ಕೊಂಡೆವೂರಿನ ವಿಶ್ವಜಿತ್‌ ಅತಿರಾತ್ರ ಸೋಮಯಾಗ ಸಂಪನ್ನ


Team Udayavani, Feb 25, 2019, 1:00 AM IST

sampanna.jpg

ಕುಂಬಳೆ: ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದ ವಿಶ್ವಜಿತ್‌ ಅತಿರಾತ್ರಯಾಗದ ಕೊನೆಯ ದಿನವಾದ ಫೆ. 24ರಂದು ಬೆಳಗ್ಗೆ ಪ್ರಾಯಶ್ಚಿತ್ತಾದಿ ಯಜ್ಞಪುತ್ಛ, ಅವಭೃಥ ಸ್ನಾನ, ಉದಯನಿಯೇಷ್ಟಿ, ಮೈತ್ರಾ ವರುಣ್ಯೇಷ್ಟಿ, ಉದವಸಾನೀಯ, ಪೂರ್ಣಾಹುತಿ, ಅಪರಾಹ್ನ ಶ್ರೀ ಗಾಯತೀÅ ಸಭಾ ಮಂಟಪದಲ್ಲಿ ಸಮಾರೋಪ ಸಮಾರಂಭದ ಧಾರ್ಮಿಕ ಸಭೆ ಜರಗಿತು. 

ಸಂಜೆ ಯಜ್ಞ ಸಮರ್ಪಣೆ (ಯಜ್ಞಶಾಲೆಗೆ ಅಗ್ನಿಸ್ಪರ್ಶ) ಮಂತ್ರಾ ಶೀರ್ವಾದ, ಮಹಾ ಪ್ರಸಾದದೊಂದಿಗೆ ಸಂಪನ್ನಗೊಂಡಿತು. ರವಿವಾರ ಯಾಗಕ್ಕೆ ಭಕ್ತ ಜನಪ್ರವಾಹ ಹರಿದು ಬಂತು.

ಸ್ಥಳೀಯ ಮಸೀದಿ ಪ್ರಮುಖರ ಭೇಟಿ
ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಜರಗಿದ ಅರುಣ ಕೇತುಕ ಚಯನ ಪೂರ್ವಕವಾದ ವಿಶ್ವಜಿತ್‌ ಅತಿರಾತ್ರ ಸೋಮಯಾಗಕ್ಕೆ ಸ್ಥಳೀಯ ಪತ್ವಾಡಿಯ ಬದ್ರಿಯಾ ಜಮಾಅತ್‌ ಸಮಿತಿಯ ಪದಾಧಿಕಾರಿಗಳು ಭೇಟಿ ನೀಡಿ ಶುಭಹಾರೈಸುವುದರೊಂದಿಗೆ ಸರ್ವಧರ್ಮ ಸಹಿಷ್ಣುತೆಯ ಚಿಂತನೆಗೆ ಯಾಗಭೂಮಿ ಸಾಕ್ಷಿಯಾಯಿತು.
ಶ್ರೀಕ್ಷೇತ್ರದೊಂದಿಗೆ ನಿಕಟ ಸಂಪರ್ಕ ವಿರುವ ಪತ್ವಾಡಿ ಮಸೀದಿಯ ಪದಾಧಿ ಕಾರಿಗಳು ಕಳೆದೊಂದು ವಾರದಿಂದ ಜರಗಿದ ಸೋಮಯಾಗದ ವಿಶೇಷತೆಗಳನ್ನು ಕೇಳಿ ಸಾಮರಸ್ಯದ ಸಂದೇಶವನ್ನು ಶ್ರೀಗಳೊಂದಿಗೆ ಹಂಚಿಕೊಂಡರು. ಶ್ರೀಗಳು ಅವರನ್ನು ಅಭಿನಂದಿಸಿದರು.

ಶ್ರೀ ನಿತ್ಯಾನಂದ ಚಾರಿಟೆಬಲ್‌ ವಿಶ್ವಸ್ತ ಮಂಡಳಿಯ ವಿಶ್ವಸ್ತರಲ್ಲಿ ಓರ್ವರಾದ ಗೋಪಾಲ ಎ. ಬಂದ್ಯೋಡು, ಬದ್ರಿಯಾ ಜಮಾಅತ್‌ ಸಮಿತಿ ಪದಾಧಿಕಾರಿಗಳಾದ ಉಪಾಧ್ಯಕ್ಷ ಅಲಿ ಮಾಸ್ತರ್‌, ಕಾರ್ಯದರ್ಶಿ ಮೊ„ದು ಹಾಜಿ, ಸದಸ್ಯರಾದ ಇಬ್ರಾಹಿಂ, ಅಬ್ದುಲ್ಲ, ಅಲಿ ಉಪಸ್ಥಿತರಿದ್ದರು.

