ಡಿ. 12: “ಸಾಮರಸ್ಯ ನಡಿಗೆ ಸೌಹಾರ್ದತೆಯೆಡೆಗೆ’

Team Udayavani, Dec 1, 2017, 9:39 AM IST

01-12.jpg

ಮಂಗಳೂರು: ಬುದ್ಧಿವಂತರ ಜಿಲ್ಲೆ ಎಂದು ಹೆಸರಾದ ದಕ್ಷಿಣ ಕನ್ನಡದಲ್ಲಿ ಸಾಮರಸ್ಯದ ಕೊರತೆ ಇದ್ದು, ಜಿಲ್ಲೆಯ ಗೌರವಕ್ಕೆ ಕುಂದುಂಟಾಗಿದೆ. ಸಾಮರಸ್ಯವನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಜಾತ್ಯತೀತ ಸಂಘಟನೆಗಳು ಒಟ್ಟು ಸೇರಿ ಡಿ. 12ರಂದು “ಸಾಮರಸ್ಯ ನಡಿಗೆ ಸೌಹಾರ್ದತೆಯೆಡೆಗೆ’ ಎಂಬ ಧ್ಯೇಯವನ್ನಿಟ್ಟು ಫರಂಗಿಪೇಟೆಯಿಂದ ಮಾಣಿ ವರೆಗೆ ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ತಿಳಿಸಿದರು.

ಬೆಳಗ್ಗೆ 9 ಗಂಟೆಗೆ ಜಾಥಾ ಆರಂಭ ವಾಗಲಿದ್ದು, ಸಂಜೆ 4.30ಕ್ಕೆ ಮಾಣಿಯಲ್ಲಿ ಮುಕ್ತಾಯವಾಗಲಿದೆ. ಸಮಾರೋಪದಲ್ಲಿ ಜಾತ್ಯತೀತ ನಿಲುವಿನ ಮಹನೀಯರು ಪಾಲ್ಗೊಳ್ಳುವರು ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.  ಜಾಥಾದಲ್ಲಿ ಯಾವುದೇ ಘೋಷಣೆ ಇರುವುದಿಲ್ಲ. ಮೌನವಾಗಿ ಜಾಥಾ ನಡೆಯಲಿದೆ. ವೈಯಕ್ತಿಕ ಹಿತಾಸಕ್ತಿ ಅಥವಾ ಒಂದು ರಾಜಕೀಯ ಪಕ್ಷಕ್ಕೆ ಸೀಮಿತವಾದ ಕಾರ್ಯಕ್ರಮ ಇದಲ್ಲ. ಭಾವೈಕ್ಯ ಕಾಪಾಡಲು ಅಗತ್ಯವಾದ ಕಾರ್ಯಕ್ರಮವಾಗಿದೆ ಎಂದರು.

ಮಂಗಳೂರು ನಗರದಲ್ಲಿ ಜಾಥಾ ನಡೆಸಿದರೆ ಸಂಚಾರ ಸುವ್ಯವಸ್ಥೆಗೆ ತೊಂದರೆ ಆಗುತ್ತಿರುವುದನ್ನು ಮನಗಂಡು ನಗರದ ಹೊರ ವಲಯದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಾಥಾ ರಸ್ತೆಯ ಒಂದು ಬದಿಯಲ್ಲಿ ಪಾದಯಾತ್ರೆ ಮುಖಾಂತರ ಸಾಗಲಿದ್ದು, ವಾಹನ ಸಂಚಾರಕ್ಕೆ ಯಾವುದೇ ರೀತಿಯಲ್ಲಿ ತಡೆ ಉಂಟು ಮಾಡುವುದಿಲ್ಲ ಎಂದು ತಿಳಿಸಿದರು.

