ಭವಿಷ್ಯದ ಮಂಗಳೂರಿಗೆ ಹರೇಕಳದ ನೀರು
50 ಎಂಎಲ್‌ಡಿ ಹೆಚ್ಚುವರಿ ನೀರಿಗೆ ಹೊಸ ಪ್ರಸ್ತಾವ
Team Udayavani, Jan 25, 2022, 5:32 PM IST
ತುಂಬೆ: ಭವಿಷ್ಯದ ಮಂಗಳೂರಿನ ನೀರಿನ ಅಗತ್ಯವನ್ನು ನೀಗಿಸುವ ನಿಟ್ಟಿನಲ್ಲಿ ಹೊಸದಾಗಿ ನಿರ್ಮಾಣವಾಗು ತ್ತಿರುವ ಹರೇಕಳ ಡ್ಯಾಂನಿಂದ 50 ಎಂಎಲ್‌ಡಿ ಹೆಚ್ಚುವರಿ ನೀರನ್ನು ಮಂಗಳೂರಿಗೆ ತರಲು ಚಿಂತನೆ ನಡೆಯು ತ್ತಿದೆ.
ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಇಲಾಖೆಯು ಹರೇಕಳದಲ್ಲಿ ನೇತ್ರಾವತಿ ನದಿಗೆ ಸೇತುವೆ ಸಹಿತ ಉಪ್ಪು ನೀರು ತಡೆ ಅಣೆಕಟ್ಟು ನಿರ್ಮಿಸುತ್ತಿದೆ. ತುಂಬೆ ಡ್ಯಾಂನಿಂದ ಹರೇಕಳ ಡ್ಯಾಂವರೆಗೆ 3.50 ಕಿ.ಮೀ. ಅಂತರವಿದ್ದು, ಅಲ್ಲಿಯವರೆಗೆ ನೀರು ನಿಲುಗಡೆಯಾಗಲಿದೆ. ಈ ನೀರನ್ನು ಉಳ್ಳಾಲ, ಕೋಟೆಕಾರು, ಗ್ರಾಮಾಂತರ ಭಾಗಕ್ಕೆ ನೀಡುವ ಜತೆಗೆ ಮಂಗಳೂರು ನಗರಕ್ಕೂ ಬಳಸಲು ಹೊಸ ಪ್ರಸ್ತಾವದಲ್ಲಿ ಅವಕಾಶ ಕಲ್ಪಿಸಿಕೊಳ್ಳಲಾಗಿದೆ. ಸದ್ಯ ಉಳ್ಳಾಲ, ಮೂಲ್ಕಿ ಭಾಗಗಳಿಗೆ ತುಂಬೆ ಡ್ಯಾಂನಿಂದಲೇ ನೀರು ಪೂರೈಸಲಾಗುತ್ತಿದೆ.
ಅಡ್ಯಾರ್‌ನಲ್ಲಿ 10 ಎಕ್ರೆ ಭೂಮಿ
ಈ ಹಿನ್ನೆಲೆಯಲ್ಲಿ ತುಂಬೆ ಡ್ಯಾಂ ಸನಿಹ ಅಡ್ಯಾರು ಭಾಗದಲ್ಲಿ 10 ಎಕ್ರೆ ಭೂಮಿಯನ್ನು ಪಾಲಿಕೆಯು ನಿಗದಿಗೊಳಿಸಿ ಜಿಲ್ಲಾಧಿಕಾರಿಯವರು ಅನುಮೋದಿಸಿ ದ್ದಾರೆ. ಇಲ್ಲಿ ಸುಸಜ್ಜಿತ ನೀರು ಶುದ್ಧೀಕರಣ ಘಟಕ ಆರಂಭಿಸಿ, ಭವಿಷ್ಯದಲ್ಲಿ ಹರೇಕಳ ಡ್ಯಾಂನಿಂದ 50 ಎಂಎಲ್‌ಡಿ ನೀರನ್ನು ಮೇಲಕ್ಕೆತ್ತಿ ಮಂಗಳೂರಿಗೆ ಪೂರೈಸಲು ಅನು ಮತಿ ಕೋರಿ ಶಾಸಕರಾದ ಡಿ. ವೇದವ್ಯಾಸ ಕಾಮತ್, ಡಾ| ಭರತ್ ಶೆಟ್ಟಿ ವೈ. ರಾಜ್ಯ ಸರಕಾರಕ್ಕೆ ಪ್ರಸ್ತಾವ ಕಳುಹಿಸಿದ್ದರು.
