷೀರ, ಬರ್ಫಿ, ಚಿಪ್ಸ್‌, ಜ್ಯೂಸ್‌, ಹಣ್ಣು, ಪಲ್ಪ್ ಮುಂತಾದ ವಸ್ತುಗಳು ಭರ್ಜರಿ ವ್ಯಾಪಾರ ಕಂಡವು. ಹಲಸಿನಡಿಗೆಯ ಪುಸ್ತಕಗಳು, ಹಲಸು ತುಂಡರಿಸುವ ಸಾಧನಗಳು, ಹಲಸಿನ ವಿವಿಧ ತಳಿಗಳ ಕಸಿ ಗಿಡಗಳು ಹಲಸು ಪ್ರಿಯರ ಮನೆ ಸೇರಿದವು.
 
ಮಧ್ಯಾಹ್ನ ಭೋಜನಕ್ಕೆ ಅನ್ನದ ಹೊರತು ಇತರ ಎಲ್ಲ ಪದಾರ್ಥಗಳೂ ಹಲಸಿನದ್ದೇ ಆಗಿತ್ತು.ಶಿಕ್ಷಕರಾದ ಉಮೇಶ್‌ ಪೆರ್ಲ ಮತ್ತು ಶಿವರಾಮ ಬೇಂಗಪದವು ಇವರ ನಾಯಕತ್ವ ದಲ್ಲಿ ಜರಗಿದ ಹಲಸು ಮೇಳಕ್ಕೆ, ಪೆರ್ಲ ಸೇವಾ ಸಹಕಾರಿ ಬ್ಯಾಂಕ್‌, ಶ್ರೀ ಶಂಕರ ಸೇವಾ ಸಮಿತಿ ಮತ್ತು ಅಕ್ಷಯ ಕೃಷಿ ಕೂಟ ಪೆರ್ಲ ಸಹಕಾರ ನೀಡಿದ್ದವು.

ಹಲಸಿಗೆ ನಮ್ಮಲ್ಲಿ ಇನ್ನೂ ಸರಿಯಾದ ಮಾನ್ಯತೆ ಸಿಕ್ಕಿಲ್ಲ
ನಮ್ಮಲ್ಲಿ ಹಲಸಿನ ಬಗ್ಗೆ ಮಾತನಾಡಿದರೆ ತಮಾಷೆಯಾಗಿ ಕಾಣುತ್ತಾರೆ. ಶ್ರೀಲಂಕಾದಲ್ಲಿ ಹಲಸಿನ ಕುರಿತು ಮಾಹಿತಿ ನೀಡುವ 14 ಕೇಂದ್ರಗಳಿವೆ. ಶ್ರೀಲಂಕಾದವರಿಗೆ ಹಲಸು ಅನ್ನದ ಮರ, ದೇವ ವೃಕ್ಷ, ಆಹಾರದ ಅದ್ಭುತ ಕಚ್ಚಾವಸ್ತು. ರೆಡಿ ಟು ಕುಕ್‌ ಬೃಹತ್‌ ಉದ್ದಿªಮೆಯಾಗಿ ಬೆಳೆ‌ದಿದೆ. ವಿಯೆಟ್ನಾಂ, ಮಲೇಶಿಯಾ, ಚೀನ ವೈಜ್ಞಾನಿಕವಾಗಿ ಹಲಸು ತೋಟ ಬೆಳೆಸಿ, ಕೃಷಿ ಮಾಡಿ ಹಲಸನ್ನು ವಿದೇಶ‌ಗಳಿಗೆ ರಫ್ತು ಮಾಡುವ ಬೃಹತ್‌ ಉದ್ಯಮಗಳನ್ನು ಸ್ಥಾಪಿಸಿವೆ. ಆದರೆ ನಮ್ಮಲ್ಲಿ ಪ್ರಾಕೃತಿಕವಾಗಿ ಸಿಗುವ ಹಲಸಿಗೆ ಮಾನ್ಯತೆ ಬಂದಿಲ್ಲ.  ಹಲಸಿನ ಉಪಯೋಗದ ಬಗ್ಗೆ ಕೀಳರಿಮೆ ಇದೆ. ನಮಗಿದು ಬಡವರ ಹಣ್ಣು. ಉತ್ತರ ಭಾರತದವರಿಗೆ ಇದು ಶ್ರೀಮಂತರ ಹಣ್ಣು. ಕೇರಳ ಇದನ್ನು ಸಿದ್ಧ ಉತ್ಪನ್ನಗಳ ಮೂಲಕ ಉತ್ತರ ಭಾರತದಲ್ಲಿ  ಶ್ರೀಮಂತರ ಮನೆಬಾಗಿಲಿಗೆ ತಲಪಿಸುತ್ತದೆ. ನಮ್ಮ ಹಲಸಿಗೆ ಜಾಗತಿಕವಾಗಿ ಮಾನ ಬಂದಿದೆ. ಆದರೆ ನಮ್ಮ ಹಿತ್ತಿಲಿನ ಹಣ್ಣಿಗೆ ಮನೆಯಲ್ಲಿ ಮಾನ ಸಿಗಬೇಕಷ್ಟೆ ಎಂದು ಶ್ರೀಪಡ್ರೆ ವಿಷಾದಿಸಿದರು.