ಮುಂದೆ ತಾಲೂಕು ಮಟ್ಟದಲ್ಲಿ 
ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ತಾಲೂಕು ಮಟ್ಟದ ಸಾಮರಸ್ಯ ಜಾಥಾ ಹಮ್ಮಿಕೊಳ್ಳಲಾಗುವುದು ಎಂದು ಸಚಿವ ರಮಾನಾಥ ರೈ ವಿವರಿಸಿದರು.  ಇದೇ ಸಂದರ್ಭದಲ್ಲಿ ಸಚಿವರು ಜಾಥಾದ ಪೋಸ್ಟರನ್ನು ಬಿಡುಗಡೆ ಮಾಡಿದರು. 
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌, ಸಿಪಿಐಎಂ ಮುಖಂಡರಾದ ವಸಂತ ಆಚಾರಿ ಮತ್ತು ಯಾದವ ಶೆಟ್ಟಿ, ಸಿಪಿಐ ನಾಯಕರಾದ ಸೀತಾರಾಮ ಬೇರಿಂಜ ಮತ್ತು ಕರುಣಾಕರ, ಕೆ. ತಿಮ್ಮಪ್ಪ, ರಘು ಎಕ್ಕಾರು, ದಲಿತ ಸಂಘಟನೆಗಳ ಮುಖಂಡರಾದ ಎಂ. ದೇವದಾಸ್‌, ಪಿ. ಕೇಶವ, ವಿಶು ಕುಮಾರ್‌, ರೈತ ಹಸಿರು ಸೇನೆಯ ರವಿ ಕಿರಣ್‌ ಪುಣಚ, ಹಿರಿಯ ವಕೀಲ ಟಿ. ನಾರಾಯಣ ಪೂಜಾರಿ, ಕೆಥೋಲಿಕ್‌ ರಾಷ್ಟ್ರೀಯ ಪರಿಷತ್‌ ಸದಸ್ಯ ಸುಶಿಲ್‌ ನೊರೋನ್ಹಾ, ವಿವಿಧ ಸಂಘಟನೆಗಳ ಪ್ರಮುಖರಾದ ವಾಸುದೇವ ಬೋಳೂರು, ಸರೋಜಿನಿ, ಚಂದು ಎಲ್‌., ವಾಸುದೇವ ಉಚ್ಚಿಲ, ರೀಟಾ ನೊರೋನ್ಹಾ, ಬಿ.ಕೆ. ವಸಂತ್‌, ನೇಮಿರಾಜ್‌, ಮಹಮದ್‌ ಹನೀಫ್‌, ಜಯಶೀಲ, ಬಿ. ಶ್ರೀನಿವಾಸ್‌, ಯೋಗೀಶ್‌ ಶೆಟ್ಟಿ ಜಪ್ಪು, ಮುನೀರ್‌ ಕಾಟಿಪಳ್ಳ ಉಪಸ್ಥಿತರಿದ್ದರು. 

ಟಾಪ್ ನ್ಯೂಸ್

ವಿಕ್ರಮ್ ಅಭಿನಯದ ‘ಮಹಾ ಪುರುಷ’ ಚಿತ್ರ ಫೆ. 10ಕ್ಕೆ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ

ವಿಕ್ರಮ್ ಅಭಿನಯದ ‘ಮಹಾ ಪುರುಷ’ ಚಿತ್ರ ಫೆ. 10ಕ್ಕೆ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ

yatnal

ನಾನು ಯಡಿಯೂರಪ್ಪ, ವಿಜಯೇಂದ್ರರ ವಿರೋಧಿ : ರೇಣು ಭೇಟಿಗೆ ಯತ್ನಾಳ್ ಸಮಜಾಯಿಷಿ

“ಕೇಜ್ರಿವಾಲ್ ಗೆ ಒಂದು ಅವಕಾಶ ಕೊಡಿ”; ಪಂಚರಾಜ್ಯಗಳಲ್ಲಿ ಆಪ್ ಚುನಾವಣಾ ಪ್ರಚಾರಕ್ಕೆ ಚಾಲನೆ

“ಕೇಜ್ರಿವಾಲ್ ಗೆ ಒಂದು ಅವಕಾಶ ಕೊಡಿ”; ಪಂಚರಾಜ್ಯಗಳಲ್ಲಿ ಆಪ್ ಚುನಾವಣಾ ಪ್ರಚಾರಕ್ಕೆ ಚಾಲನೆ

1-dqwqe

ಅಂತಹ ಸಭೆಗೆ ಹೋಗಲ್ಲ: ಬೆಳಗಾವಿ ಬಿಜೆಪಿ ಸಭೆಗೆ ರಮೇಶ್ ಜಾರಕಿಹೊಳಿ‌ ಅಸಮಾಧಾನ

ವಾಟ್ಸ್‌ಆ್ಯಪ್‌ ಚಾಟಿಂಗ್‌ ಹಿಸ್ಟರಿ ರವಾನೆ ಇನ್ನು ಸುಲಭ

ವಾಟ್ಸ್‌ಆ್ಯಪ್‌ ಚಾಟಿಂಗ್‌ ಹಿಸ್ಟರಿ ರವಾನೆ ಇನ್ನು ಸುಲಭ

ಬ್ರೈನ್‌ ಫಾಗ್‌ ಮಹಿಳೆಯರನ್ನು ಕಾಡುವ ಮಾನಸಿಕ ಸಮಸ್ಯೆ; ಕಾಳಜಿ ಹೇಗೆ?

ಬ್ರೈನ್‌ ಫಾಗ್‌ ಮಹಿಳೆಯರನ್ನು ಕಾಡುವ ಮಾನಸಿಕ ಸಮಸ್ಯೆ; ಕಾಳಜಿ ಹೇಗೆ?

ಪಾತಾಳಕ್ಕೆ ಕುಸಿದ ಷೇರುಪೇಟೆ ಸೆನ್ಸೆಕ್ಸ್, ಹೂಡಿಕೆದಾರರಿಗೆ ಭಾರೀ ನಷ್ಟ; 1950 ಅಂಕ ಇಳಿಕೆ

ಪಾತಾಳಕ್ಕೆ ಕುಸಿದ ಷೇರುಪೇಟೆ ಸೆನ್ಸೆಕ್ಸ್, ಹೂಡಿಕೆದಾರರಿಗೆ ಭಾರೀ ನಷ್ಟ; 1950 ಅಂಕ ಇಳಿಕೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-dsd

ರಾಷ್ಟ್ರೀಯ ಬಾಲ ಪುರಸ್ಕಾರ: ಪ್ರಧಾನಿ ಜೊತೆ ಮಂಗಳೂರಿನ ಬಾಲೆಯ ಮಾತು

ಉಳ್ಳಾಲ: ಒಂದೇ ವಾಹನಕ್ಕೆ 16 ನೋಟಿಸ್‌ ನೀಡಿದ ಪೊಲೀಸರು!

ಉಳ್ಳಾಲ: ಒಂದೇ ವಾಹನಕ್ಕೆ 16 ನೋಟಿಸ್‌ ನೀಡಿದ ಪೊಲೀಸರು!

