Udayavni Special

ಪರಿಶೀಲನೆ ಪೂರ್ತಿ : ವರದಿ ಬಳಿಕ ಎಂಡೋಸಲ್ಫಾನ್‌ ನಿಷ್ಕ್ರಿಯ


Team Udayavani, May 8, 2018, 8:00 AM IST

07ksde6.jpg

ಕಾಸರಗೋಡು: ಪ್ಲಾಂಟೇಶನ್‌ ಕಾರ್ಪೊರೇಶನ್‌ನ ಗೋದಾಮುಗಳಲ್ಲಿರುವ ಎಂಡೋಸಲ್ಫಾನ್‌ ಸ್ಯಾಂಪಲ್‌ ಪರಿಶೀಲನೆ ಪೂರ್ಣಗೊಂಡಿದ್ದು, ವರದಿ  ಬಳಿಕ ಎಂಡೋಸಲ್ಫಾನ್‌ ನಿಷ್ಕ್ರಿಯಗೊಳಿಸುವ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು.

ಸಾರ್ವಜನಿಕ ಸಂಸ್ಥೆಯಾದ ಕೊಚ್ಚಿಯ ಹಿಂದೂಸ್ಥಾನ್‌ ಇನ್‌ಸೆಕ್ಟಿಸೈಡ್ಸ್‌(ಎಚ್‌.ಐ.ಎಲ್‌.) ಲಿಮಿಟೆಡ್‌ನ‌ಲ್ಲಿ ಎಂಡೋಸಲ್ಫಾನ್‌ನಲ್ಲಿರುವ ವಿಷಾಂಶಗಳ ಬಗ್ಗೆ ಪರಿಶೀಲಿಸಲಾಗಿದ್ದು, ಈ ಬಗ್ಗೆ ಕಾಸರಗೋಡು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ ಬಳಿಕ ನಿಷ್ಕ್ರಿಯಗೊಳಿಸುವ ಕುರಿತು ತೀರ್ಮಾನಕ್ಕೆ ಬರಲಾಗುವುದು. ಹೊರಗಿನ ಏಜೆನ್ಸಿಗಳ ಪರಿಶೀಲನೆಯ ವರದಿಯನ್ನು ಪರಿಗಣಿಸಲಾಗುವುದು.

ಎಚ್‌.ಐ.ಎಲ್‌.ನಲ್ಲಿ ನಡೆಸಿದ ಸ್ಯಾಂಪಲ್‌ ಪರಿಶೀಲನೆಯಲ್ಲಿ  ಶೇ. 28-32  ಎಂಡೋಸಲ್ಫಾನ್‌ ಅಂಶ ಕಂಡುಕೊಳ್ಳಲಾಗಿದೆ. ಈ ಹಿಂದೆ ಇದರ ಪ್ರಮಾಣ  ಶೇ. 35  ಆಗಿತ್ತು. ಉಳಿದವು ಇತರ ಮಿಶ್ರಣವಾಗಿದೆ. ಜಿಲ್ಲಾ ಆಡಳಿತದ  ಅನುಮತಿ ಲಭಿಸಿದರೆ ಕೇಂದ್ರ ಏಜೆನ್ಸಿಯಾದ ಇನ್‌ಸ್ಟಿಟ್ಯೂಟ್‌ ಆಫ್‌  ಪೆಸ್ಟಿಸೈಡ್ಸ್‌ ಫಾರ್ಮೇಶನ್‌ ಟೆಕ್ನಾಲಜಿ(ಐ.ಪಿ.ಎಫ್‌.ಟಿ)ಗೂ ಪರಿಶೀಲಿಸಲು ಎಂಡೋಸಲ್ಫಾನ್‌ ಸ್ಯಾಂಪಲ್‌ ಕಳುಹಿಸಲಾಗುವುದು. ಆ ಬಳಿಕವೇ ಪ್ರತ್ಯೇಕ ಪ್ಲಾಂಟ್‌ನಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ನಿಷ್ಕ್ರಿಯಗೊಳಿಸಲಾಗುವುದು ಎಂದು ತಾಂತ್ರಿಕ ಅಧಿಕಾರಿ ಸಂತೋಷ್‌ ಕುಮಾರ್‌ ಹೇಳಿದ್ದಾರೆ.

