ಗುಡುಗು ಸಹಿತ ಭಾರಿ ಮಳೆ : ಚರ್ಚ್ ಗೋಪುರಕ್ಕೆ ಹಾನಿ
Team Udayavani, May 8, 2021, 11:57 AM IST
ಉಳ್ಳಾಲ : ನಿನ್ನೆ ತಡರಾತ್ರಿ ಸುರಿದ ಮಳೆಯೊಂದಿಗೆ ಸಿಡಿಲು ಬಡಿದು ಪಜೀರು ಗ್ರಾಮದ ಹಳೆ ಚರ್ಚ್ ನ ಮುಖ್ಯ ಗೋಪುರಕ್ಕೆ ಹಾನಿಯಾದ ಘಟನೆ ನಡೆದಿದೆ.
ಪಜೀರು ಮರ್ಸಿಯಮ್ಮನವರ ಹಳೇ ಚರ್ಚಿಗೆ ಸಿಡಿಲು ಬಡಿದು ಹಾನಿಯಾಗಿದ್ದು, ಸಿಡಿಲಿನ ಅಬ್ಬರಕ್ಕೆ ಗೋಪುರದ ಮೇಲಿದ್ದ ಶಿಲುಬೆ ಸಹಿತ ಗೋಡೆ ಕುಸಿದ ಪರಿಣಾಮ ಚರ್ಚ್ ನ ಹೆಂಚುಗಳು ಕೆಳಗೆ ಬಿದ್ದು ಹಾನಿಯಾಗಿದೆ.
ನೂತನ ಚರ್ಚ್ ನಿರ್ಮಾಣದ ಬಳಿಕ ಈ ಚರ್ಚ್ ನಲ್ಲಿ ವಾರದ ಪೂಜೆ ಸಾಂಕೇತಿಕವಾಗಿ ನಡೆಯುತ್ತಿದ್ದು, ಮರಣ ಸಂಬಂಧಿ ಪೂಜೆಯನ್ನು ಇಲ್ಲಿ ನಡೆಸಲಾಗುತ್ತಿದೆ. ಚರ್ಚ್ ಧರ್ಮಗುರು ಸಹಿತ ಸಿಬಂದಿಗಳು ಈ ಚರ್ಚ್ ನಲ್ಲಿ ಇರದ ಕಾರಣ ಪ್ರಾಣಹಾನಿ ಸಂಭವಿಸಿಲ್ಲ ಘಟನಾ ಸ್ಥಳಕ್ಕೆ ಪಜೀರು ಗ್ರಾಮ ಪಂಚಾಯತ್ ಅಧ್ಯಕ್ಷೆ ಮೇರಿ ಡಿ. ಸೋಜಾ, ಮಾಜಿ ಅಧ್ಯಕ್ಷ ಇಮ್ತಿಯಾಝ, ಫ್ಲೋರಿನ್, ಧರ್ಮಗುರು ಸುನಿಲ್ ವೇಗಸ್, ಚರ್ಚ್ ಪಾಲನಾ ಸಮಿತಿಯ ವಿಕ್ಟರ್ ಡಿ.ಸೋಜ, ರಿಚ್ಚಾರ್ಡ್ ಗ್ರಾಮಚಾವಡಿ, ಜಾನ್ ಮೆಂಡೋನ್ಸಾ, ಪಾವೂರು ಗ್ರಾಮ ಪಂಚಾಯತ್ ಸದಸ್ಯ ವಲೇರಿಯನ್ ಭೇಟಿನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕರಾವಳಿಯಾದ್ಯಂತ ವ್ಯಾಪಕ ಮಳೆ ಹಲವೆಡೆ ಹಾನಿ, ರಸ್ತೆ ಸಂಪರ್ಕ ಕಡಿತ
ಕುವೈಟ್ನಲ್ಲಿ ತೊಂದರೆಗೆ ಸಿಲುಕಿದ್ದ ಯುವಕ ಊರಿನತ್ತ
ನೀರಿನಲ್ಲಿ ಮುಳುಗಿ ನಾಪತ್ತೆ ಪ್ರಕರಣ : ಮೂರನೇ ದಿನವೂ ಯುವಕನ ಸುಳಿವು ಪತ್ತೆಯಿಲ್ಲ
ಮಂಗಳೂರು : ಉಡುಗೊರೆ ಆಮಿಷ ನೀಡಿ ವಿದ್ಯಾರ್ಥಿಗೆ 1.85 ಲ.ರೂ. ವಂಚನೆ
ಕಡಬಕ್ಕೆ ಜಿಲ್ಲಾಧಿಕಾರಿ ಭೇಟಿ : ಇಕ್ಕಟ್ಟಿನ ತಾಲೂಕು ಕಛೇರಿಯಲ್ಲಿ ಸಾರ್ವಜನಿಕರ ಪರದಾಟ!