ಕೇಂದ್ರದಿಂದ ಅನುದಾನ?
ಈ ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸಲಾಗಿದೆ. ಕೆಲವೇ ತಿಂಗಳುಗಳಲ್ಲಿ ಪ್ರಧಾನಿ ಮೋದಿ ಅವರು ಪ್ರಕಟಿಸಲಿರುವ ಮತ್ತೂಂದು ಹೊಸ ಜಲಯೋಜನೆಯಡಿ ಈ ಪ್ರಸ್ತಾವಕ್ಕೆ ಅನುಮತಿ ಕೋರಲಾಗಿದೆ. ಅನು ಮೋದನೆ ದೊರೆತರೆ, ಭೂಸ್ವಾಧೀನ ಸಹಿತ ಪೂರಕ ಪ್ರಕ್ರಿಯೆ 3 ವರ್ಷಗ ಳೊಳಗೆ ನಡೆಯಲಿದೆ.
“ಹರೇಕಳ ಬಳಿ ನೇತ್ರಾವತಿ ನದಿಗೆ ಸೇತುವೆ ಸಹಿತ ಉಪ್ಪುನೀರು ತಡೆ ಅಣೆ ಕಟ್ಟು ನಿರ್ಮಿಸಲಾಗುತ್ತಿದೆ. ಡ್ಯಾಂನ ಮೇಲುಗಡೆ ರಸ್ತೆಯೂ ಇರಲಿದೆ. ಉಳ್ಳಾಲ, ಕೋಟೆಕಾರ್ ಸಹಿತ ಸುತ್ತಲಿನ ಪ್ರದೇಶಕ್ಕೆ ಕುಡಿಯುವ ನೀರು ಲಭಿಸಲಿದೆ. ತುಂಬೆಯಲ್ಲಿ ನೀರು ಕೊರತೆಯಾದರೆ ಹರೇಕಳ ಡ್ಯಾಂನ ನೀರು ಬಳಸಬಹುದು’ ಎನ್ನುತ್ತಾರೆ ಶಾಸಕ ಯು.ಟಿ. ಖಾದರ್.
ತುಂಬೆ ಡ್ಯಾಂನ 7 ಮೀ.ಗೆ ಇತಿಶ್ರೀ!
ತುಂಬೆ ಡ್ಯಾಂನಲ್ಲಿ 7 ಮೀ. ಎತ್ತರಕ್ಕೆ ನೀರು ನಿಲ್ಲಿಸಿದಾಗ 345 ಎಕ್ರೆ ಪ್ರದೇಶ ಮುಳುಗಡೆಗೊಳ್ಳಲಿದ್ದು, ಭೂಮಾಲಕರಿಗೆ ಪರಿಹಾರ ನೀಡಲು 135 ಕೋ.ರೂ ಅಗತ್ಯವಿತ್ತು. ಈ ಸಂಬಂಧ ಪೌರಾಡಳಿತ ನಿರ್ದೇಶಕರಿಂದ ಪ್ರಸ್ತಾವನೆ ಸ್ವೀಕೃತವಾಗಿತ್ತು. 2020 ಜೂ. 5ರಂದು ಸರಕಾರ ದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯ ಸಭೆಯಲ್ಲಿ ಚರ್ಚಿಸಲಾಗಿತ್ತು. ತುಂಬೆ ಡ್ಯಾಂ ಬಳಿ ಸಣ್ಣ ನೀರಾವರಿ ಇಲಾಖೆಯ ಮತ್ತೂಂದು ಡ್ಯಾಂ ನಿರ್ಮಿಸುವ ಯೋಜನೆಯೂ ಚರ್ಚೆಗೆ ಬಂದಿತ್ತು. ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರು ತೀವ್ರ ಕೊರತೆ ಉಂಟಾದಲ್ಲಿ ಈ ಡ್ಯಾಂನಿಂದ ನೀರು ಬಳಸಲು ಕ್ರಮ ಕೈಗೊಳ್ಳಬಹುದು. ಈ ಮೂಲಕ ತುಂಬೆಯಲ್ಲಿ 7 ಮೀ. ಎತ್ತರಕ್ಕೆ ನೀರು ಸಂಗ್ರಹಿಸುವ ಪ್ರಸ್ತಾವ ಕೈ ಬಿಡಬಹುದು ಎಂದು ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ಅವರು ವಿಧಾನಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದರು.
