ಕರಾವಳಿ ನಿಯಂತ್ರಣ ವಲಯ ನಕ್ಷೆ: 3 ತಿಂಗಳುಗಳೊಳಗೆ ಬಿಡುಗಡೆ ನಿರೀಕ್ಷೆ

ಹತ್ತಾರು ತೊಡಕುಗಳ ದಾಟಿ ಸಿದ್ಧವಾಗುತ್ತಿದೆ ಸಿಆರ್‌ಝಡ್‌ ಹೊಸ ನಕ್ಷೆ

Team Udayavani, Jan 24, 2022, 7:05 PM IST

ಕರಾವಳಿ ನಿಯಂತ್ರಣ ವಲಯ ನಕ್ಷೆ: 3 ತಿಂಗಳುಗಳೊಳಗೆ ಬಿಡುಗಡೆ ನಿರೀಕ್ಷೆ

ಮಹಾನಗರ: ಕರಾವಳಿ ಜಿಲ್ಲೆಯ ಬಹುಬೇಡಿಕೆಯಾಗಿರುವ “ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್‌) ಅಧಿಸೂಚನೆ-2019’ರ ಅನುಷ್ಠಾನ ಸಂಬಂಧ ಹೊಸ ಕರಡು ನಕ್ಷೆ ಇದೀಗ ಅಂತಿಮ ಹಂತಕ್ಕೆ ಬಂದಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ 3 ತಿಂಗಳುಗಳೊಳಗೆ ಹೊಸ ನಕ್ಷೆ ಬಿಡುಗಡೆಗೊಳ್ಳುವ ನಿರೀಕ್ಷೆಯಿದೆ.
ಹೊಸ ನಕ್ಷೆ ರಚನೆ ಬಗ್ಗೆ ಹಲವು ಕಾಲದಿಂದ ಪ್ರಕ್ರಿಯೆಗಳು ಮಂಗಳೂರಿನಲ್ಲಿ ನಡೆಯುತ್ತಿದೆಯಾದರೂ ನಕ್ಷೆ ಮಾತ್ರ ಬರುತ್ತಿಲ್ಲ ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಕೊರೊನಾ ಕಾರಣ, ನಕ್ಷೆ ರಚನೆ ಕಾನೂನು ಪ್ರಕಾರ ಮತ್ತು ಬಹುಸೂಕ್ಷ್ಮ ವಿಚಾರವಾದ್ದರಿಂದ ಕೊಂಚ ತಡವಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಆಗಿದ್ದೇನು?
ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣ ಪ್ರಾಧಿಕಾರವು (ಕೆಎಸ್‌ಸಿಝಡ್‌ಎಂಎ), ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್‌) ಅಧಿಸೂಚನೆ 2019ರಂತೆ ತಯಾರಿಸಿರುವ ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣ ಯೋಜನೆಯ ಕರಡು (ಸಿಝಡ್‌ಎಂಪಿ) ನಕ್ಷೆಯನ್ನು ಚೆನ್ನೈನ ನ್ಯಾಶನಲ್‌ ಸೆಂಟರ್‌ ಫಾರ್‌ ಸಸ್ಟೆನೇಬಲ್‌ ಕೋಸ್ಟಲ್‌ ಮ್ಯಾನೇಜ್‌ಮೆಂಟ್‌ (ಎನ್‌ಸಿಎಸ್‌ಸಿಎಂ) ತಯಾರಿಸಿದ್ದಾರೆ. ಈ ಕರಡು ನಕ್ಷೆಯನ್ನು ಸಾರ್ವಜನಿಕರು, ಭಾಗಿ ದಾರರ ಅವಗಾಹನೆಗೆ ಪ್ರಕಟಿಸಿ ಅವರಿಂದ ಯಾವುದೇ ಆಕ್ಷೇಪಣೆ, ಸಲಹೆ, ಅನಿಸಿಕೆ ಆಹ್ವಾನಿಸಲು ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣೆ ಪ್ರಾಧಿಕಾರವು ಕಳೆದ ವರ್ಷ ಎ. 27ರಂದು ಅಧಿಸೂಚನೆ ಹೊರಡಿ ಸಿತ್ತು. ಇದರಂತೆ ಕರಡು ನಕ್ಷೆ ಬಗ್ಗೆ ಜುಲೈ 31ರಂದು ದ.ಕ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕ ಅಹವಾಲು ಸಭೆ ನಡೆದಿತ್ತು.

