ಆಸಕ್ತರಿಲ್ಲದೆ ಯಶ ಕಾಣದ ‘ಟ್ರಾಫಿಕ್ ವಾರ್ಡನ್‌’ ವ್ಯವಸ್ಥೆ

ಸಂಚಾರ ಪೊಲೀಸರಿಗೆ ಸಾಥ್‌ ನೀಡುವವರು ಸಿಗುತ್ತಿಲ್ಲ

Team Udayavani, Aug 5, 2024, 6:01 PM IST

traffic

ಮಹಾನಗರ: ಮಂಗಳೂರು ನಗರದಲ್ಲಿ 2 ವರ್ಷಗಳ ಹಿಂದೆ ಆರಂಭಗೊಂಡ “ಟ್ರಾಫಿಕ್ ವಾರ್ಡನ್‌ ಆರ್ಗನೈಜೇಷನ್‌'(ಟಿಡಬ್ಲ್ಯುಒ)ಗೆ ಟ್ರಾಫಿಕ್ ವಾರ್ಡನ್‌ಗಳ ಕೊರತೆ ಉಂಟಾಗಿದೆ. ಪೊಲೀಸರೊಂದಿಗೆ ಸಂಚಾರಿ ಸೇವೆಗೆ ಜನತೆ ಆಸಕ್ತಿ ತೋರಿಸದಿರುವುದರಿಂದ “ಟಿಡಬ್ಲ್ಯುಒ’ ಸಮರ್ಪಕಅನುಷ್ಠಾನಕ್ಕೆ ಹಿನ್ನಡೆಯಾಗಿದೆ.

ನಗರದಲ್ಲಿ 2016 ರಿಂದ 2020ರ ವರೆಗೆ “ಟ್ರಾಫಿಕ್ ವಾರ್ಡನ್‌ ಸ್ಕ್ವಾಡ್‌’ ಅಸ್ತಿತ್ವದಲ್ಲಿತ್ತು. 2 ವರ್ಷಗಳ ಹಿಂದೆ ಟ್ರಾಫಿಕ್ ವಾರ್ಡನ್‌ ವ್ಯವಸ್ಥೆಯನ್ನು ಬದಲಾಯಿಸಿ ಬೆಂಗಳೂರು ಸಹಿತ ದೇಶದ ಪ್ರಮುಖ ನಗರಗಳಲ್ಲಿರುವ ಟಿಡಬ್ಲ್ಯುಒ ಮಾದರಿಯಲ್ಲಿ “ಮಂಗಳೂರು ಸಿಟಿ ಪೊಲೀಸ್‌-ಟ್ರಾಫಿಕ್ವಾರ್ಡನ್‌ ಆರ್ಗನೈಜೇಷನ್‌(ಎಂಸಿಸಿ-ಟಿಡಬ್ಲ್ಯುಒ) ಅಸ್ತಿತ್ವಕ್ಕೆ ತರಲಾಗಿತ್ತು. ಇದಕ್ಕೆ ಸುಮಾರು ನೂರು ಮಂದಿ “ಟ್ರಾಫಿಕ್ ವಾರ್ಡನ್‌’ಗಳನ್ನು ಸೇರಿಸಿಕೊಳ್ಳುವ ಉದ್ದೇಶ ಹೊಂದಲಾಗಿತ್ತು. ಆದರೆ ನಿರೀಕ್ಷಿತ ಸ್ಪಂದನೆ ದೊರೆಯದೆ ಸದ್ಯ ಇಬ್ಬರು ಮಾತ್ರವೇ ಟಿಡಬ್ಲ್ಯುಒ ವ್ಯವಸ್ಥೆಯಡಿ ಟ್ರಾಫಿಕ್ ವಾರ್ಡನ್‌ಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಏನಿದು ಟ್ರಾಫಿಕ್ ವಾರ್ಡನ್‌?

ವಾಹನ ಸಂಚಾರ ವ್ಯವಸ್ಥೆ ನಿರ್ವಹಣೆಯಲ್ಲಿ ಸಂಚಾರ ಪೊಲೀಸರ ಜತೆಗೆ ಸಾರ್ವಜನಿಕರು ಕೂಡ ಸೇವೆ ಸಲ್ಲಿಸುವುದೇ ಟ್ರಾಫಿಕ್ ವಾರ್ಡನ್‌ ವ್ಯವಸ್ಥೆ. ಬೇರೆ ಉದ್ಯೋಗ ಮಾಡುತ್ತಿರುವವರು, ನಿವೃತ್ತರು ನಿರ್ದಿಷ್ಟ ಸಮಯದಲ್ಲಿ ಪೊಲೀಸರ ಸೂಚನೆಯಂತೆ ಅಗತ್ಯ ಸ್ಥಳ ಗಳಲ್ಲಿ ಸಂಚಾರ ನಿರ್ವಹಣೆಯಲ್ಲಿ ಉಚಿತವಾಗಿ ಸಲ್ಲಿಸುವ ಸೇವೆ ಇದಾಗಿರುತ್ತದೆ.

ಅರ್ಹತೆ ಏನು?

ಈ ಹಿಂದೆ ಟ್ರಾಫಿಕ್ ವಾರ್ಡನ್‌ ವ್ಯವಸ್ಥೆ ಇದ್ದಾಗ ಸುಮಾರು 15ಕ್ಕೂ ಅಧಿಕ ಮಂದಿ ಸೇವೆ ಸಲ್ಲಿಸುತ್ತಿದ್ದರು. ಆದರೆ ಹೊಸ ವ್ಯವಸ್ಥೆ ಅನುಷ್ಠಾನಕ್ಕೆ ಬಂದಾಗ ಹೊಸ ಕೆಲವೊಂದು ನಿಬಂಧನೆಗಳನ್ನು ಒಪ್ಪಿಕೊಂಡು ಬರಲು ಕೆಲವರು ಹಿಂದೇಟು ಹಾಕಿದ್ದಾರೆ. ಸ್ವಯಂಸೇವೆಯ ತುಡಿತವಿರುವ 25ರಿಂದ 55 ವರ್ಷ ವಯೋಮಾನದ ಕನಿಷ್ಠ ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಹೊಂದಿರುವ ನಾಗರಿಕರು ಸೇರ್ಪಡೆಯಾಗಬಹುದು. ಫ‌ಲಾಪೇಕ್ಷೆ ಇಲ್ಲದೆ ದಿನಕ್ಕೆ 2 ಗಂಟೆ, ವಾರದಲ್ಲಿ 6 ಗಂಟೆ, ತಿಂಗಳಿಗೆ 24 ಗಂಟೆ (ಕನಿಷ್ಟ) ಸೇವೆ ಮಾಡಲು ಇಚ್ಛೆ ಉಳ್ಳ ಆರೋಗ್ಯವಂತರು, ಇಂಗ್ಲಿಷ್‌, ಕನ್ನಡ ಓದಲು, ಬರೆಯಲು ಬರುವವರು ಈ ಟ್ರಾಫಿಕ್ ವಾರ್ಡನ್‌ ಆರ್ಗನೈಜೇಷನ್‌ನಲ್ಲಿ ಪಾಲ್ಗೊಳ್ಳ ಬಹುದು. ಸೇವೆಯಲ್ಲಿ ತೊಡಗಿಕೊಂಡವರಿಗೆ ಹಂತ ಹಂತವಾಗಿ ಭಡ್ತಿಯನ್ನು ಕೂಡ ನೀಡಲಾಗುತ್ತದೆ.

ಸಾರಥಿಯೂ ಇಲ್ಲ

ಟ್ರಾಫಿಕ್ ವಾರ್ಡನ್‌ ಆರ್ಗನೈಜೇಷನ್‌ಗೆ ಮಂಗಳೂರಿನ ಮುಖ್ಯಸ್ಥರಾಗಿ ಸ್ಕ್ವಾಡ್ರನ್‌ ಲೀಡರ್‌ ಪ್ರೊ| ಎಂ.ಎಲ್‌. ಸುರೇಶ್ ನಾಥ್‌ ಸೇವೆ ಸಲ್ಲಿಸುತ್ತಿದ್ದರು. ಟ್ರಾಫಿಕ್ ವಾರ್ಡ ನ್‌ಗೆ ಜನರು ಆಸಕ್ತಿ ತೋರಿಸದ ಹಿನ್ನೆಲೆಯಲ್ಲಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಸದ್ಯ ಆ ಹುದ್ದೆಯೂ ಖಾಲಿ ಇದೆ.

ಬಸ್‌ಪಾಸ್‌, ವಿಮೆ ಸೌಲಭ್ಯ

ಟ್ರಾಫಿಕ್ ವಾರ್ಡನ್‌ಗಳಾಗಿ ಸೇರ್ಪಡೆಗೊಳ್ಳುವವರು ಯಾವುದೇ ಪ್ರತಿಫ‌ಲಾಪೇಕ್ಷೆ ಇಲ್ಲದೆ ಸೇವೆ ಸಲ್ಲಿಸಬೇಕು. ಬೆಂಗಳೂರು ನಗರದಲ್ಲಿ ಪ್ರೊಫೆಸರ್‌ಗಳು, ವೈದ್ಯರು, ಎಂಜಿನಿಯರ್‌ಗಳು, ಉದ್ಯಮಿಗಳು, ಐಟಿ-ಬಿಟಿ ಕಂಪೆನಿಯವರು ಸಹಿತ ನೂರಾರು ಮಂದಿ ಸೇವೆ ಸಲ್ಲಿಸುತ್ತಿದ್ದಾರೆ. ಟ್ರಾಫಿಕ್ ವಾರ್ಡನ್‌ಗಳಾಗಿ ಸೇರ್ಪಡೆಗೊಳ್ಳುವವರಿಗೆ ಉಚಿತ ಬಸ್‌ ಪಾಸ್‌, ಆರೋಗ್ಯ ತಪಾಸಣೆ, ಉಚಿತ ವಿಮೆ ಮೊದಲಾದ ಸೌಲಭ್ಯ ಒದಗಿಸಲು ನಿರ್ಧರಿಸಲಾಗಿತ್ತು. ಆದರೂ ಯಾರು ಕೂಡ ಆಸಕ್ತಿ ತೋರಿಸುತ್ತಿಲ್ಲ.

ಸಾರ್ವಜನಿಕರ ಸಹಕಾರ ಬೇಕು

ಟ್ರಾಫಿಕ್ ವಾರ್ಡನ್‌ಗಳ ಅವಶ್ಯಕತೆ ಇದೆ. ಆದರೆ ಸಾರ್ವಜನಿಕರು ಆಸಕ್ತಿ ತೋರಿಸುತ್ತಿಲ್ಲ. ಸಾರ್ವಜನಿಕರಿಂದ ಸ್ಪಂದನೆ ದೊರೆಯದಿದ್ದರೆ ಕಷ್ಟಸಾಧ್ಯ. ಎಲ್ಲ ಕಡೆ ಕೇವಲ ಪೊಲೀಸರಿಂದ ಮಾತ್ರವೇ ಸಂಚಾರ ನಿಯಂತ್ರಣ ಮಾಡುವುದು ಕಷ್ಟಸಾಧ್ಯ. ಟ್ರಾಫಿಕ್ ವಾರ್ಡನ್‌ಗಳು ಕೂಡ ಇದ್ದರೆ ಅನುಕೂಲವಾಗುತ್ತದೆ.
-ದಿನೇಶ್‌ ಕುಮಾರ್‌ ಬಿ.ಪಿ., ಡಿಸಿಪಿ ಅಪರಾಧ ಮತ್ತು ಸಂಚಾರ ವಿಭಾಗ