ಆ್ಯಪ್‌, ಆನ್‌ಲೈನ್‌ನಲ್ಲೇ ನೋಂದಣಿಗೆ ಯುವಜನರ ಒಲವು

ಆ್ಯಪ್‌, ಆನ್‌ಲೈನ್‌ನಲ್ಲೇ ನೋಂದಣಿಗೆ ಯುವಜನರ ಒಲವು

ಕರಾವಳಿಯ ಎರಡು ಪ್ರಮುಖ ನಗರಗಳಲ್ಲಿ ಮಾಸ್ಕ್ ಧಾರಣೆ ನಿರೀಕ್ಷಿತ ಮಟ್ಟದಲ್ಲಿಲ್ಲ

ಕರಾವಳಿಯ ಎರಡು ಪ್ರಮುಖ ನಗರಗಳಲ್ಲಿ ಮಾಸ್ಕ್ ಧಾರಣೆ ನಿರೀಕ್ಷಿತ ಮಟ್ಟದಲ್ಲಿಲ್ಲ

ಅಧಿಕ ಟಿಕೆಟ್‌ ದರಕ್ಕೆ ಕಾರಣ; ಪ್ಯಾಸೆಂಜರ್‌ ರೈಲು ಮೈಲ್‌/ ಎಕ್ಸ್‌ಪ್ರೆಸ್‌ ಆಗಿ ಸಂಚಾರ

ಅಧಿಕ ಟಿಕೆಟ್‌ ದರಕ್ಕೆ ಕಾರಣ; ಪ್ಯಾಸೆಂಜರ್‌ ರೈಲು ಮೈಲ್‌/ ಎಕ್ಸ್‌ಪ್ರೆಸ್‌ ಆಗಿ ಸಂಚಾರ

MUST WATCH

udayavani youtube

ರಾಷ್ಟ್ರೀಯ ಬಾಲ ಪುರಸ್ಕಾರ : ಪ್ರಧಾನಿ ಜೊತೆ ಮಂಗಳೂರಿನ ರೆಮೋನಾ ಪರೇರಾ ಮಾತುಕತೆ

udayavani youtube

ಬೆಳ್ಳಂಬೆಳಗ್ಗೆ ಟ್ರಾಫಿಕ್ ಜಾಮ್ ! ಕೆಲಸಕ್ಕೆ ಹೋಗುವವರ ಪರದಾಟ ಹೇಳತೀರದು…

udayavani youtube

ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೆರೆ, ಅರಣ್ಯ ಇಲಾಖೆಯ ಯಶಸ್ವಿ ಕಾರ್ಯಾಚರಣೆ

udayavani youtube

ಕೋಲ್ಕತಾದಲ್ಲಿ ಬಿಜೆಪಿ ಮತ್ತು ಟಿಎಂಸಿ ಘರ್ಷಣೆ; ಸಂಸದರ ಮೇಲೆ ಕಲ್ಲು ತೂರಾಟ

udayavani youtube

ಹೆಣ ಸಾಗಿಸಲು ಹೆಣಗಾಟ..!| ಇದು ಹೊಳೆಕೂಡಿಗೆ ಗ್ರಾಮದ ಜನರ ನರಕದ ಬದುಕು

ಹೊಸ ಸೇರ್ಪಡೆ

ವಿಕ್ರಮ್ ಅಭಿನಯದ ‘ಮಹಾ ಪುರುಷ’ ಚಿತ್ರ ಫೆ. 10ಕ್ಕೆ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ

ವಿಕ್ರಮ್ ಅಭಿನಯದ ‘ಮಹಾ ಪುರುಷ’ ಚಿತ್ರ ಫೆ. 10ಕ್ಕೆ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ

yatnal

ನಾನು ಯಡಿಯೂರಪ್ಪ, ವಿಜಯೇಂದ್ರರ ವಿರೋಧಿ : ರೇಣು ಭೇಟಿಗೆ ಯತ್ನಾಳ್ ಸಮಜಾಯಿಷಿ

23BSSk

ಆರ್ಥಿಕ ಸಂಕಷ್ಟದಲ್ಲಿ ಬಿಎಸ್‌ಎಸ್‌ಕೆ

“ಕೇಜ್ರಿವಾಲ್ ಗೆ ಒಂದು ಅವಕಾಶ ಕೊಡಿ”; ಪಂಚರಾಜ್ಯಗಳಲ್ಲಿ ಆಪ್ ಚುನಾವಣಾ ಪ್ರಚಾರಕ್ಕೆ ಚಾಲನೆ

“ಕೇಜ್ರಿವಾಲ್ ಗೆ ಒಂದು ಅವಕಾಶ ಕೊಡಿ”; ಪಂಚರಾಜ್ಯಗಳಲ್ಲಿ ಆಪ್ ಚುನಾವಣಾ ಪ್ರಚಾರಕ್ಕೆ ಚಾಲನೆ

1-dqwqe

ಅಂತಹ ಸಭೆಗೆ ಹೋಗಲ್ಲ: ಬೆಳಗಾವಿ ಬಿಜೆಪಿ ಸಭೆಗೆ ರಮೇಶ್ ಜಾರಕಿಹೊಳಿ‌ ಅಸಮಾಧಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.