ಪೂರಕ ವರದಿಗೆ ಸೂಚನೆ
ಆಕ್ಷೇಪಣೆಗಳ ವಿವರ ಸಹಿತ ವರದಿಯನ್ನು ಸೆ. 30ರಂದು ದ.ಕ. ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯ ಸಭೆಯಲ್ಲಿ ಮತ್ತೂಮ್ಮೆ ಅನುಮೋದಿಸಿ ನ. 23ರಂದು ಬೆಂಗಳೂರಿ ನಲ್ಲಿ ನಡೆದ ರಾಜ್ಯದ ಉನ್ನತ ಮಟ್ಟದ ಸಭೆಗೆ ಕಳುಹಿಸಲಾಗಿತ್ತು. ಆದರೆ ಸಾರ್ವಜನಿಕ ಆಕ್ಷೇಪಣೆ ಸರಿಪಡಿಸಲು ಇರಬಹುದಾದ ಸಾಧ್ಯತೆಗಳ ವಿವರ ನೀಡುವಂತೆ ಬೆಂಗಳೂರಿ ನಿಂದ ಮಂಗಳೂರು ಅಧಿಕಾರಿಗಳಿಗೆ ಮತ್ತೆ ನಿರ್ದೇಶನ ಬಂದಿತ್ತು. ಅದರಂತೆ ಸೂಕ್ತ ದಾಖಲೆ, ವರದಿಯನ್ನು ಸಿದ್ಧಪಡಿಸಿ ಈ ವರ್ಷ ಜ. 4ರಂದು ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅನುಮೋದನೆ ಪಡೆದು ಜ. 5ರಂದು ಬೆಂಗಳೂರಿಗೆ ಕಳುಹಿಸಲಾಗಿದೆ.

ಮುಂದೇನು?
ಫೆಬ್ರವರಿ ಮೊದಲ ವಾರದಲ್ಲಿ ಬೆಂಗಳೂರಿ ನಲ್ಲಿ ರಾಜ್ಯಮಟ್ಟದ ಸಮಿತಿ ಸಭೆ ನಡೆದು ವರದಿಗಳಿಗೆ ಅನುಮೋದನೆ ದೊರೆಯುವ ಸಾಧ್ಯತೆಯಿದೆ. ಬಳಿಕ ಅದನ್ನು ಚೆನ್ನೈನ ನ್ಯಾಶನಲ್‌ ಸೆಂಟರ್‌ ಫಾರ್‌ ಸಸ್ಟೆನೇಬಲ್‌ ಕೋಸ್ಟಲ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆಗೆ ಕಳುಹಿಸಲಾಗುತ್ತದೆ. ಈಗಾಗಲೇ ಒಟ್ಟುಗೂ ಡಿಸಿದ ತಿದ್ದುಪಡಿಗಳನ್ನು ನಕ್ಷೆಯಲ್ಲಿ ನಮೂದಿ ಸುವ ಕಾರ್ಯ ಸುಮಾರು 2 ವಾರಗಳಲ್ಲಿ ನಡೆಯಲಿದೆ. ಅನಂತರ ನಕ್ಷೆ ಸಿದ್ಧಗೊಳಿಸಿ ಕೇಂದ್ರ ಸರಕಾರಕ್ಕೆ ಸಲ್ಲಿಕೆಯಾಗಿ, ಒಪ್ಪಿಗೆ ದೊರೆಯಬೇಕಿದೆ. ಇದಕ್ಕೆ ಕನಿಷ್ಠ 3 ತಿಂಗಳುಗಳು ಅವಶ್ಯವಿದೆ.