ಕೇಂದ್ರದ ಅನುಮೋದನೆ ನಿರೀಕ್ಷೆ
ತುಂಬೆಯ ಹೊಸ ಡ್ಯಾಂನ ಕೆಳಭಾಗದಲ್ಲಿ ನೂತನ ಡ್ಯಾಂ ನಿರ್ಮಿಸಲಾಗುತ್ತಿದೆ. ತುಂಬೆ, ಅಡ್ಯಾರು ಡ್ಯಾಂ ಮಧ್ಯೆ ಸಾಕಷ್ಟು ನೀರು ಸಂಗ್ರಹಿಸಬಹುದು. ಭವಿಷ್ಯದ ಮಂಗಳೂರಿನ ನೀರಿನ ಅಗತ್ಯಕ್ಕೆ ಅಡ್ಯಾರ್ ಭಾಗದಲ್ಲಿ ಭೂಮಿಯನ್ನು ಮೀಸಲಿಡಲಾಗಿದೆ. ಇಲ್ಲಿ ನೀರು ಸಂಗ್ರಹಣಾಗಾರ, ಜಾಕ್‌ವೆಲ್, ಸಂಸ್ಕರಣಾ ಸ್ಥಾವರ ಬರಲಿವೆ. ಈ ಪ್ರಸ್ತಾವನೆಗೆ ಕೇಂದ್ರ ಸರಕಾ ರದ ಸಮ್ಮತಿಯ ನಿರೀಕ್ಷೆಯಿದೆ.
-ಡಿ.ವೇದವ್ಯಾಸ ಕಾಮತ್,
ಶಾಸಕ, ಮಂಗಳೂರು ದಕ್ಷಿಣ
-ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನೆರೆ, ಪ್ರಾಕೃತಿಕ ವಿಕೋಪಗಳಲ್ಲಿ ತುರ್ತು ಪರಿಹಾರ ಕಾರ್ಯ: ಜಿಲ್ಲಾಧಿಕಾರಿ ಕರೆ
ಮುಂಗಾರು ಪ್ರವೇಶಕ್ಕೂ ಮುನ್ನ ಅಬ್ಬರ : ಕೇರಳ, ಅಸ್ಸಾಂ, ಮೇಘಾಲಯದಲ್ಲಿ ಮಳೆ ಪ್ರಕೋಪ
ನಾರಾಯಣ ಗುರುಗಳ ಪಠ್ಯ ಕೈಬಿಟ್ಟರೆ ಚಳವಳಿ: ಲೋಬೋ
ಮಗಳನ್ನೇ ಹತ್ಯೆಗೈದ ಪ್ರಕರಣ : ಕೊನೆಗೂ ಇಂದ್ರಾಣಿ ಮುಖರ್ಜಿಗೆ ಜಾಮೀನು
ರಾಹುಲ್ ಗಾಂಧಿ ಆದ್ಯತೆಯ ಆಯ್ಕೆ : ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಹೇಳಿಕೆ