“ರೋಹನ್‌ ಸ್ಕ್ವೇರ್‌’ ಐಷಾರಾಮಿ ಸಮುಚ್ಚಯ ; ಮಂಗಳೂರಿನ ಮುಕುಟಕ್ಕೊಂದು ಗರಿ

ಕೈಗೆಟಕುವ ದರದಲ್ಲಿ ಅತ್ಯಾಧುನಿಕ ಸೌಲಭ; ಸ್ವಚ್ಛಂದ ಜೀವನಕ್ಕೆ ಪರಿಪೂರ್ಣ ಸಮುಚ್ಚಯ

Team Udayavani, Jul 29, 2020, 11:37 AM IST

“ರೋಹನ್‌ ಸ್ಕ್ವೇರ್‌’ ಐಷಾರಾಮಿ ಸಮುಚ್ಚಯ ; ಮಂಗಳೂರಿನ ಮುಕುಟಕ್ಕೊಂದು ಗರಿ

ತಮಗೊಂದು ಸ್ವಂತ ಫ್ಲ್ಯಾಟ್‌ ಖರೀದಿಸಬೇಕು… ಅದು ಐಷಾರಾಮಿ ಸಮುಚ್ಚಯದಲ್ಲೇ ಇರಬೇಕು… ಪುಟ್ಟ ಸಂಸಾರದ ಜತೆಯಲ್ಲಿ ಬದುಕು ಸುಂದರವಾಗಿರಬೇಕು ಎಂದು ಯಾರು ತಾನೆ ಕನಸು ಕಾಣುವುದಿಲ್ಲ ? ಅದರಲ್ಲೂ ಸಮೀಪದಲ್ಲೇ ಎಲ್ಲ ಸೌಕರ್ಯಗಳು ಲಭ್ಯವಿದ್ದು, ಕೈಗೆಟಕುವ ದರದಲ್ಲಿ ಐಷಾರಾಮಿ ಸಮುಚ್ಚಯದಲ್ಲಿ ಫ್ಲ್ಯಾಟ್‌ ಸಿಕ್ಕರೆ ಪುಟ್ಟ ಸಂಸಾರಕ್ಕೆ ಇದಕ್ಕಿಂತ ದೊಡ್ಡ ಸಂತೋಷ, ಸಂತೃಪ್ತಿ ಇನ್ನೇನು ಬೇಕು? ಇಂತಹ ಕನಸು ಕಾಣುವವರು ಮಂಗಳೂರಿನ ಪಂಪ್‌ವೆಲ್‌ – ಪಡೀಲ್‌ ನಡುವಿನ ಕಪಿತಾನಿಯೋ ಸುಂದರ ಪರಿಸರದಲ್ಲಿ ರೋಹನ್‌ ಕಾರ್ಪೊರೇಶನ್‌ ವತಿಯಿಂದ ನಿರ್ಮಾಣ ವಾಗುತ್ತಿರುವ ರೋಹನ್‌ ಸ್ಕ್ವೇರ್‌ ಎಂಬ ಉತ್ಕೃಷ್ಟದರ್ಜೆಯ ವಸತಿ ಸಮುಚ್ಚಯ ಪ್ರದೇಶಕ್ಕೊಮ್ಮೆ ಭೇಟಿ ಕೊಡಿ, ನಿಮ್ಮ ಕನಸಿನ ಫ್ಲ್ಯಾಟ್‌ ಖರೀದಿಗೆ ಇದಕ್ಕಿಂತ ಸೂಕ್ತ ಜಾಗ ಮಂಗಳೂರಿನಲ್ಲಿ ಬೇರೊಂದಿಲ್ಲ.

ಹೌದು, ವಿಲಾಸಿ ಮನೆಗಳ ಬಗ್ಗೆ ಎಲ್ಲರೂ ಕನಸು ಕಾಣುತ್ತಾರೆ. ನಮ್ಮ ಕನಸಿನ ಮನೆ ಅರಮನೆಯಂತಿರಬೇಕು, ಸುಂದರವಾಗಿರಬೇಕು ಎಂದೆಲ್ಲ ಬಯಸುತ್ತಾರೆ. ಆದರೆ ಇದು ಅಸಾಧ್ಯ ಎಂದು ಹಿಂಜರಿಯುವವರೇ ಹೆಚ್ಚು. ಐಷಾರಾಮಿ ಸಮುಚ್ಚಯದಲ್ಲಿ ಫ್ಲ್ಯಾಟ್‌ನ ದರ ದುಬಾರಿ ಆಗಿರುತ್ತದೆ ಎಂದೇ ಎಲ್ಲರೂ ಭಾವಿಸಿರುತ್ತಾರೆ. ಆದರೆ “ರೋಹನ್‌ ಸ್ಕ್ವೇರ್‌’ ಸಮುಚ್ಚಯದಲ್ಲಿ ಕೈಗೆಟಕುವ ದರದಲ್ಲಿ ಫ್ಲ್ಯಾಟ್‌ಗಳನ್ನು ಖರೀದಿಸುವ ಸದಾವಕಾಶ ಗ್ರಾಹಕರಿಗೆ ಒಲಿದು ಬಂದಿದೆ.

