ಓಣಂ ಮುನ್ನ ಎರಡು ಲಕ್ಷ  ಆದ್ಯತಾ ಪಡಿತರ ಚೀಟಿ ವಿತರಣೆ


Team Udayavani, Jul 11, 2018, 6:00 AM IST

c-26.jpg

ಕಾಸರಗೋಡು: ಸಾರ್ವಜನಿಕ ವಿತರಣಾ ಇಲಾಖೆಯು ಓಣಂ ಹಬ್ಬಕ್ಕಿಂತ ಮೊದಲು ಕೇರಳದಲ್ಲಿ ಎರಡು ಲಕ್ಷದಷ್ಟು ಆದ್ಯತಾ ರೇಶನ್‌ ಕಾರ್ಡ್‌ಗಳನ್ನು ವಿತರಿಸಲು ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಯೋಜನೆಯ ಪ್ರಥಮ ಹಂತವಾಗಿ ಪ್ರತಿ ಯೊಂದು ತಾಲೂಕು ವ್ಯಾಪ್ತಿಯ 2,500ರಷ್ಟು ಅನರ್ಹವಾದ ಆದ್ಯತಾ, ಎಎವೈ ಪಡಿತರ ಕಾರ್ಡ್‌ಗಳನ್ನು  ಓಣಂನ ಮೊದಲು ಪತ್ತೆ ಹಚ್ಚಿ  ಇವುಗಳನ್ನು  ಆದ್ಯತೇತರ ವಿಭಾಗಕ್ಕೊಳಪಡಿಸಲಾಗುವುದು.

ಆ. 15ರೊಳಗೆ ಅಂತಿಮ ಪಟ್ಟಿ
ಈ ನಿಟ್ಟಿನಲ್ಲಿ  ಪಡಿತರ ವ್ಯಾಪಾರಿಗಳ ವಿಶೇಷ ಸಭೆಯನ್ನು ನಡೆಸಿ ಆಗಸ್ಟ್‌  15ರ ಮುಂಚಿತವಾಗಿ ಅಂತಿಮ ವರದಿ ಸಲ್ಲಿಸಲು ಸಿವಿಲ್‌ ಸಪ್ಲೈಸ್‌ ನಿರ್ದೇಶಕರು ನಿರ್ದೇಶಿಸಿ ದ್ದಾರೆ. ಪಡಿತರ ಆದ್ಯತಾ ಪಟ್ಟಿಯಲ್ಲಿ  ಇನ್ನೂ  ಅನರ್ಹರು ಇದ್ದಾರೆ ಎಂದು ಸಾರ್ವಜನಿಕ ವಿತರಣಾ ಇಲಾಖೆಯು ಪತ್ತೆಹಚ್ಚಿದ ಹಿನ್ನೆಲೆಯಲ್ಲಿ ಮತ್ತೆ ಪಟ್ಟಿಯ ಶುದ್ಧೀಕರಣಕ್ಕೆ ಆದೇಶ ಹೊರಡಿಸಲಾಗಿದೆ.

ರಾಷ್ಟ್ರೀಯ ಆಹಾರ ಭದ್ರತಾ ನಿಯಮ 2013ರ ಪ್ರಕಾರ ಈಗಾಗಲೇ ಆದ್ಯತಾ ಪಟ್ಟಿಯನ್ನು  ರಚಿಸಿ ಅನರ್ಹರನ್ನು  ತೆಗೆಯ ಲಾಗುವುದು. ಇನ್ನುಳಿದ ಅನರ್ಹರನ್ನು  ಹೊರತುಪಡಿಸಿ ಅರ್ಹರನ್ನು  ಒಳಪಡಿಸಲು ಆದೇಶ ನೀಡಲಾಗಿದೆ. ವಾಹನಗಳು ಇರುವುದಾಗಿ ಮೋಟಾರು ವಾಹನ ಇಲಾಖೆಯಿಂದ ಲಭಿಸಿದ ಮಾಹಿತಿಗಳು ಮತ್ತು  ಸ್ಥಳೀಯಾಡಳಿತ ಇಲಾಖೆ ನೀಡಿದ ಮಾಹಿತಿಗಳನ್ನು  ಇದಕ್ಕಾಗಿ ತಾಲೂಕು ಸಪ್ಲೈ ಅಧಿಕಾರಿಗಳಿಗೆ ನೀಡಲಾಗಿದೆಯಾದರೂ ಇದುವರೆಗೆ ಆ ಕುರಿತು ತಪಾಸಣೆ ನಡೆಸಿ ವರದಿ ಸಲ್ಲಿಸಲು ಸಾಧ್ಯವಾಗಿಲ್ಲ.