40ಕ್ಕೂ ಹೆಚ್ಚು ಹಲಸು ಖಾದ್ಯ
40ಕ್ಕೂ ಹೆಚ್ಚು ಹಲಸು ಖಾದ್ಯಗಳು ಸ್ಪರ್ಧೆಗಿಳಿದು ಪ್ರದರ್ಶನ ಕಂಡವು.  ಹಲಸಿನ ವಿವಿಧ ತಿಂಡಿಗಳಾದ ಐಸ್‌ ಕ್ರೀಂ, ಹಲ್ವ, ಕ್ಷೀರ, ಬರ್ಫಿ, ಚಿಪ್ಸ್‌, ಜ್ಯೂಸ್‌, ಹಣ್ಣು, ಪಲ್ಪ್ ಮುಂತಾದ ವಸ್ತುಗಳು ಭರ್ಜರಿ ವ್ಯಾಪಾರ ಕಂಡವು. ಹಲಸಿನಡಿಗೆಯ ಪುಸ್ತಕಗಳು, ಹಲಸು ತುಂಡರಿಸುವ ಸಾಧನಗಳು, ಹಲಸಿನ ವಿವಿಧ ತಳಿಗಳ ಕಸಿ ಗಿಡಗಳು ಹಲಸು ಪ್ರಿಯರ ಮನೆ ಸೇರಿದವು. ಮಧ್ಯಾಹ್ನ ಭೋಜನಕ್ಕೆ ಅನ್ನದ ಹೊರತು ಇತರ ಎಲ್ಲ ಪದಾರ್ಥಗಳೂ ಹಲಸಿನದ್ದೇ ಆಗಿದ್ದವು.

ಟಾಪ್ ನ್ಯೂಸ್

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

10-sulya

ಚಾರಿತ್ರಿಕ ಪರಂಪರೆಗಳ ಸಂರಕ್ಷಣೆಗಾಗಿ ಅಮರ ಸುಳ್ಯ ಹೆರಿಟೇಜ್ ಫೌಂಡೇಶನ್ (ರಿ.) ಕಾರ್ಯಾರಂಭ

Virajpet: ಲಾರಿ – ಆ್ಯಂಬುಲೆನ್ಸ್‌ ನಡುವೆ ಢಿಕ್ಕಿ; ಓರ್ವನಿಗೆ ಗಾಯ

Virajpet: ಲಾರಿ – ಆ್ಯಂಬುಲೆನ್ಸ್‌ ನಡುವೆ ಢಿಕ್ಕಿ; ಓರ್ವನಿಗೆ ಗಾಯ

ಅಂಬಲತ್ತರದಲ್ಲಿ ಪತ್ತೆಯಾದ ನೋಟುಗಳೆಲ್ಲವೂ ಖೋಟಾ ನೋಟು : ಕರ್ನಾಟಕದಲ್ಲಿ ಮುದ್ರಣ ಶಂಕೆ

ಅಂಬಲತ್ತರದಲ್ಲಿ ಪತ್ತೆಯಾದ ನೋಟುಗಳೆಲ್ಲವೂ ಖೋಟಾ ನೋಟು : ಕರ್ನಾಟಕದಲ್ಲಿ ಮುದ್ರಣ ಶಂಕೆ

Manjeshwar ವಿದ್ಯುತ್‌ ಆಘಾತ: ಯುವಕ ಸಾವು

Manjeshwar ವಿದ್ಯುತ್‌ ಆಘಾತ: ಯುವಕ ಸಾವು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

13-good-friday

ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

12-kejriwal

Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.