ವಾಸಿಸುವ ಸಮುಚ್ಚಯ ಸುಂದರವಾಗಿದ್ದು , ಗಾಳಿ, ಬೆಳಕು ವಾಸ್ತು, ರಕ್ಷಣೆ ಜತೆಯಲ್ಲಿ ನಮ್ಮ ಅವಶ್ಯಕತೆಗಳನ್ನು ಪೂರೈಸುವ ಪರಿಪೂರ್ಣತೆಯನ್ನು ಹೊಂದಿರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಇಂತಹ ಐಷಾರಾಮಿ ಸೌಲಭ್ಯಗಳು ಕಡಿಮೆ ದರದಲ್ಲಿ ಸಿಗಬೇಕು ಎನ್ನುವ ಚಿಂತನೆ ಮನೆ ಖರೀದಿ ಕನಸು ಇಟ್ಟುಕೊಂಡಿರುವ ಪ್ರತಿಯೊಬ್ಬರದ್ದಾಗಿರುತ್ತದೆ. ಇಂತಹ ಚಿಂತನೆಗೆ ಒತ್ತು ಕೊಟ್ಟು ಗ್ರಾಹಕರ ಮನಸ್ಸಿಗೆ ಹಿತವಾಗುವಂತಹ ಯೋಜನೆಯೊಂದನ್ನು ಅನಾವರಣಗೊಳಿಸಿರುವುದು ಮಂಗಳೂರಿನ ರೋಹನ್‌ ಕಾರ್ಪೊರೇಶನ್‌ ನಿರ್ಮಾಣ ಸಂಸ್ಥೆಯ ಆಡಳಿತ ನಿರ್ದೇಶಕ ರೋಹನ್‌ ಮೊಂತೇರೋ ಅವರು.

ಸಾಮಾನ್ಯವಾಗಿ ಒಬ್ಬ ಗ್ರಾಹಕ ಫ್ಲ್ಯಾಟ್‌ ಖರೀದಿಗೆ ಪ್ಲ್ಯಾನ್‌ ಹಾಕಿ ಹುಡುಕಾಟ ಶುರುಮಾಡಿದಾಗ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಲೇ ಇರುತ್ತದೆ. ಒಂದೋ ವಿನ್ಯಾಸ ಚೆನ್ನಾಗಿರುವುದಿಲ್ಲ, ವಿನ್ಯಾಸ ಚೆನ್ನಾಗಿದ್ದರೆ ವಾಸ್ತು ಪ್ರಾಕಾರ ಇರುವುದಿಲ್ಲ , ವಾಸ್ತು ಸರಿ ಇದ್ದರೆ ಸಮುಚ್ಚಯದ ಪರಿಸರ ಚೆನ್ನಾಗಿರುವುದಿಲ್ಲ … ಹೀಗೆ ಒಂದಲ್ಲ ಒಂದು ಕೊರತೆ ಖರೀದಿದಾರನ ಮನಸ್ಸನ್ನು ಚಂಚಲವಾಗಿಸುತ್ತದೆ. ಆದರೆ ಒಂದು ಬಾರಿ ನೀವು “ರೋಹನ್‌ ಸ್ಕ್ವೇರ್‌’ ಪರಿಸರಕ್ಕೆ ಭೇಟಿ ನೀಡಿ ಸಮುಚ್ಚಯದ ಮಾಡೆಲ್‌, ವಿನ್ಯಾಸವನ್ನು ನೋಡಿದರೆ ಅಲ್ಲಿಂದ ಮತ್ತೆ ಹಿಂದಿರುಗಿ ಬೇರೆಲ್ಲೋ ಹೋಗಿ ಮನೆ ಹುಡುಕುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ರೋಹನ್‌ ಸ್ಕ್ವೇರ್‌ನ ಇನ್ನೊಂದು ವಿಶೇಷವೆಂದರೆ ಗ್ರೌಂಡ್‌ ಲೆವೆಲ್‌ನ ಮೇಲಿನಿಂದ ಮಾತ್ರ ಕಾರು ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದ್ದು , ಕೆಳಗಡೆ ಯಾವುದೇ ರೀತಿಯ ಬೇಸ್‌ಮೆಂಟ್‌ ಇರುವುದಿಲ್ಲ .

ಕಪಿತಾನಿಯೋ ಮುಖ್ಯ ರಸ್ತೆಯ ಪಕ್ಕದಲ್ಲೇ ಸುಮಾರು 3.27 ಎಕರೆ ವಿಸ್ತಾರದ ಜಾಗದಲ್ಲಿ ರೋಹನ್‌ ಸ್ಕ್ವೇರ್‌ ಸಮುಚ್ಚಯ ನಿರ್ಮಾಣ ವಾಗುತ್ತಿದ್ದು, ಹಿಂಭಾಗದ ಹಚ್ಚ ಹಸಿರಿನ ಗುಡ್ಡ ಸಮುಚ್ಚಯದ ಆಕರ್ಷಣೆಯನ್ನು ಹೆಚ್ಚಿಸಿದೆ. 21 ಅಂತಸ್ತಿನ ಈ ಸಮುಚ್ಚಯದಲ್ಲಿ 320 ಫ್ಲ್ಯಾಟ್‌ ನಿರ್ಮಾಣವಾಗಲಿದೆ. ಇದರಲ್ಲಿ ಒಂದು, ಎರಡು, ಮೂರು ಬೆಡ್‌ ರೂಂನ ಫ್ಲ್ಯಾಟ್‌ಗಳ ಜತೆಯಲ್ಲಿ 4, 5 ಬೆಡ್‌ ರೂಂನ ಡುಪ್ಲೆಕ್ಸ್‌ ಪ್ಲ್ಯಾಟ್‌ಗಳು ಕೂಡಾ ಗ್ರಾಹಕರ ಕೈಗೆಟಕುವ ದರದಲ್ಲಿ ಲಭ್ಯವಾಗಲಿದೆ.