ಹೊಸ ನಕ್ಷೆಯಿಂದ 10 ಬೀಚ್‌ಗಳಿಗೆ ಅನುಕೂಲ
ಪ್ರಸಕ್ತ ಕಡಲ ತೀರದಲ್ಲಿ ಯಾವುದೇ ನಿರ್ಮಾಣ ಚಟುವಟಿಕೆಗಳಿಗೆ ಅವಕಾಶವಿಲ್ಲ. ಆದರೆ ಹೊಸ ಅಧಿಸೂಚನೆ ಪ್ರಕಾರ ಆಯ್ದ ಕಡಲ ತೀರದಲ್ಲಿ ಪ್ರವಾಸೋದ್ಯಮ ಪೂರಕವಾಗಿ ಕೆಲವೊಂದು ತಾತ್ಕಾಲಿಕ ರಚನೆ, ಫುಡ್‌ ಸ್ಟಾಲ್‌ ಮಾಡಲು ಅವಕಾಶವಿದೆ. ಇದಕ್ಕಾಗಿ ಪ್ರವಾಸೋದ್ಯಮ ಇಲಾಖೆ ಸಲಹೆ ಮಾಡಿರುವ ಸೋಮೇಶ್ವರ, ಪಣಂಬೂರು, ಇಡ್ಯಾ, ತಣ್ಣೀರುಬಾವಿ, ಸುರತ್ಕಲ್‌, ಸಸಿಹಿತ್ಲು, ಬೆಂಗ್ರೆ ಸಹಿತ ಜಿಲ್ಲೆ 10 ಬೀಚ್‌ಗಳನ್ನು ಅಧಿಸೂಚಿಸಲಾಗಿದೆ. ಮೀನುಗಾರರ ಮನೆ ನಿರ್ಮಾಣಕ್ಕಾಗಿ ಸದ್ಯ 100 ಮೀ.ದೂರದವರೆಗೆ ಸಿಆರ್‌ಝಡ್‌ ನಿರ್ಬಂಧವಿದ್ದರೆ, ಹೊಸ ಅಧಿಸೂಚನೆ ಪ್ರಕಾರ 50 ಮೀ.ವರೆಗೆ ಮಾತ್ರ ಇರಲಿದೆ. ಇಂತಹ ಹಲವು ಅವಕಾಶ ಹೊಸ ನಕ್ಷೆಯ ಮೂಲಕ ದೊರೆಯಲಿದೆ.

ಶೀಘ್ರ ಹೊಸ ನಕ್ಷೆ
ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್‌)ನ ಹೊಸ ಅಧಿ ಸೂಚಿತ ನಕ್ಷೆ ರಚನೆ ಈಗಾಗಲೇ ಕೊನೆಯ ಹಂತದಲ್ಲಿದೆ. ಫೆಬ್ರವರಿ ಮೊದಲ ವಾರದಲ್ಲಿ ರಾಜ್ಯ ಮಟ್ಟದ ಸಮಿತಿ ಸಭೆಯಲ್ಲಿ ನಕ್ಷೆಯ ಕೆಲವು ತಿದ್ದುಪಡಿಗಳಿಗೆ ಅನುಮತಿ ದೊರೆಯುವ ನಿರೀಕ್ಷೆಯಿದೆ. ಅದಾದ ಬಳಿಕ ಸುಮಾರು 3 ತಿಂಗಳುಗಳ ಒಳಗೆ ಹೊಸ ನಕ್ಷೆ ಸಿದ್ಧಗೊಳ್ಳುವ ಸಾಧ್ಯತೆಯಿದೆ.
-ಡಾ| ದಿನೇಶ್‌ ಕುಮಾರ್‌ ವೈ.ಕೆ., ಪ್ರಾದೇಶಿಕ ನಿರ್ದೇಶಕರು, ಪರಿಸರ-ಮಂಗಳೂರು