ವಿಷ ರಹಿತಗೊಳಿಸಿ ಎಂಡೋಸಲ್ಫಾನ್‌ ನಿಷ್ಕ್ರಿಯಗೊಳಿಸಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು. ಕೇರಳದಿಂದ ಅನ್ಯ ರಾಜ್ಯಕ್ಕೆ ಕೊಂಡೊಯ್ದು ಅಲ್ಲಿ ನಿಷ್ಕ್ರಿಯಗೊಳಿಸುವ ತೀರ್ಮಾನ ಈ ಹಿಂದೆಯೇ ವಿಫಲವಾಗಿತ್ತು. ಕೊಚ್ಚಿಯ ಎಚ್‌.ಐ.ಎಲ್‌. ನಿಷ್ಕ್ರಿಯಗೊಳಿಸುವ ಒಪ್ಪಂದಕ್ಕೆ ಬಂದಿದೆ.

ಎಂಡೋಸಲ್ಫಾನ್‌ ನಿಷ್ಕ್ರಿಯಗೊಳಿಸುವ ಪ್ರಕ್ರಿಯೆಗೆ ಅಂಬಲಮುಕ್‌ನಲ್ಲಿರುವ ಕೇರಳ  ಎನ್‌ವಿಯೋ ಇನ್‌ಫ್ರಾಸ್ಟ್ರಕ್ಚರ್‌ ಲಿಮಿಟೆಡ್‌(ಕೆ.ಇ.ಐ.ಎಲ್‌) ಮುಂದೆ ಬಂದಿತ್ತು. ಆದರೆ ಜನರಿಂದ ವಿರೋಧ ವ್ಯಕ್ತವಾಗಬಹುದೆಂಬ ಹಿನ್ನೆಲೆಯಲ್ಲಿ ನಿರ್ವೀರ್ಯಗೊಳಿಸುವ ಪ್ರಕ್ರಿಯೆ ಮೊಟಕುಗೊಂಡಿತ್ತು. ಆ ಬಳಿಕ ಕಳೆದ ಐದು ವರ್ಷಗಳಿಂದ ಎಂಡೋಸಲ್ಫಾನ್‌ ಬ್ಯಾರೆಲ್‌ಗ‌ಳಲ್ಲಿ ಉಳಿದುಕೊಂಡಿದೆ.

ಹೈ ಡೆನ್ಸಿಟಿ ಪೋಲಿ ಎತಿಲಿನ್‌(ಎಚ್‌.ಡಿ.ಪಿ.ಇ.) ಬ್ಯಾರೆಲ್‌ಗ‌ಳಲ್ಲಿ 1900 ಲೀಟರ್‌ ಎಂಡೋಸಲ್ಫಾನ್‌ ತುಂಬಿಸಿಡಲಾಗಿದೆ. ಇದರ ಕಾಲಾವಧಿ 2017 ಜೂನ್‌ ತಿಂಗಳಲ್ಲೇ ಮುಗಿದಿದೆ. 