– ಸಂತೋಷ್‌ ಬೊಳ್ಳೆಟ್ಟು

ಟಾಪ್ ನ್ಯೂಸ್

Ramlinga-MINISTER

Bus Depo: ಮಡಿಕೇರಿಯಲ್ಲಿ ಕೆಎಸ್‌ಆರ್‌ಟಿಸಿ ವಿಭಾಗೀಯ ಘಟಕ ಆರಂಭಿಸಲು ಕ್ರಮ: ಸಚಿವ ರೆಡ್ಡಿ

money

Udupi: ಪ್ರಯಾಣಿಕ ಮಹಿಳೆಯ ಸಾವಿರಾರು ರೂ. ಮೌಲ್ಯದ ಸೊತ್ತು ಕಳವು

police

Police: ಸಕಾಲಿಕ ಕಾರ್ಯಾಚರಣೆ, ಕೆಲವೇ ಗಂಟೆಗಳಲ್ಲಿ ನಗದು, ಬ್ಯಾಗ್‌ ಪತ್ತೆ

Udupi ಗೀತಾರ್ಥ ಚಿಂತನೆ 33: ಸಹಜತೆ ಧರ್ಮ, ಅಸಹಜತೆ ಅಧರ್ಮ

Udupi ಗೀತಾರ್ಥ ಚಿಂತನೆ 33: ಸಹಜತೆ ಧರ್ಮ, ಅಸಹಜತೆ ಅಧರ್ಮ

Police

Facebook Page: ಹಿಂದೂ ದೇವರಿಗೆ ಅವಮಾನ: ಎಫ್ಐಆರ್‌ ದಾಖಲು

Consumer-Court

Commisson judgement: ಸುಸ್ತಿದಾರ ಅಡವಿರಿಸಿದ ಬಂಗಾರ ಹಿಂದೆ ಪಡೆಯಲು ಅರ್ಹನಲ್ಲ

Charmadi-Ghat

Highway Department: ಚಾರ್ಮಾಡಿ ಘಾಟಿ: ತಡೆಗೋಡೆ ದುರಸ್ತಿಗೆ ಕ್ರಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Police

Facebook Page: ಹಿಂದೂ ದೇವರಿಗೆ ಅವಮಾನ: ಎಫ್ಐಆರ್‌ ದಾಖಲು

Gatti

Mangaluru: ತಿಗಳಾರಿ ಲಿಪಿಗೆ ಯುನಿಕೋಡ್‌ ಅನುಮೋದನೆ: ತಾರಾನಾಥ ಗಟ್ಟಿ

Children-Movie

Film Release: ಮಕ್ಕಳ ಚಲನಚಿತ್ರ “ದಿ ಜರ್ನಿ ಆಫ್‌ ಬೆಳ್ಳಿ’ ನಾಳೆ ತೆರೆಗೆ

Kaljiga

Film Release: ಸೆ.13ರಂದು ರಾಜ್ಯಾದ್ಯಂತ “ಕಲ್ಜಿಗ’ ಕನ್ನಡ ಚಲನಚಿತ್ರ ತೆರೆಗೆ

Kinnigoli: ಪಾದಚಾರಿಗೆ ಯುವಕನಿಂದ ಹಲ್ಲೆ; ಚಕಮಕಿ

Kinnigoli: ಪಾದಚಾರಿಗೆ ಯುವಕನಿಂದ ಹಲ್ಲೆ; ಪರಿಸ್ಥಿತಿ ತಿಳಿಗೊಳಿಸಿದ ಪೊಲೀಸರು

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Ramlinga-MINISTER

Bus Depo: ಮಡಿಕೇರಿಯಲ್ಲಿ ಕೆಎಸ್‌ಆರ್‌ಟಿಸಿ ವಿಭಾಗೀಯ ಘಟಕ ಆರಂಭಿಸಲು ಕ್ರಮ: ಸಚಿವ ರೆಡ್ಡಿ

money

Udupi: ಪ್ರಯಾಣಿಕ ಮಹಿಳೆಯ ಸಾವಿರಾರು ರೂ. ಮೌಲ್ಯದ ಸೊತ್ತು ಕಳವು

police

Police: ಸಕಾಲಿಕ ಕಾರ್ಯಾಚರಣೆ, ಕೆಲವೇ ಗಂಟೆಗಳಲ್ಲಿ ನಗದು, ಬ್ಯಾಗ್‌ ಪತ್ತೆ

Udupi ಗೀತಾರ್ಥ ಚಿಂತನೆ 33: ಸಹಜತೆ ಧರ್ಮ, ಅಸಹಜತೆ ಅಧರ್ಮ

Udupi ಗೀತಾರ್ಥ ಚಿಂತನೆ 33: ಸಹಜತೆ ಧರ್ಮ, ಅಸಹಜತೆ ಅಧರ್ಮ

Police

Facebook Page: ಹಿಂದೂ ದೇವರಿಗೆ ಅವಮಾನ: ಎಫ್ಐಆರ್‌ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.