ಟಾಪ್ ನ್ಯೂಸ್

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಿ.ಎಸ್.ನಾಗಭೂಷಣ್ ನಿಧನ

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಿ.ಎಸ್.ನಾಗಭೂಷಣ್ ನಿಧನ

ಮುಂದುವರಿದ ಭಾರೀ ಮಳೆ: ದಕ್ಷಿಣ ಕನ್ನಡ, ಶಿವಮೊಗ್ಗದ ಶಾಲೆಗಳಿಗೆ ರಜೆ ಘೋಷಣೆ

ಮುಂದುವರಿದ ಭಾರೀ ಮಳೆ: ಮೈಸೂರು, ದಕ್ಷಿಣ ಕನ್ನಡ, ಶಿವಮೊಗ್ಗದ ಶಾಲೆಗಳಿಗೆ ರಜೆ ಘೋಷಣೆ

AIMIM leader arrested for derogatory comment on Shivling

ಶಿವಲಿಂಗದ ಕುರಿತು ಅವಹೇಳನಕಾರಿ ಹೇಳಿಕೆ: ಎಐಎಂಐಎಂ ನಾಯಕನ ಬಂಧನ

ಎಸೆಸೆಲ್ಸಿ ಪರೀಕ್ಷಾ ಫ‌ಲಿತಾಂಶ ಇಂದು ಪ್ರಕಟ

ಎಸೆಸೆಲ್ಸಿ ಪರೀಕ್ಷಾ ಫ‌ಲಿತಾಂಶ ಇಂದು ಪ್ರಕಟ

ಪ್ರತಿಷ್ಠೆಗೆ ರಚನೆಯಾದ ತಾಲೂಕುಗಳು ಅನಾಥ; ತಹಶೀಲ್ದಾರ್‌ ನೇಮಕವಾಗಿಲ್ಲ ,ಆಡಳಿತ ಸೌಧವಿಲ್ಲ

ಪ್ರತಿಷ್ಠೆಗೆ ರಚನೆಯಾದ ತಾಲೂಕುಗಳು ಅನಾಥ; ತಹಶೀಲ್ದಾರ್‌ ನೇಮಕವಾಗಿಲ್ಲ ,ಆಡಳಿತ ಸೌಧವಿಲ್ಲ

ಚಳ್ಳಕೆರೆಯಲ್ಲಿ ಹನ್ಸ-ಎನ್‌ಜಿ ಯಶಸ್ವಿ ಪ್ರಯೋಗ; ಸಿಎಸ್‌ಐಆರ್‌, ಎನ್‌ಎಎಲ್‌ನಿಂದ ವಿಮಾನ ಸಿದ್ಧ

ಚಳ್ಳಕೆರೆಯಲ್ಲಿ ಹನ್ಸ-ಎನ್‌ಜಿ ಯಶಸ್ವಿ ಪ್ರಯೋಗ; ಸಿಎಸ್‌ಐಆರ್‌, ಎನ್‌ಎಎಲ್‌ನಿಂದ ವಿಮಾನ ಸಿದ್ಧ

ಸ್ಥ.ಸಂಸ್ಥೆ ಚುನಾವಣೆ: ಒಬಿಸಿ ಮೀಸಲಾತಿಗೆ ಅಸ್ತು; ಮಧ್ಯಪ್ರದೇಶದ ಅರ್ಜಿಗೆ ಸು.ಕೋ.ಒಪ್ಪಿಗೆ

ಸ್ಥ.ಸಂಸ್ಥೆ ಚುನಾವಣೆ: ಒಬಿಸಿ ಮೀಸಲಾತಿಗೆ ಅಸ್ತು; ಮಧ್ಯಪ್ರದೇಶದ ಅರ್ಜಿಗೆ ಸು.ಕೋ.ಒಪ್ಪಿಗೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

g-school1

ಸೌಕರ್ಯಗಳಿರುವಲ್ಲಿ ವಿದ್ಯಾರ್ಥಿಗಳಿಲ್ಲ; ವಿದ್ಯಾರ್ಥಿಗಳಿರುವಲ್ಲಿ ಸೌಲಭ್ಯಗಳೇ ಇಲ್ಲ

ಕೋರಿಕೆಗೆ ಸ್ಪಂದಿಸಿದ ಅಮ್ಮಂದಿರು: ಎದೆಹಾಲಿಲ್ಲದೆ ಕಂಗೆಟ್ಟಿದ್ದ ತಾಯಿಗೆ ನೆರವು!

ಕೋರಿಕೆಗೆ ಸ್ಪಂದಿಸಿದ ಅಮ್ಮಂದಿರು: ಎದೆಹಾಲಿಲ್ಲದೆ ಕಂಗೆಟ್ಟಿದ್ದ ತಾಯಿಗೆ ನೆರವು!

