ಮಂಗಳೂರಿನಿಂದ ವಿಮಾನಯಾನ ಆರಂಭ: ಸೋಮವಾರದಿಂದ ಬೆಂಗಳೂರು, ಚೆನ್ನೈ, ಮುಂಬೈಗೆ ವಿಮಾನ ಹಾರಾಟ
Team Udayavani, May 23, 2020, 11:35 AM IST
ಮಂಗಳೂರು: ಕೋವಿಡ್-19 ದಿಂದ ಸ್ಥಗಿತಗೊಂಡಿದ್ದ ವಿಮಾನ ಸೇವೆ ಮತ್ತೆ ಆರಂಭವಾಗಲಿದೆ. ದೇಶೀಯ ವಿಮಾನ ಯಾನ ಆರಂಭಿಸಲು ವಿಮಾನ ಯಾನ ಸಚಿವಾಲಯ ಸೂಚಿಸಿರುವ ಹಿನ್ನೆಲೆಯಲ್ಲಿ ಸೋಮವಾರದಿಂದ (ಮೇ.25) ಮಂಗಳೂರಿನಿಂದ ಬೆಂಗಳೂರು, ಮುಂಬೈ,, ಚೆನ್ನೈಗೆ ವಿಮಾನಗಳ ಹಾರಾಟ ಆರಂಭವಾಗಲಿದೆ.
ಮೇ 25 ರಿಂದ ಮಂಗಳೂರಿನಿಂದ ಇಂಡಿಗೋದ 3 ವಿಮಾನಗಳು ಮುಂಬೈ, ಬೆಂಗಳೂರು, ಚೆನ್ನೈಗೆ ಸಂಚರಿಸಲಿದೆ. ಸ್ಪೈಸ್ ಜೆಟ್ನ 3 ವಿಮಾನಗಳು ಬೆಂಗಳೂರು, ಮುಂಬೈಗೆ ಸಂಚರಿಸಲಿದೆ. ಏರ್ ಇಂಡಿಯಾ ವೇಳಾಪಟ್ಟಿ ಇನ್ನೂ ಬಿಡುಗಡೆ ಯಾಗಿಲ್ಲ.
ಬೆಂಗಳೂರಿನಿಂದ ಮಂಗಳೂರಿಗೆ ಸ್ಪೈಸ್ ಜೆಟ್ ವಿಮಾನ ಬೆಳಗ್ಗೆ 8.30ಕ್ಕೆ, ರಾತ್ರಿ 7 ಗಂಟೆಗೆ ಮತ್ತು ಇಂಡಿಗೋ ವಿಮಾನ ಸಂಜೆ 5.55ಕ್ಕೆ, ಮಂಗಳೂರಿನಿಂದ ಬೆಂಗಳೂರಿಗೆ ಸ್ಪೈಸ್ ಜೆಟ್ ವಿಮಾನ ಬೆಳಗ್ಗೆ 10.20ಕ್ಕೆ, ರಾತ್ರಿ 9.35 ಹಾಗೂ ಇಂಡಿಗೋ ಸಂಜೆ 7.30ಕ್ಕೆ ಸಂಚರಿಸಲಿದೆ.
ಮುಂಬೈನಿಂದ ಸ್ಪೈಸ್ ಜೆಟ್ ವಿಮಾನ ಬೆಳಗ್ಗೆ 7.05ಕ್ಕೆ, ಇಂಡಿಗೋ ಬೆಳಗ್ಗೆ 9.30ಕ್ಕೆ ಮಂಗಳೂರಿಗೆ ಹೊರಡಲಿವೆ. ಮಂಗಳೂರಿನಿಂದ ಮುಂಬೈಗೆ ಸ್ಪೈಸ್ ಜೆಟ್ ವಿಮಾನ ಬೆಳಗ್ಗೆ 9.05ಕ್ಕೆ ಇಂಡಿಗೋ 11.40 ಕ್ಕೆ ತೆರಳಲಿದೆ. ಚೆನ್ನೈನಿಂದ ಮಂಗಳೂರಿಗೆ ಸಂಜೆ 5.45ಕ್ಕೆ ಹಾಗೂ ಮಂಗಳೂರಿನಿಂದ ಚೆನ್ನೈಗೆ ರಾತ್ರಿ 8.05ಕ್ಕೆ ಇಂಡಿಗೋ ವಿಮಾನ ಸಂಚರಿಸಲಿದೆ ಎಂದು ಇಂಡಿಗೋ ಮತ್ತು ಸ್ಪೈಷ್ ಜೆಟ್ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