ಯುನೈಟೆಡ್‌ ನ್ಯಾಶನಲ್‌ ಅಂಗೀಕರಿಸಿದ ಐದು ವರ್ಷಗಳ ಸುರಕ್ಷಿತತೆಯ ಕಾಲಾವಧಿ ಈಗಾಗಲೇ ಮುಗಿದಿದೆ. ಕಾಸರಗೋಡು ಮತ್ತು ಮಣ್ಣಾರ್‌ಕ್ಕಾಡ್‌ ಪ್ಲಾಂಟೇಶನ್‌ನ ಗೋದಾಮುಗಳಲ್ಲಿ 2012ರಿಂದ ಈ ಬ್ಯಾರೆಲ್‌ಗ‌ಳಲ್ಲಿ ತುಂಬಿಸಿಡಲಾಗಿದೆ. ಇದರ ವಾರಂಟಿ ಮುಗಿದ ಬಳಿಕ ಎಷ್ಟು ಕಾಲ ಎಂಡೋಸಲ್ಫಾನ್‌ ಸುರಕ್ಷಿತ ಎಂದು ಹೇಳುವಂತಿಲ್ಲ. ಬ್ಯಾರೆಲ್‌ಗ‌ಳಲ್ಲಿರುವ ಎಂಡೋಸಲ್ಫಾನ್‌ ನಿರ್ವೀಯಗೊಳಿಸುವ ಸರಕಾರದ ಯತ್ನ ವಿಳಂಬವಾಗುತ್ತಿರುವುದರಿಂದಾಗಿ ಎಂಡೋಸಲ್ಫಾನ್‌ ಬೆದರಿಕೆಯಾಗುಳಿದಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

Punjab-2

IPL-2020ಯ ಮೊದಲ ಸೂಪರ್ ಓವರ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್

Stoins1

ಅರಬ್ ನಾಡಿನಲ್ಲಿ ಸ್ಟೊಯ್ನ್ಸ್ ಬಿರುಗಾಳಿ ; ಪಂಜಾಬ್ ಗೆಲುವಿಗೆ 158 ಗುರಿ

sukbir

ಕೃಷಿ ಮಸೂದೆಗೆ ಅಂಕಿತ ಹಾಕಬೇಡಿ,ರೈತರು ನಮ್ಮನ್ನೆಂದು ಕ್ಷಮಿಸಲ್ಲ:ರಾಷ್ಟ್ರಪತಿಗೆ ಬಾದಲ್ ಮನವಿ

NEWS-TDY-01

ಚೆನ್ನೈ ವಿರುದ್ಧದ ಮೊದಲ ಪಂದ್ಯಕ್ಕೆ ರಾಜಸ್ಥಾನ್ ತಂಡಕ್ಕೆ ಬಟ್ಲರ್ ಅಲಭ್ಯ

ಚಿತ್ರದುರ್ಗ ಜಿಲ್ಲೆಯಲ್ಲಿ 254 ಜನರಿಗೆ ಕೋವಿಡ್ ಪಾಸಿಟಿವ್! 421 ಮಂದಿ ಗುಣಮುಖ

ಚಿತ್ರದುರ್ಗ ಜಿಲ್ಲೆಯಲ್ಲಿ 254 ಜನರಿಗೆ ಕೋವಿಡ್ ಪಾಸಿಟಿವ್! 421 ಮಂದಿ ಗುಣಮುಖ

punjab-delhin

ಐಪಿಎಲ್ 2020: ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ

ಚಾಮರಾಜನಗರ : ಕೋವಿಡ್ ಸೋಂಕಿಗೆ ಓರ್ವ ಸಾವು, 73 ಮಂದಿ ಗುಣಮುಖ, 66 ಹೊಸ ಪ್ರಕರಣ ದೃಢ

ಚಾಮರಾಜನಗರ : ಕೋವಿಡ್ ಸೋಂಕಿಗೆ ಓರ್ವ ಸಾವು, 73 ಮಂದಿ ಗುಣಮುಖ, 66 ಹೊಸ ಪ್ರಕರಣ ದೃಢ






ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಚಿವ, ಶಾಸಕರ ರಾಜೀನಾಮೆಗೆ ಬಿಜೆಪಿ ಪಂಜಿನ ಮೆರವಣಿಗೆ

