‘ಪ್ರವಾದಿಗಳಿಗೆ ಕೋಪ ಬಂದರೆ ಒಂದೇ ಶಿಕ್ಷೆ’: ಮಂಗಳೂರಿನಲ್ಲಿ ಮತ್ತೆ ವಿವಾದಾತ್ಮಕ ಗೋಡೆ ಬರಹ
Team Udayavani, Nov 29, 2020, 9:10 AM IST
ಮಂಗಳೂರು: ಕೆಲವೇ ದಿನಗಳ ಹಿಂದೆ ಲಷ್ಕರ್ ಉಗ್ರರನ್ನು ಬೆಂಬಲಿತ ಗೋಡೆ ಬರಹದಿಂದ ಸುದ್ದಿಯಾಗಿದ್ದ ಮಂಗಳೂರಿನಲ್ಲಿ ಇಂದು ಮತ್ತೊಂದು ವಿವಾದಾತ್ಮಕ ಗೋಡೆ ಬರಹ ಬರೆಯಲಾಗಿದೆ. ನಗರದ ಕೋರ್ಟ್ ರಸ್ತೆಯಲ್ಲಿ ಉರ್ದು ಭಾಷೆಯಲ್ಲಿ ಈ ಬರಹ ಬರೆಯಲಾಗಿದೆ.
‘ಪ್ರವಾದಿಗಳಿಗೆ ಕೋಪ ಬಂದರೆ ಒಂದೇ ಶಿಕ್ಷೆ, ತಲೆ ದೇಹದಿಂದ ಬೇರ್ಪಡುವುದು’ ಎಂಬರ್ಥದಲ್ಲಿ ಉರ್ದು ಭಾಷೆಯಲ್ಲಿಆಂಗ್ಲ ಅಕ್ಷರಗಳಲ್ಲಿ ಗೋಡೆಯ ಮೇಲೆ ಬರೆಯಲಾಗಿದೆ.
ಮಂಗಳೂರಿನ ಕೋರ್ಟ್ ರಸ್ತೆಯ ಕೋರ್ಟ್ ಆವರಣದಲ್ಲಿರುವ ಪೊಲೀಸ್ ಔಟ್ ಪೋಸ್ಟ್ ಕಟ್ಟಡದ ಮೇಲೆ ಉರ್ದು ಭಾಷೆಯಲ್ಲಿ ಬರೆಯಲಾಗಿದೆ.
ಇದನ್ನೂ ಓದಿ:ಲಷ್ಕರ್ ಬೆಂಬಲಿಸಿ ಬೆದರಿಕೆ ಪ್ರಕರಣ ; 3 ತಂಡಗಳಿಂದ ತನಿಖೆ
ಕಪ್ಪು ಬಣ್ಣದ ಪೈಂಟ್ ಬಳಸಿ ರಾತ್ರಿ ವೇಳೆ ಬರೆಯಲಾಗಿದ್ದು, ರವಿವಾರ ಬೆಳಗ್ಗೆ ವಿಷಯ ಬೆಳಕಿಗೆ ಬಂದಿದೆ. ಬಂದರು ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಕ್ರಮ ಕೈಗೊಂಡಿದ್ದಾರೆ.
ಕೆಲವೇ ದಿನಗಳ ಹಿಂದೆ ನಗರದ ಅಪಾರ್ಟ್‌ಮೆಂಟ್‌ನ ಆವರಣ ಗೋಡೆ ಮೇಲೆ ಲಷ್ಕರ್-ಎ-ತಯ್ಯಬಾ ಮತ್ತು ತಾಲಿಬಾನಿ ಉಗ್ರ ಸಂಘಟನೆಗಳನ್ನು ಬೆಂಬಲಿಸಿದ ಬೆದರಿಕೆ ಬರಹವೊಂದನ್ನು ಬರೆಯಲಾಗಿತ್ತು. ಪ್ರಕರಣದ ಬಗ್ಗೆ ಮೂರು ಪ್ರತ್ಯೇಕ ಪೊಲೀಸ್ ತಂಡಗಳು ವಿವಿಧ ಆಯಾಮಗಳಿಂದ ತನಿಖೆ ನಡೆಸುತ್ತಿವ ಸಮಯದಲ್ಲೇ ಮತ್ತೊಂದು ಗೋಡೆ ಬರಹ ಕಾಣಿಸಿಕೊಂಡಿದೆ.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಷ್ಟ್ರಪತಿ ಪೊಲೀಸ್ ಪದಕ
ಪದ್ಮ ಪ್ರಶಸ್ತಿ ಪ್ರಕಟ : ಬಿ.ಎಂ.ಹೆಗ್ಡೆ, ಎಸ್.ಪಿಬಿಗೆ ಪದ್ಮವಿಭೂಷಣ, ಕಂಬಾರರಿಗೆ ಪದ್ಮಭೂಷಣ
ಯಾವ ಖಾತೆ ಕೊಟ್ಟರೂ ಸಮರ್ಥವಾಗಿ ನಿಭಾಯಿಸಿ, ಯಶಸ್ಸು ಸಾಧಿಸಬೇಕು: ಡಿಸಿಎಂ ಅಶ್ವಥ್ನಾರಾಯಣ
ಹುಣಸೋಡು ಸ್ಫೋಟ ಪ್ರಕರಣ :ಕ್ರಷರ್ ಮಾಲೀಕ ಸೇರಿ ನಾಲ್ವರನ್ನು ಬಂಧಿಸಿದ ಪೊಲೀಸರು
ಮೇಲುಕೋಟೆ ವಜ್ರಾಂಗಿ ಆಭರಣ ಅವ್ಯವಹಾರ ಪ್ರಕರಣ: ಅರ್ಚಕ ನರಸರಾಜಭಟ್ ನೇಮಕಕ್ಕೆ ಹೈಕೋರ್ಟ್ ತಡೆ