ಸವಾಲುಗಳನ್ನೇ ಮೆಟ್ಟಿಲುಗಳನ್ನಾಗಿಸಿ ಬೆಳೆದ ಯುವ ಉದ್ಯಮಿ ರೋಹನ್‌ ಮೊಂತೇರೊ

ಸವಾಲುಗಳನ್ನೇ ಮೆಟ್ಟಿಲುಗಳನ್ನಾಗಿಸಿ ಹಂತ ಹಂತವಾಗಿ ಬೆಳೆದು ಬಂದವರು ರೋಹನ್‌ ಕಾರ್ಪೊರೇಶನ್‌ ನಿರ್ಮಾಣ ಸಂಸ್ಥೆಯ ಆಡಳಿತ ನಿರ್ದೇಶಕ ರೋಹನ್‌ ಮೊಂತೇರೊ. ಅತ್ಯಂತ ತಳಮಟ್ಟದಿಂದ ಹಂತ ಹಂತವಾಗಿ ಬೆಳೆದು ಬಂದ ರೋಹನ್‌ ಸಣ್ಣ ವಯಸ್ಸಿನಲ್ಲೇ ಉದ್ಯಮ ಕ್ಷೇತ್ರಕ್ಕೆ ಧುಮುಕಿ ಕರಾವಳಿಯ ನಿರ್ಮಾಣ ಕ್ಷೇತ್ರದಲ್ಲಿ ನಿಬ್ಬೆರಗಾಗುವಂತಹ ಸಾಧನೆ ಮಾಡಿದವರು.

ರೋಹನ್‌ ಕಾರ್ಪೊರೇಶನ್‌ ನಿರ್ಮಾಣ ಸಂಸ್ಥೆ ವತಿಯಿಂದ ನಿರ್ಮಾಣವಾಗುವ ಸಮುಚ್ಚಯಗಳು ಕೇವಲ ಕಟ್ಟಡವಲ್ಲ . ಅದೊಂದು ವಿಸ್ಮಯಗಳ ಲೋಕ. ಕರಾವಳಿ ನಿರ್ಮಾಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಈ ಸಂಸ್ಥೆಯ ವಾಣಿಜ್ಯ ಅಥವಾ ವಸತಿ ಸಮುಚ್ಚಯಗಳು ಒಂದಲ್ಲ ಒಂದು ರೀತಿಯಲ್ಲಿ ವಿಶಿಷ್ಟವಾಗಿ ನಿರ್ಮಾಣವಾಗಿವೆ. ನಗರದ ಹೆಗ್ಗುರುತು ಎಂಬ ಹೆಗ್ಗಳಿಕೆ ಪಡೆಯುತ್ತಿರುವ ಸಂಸ್ಥೆಯ ನಿರ್ಮಾಣ ಸಮುಚ್ಚಯಗಳು ಮೊದಲ ನೋಟಕ್ಕೇ ಗ್ರಾಹಕರನ್ನು ಆಕರ್ಷಿಸುವ ಶಕ್ತಿಯನ್ನು ಹೊಂದಿದೆ.

ತನ್ನ ಸಂಸ್ಥೆಯ ಅಡಿಯಲ್ಲಿ ನಿರ್ಮಾಣವಾಗುವ ಪ್ರತಿ ಸಮುಚ್ಚಯಗಳಲ್ಲೂ ರೋಹನ್‌ ಮೊಂತೇರೊ ಹೊಸ ಹೊಸ ಪ್ರಯೋಗವನ್ನು ನಡೆಸಿ ಯಶಸ್ವಿಯಾಗಿದ್ದು, ಇಲ್ಲಿ ಗ್ರಾಹಕರ ಅಭಿಪ್ರಾಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಇವರ ದೊಡ್ಡ ಗುಣ ಮತ್ತು ಇದೇ ಇವರ ಯಶಸ್ಸಿನ ಮೆಟ್ಟಿಲು. ಇದರಿಂದಾಗಿ ಪ್ರತಿ ಸಮುಚ್ಚಯ ನಿರ್ಮಾಣ ಮಾಡುವ ಸಂದರ್ಭ ಅವರು ಗ್ರಾಹಕರ ಅಭಿಪ್ರಾಯಗಳನ್ನು ಪಡೆದು ಹೊಸ ಯೋಜನೆಗಳಲ್ಲಿ ವಿನೂತನ ಪರಿಕಲ್ಪನೆಗಳನ್ನು ಪರಿಚಯಿಸುತ್ತಿದ್ದಾರೆ. ಇದೇ ಗ್ರಾಹಕರಿಗೆ ರೋಹನ್‌ ಕಾರ್ಪೊರೇಶನ್‌ ಸಂಸ್ಥೆ ನೀಡುವ ಬಹು ದೊಡ್ಡ ಆಸ್ತಿ.

ರೋಹನ್‌ ಕಾರ್ಪೊರೇಶನ್‌ ಸಂಸ್ಥೆ ಈಗಾಗಲೇ 21 ಯೋಜನೆಗಳನ್ನು ಹಾಗೂ 15 ಲೇ ಔಟ್‌ ಗಳನ್ನು ಪೂರ್ಣಗೊಳಿಸಿದ ಹೆಗ್ಗಳಿಕೆ ಪಡೆದಿದೆ. ಇದೀಗ ಮೂರು ಹೊಸ ಸಮುಚ್ಚಯಗಳು ಹಾಗೂ ಎರಡು ಲೇ ಔಟ್‌ ಗಳು ನಿರ್ಮಾಣ ಹಂತದಲ್ಲಿದೆ.


ಆರು ಅಂತಸ್ತಿನಲ್ಲಿ ವಾಣಿಜ್ಯ ಮಳಿಗೆಗಳು
ರೋಹನ್‌ ಸ್ಕ್ವೇರ್‌ ಸಮುಚ್ಚಯದಲ್ಲಿ ನೆಲ ಅಂತಸ್ತು ಸೇರಿ ಆರು ಅಂತಸ್ತುಗಳಲ್ಲಿ ನಿರ್ಮಾಣವಾಗಲಿರುವ ವಾಣಿಜ್ಯ ಮಳಿಗೆಗಳು ಗ್ರಾಹಕರಿಗೆ ಪರಿಪೂರ್ಣ ಸೌಲಭ್ಯವನ್ನು ಕಲ್ಪಿಸಲಿದೆ.

ಸುಮಾರು 114 ವಾಣಿಜ್ಯ ಮಳಿಗೆಗಳು ಬರಲಿದ್ದು, ಸೂಪರ್‌ ಮಾರ್ಕೆಟ್‌, ಬ್ರಾಂಡೆಡ್‌ ಶೋ ರೂಮ್‌, ಆಟೋಮೊಬೈಲ್‌, ಕಚೇರಿ, ಕ್ಲಿನಿಕ್‌ಗಳಿಗೆ ಸೂಕ್ತವಾದ ಮಳಿಗೆಗಳು ನಿರ್ಮಾಣವಾಗಲಿದೆ. ಗ್ರಾಹಕರಿಗೆ ಬಹುತೇಕ ಎಲ್ಲ ಸೌಲಭ್ಯಗಳು ಈ ಮಳಿಗೆಗಳ ಮೂಲಕ ಲಭ್ಯವಾಗಲಿದೆ. ವಾಣಿಜ್ಯ ಮಳಿಗೆಗಳು ಮುಂದಿನ ಒಂದೂವರೆ ವರ್ಷದಲ್ಲಿ ಬಳಕೆಗೆ ಲಭ್ಯವಾಗಲಿದೆ.

ಸ್ಟಾರ್‌ ಹೋಟೆಲ್‌ ಪ್ರಧಾನ ಆಕರ್ಷಣೆ
ಸಾಮಾನ್ಯವಾಗಿ ಸಮುಚ್ಚಯಗಳು ನಿರ್ಮಾಣವಾದಾಗ ಹಲವು ಸಮಸ್ಯೆಗಳು, ಕೊರತೆಗಳನ್ನು ಗ್ರಾಹಕರು ಎದುರಿಸುತ್ತಿರುತ್ತಾರೆ. ಫ್ಲ್ಯಾಟ್‌ ಖರೀದಿಸಿದ ಬಳಿಕ ಸಮಸ್ಯೆಗಳ ಜತೆಯಲ್ಲೇ ಬದುಕುವ ಅನಿವಾರ್ಯತೆಗೆ ಗ್ರಾಹಕರು ಒಳಗಾಗುತ್ತಾರೆ. ಆದರೆ ರೋಹನ್‌ ಸ್ಕ್ವೇರ್‌ ಸಮುಚ್ಚಯದಲ್ಲಿ ಅಂತಹ ಯಾವುದೇ ಕೊರತೆ ಎದುರಾಗದಂತೆ ಸಂಸ್ಥೆಯ ಆಡಳಿತ ನಿರ್ದೇಶಕ ರೋಹನ್‌ ಮೊಂತೇರೋ ಸಮುಚ್ಚಯವನ್ನು ವಿನ್ಯಾಸಗೊಳಿಸಿದ್ದಾರೆ.

ಸಮುಚ್ಚಯದಲ್ಲಿ ಸ್ಟಾರ್‌ ಹೋಟೆಲ್‌ ಸೌಲಭ್ಯ ಇರಲಿದ್ದು , ಇದು ಮನೆ ಖರೀದಿಸುವ ಗ್ರಾಹಕರಿಗೂ, ವಾಣಿಜ್ಯ ಉದ್ದೇಶಕ್ಕೆ ಖರೀದಿಸುವವರಿಗೂ ದೊಡ್ಡ ಮಟ್ಟಿನ ಪ್ರಯೋಜನ ನೀಡಲಿದೆ. ಫ್ಲ್ಯಾಟ್‌ಗೆ ದಿಢೀರ್‌ ಅತಿಥಿಗಳು ಬಂದರೆ ಮನೆ ಮಂದಿ ಅಡುಗೆ ಮಾಡಲು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಹೋಟೆಲ್‌ ಮೂಲಕ ತಮಗೆ ಬೇಕಾದ ಆಹಾರವನ್ನು ತರಿಸಿಕೊಳ್ಳಬಹುದು.

ಇನ್ನು ಫ್ಲ್ಯಾಟ್‌ಗೆ ಹೆಚ್ಚು ಮಂದಿ ಅತಿಥಿಗಳು ಬಂದರೂ ತಂಗಲು ಮನೆ ಮಾಲೀಕರಿಗೆ ಯಾವುದೇ ಚಿಂತೆ ಇಲ್ಲ . ತಾವಿರುವ ಸಮುಚ್ಚಯದಲ್ಲೇ ಇರುವ ಸ್ಟಾರ್‌ ಹೋಟೆಲ್‌ನ ಲಾಡ್ಜಿಂಗ್ ಸೌಲಭ್ಯವನ್ನು ಬಳಸಬಹುದಾಗಿದೆ.

ವಿಶಾಲವಾದ ಲಿಫ್ಟ್‌
ಸಮುಚ್ಚಯದ ವಾಣಿಜ್ಯ ಮತ್ತು ವಸತಿ ಗ್ರಾಹಕರಿಗಾಗಿ 13 ಹೈ ಸ್ಪೀಡ್‌ ಲಿಫ್ಟ್‌ಗಳು ಅಳವಡಿಕೆಯಾಗಲಿದೆ. ಲಿಫ್ಟ್‌ಗಳು ಕೇವಲ ಜನ ಸಂಚಾರಕ್ಕೆ ಮಾತ್ರ ಸೀಮಿತವಾಗಿರದೆ, ಅನಾರೋಗ್ಯಕ್ಕೆ ತುತ್ತಾದವರನ್ನು ಕೂಡಾ ಸ್ಟ್ರೆಚ್ಚರ್‌ ಬಳಸಿ ಲಿಫ್ಟ್‌ನಲ್ಲಿ ಸುಲಭವಾಗಿ ಕರೆದೊಯ್ಯುವಂತಹ ವಿಶಾಲವಾದ ಲಿಫ್ಟ್‌ಗಳು ರೋಹನ್‌ ಸ್ಕ್ವೇರ್‌ನಲ್ಲಿ ಅಳವಡಿಸಲಾಗುತ್ತದೆ.


ಎಂಫಾರ್‌ ಸಂಸ್ಥೆಗೆ ನಿರ್ಮಾಣ ಹೊಣೆ

ದೇಶದ ಮುಂಚೂಣಿಯ ನಿರ್ಮಾಣ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದುಕೊಂಡ ಎಂಫಾರ್‌ ಸಂಸ್ಥೆಗೆ ರೋಹನ್‌ ಸ್ಕ್ವೇರ್‌ ಸಮುಚ್ಚಯದ ನಿರ್ಮಾಣ ಜವಾಬ್ದಾರಿ ವಹಿಸಲಾಗಿದೆ. ಗುಣಮಟ್ಟದ ಜತೆಯಲ್ಲಿ ರಾಜಿಯ ಪ್ರಶ್ನೆಯೇ ಇರುವುದಿಲ್ಲ. ಇದರಿಂದಾಗಿ ಫ್ಲ್ಯಾಟ್‌ ಹಾಗೂ ವಾಣಿಜ್ಯ ಉದ್ದೇಶಕ್ಕಾಗಿ ರೋಹನ್‌ ಸ್ಕ್ವೇರ್‌ನಲ್ಲಿ ಖರೀದಿಸುವ ಗ್ರಾಹಕರಿಗೆ ಗುಣಮಟ್ಟದ ಬಗ್ಗೆ ಯಾವುದೇ ಆತಂಕ ಬೇಡ.

ರೋಹನ್‌ ಸ್ಕ್ವೇರ್‌ ವೈಶಿಷ್ಟ್ಯ
ರೋಹನ್‌ ಕಾರ್ಪೊರೇಶನ್‌ ಸಂಸ್ಥೆಯ ನಿರ್ಮಾಣ ಸಮುಚ್ಚಯಗಳು ಮಂಗಳೂರಿನ ಹೆಗ್ಗುರುತು ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಆಕರ್ಷಕ ವಿನ್ಯಾಸಗಳೇ ಇದಕ್ಕೆ ಕಾರಣ. ಇದೀಗ ಹಿಂದಿನ ಎಲ್ಲ ವಿನ್ಯಾಸ, ಆಕರ್ಷಣೆಗಳನ್ನು ಮೀರಿಸಬಲ್ಲ ನಿರ್ಮಾಣ “ರೋಹನ್‌ ಸ್ಕ್ವೇರ್‌’ ಸಮುಚ್ಚಯದಲ್ಲಿ ಕಾಣಬಹುದಾಗಿದೆ. ಸಮುಚ್ಚಯ ಎಲ್ಲ ಆಧುನಿಕ ಪರಿಕರಗಳೊಂದಿಗೆ ತಲೆ ಎತ್ತಲಿದ್ದು, ಒಂದು ಕುಟುಂಬಕ್ಕೆ ಯಾವುದೇ ವಸ್ತುವಿಗಾಗಿ ಹೊರಗಡೆ ಅಲೆದಾಟಕ್ಕೆ ಅವಕಾಶ ಇಲ್ಲದಂತೆ ಎಲ್ಲಾ ಸೌಲಭ್ಯಗಳು ಈ ಸಮುಚ್ಚಯದಲ್ಲಿ ಇರಲಿದ್ದು , ಕೇವಲ ಮೂರೇ ವರ್ಷಗಳಲ್ಲಿ ಗ್ರಾಹಕರ ವಾಸ್ತವ್ಯಕ್ಕೆ ಲಭ್ಯವಾಗಲಿದೆ.

ನೈಸರ್ಗಿಕ ಬೆಳಕು: ಸಾಮಾನ್ಯ ವಾಗಿ ಸಮುಚ್ಚಯಗಳಲ್ಲಿ ನಿರ್ಮಾಣವಾಗುವ ಫ್ಲ್ಯಾಟ್‌ ಗಳ ಬಾತ್‌ರೂಂ ಕತ್ತಲೆ ಕತ್ತಲೆಯಾಗಿ ಅಥವಾ ಮಂದ ಬೆಳಕಿನಿಂದ ಕೂಡಿರುತ್ತದೆ. ಇದರಿಂದಾಗಿ ಯಾರೇ ಬಾತ್‌ ರೂಂಗೆ ಹೋದರೂ ಹಗಲು ಹೊತ್ತಿನಲ್ಲಿ ವಿದ್ಯುತ್ ಲೈಟ್ ಬಳಕೆ ಮಾಡುವುದು ಅನಿವಾರ್ಯ. ಆದರೆ ರೋಹನ್‌ ಸ್ಕ್ವೇರ್‌ ಸಮುಚ್ಚಯದಲ್ಲಿ ಹಗಲು ಹೊತ್ತಿನಲ್ಲಿ ವಿದ್ಯುತ್‌ ಬೆಳಕು ಇಲ್ಲದೆ ಬಾತ್‌ರೂಂ ಬಳಕೆ ಮಾಡಬಹುದು. ಇದರಿಂದ ವಿದ್ಯುತ್‌ ಬಳಕೆ ಉಳಿತಾಯವಾಗುವುದರ ಜತೆಯಲ್ಲಿ ನೈಸರ್ಗಿಕ ಬೆಳಕನ್ನೂ ಸೂಕ್ತ ರೀತಿಯಲ್ಲಿ ಸದ್ಬಳಕೆ ಮಾಡಲಾಗಿದೆ.

– ಮಲ್ಟಿ ಜಿಮ್‌
– ಸ್ವಿಮ್ಮಿಂಗ್‌ ಪೂಲ್‌
– ಮೆಡಿಟೇಶನ್‌ ಸೆಂಟರ್‌
– ರಿಕ್ರಿಯೇಶನ್‌ ಕ್ಲಬ್‌
– ಪಾರ್ಟಿ ಹಾಲ್‌
– ಚಿಲ್ಡ್ರನ್ಸ್‌ ಪ್ಲೇ ಏರಿಯಾ
– ವಾಕಿಂಗ್‌ ಟ್ರ್ಯಾಕ್ ‌
– ಶಾಪಿಂಗ್‌ ಮಳಿಗೆಗಳು
– ಅತ್ಯಾಧುನಿಕ ಮಾದರಿಯಲ್ಲಿ ಸಕಲ ವ್ಯವಸ್ಥೆ

– ಪಂಪ್‌ವೆಲ್‌ನಿಂದ ಕೇವಲ 600 ಮೀ. ದೂರ
– ಆಧುನಿಕ ಪರಿಕರಗಳೊಂದಿಗೆ ಆಕರ್ಷಕ ವಿನ್ಯಾಸ
– ಎಲ್ಲ ಸೌಲಭ್ಯಗಳು ಸಮುಚ್ಚಯದ ಆವರಣದಲ್ಲೇ ಲಭ್ಯ
– ಸಮುಚ್ಚಯದಲ್ಲಿ ನೈಸರ್ಗಿಕ ಬೆಳಕಿನ ಪರಿಕಲ್ಪನೆಗೆ ಆದ್ಯತೆ
– ಕಾಲ್ನಡಿಗೆ ದೂರದಲ್ಲಿ ಶಾಲೆ, ದೇವಸ್ಥಾನ, ಚರ್ಚ್‌, ಮಸೀದಿ
– ಬ್ಯಾಂಕ್‌, ಮಾರುಕಟ್ಟೆ, ಆಸ್ಪತ್ರೆ ಸೌಲಭ್ಯ ಸಮೀಪದಲ್ಲೇ ಲಭ್ಯ
– ಕೆಲವೇ ನಿಮಿಷದಲ್ಲಿ ಕಂಕನಾಡಿ ರೈಲ್ವೆ ನಿಲ್ದಾಣ ಸಂಪರ್ಕ
– ಸಮೀಪದಲ್ಲೇ ಬರಲಿದೆ ನೂತನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ
– ರಾಷ್ಟ್ರೀಯ ಹೆದ್ದಾರಿ 73 ಹಾಗೂ 66ಕ್ಕೆ ಸುಲಭದಲ್ಲಿ ಸಂಪರ್ಕ


ಯಾರು ಖರೀದಿಸಬಹುದು?

ರೋಹನ್‌ ಸ್ಕ್ವೇರ್‌ ಸಮುಚ್ಚಯದ ವಿನ್ಯಾಸ ಗಮನಿಸಿದರೆ ಇದು ಕೇವಲ ಶ್ರೀಮಂತ ವ್ಯಕ್ತಿಗಳಿಗೆ ಮಾತ್ರ ಕೈಗೆಟಕಬಹುದು ಎಂದು ಊಹಿಸಬಹುದು. ಆದರೆ ಈ ಊಹೆ ತಪ್ಪು. ಯಾಕೆಂದರೆ ರೋಹನ್‌ ಸ್ಕ್ವೇರ್‌ ಸಮುಚ್ಚಯ ಐಷಾರಾಮಿ ಸೌಲಭ್ಯವನ್ನು ಹೊಂದಿದ್ದರೂ ಗ್ರಾಹಕರಿಗೆ ಇಲ್ಲಿ ಕೈಗೆಟಕುವ ದರದಲ್ಲಿ ಫ್ಲ್ಯಾಟುಗಳು ಲಭ್ಯವಿದೆ. ಆದ್ದರಿಂದ ಬಡ, ಮಧ್ಯಮ ವರ್ಗದ ಸಾಮಾನ್ಯ ಆದಾಯ ಹೊಂದಿದವರು ಕೂಡಾ ಇಲ್ಲಿ ಸುಲಭದಲ್ಲಿ ಫ್ಲ್ಯಾಟ್‌ ಖರೀದಿಸುವ ಅವಕಾಶ ಪಡೆಯಬಹುದು.

– 805 ಚದರ ಅಡಿ 1 BHK ಫ್ಲ್ಯಾಟ್‌ದರ 30 ಲಕ್ಷ ರೂ.
– 1005 ಚದರ ಅಡಿ 2 BHK ಫ್ಲ್ಯಾಟ್‌ ದರ 39 ಲಕ್ಷ ರೂ.
– 1050 ಚದರ ಅಡಿ 2 BHK ಫ್ಲ್ಯಾಟ್‌ ದರ 41 ಲಕ್ಷ ರೂ.
– 1345 ಚದರ ಅಡಿ 3 BHK ಫ್ಲ್ಯಾಟ್‌ ದರ 55 ಲಕ್ಷ ರೂ.
– 1450, 1455 ಚದರ ಅಡಿ 3 BHK ಫ್ಲ್ಯಾಟ್‌ ದರ 60 ಲಕ್ಷ ರೂ.
– 1465 ಚದರ ಅಡಿ 3 BHK ಫ್ಲ್ಯಾಟ್‌ ದರ 60.50 ಲಕ್ಷ ರೂ.
ಎಲ್ಲವೂ ಸ್ಪೆಷಲ್‌ ಲಾಂಚಿಂಗ್‌ ಡಿಸ್ಕೌಂಟ್‌ ದರವಾಗಿದ್ದು, ಸೀಮಿತ ಅವಧಿವರೆಗೆ ಲಭ್ಯ

*ಷರತ್ತುಗಳು ಅನ್ವಯ

-ಗ್ರಾಹಕರಿಗೆ ದೊಡ್ಡ ಮಟ್ಟಿನ ಹೂಡಿಕೆ ಅಗತ್ಯವಿಲ್ಲ.
– ಕಡಿಮೆ, ಮಧ್ಯಮ ಆದಾಯದ ಕುಟುಂಬಕ್ಕೆ ಸೂಕ್ತ
– ಕಂತು ಪಾವತಿ ಸೌಲಭ್ಯ, ಶೇ.80ರಷ್ಟು
– ಬ್ಯಾಂಕ್‌ ಸಾಲ ಸೌಲಭ್ಯ.
– ಪ್ರಧಾನಮಂತ್ರಿ ಆವಾಜ್‌ ಸ್ಕೀಂ ಸೌಲಭ್ಯವೂ ಲಭ್ಯ.
– ಪಾರ್ಕಿಂಗ್‌, ಡೆಪಾಸಿಟ್‌, ಜಿಎಸ್‌ಟಿ ದರಗಳು ಮೂಲ ದರದಲ್ಲಿ ಸೇರಿವೆ.
– ಗ್ರಾಹಕರಿಗೆ ನೋಂದಾವಣೆ ಶುಲ್ಕಮಾತ್ರ ಪ್ರತ್ಯೇಕ
– ಶರತ್ತಿಗೆ ಒಳಪಟ್ಟು ಮರು ಖರೀದಿ ಆಫರ್‌

ರೋಹನ್‌ ಕಾರ್ಪೊರೇಷನ್‌ ನಿರ್ಮಾಣ ಸಂಸ್ಥೆಯಿಂದ ಇಂತಹ ಸುಮಾರು 21 ಉತ್ಕೃಷ್ಟ ಗುಣಮಟ್ಟದ ಹಾಗೂ ನವೀನ ವಿನ್ಯಾಸದ ಪ್ರಾಜೆಕ್ಟ್ ಗಳು ಮಂಗಳೂರಿನ ಮುಖ್ಯ ಭಾಗಗಳಲ್ಲಿ ನಿರ್ಮಾಣವಾಗಿದ್ದು, ಈಗಾಗಲೇ ಗ್ರಾಹಕರಿಂದ ಪ್ರಶಂಸೆಗೆ ಒಳಗಾಗಿವೆ .