ಗ್ರಾಮ ಪಂಚಾಯತ್‌ ತ್ಯಾಜ್ಯ ಸಂಗ್ರಹ ವಾಹನಗಳ ಜಿಪಿಎಸ್‌ ಟ್ರ್ಯಾಕಿಂಗ್ !ಗ್ರಾಮ ಪಂಚಾಯತ್‌ ತ್ಯಾಜ್ಯ ಸಂಗ್ರಹ ವಾಹನಗಳ ಜಿಪಿಎಸ್‌ ಟ್ರ್ಯಾಕಿಂಗ್ !

ಗ್ರಾಮ ಪಂಚಾಯತ್‌ ತ್ಯಾಜ್ಯ ಸಂಗ್ರಹ ವಾಹನಗಳ ಜಿಪಿಎಸ್‌ ಟ್ರ್ಯಾಕಿಂಗ್ !

ನಾರಾಯಣ ಗುರುಗಳ ಪಠ್ಯ ಕೈಬಿಟ್ಟರೆ ಚಳವಳಿ: ಲೋಬೋ

ನಾರಾಯಣ ಗುರುಗಳ ಪಠ್ಯ ಕೈಬಿಟ್ಟರೆ ಚಳವಳಿ: ಲೋಬೋ

ಹಳ್ಳಿ ಹಳ್ಳಿಯಲ್ಲೂ ಡಿಜಿಟಲ್‌ ಸಾಕ್ಷರತೆ: ನಳಿನ್‌ ಕುಮಾರ್‌ ಕಟೀಲು

ಹಳ್ಳಿ ಹಳ್ಳಿಯಲ್ಲೂ ಡಿಜಿಟಲ್‌ ಸಾಕ್ಷರತೆ: ನಳಿನ್‌ ಕುಮಾರ್‌ ಕಟೀಲು

MUST WATCH

udayavani youtube

ಕಾರ್ಖಾನೆಯ ಗೋಡೆ ಕುಸಿದು 12 ಮಂದಿ ಕಾರ್ಮಿಕರ ಸಾವು

udayavani youtube

ಬೆಂಗಳೂರಿನಲ್ಲಿ ಹೈಸ್ಕೂಲ್ ವಿದ್ಯಾರ್ಥಿನಿಯರ ಮಾರಾಮಾರಿ ! ವಿಡಿಯೋ ವೈರಲ್ ..

udayavani youtube

ಕೊಪ್ಪಲಂಗಡಿ : ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಪಿಕಪ್

udayavani youtube

ಹೊರಟ್ಟಿ ಸೇರ್ಪಡೆಯಿಂದ ಪಕ್ಷಕ್ಕೆ ಬಲ : ಸಿಎಂ

udayavani youtube

ಹುಣಸೂರಿನಲ್ಲಿ ಭಾರೀ ಮಳೆಗೆ ಮನೆಗಳು ಜಲಾವೃತ

ಹೊಸ ಸೇರ್ಪಡೆ

g-school1

ಸೌಕರ್ಯಗಳಿರುವಲ್ಲಿ ವಿದ್ಯಾರ್ಥಿಗಳಿಲ್ಲ; ವಿದ್ಯಾರ್ಥಿಗಳಿರುವಲ್ಲಿ ಸೌಲಭ್ಯಗಳೇ ಇಲ್ಲ

e-property

ಭೂ ಮಾಲಕತ್ವಕ್ಕೆ ಇ-ಪ್ರಾಪರ್ಟಿ ಕಾರ್ಡ್‌

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಿ.ಎಸ್.ನಾಗಭೂಷಣ್ ನಿಧನ

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಿ.ಎಸ್.ನಾಗಭೂಷಣ್ ನಿಧನ

waste-management

ರೆಂಕೆದಗುತ್ತು ಪ್ರಾಯೋಗಿಕ ಯೋಜನೆಗೇ ಅಪಸ್ವರ

ಮುಂದುವರಿದ ಭಾರೀ ಮಳೆ: ದಕ್ಷಿಣ ಕನ್ನಡ, ಶಿವಮೊಗ್ಗದ ಶಾಲೆಗಳಿಗೆ ರಜೆ ಘೋಷಣೆ

ಮುಂದುವರಿದ ಭಾರೀ ಮಳೆ: ಮೈಸೂರು, ದಕ್ಷಿಣ ಕನ್ನಡ, ಶಿವಮೊಗ್ಗದ ಶಾಲೆಗಳಿಗೆ ರಜೆ ಘೋಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.