ಆರೋಪಿಗಳ ಐಶಾರಾಮಿ ಕಾರು ಮಾರಾಟ ಪ್ರಕರಣ, ಕಬ್ಬಳ್ ರಾಜ್ ಸೇರಿ ಇಬ್ಬರು ಪೊಲೀಸರು ಅಮಾನತು
Team Udayavani, Feb 27, 2021, 3:26 PM IST
ಮಂಗಳೂರು: ಪ್ರಕರಣವೊಂದರ ಆರೋಪಿಗಳಿಗೆ ಸೇರಿದ ಕಾರನ್ನು ಸಿಸಿಬಿ ಪೊಲೀಸರು (ನಗರ ಅಪರಾಧ ಪತ್ತೆದಳ) ಮಾರಾಟ ಮಾಡಿದ್ದಾರೆನ್ನಲಾದ ಪ್ರಕರಣದಲ್ಲಿ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ.
ಸಿಸಿಬಿಯ ಈ ಹಿಂದಿನ ಇನ್ಸ್ ಪೆಕ್ಟರ್ ಕಬ್ಬಳ್ ರಾಜ್ ಹಾಗೂ ಎಕನಾಮಿಕ್ ಆ್ಯಂಡ್ ನಾರ್ಕೊಟಿಕ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ರಾಮಕೃಷ್ಞ ಅಮಾನತು ಮಾಡಲಾಗಿದೆ.
ಇದನ್ನೂ ಓದಿ:ಸಿಸಿಬಿ ಪೊಲೀಸರಿಂದ ಕಾರು ಮಾರಾಟ: ನಗರದಲ್ಲಿ ಸಿಐಡಿ ತನಿಖೆ ಆರಂಭ, 4 ಪೊಲೀಸರ ಹೆಸರು ಉಲ್ಲೇಖ
ಪ್ರಕರಣವೊಂದರ ತನಿಖೆ ನಡೆಸುವಾಗ ಆರೋಪಿಗಳಿಂದ ವಶಕ್ಕೆ ಪಡೆದ ಐಶಾರಾಮಿ ಕಾರುಗಳನ್ನು ಈ ಪೊಲೀಸರು ಇಲಾಖೆಗೆ ಹಸ್ತಾಂತರಿಸಿರಲಿಲ್ಲ. ವಶಕ್ಕೆ ಪಡೆದ ಬಿಎಂಡಬ್ಲ್ಯೂ ಮತ್ತು ಪೋರ್ಷ್ ಕಾರನ್ನು ಸ್ವಂತಕ್ಕೆ ಬಳಸಿ, ಜಾಗ್ವಾರ್ ಕಾರನ್ನು ಮಧ್ಯವರ್ತಿಗಳ ಮೂಲಕ ಮಾರಾಟ ಮಾಡಿದ್ದರು ಎಂಬ ಆರೋಪ ಇವರ ಮೇಲಿದೆ.
ಇದನ್ನೂ ಓದಿ: ಮಹಿಳೆಯನ್ನು ಕಟ್ಟಿಹಾಕಿ ಹಾಡಹಗಲೇ ದರೋಡೆಗೆ ಯತ್ನ: ಸಿನಿಮೀಯಾ ರೀತಿಯಲ್ಲಿ ನಡೆಯಿತು ಚೇಸಿಂಗ್
ಸದ್ಯ ಪ್ರಕರಣವನ್ನು ಸಿಐಡಿ ತಂಡ ತನಿಖೆ ನಡೆಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಇಲ್ಲ, ಜನರ ಸಹಕಾರ ಬೇಕು: ಸಚಿವ ಬಿ.ಸಿ. ಪಾಟೀಲ್
ಒಂದೆರಡು ದಿನದಲ್ಲಿ 1 ರಿಂದ 9 ತರಗತಿ ಪರೀಕ್ಷೆ ಬಗ್ಗೆ ನಿರ್ಧಾರ: ಸುರೇಶ್ ಕುಮಾರ್
ಜಿಲ್ಲಾ ಕೇಂದ್ರಗಳಲ್ಲಿ ರಾತ್ರಿ ಕರ್ಫ್ಯೂ ಮುಂದುವರಿಕೆ, ಎ.20ರಂದು ಮುಂದಿನ ತೀರ್ಮಾನ:ಬಿಎಸ್ ವೈ
ರಾಜ್ಯಾದ್ಯಂತ ಸೆ.144; ಶಾಲೆ-ಕಾಲೇಜು, ಚಿತ್ರಮಂದಿರ, ಬಾರ್- ಪಬ್ ಬಂದ್?
ಎ. 17ರಂದು ಉಪ ಸಮರ : ಶುಭಾಶುಭ ಭವಿಷ್ಯ ಏನು?