2014ರ ಬಳಿಕ ಇಲಾಖೆಯ ಗಮನಕ್ಕೆ ಬಂದ ಮಾಹಿತಿಯಂತೆ ಮೃತಪಟ್ಟವರ ಹೆಸರನ್ನು ಕೂಡ ರೇಶನ್‌ ಕಾರ್ಡ್‌ಗಳಿಂದ ಹೊರತುಪಡಿಸಲಾಗಿಲ್ಲ. ಈ ಕಾರಣಗಳಿಂದ ನೂರಾರು ಮಂದಿ ಅನರ್ಹರು ಪ್ರತಿ ಯೊಂದು ಪ್ರದೇಶದಲ್ಲಿ  ಆದ್ಯತಾ ಪಟ್ಟಿಯಲ್ಲಿ  ಇರುವುದಾಗಿ ಸಾರ್ವಜನಿಕ ವಿತರಣಾ ಇಲಾಖೆಯು ಮಾಹಿತಿ ನೀಡಿದೆ. ರೇಶನ್‌ ಅಂಗಡಿ ಮಾಲಕರು ಮನಸ್ಸು  ಮಾಡಿದರೆ ಈ ಎಲ್ಲ  ಅನರ್ಹರನ್ನು  ಆದ್ಯತಾ ಪಟ್ಟಿಯಿಂದ ಹೊರತುಪಡಿಸಲು ಸಾಧ್ಯವಿದೆ.

ಎಲ್ಲ  ಕಾರ್ಡ್‌ ಮಾಲಕರ ಕುಟುಂಬಗಳ ಸ್ಥಿತಿಗತಿ ಮಾಹಿತಿಯನ್ನು ಒಂದು ಹಂತದವರೆಗಾದರೂ ಆಯಾ ರೇಶನ್‌ ಅಂಗಡಿ ಮಾಲಕರಿಗೆ ನೇರವಾಗಿ ತಿಳಿಯ ಬಹುದಾಗಿರುವುದರಿಂದ ಸಂಪೂರ್ಣ ಅನರ್ಹರನ್ನು  ಹೊರತುಪಡಿಸಲು ಸಾಧ್ಯವಿದೆ ಎಂದು ಅಧಿಕಾರಿಗಳು ಹೇಳುತ್ತಿ ದ್ದಾರೆ. ಆದುದರಿಂದ ಈ ವಿಷಯದಲ್ಲಿ  ರೇಶನ್‌ ಅಂಗಡಿ ಮಾಲಕರ ಸಭೆ ನಡೆಸಲು ಆದೇಶ ಹೊರಡಿಸಲಾಗಿದೆ. ಇನ್ನು  ಪಡಿತರ ಕಾರ್ಡ್‌ ಮಾಲಕರು ಯಾವ ಪಡಿತರ ಅಂಗಡಿಯಿಂದ ಬೇಕಾದರೂ ಪಡಿತರ ವಸ್ತು  ಖರೀದಿಸಬಹುದಾಗಿದೆ.

ಯಾವುದೇ ಪಡಿತರ ಅಂಗಡಿಯಿಂದ ಖರೀದಿಗೆ ಅವಕಾಶ
ರೇಶನ್‌ ಖರೀದಿಸಲು ಪೋರ್ಟಬಿಲಿಟಿ ವ್ಯವಸ್ಥೆ  ಇರುವುದರಿಂದ ಯಾವುದೇ ಪಡಿತರ ಅಂಗಡಿಯಿಂದ ಸಾಮಗ್ರಿ ಖರೀದಿಸಬಹುದು. ಇದಕ್ಕೆ ರಾಜ್ಯ ಸರಕಾರದ ಅಂಗೀಕಾರದೊಂದಿಗೆ ಕಾರ್ಡ್‌ ಮಾಲಕರಿಗೆ ತಿಳಿವಳಿಕೆ ಮೂಡಿಸಲು ಸಾರ್ವಜನಿಕ ವಿತರಣಾ ಇಲಾಖೆಯು ತೀರ್ಮಾನಿಸಿದೆ. ಈ ವ್ಯವಸ್ಥೆ  ಜಾರಿಗೆ ಬಂದರೆ ವಾಸಸ್ಥಳ ಬದಲಾಯಿಸುವುದಕ್ಕೆ ಅನುಸರಿಸಿ ಪಡಿತರ ಕಾರ್ಡ್‌ ಬದಲಾಯಿಸಬೇಕಾಗಿಲ್ಲ. ಒಂದು ಪಡಿತರ ಅಂಗಡಿ ತೆರೆಯದಿದ್ದರೂ ಇತರ ಪಡಿತರ ಅಂಗಡಿಗಳಿಂದ ಸಾಮಗ್ರಿಗಳನ್ನು  ಖರೀದಿಸುವ ವ್ಯವಸ್ಥೆ  ಕೇರಳದಲ್ಲಿ  ಜಾರಿಗೆ ಬಂದಿದೆ.

ಅನರ್ಹರು ಆದ್ಯತಾ ಪಟ್ಟಿಯಿಂದ ಹೊರಗೆ  
ಕಾಸರಗೋಡು ಜಿಲ್ಲೆಯಲ್ಲೂ  ಅನರ್ಹರನ್ನು ರೇಶನ್‌ ಆದ್ಯತಾ ಪಟ್ಟಿಯಿಂದ ಹೊರಹಾಕುವ ಕಾರ್ಯ ನಡೆಯುತ್ತಿದೆ. ಈ ನಿಟ್ಟಿನಲ್ಲಿ  ಪ್ರಾಥಮಿಕ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಇದಕ್ಕಾಗಿ ಜಿಲ್ಲೆಯ ನಾಲ್ಕು ತಾಲೂಕು ವ್ಯಾಪ್ತಿಯ ಸಪ್ಲೈ ಆಫೀಸ್‌ಗಳಿಗೆ ನಿರ್ದೇಶನ ಕಳುಹಿಸಲಾಗಿದೆ. ಇದರಿಂದ ಅರ್ಹರು ಪಟ್ಟಿಗೆ ಸೇರ್ಪಡೆಗೊಳ್ಳಲಿದ್ದು, ಅನರ್ಹರು ಹೊರತಾಗುವರು. ಅಲ್ಲದೆ ಕೇಂದ್ರ ಸರಕಾರದ ವ್ಯವಸ್ಥೆಯಂತೆ ರಾಜ್ಯದ ಎಲ್ಲ  ಅರ್ಹರಿಗೂ ಕ್ರಮಬದ್ಧವಾಗಿ ಪಡಿತರ ಸಾಮಗ್ರಿಗಳು ಕಾಲ ಕಾಲಕ್ಕೆ ಲಭಿಸಬಹುದು.

ಟಾಪ್ ನ್ಯೂಸ್

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

Uppala ರೈಲ್ವೇ ಇಲಾಖೆಯ ಸ್ಥಳದಿಂದ ಮರ ಕಳವು : ಆರೋಪಿ ಬಂಧನ

Uppala ರೈಲ್ವೇ ಇಲಾಖೆಯ ಸ್ಥಳದಿಂದ ಮರ ಕಳವು : ಆರೋಪಿ ಬಂಧನ

ಮೋದಿ ಸರಕಾರದಿಂದ ಭ್ರಷ್ಟಾಚಾರ ನಿಯಂತ್ರಣ: ಎ.ಪಿ. ಅಬ್ದುಲ್ಲ ಕುಟ್ಟಿ

ಮೋದಿ ಸರಕಾರದಿಂದ ಭ್ರಷ್ಟಾಚಾರ ನಿಯಂತ್ರಣ: ಎ.ಪಿ. ಅಬ್ದುಲ್ಲ ಕುಟ್ಟಿ

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.