ಡಾ| ಡಿ.ವೀರೇಂದ್ರ ಹೆಗ್ಗಡೆಯವರಿಗೆ ಧರ್ಮ ಚಕ್ರವರ್ತಿ ಬಿರುದು
ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದಲ್ಲಿ ಜರಗಿದ ಸೋಮಯಾಗದ ಐದನೇ ದಿನದಂದು ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರಿಗೆ “ಧರ್ಮ ಚಕ್ರವರ್ತಿ’ ಬಿರುದನ್ನು ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ಮಾತನಾಡಿದ ಡಾ| ಹೆಗ್ಗಡೆಯವರು, ಮಾನ ಸಮ್ಮಾನಗಳು ಅಂತರಂಗದಲ್ಲಿ ಅಹಂಕಾರವಾಗಿ ಮೂಡದೆ, ಆರ್ತರ ಸೇವೆಮಾಡುವ, ಬದುಕನ್ನು ಸಾರ್ಥಕ್ಯಗೊಳಿಸುವ ಉತ್ತಮ ಕರ್ತವ್ಯಕ್ಕೆಳಸಲು ಪ್ರೇರಣೆ ನೀಡಬೇಕು ಎಂದು ತಿಳಿಸಿದರು. ಗೌರವ, ಅಭಿನಂದನೆಗಳು ಕರ್ತವ್ಯ ಪ್ರಜ್ಞೆಯನ್ನು ಜಾಗƒತಗೊಳಿಸಿ ಮುನ್ನಡೆಯಲು ಪ್ರೇರಣೆ ನೀಡಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಗುರುವಾಯೂರು ದೇವಾಲಯದ ತಂತ್ರಿವರ್ಯ ಬ್ರಹ್ಮಶ್ರೀ ಚೇನಾಸ್‌ ದಿನೇಶನ್‌ ನಂಬೂದಿರಿಪ್ಪಾಡ್‌ ಅವರು ಮಾತನಾಡಿ, ಇಂದಿನ ಗೊಂದಲಮಯವಾದ ಪ್ರಪಂಚ, ನೋವುಗಳ ಮಧ್ಯೆ ಇಂತಹ ವೇದೋಕ್ತ ವಿಧಿವಿಧಾನಗಳಿಂದ ಸುಭಿಕ್ಷ ನೆಲೆಗೊಳ್ಳಲಿ. ಕೊಂಡೆವೂರು ಪ್ರದೇಶವು ಧನಾತ್ಮಕಶಕ್ತಿ ಕೇಂದ್ರವಾಗಿ ಬೆಳವಣಿಗೆಗೊಂಡಿದ್ದು, ಇಲ್ಲಿಯ ವಾತಾವರಣ ಸಂಕಷ್ಟವನ್ನು ದೂರಗೊಳಿಸಿ ಸಂತƒಪ್ತಿ ನೀಡುವ ತಾಣವಾಗಿ ರೂಪುಗೊಂಡಿದೆ ಎಂದರು.

ಟಾಪ್ ನ್ಯೂಸ್

katapadi news

ಕಟಪಾಡಿ : ಏಣಗುಡ್ಡೆ ಬ್ರಹ್ಮ ಬೈದೇರುಗಳ ಗರಡಿಯ ನಿಧಿ ಕುಂಭ ಯೋಗನಾಳದಲ್ಲಿ ತೀರ್ಥೋದ್ಭವ!

siddaramaiah

ಸಿದ್ದರಾಮಯ್ಯ, ನಿಮಗೂ 2 ಡೋಸ್ ಲಸಿಕೆ ಸಿಕ್ಕಿದೆಯಲ್ಲವೇ? : ಬಿಜೆಪಿ ಪ್ರಶ್ನೆ

“ಅಭ್ಯಾಸ್‌’ ಪ್ರಯೋಗಾರ್ಥ ಉಡಾವಣೆ ಯಶಸ್ವಿ

“ಅಭ್ಯಾಸ್‌’ ಪ್ರಯೋಗಾರ್ಥ ಉಡಾವಣೆ ಯಶಸ್ವಿ

bengalore news

ಚೇತರಿಕೆಯತ್ತ ಪ್ರವಾಸೋದ್ಯಮ; ಆನಂದ್ ಸಿಂಗ್

shirva news

ಅಕ್ರಮ ಮರಳುಗಾರಿಕೆ: ಸ್ಥಳೀಯಾಡಳಿತದಿಂದ ಪರಿಶೀಲನೆ

bangalore news

ಸುಧೀರ್ ಘಾಟೆ ಅವರ ನಿಧನಕ್ಕೆ ವಿಶ್ವೇಶ್ವರ ಹೆಗಡೆ ಕಾಗೇರಿ ಸಂತಾಪ

police

ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಕೇಸ್ : ಪೋಲೀಸರ ಅಮಾನತು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಡಿಕೇರಿ: ವಿಷ ಸೇವಿಸಿ ನಾಲ್ಕು ದಿನದ ಬಳಿಕ ಸಾವೀಗೀಡಾದ ಗ್ರಾಮ ಪಂಚಾಯತ್ ಸದಸ್ಯೆ.!

ಮಡಿಕೇರಿ: ವಿಷ ಸೇವಿಸಿ ನಾಲ್ಕು ದಿನದ ಬಳಿಕ ಸಾವಿಗೀಡಾದ ಗ್ರಾಮ ಪಂಚಾಯತ್ ಸದಸ್ಯೆ.!

ಕುಬಣೂರು ಸೇತುವೆ ಕುಸಿತ; ಸಂಪರ್ಕ ರಸ್ತೆ ತಡೆ

ಕುಬಣೂರು ಸೇತುವೆ ಕುಸಿತ; ಸಂಪರ್ಕ ರಸ್ತೆ ತಡೆ

ಸೀತಾರಾಮ ಕೆದಿಲಾಯ ಅವರ ಗ್ರಾಮಯಾತ್ರೆಯ ವಿಶೇಷ ಸಾಕ್ಷ್ಯಚಿತ್ರ ‘ಪರಿಕ್ರಮ ಸಂತ’ ಅನಾವರಣ

ಸೀತಾರಾಮ ಕೆದಿಲಾಯ ಅವರ ಗ್ರಾಮಯಾತ್ರೆಯ ವಿಶೇಷ ಸಾಕ್ಷ್ಯಚಿತ್ರ ‘ಪರಿಕ್ರಮ ಸಂತ’ ಅನಾವರಣ

Untitled-1

ಕಾಂಗ್ರೆಸ್ ಮಾಡಿದ ಅಭಿವೃದ್ಧಿಯನ್ನು ಬಿಜೆಪಿ ಮಾರಾಟ ಮಾಡುತ್ತಿದೆ : ಸಂಸದ ಡಿ.ಕೆ.ಸುರೇಶ್ ಆರೋಪ

ಮಂಗಳೂರು-ಕಾಸರಗೋಡು: ರಾ.ಹೆ. 66ರ ಷಟ್ಪಥ ಕಾಮಗಾರಿ ಆರಂಭ

ಮಂಗಳೂರು-ಕಾಸರಗೋಡು: ರಾ.ಹೆ. 66ರ ಷಟ್ಪಥ ಕಾಮಗಾರಿ ಆರಂಭ

MUST WATCH

udayavani youtube

ಆಟೋ ಚಾಲಕನ ನತದೃಷ್ಟ ಕಥೆಯಿದು

udayavani youtube

ನಮ್ಮ ದೇಶ ಕರ್ತವ್ಯ ಪಾಲಿಸಿದೆ : ಪ್ರಧಾನಿ ನರೇಂದ್ರ ಮೋದಿ

udayavani youtube

ಶೆಟ್ಟಿ ನೀನು ಹುಡುಗಿ ತರ ಮಾತಾಡ್ತೀಯ

udayavani youtube

POLYHOUSE ನಲ್ಲಿ ಸೌತೆಕಾಯಿ ತರಕಾರಿ ಕೃಷಿ; ಇಲ್ಲಿದೆ ಸಂಪೂರ್ಣ ಮಾಹಿತಿ…

udayavani youtube

ನೂರು ಕೋಟಿ ಡೋಸ್‌ ಲಸಿಕಾ ಗುರಿ ತಲುಪಿದ ಸಂಭ್ರಮ

ಹೊಸ ಸೇರ್ಪಡೆ

katapadi news

ಕಟಪಾಡಿ : ಏಣಗುಡ್ಡೆ ಬ್ರಹ್ಮ ಬೈದೇರುಗಳ ಗರಡಿಯ ನಿಧಿ ಕುಂಭ ಯೋಗನಾಳದಲ್ಲಿ ತೀರ್ಥೋದ್ಭವ!

siddaramaiah

ಸಿದ್ದರಾಮಯ್ಯ, ನಿಮಗೂ 2 ಡೋಸ್ ಲಸಿಕೆ ಸಿಕ್ಕಿದೆಯಲ್ಲವೇ? : ಬಿಜೆಪಿ ಪ್ರಶ್ನೆ

“ಅಭ್ಯಾಸ್‌’ ಪ್ರಯೋಗಾರ್ಥ ಉಡಾವಣೆ ಯಶಸ್ವಿ

“ಅಭ್ಯಾಸ್‌’ ಪ್ರಯೋಗಾರ್ಥ ಉಡಾವಣೆ ಯಶಸ್ವಿ

bengalore news

ಚೇತರಿಕೆಯತ್ತ ಪ್ರವಾಸೋದ್ಯಮ; ಆನಂದ್ ಸಿಂಗ್

1-22

ಜನತಾ ಬಜಾರ್‌ ಜಾಗದಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ಕೃಷಿ ವಿಭಾಗದ ಕಟ್ಟಡ ನಿರ್ಮಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.