ಸಚಿವ, ಶಾಸಕರ ರಾಜೀನಾಮೆಗೆ ಬಿಜೆಪಿ ಪಂಜಿನ ಮೆರವಣಿಗೆ

ಕಾಸರಗೋಡು: ಜನಪರ ಹೊಟೇಲ್‌ಗ‌ಳ ಉದ್ಘಾಟನೆ

ಕಾಸರಗೋಡು: ಜನಪರ ಹೊಟೇಲ್‌ಗ‌ಳ ಉದ್ಘಾಟನೆ

mogral

ಮೊಗ್ರಾಲ್‌ ಯುನಾನಿ ಆಸ್ಪತ್ರೆಯ ನೂನತ ಕಟ್ಟಡಕ್ಕೆ ಶಿಲಾನ್ಯಾಸ

ಜಿಲ್ಲಾಧಿಕಾರಿ ಕಚೇರಿಗೆ ಬಿಜೆಪಿ ಮಹಿಳಾ ಮೋರ್ಚಾದಿಂದ ಪ್ರತಿಭಟನೆ ಜಾಥಾ

ಜಿಲ್ಲಾಧಿಕಾರಿ ಕಚೇರಿಗೆ ಬಿಜೆಪಿ ಮಹಿಳಾ ಮೋರ್ಚಾದಿಂದ ಪ್ರತಿಭಟನೆ ಜಾಥಾ

ಪೈನ್‌ ಆ್ಯಂಡ್‌ ಪಾಲಿಯೇಟಿವ್‌ ವಾಹನಕ್ಕೆ ಸಚಿವ ಇ. ಚಂದ್ರಶೇಖರನ್ ರಿಂದ ಹಸುರು ನಿಶಾನೆ

ಪೈನ್‌ ಆ್ಯಂಡ್‌ ಪಾಲಿಯೇಟಿವ್‌ ವಾಹನಕ್ಕೆ ಸಚಿವ ಇ. ಚಂದ್ರಶೇಖರನ್ ರಿಂದ ಹಸುರು ನಿಶಾನೆ

MUST WATCH

udayavani youtube

Dr.Harsha Kamath : ಕಾರ್ಕಳದ ಈ Doctor ಕಲಾ ಕುಸುರಿಯ Master | Udayavani

udayavani youtube

ಮುಂಬೈಯಿಂದ ಡ್ರಗ್ಸ್‌ ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು: ನಗರ ಪೊಲೀಸ್ ಆಯುಕ್ತ

udayavani youtube

ಕುತಂತ್ರಿ ಚೀನಾವನ್ನು ಕಟ್ಟಿ ಹಾಕುವುದು ಹೇಗೆ?

udayavani youtube

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavani

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!



ಹೊಸ ಸೇರ್ಪಡೆ

Punjab-2

IPL-2020ಯ ಮೊದಲ ಸೂಪರ್ ಓವರ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್

ತಮಿಳುನಾಡು ಮಾದರಿಯಲ್ಲಿ ತಮಟೆ ಕಲಾವಿದರಿಗೆ ಸೌಲಭ್ಯ ಕಲ್ಪಿಸಲು ಹೋರಾಟ: ರವಿಶಂಕರ್

ತಮಿಳುನಾಡು ಮಾದರಿಯಲ್ಲಿ ತಮಟೆ ಕಲಾವಿದರಿಗೆ ಸೌಲಭ್ಯ ಕಲ್ಪಿಸಲು ಹೋರಾಟ: ರವಿಶಂಕರ್

Stoins1

ಅರಬ್ ನಾಡಿನಲ್ಲಿ ಸ್ಟೊಯ್ನ್ಸ್ ಬಿರುಗಾಳಿ ; ಪಂಜಾಬ್ ಗೆಲುವಿಗೆ 158 ಗುರಿ

sukbir

ಕೃಷಿ ಮಸೂದೆಗೆ ಅಂಕಿತ ಹಾಕಬೇಡಿ,ರೈತರು ನಮ್ಮನ್ನೆಂದು ಕ್ಷಮಿಸಲ್ಲ:ರಾಷ್ಟ್ರಪತಿಗೆ ಬಾದಲ್ ಮನವಿ

NEWS-TDY-01

ಚೆನ್ನೈ ವಿರುದ್ಧದ ಮೊದಲ ಪಂದ್ಯಕ್ಕೆ ರಾಜಸ್ಥಾನ್ ತಂಡಕ್ಕೆ ಬಟ್ಲರ್ ಅಲಭ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.