ಒಳ ಉಡುಪಿನಲ್ಲಿಟ್ಟು 2.15 ಕೆ.ಜಿ ಚಿನ್ನ ಸಾಗಾಟ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಬ್ಬರ ಸೆರೆ
Team Udayavani, Jan 15, 2021, 1:05 PM IST
ಮಂಗಳೂರು: ಒಳ ಉಡುಪಿನಲ್ಲಿ 1.09 ಕೋಟಿ ರೂ. ಮೌಲ್ಯದ 2.15 ಕೆ.ಜಿ ತೂಕದ ಚಿನ್ನದ ಗಟ್ಟಿಯನ್ನು ಸಾಗಿಸುತ್ತಿದ್ದ ಕೇರಳ ಮೂಲದ ಇಬ್ಬರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಕಾಸರಗೋಡಿನ ಫೈಜಲ್ ತೊಟ್ಟಿ ಮೆಲ್ಪರಂಬ (37 ವ) ಹಾಗೂ ಮೊಹಮ್ಮದ್ ಶೋಹೈಬ್ ಮುಗು (31 ವ) ಬಂಧಿತ ಆರೋಪಿಗಳು.
ಇದನ್ನೂ ಓದಿ:ರಮೇಶ ಜಾರಕಿಹೊಳಿ RSS ಟೋಪಿ ಹಾಕಿದ್ದಲ್ಲ, ಮುಸ್ಲಿಂ ಟೋಪಿ! ಪೋಟೊ ರಿಲೀಸ್ ಮಾಡಿದ ಸತೀಶ್
ಶಾರ್ಜಾದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಏರ್ ಇಂಡಿಯಾ ವಿಮಾನದಲ್ಲಿ ಬಂದಿಳಿದ ಇವರಿಬ್ಬರನ್ನು ಸಂಶಯದ ಮೇಲೆ ತಪಾಸಣೆಗೆ ಒಳಪಡಿಸಲಾಗಿತ್ತು. ಈ ವೇಳೆ 24 ಕ್ಯಾರೆಟ್ ನ 2.154 ಕೆ.ಜಿ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.