ರೋಹನ್‌ ಕಾರ್ಪೊರೇಶನ್‌ ಹೆಗ್ಗಳಿಕೆ
– ಮಂಗಳೂರಿನ ಅತ್ಯಂತ ಪ್ರತಿಷ್ಠಿತ, ಯಶಸ್ವಿ ನಿರ್ಮಾಣ ಸಂಸ್ಥೆ.
– 26 ವರ್ಷಗಳ ಸುದೀರ್ಘ‌ ಅನುಭವ ಹೊಂದಿದ ಸಂಸ್ಥೆ.
– 2 ಸಾವಿರ ಸಂತೃಪ್ತ ಗ್ರಾಹಕರು.
– ಗುಣಮಟ್ಟದ ನಿರ್ಮಾಣದೊಂದಿಗೆ ಅವ—ಯೊಳಗೆ ಯೋಜನೆಗಳು ಪೂರ್ಣ.
– ಮಂಗಳೂರಿನಲ್ಲಿ 21 ಲಕ್ಷ ಚದರ ಅಡಿಯ ಒಟ್ಟು 21 ಪ್ರಾಜೆಕ್ಟ್ಗಳು ಪೂರ್ಣ.
– ಮಂಗಳೂರು ಪರಿಸರದಲ್ಲಿ 4.70 ಮಿಲಿಯನ್‌ ಚದರ ಅಡಿಯ 15 ಲೇ ಔಟ್‌ ಪೂರ್ಣ.
– ನಗರದಲ್ಲಿ 10 ಲಕ್ಷ ಚದರ ಅಡಿಯ ಮೂರು ಪ್ರಾಜೆಕ್ಟ್ ಗಳು ನಿರ್ಮಾಣ ಹಂತದಲ್ಲಿವೆ.
– ಬಜಾಲ್‌ನಲ್ಲಿ 10 ಎಕರೆ ಹಾಗೂ ಪಕ್ಷಿಕೆರೆಯಲ್ಲಿ 32 ಎಕರೆಯಲ್ಲಿ ಹೊಸ ಲೇ ಔಟ್‌.
– ನೂರಾರು ಮಂದಿಗೆ ಉದ್ಯೋಗದ ಮೂಲಕ ಆಸರೆ.

ಹೆಚ್ಚಿನ ಮಾಹಿತಿಗಾಗಿ ರೋಹನ್‌ ಕಾರ್ಪೊರೇಶನ್‌ ಸಂಸ್ಥೆಯನ್ನು 9845607725, 9845400595, +91 824 4020000 ಸಂಖ್ಯೆಗಳನ್ನು ಸಂಪರ್ಕಿಸಬಹುದು. www.rohancorporation.in

ಟಾಪ್ ನ್ಯೂಸ್

10-hunasagi-crime

Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pilikula: “ಫ್ಯಾನ್‌-ನೀರು’ ಆಶ್ರಯ; ಬಿಸಿಲ ಬೇಗೆಗೆ “ಪಿಲಿಕುಳ’ದಲ್ಲಿ ಪ್ರಾಣಿಗಳೂ ಸುಸ್ತು!

Pilikula: “ಫ್ಯಾನ್‌-ನೀರು’ ಆಶ್ರಯ; ಬಿಸಿಲ ಬೇಗೆಗೆ “ಪಿಲಿಕುಳ’ದಲ್ಲಿ ಪ್ರಾಣಿಗಳೂ ಸುಸ್ತು!

Dakshina Kannada ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ: ಜಿಲ್ಲಾಧಿಕಾರಿ

Dakshina Kannada ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ: ಜಿಲ್ಲಾಧಿಕಾರಿ

Moodabidri: ಬೃಹತ್ ಜೈನ ಆರಾಧನಾ ಕೋಶ ಸಂಪಾದಕ ಎಂ. ಧರ್ಮರಾಜ ಇಂದ್ರ ನಿಧನ

Moodabidri: ಬೃಹತ್ ಜೈನ ಆರಾಧನಾ ಕೋಶದ ಸಂಪಾದಕ ಎಂ. ಧರ್ಮರಾಜ ಇಂದ್ರ ನಿಧನ

Mangaluru: CCB ಪೊಲೀಸರ ಕಾರ್ಯಾಚರಣೆ… ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯ ಬಂಧನ

Mangaluru: CCB ಪೊಲೀಸರ ಕಾರ್ಯಾಚರಣೆ… ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯ ಬಂಧನ

ಬಸ್‌ಗಳಿಗೆ ಬಾಗಿಲು ಅಳವಡಿಕೆ ; ಡಿಸಿ ಗಡುವು ಸಮೀಪಿಸಿದರೂ ಬಗೆಹರಿಯದ ಗೊಂದಲ!

ಬಸ್‌ಗಳಿಗೆ ಬಾಗಿಲು ಅಳವಡಿಕೆ ; ಡಿಸಿ ಗಡುವು ಸಮೀಪಿಸಿದರೂ ಬಗೆಹರಿಯದ ಗೊಂದಲ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

RC 17: ಮತ್ತೆ ಒಂದಾದ ರಂಗಸ್ಥಳಂ ತಂಡ

RC 17: ಮತ್ತೆ ಒಂದಾದ ರಂಗಸ್ಥಳಂ ತಂಡ

10-hunasagi-crime

Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.