ಸ್ಪೋಟಕ ಸಾಗಿಸುವವರನ್ನು ಬಿಟ್ಟು, ಮರಳು ತುಂಬಿದ ಗಾಡಿ ಮಾತ್ರ ವಶಪಡೆಯುತ್ತಾರೆ: ಖಾದರ್ ಆಕ್ರೋಶ
Team Udayavani, Jan 23, 2021, 11:34 AM IST
ಮಂಗಳೂರು: ಸಿಎಂ ತವರು ಜಿಲ್ಲೆಯಲ್ಲಿ ಕಾನೂನು ವ್ಯವಸ್ಥೆ ಇಲ್ಲವೆ ? ಜನ ಸಾಮಾನ್ಯರ ಮರಳು ಗಾಡಿಯನ್ನ ವಶಪಡಿಸಿಕೊಳ್ಳತ್ತಾರೆ. ಯಾಕೆ ಲಾರಿಯಲ್ಲಿ ಸ್ಪೋಟಕ ವಸ್ತು ಸಾಗಾಟ ಮಾಡುವವರನ್ನ ಹಿಡಿಯುವುದಿಲ್ಲ ಎಂದು ಮಾಜಿ ಸಚಿವ ಯು.ಟಿ.ಖಾದರ್ ಕಿಡಿಕಾರಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿನ ಸ್ಪೋಟಕ ವಿಚಾರವಾಗಿ ಮಾತನಾಡಿದ ಅವರು, ಲಾರಿಯಲ್ಲಿ ಸ್ಪೋಟಕ ವಸ್ತು ಸಾಗಾಟ ಮಾಡುವುದು ಅಧಿಕಾರಿಗಳಿಗೆ ಗೊತ್ತಿಲ್ಲವೇ ? ಗಣಿಗಾರಿಕೆ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು. ಇದರಿಂದ ಜನಸಾಮಾನ್ಯರ ಮನೆಗಳು ಹಾಳಾಗಿವೆ. ಯಾಕೆ ಸರಕಾರ ಇದರ ಬಗ್ಗೆ ತನಿಖೆ ಮಾಡಲು ಹಿಂದೇಟು ಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಶಿವಮೊಗ್ಗ ಜಿಲ್ಲೆ ಜನರ ಜೀವನದ ಮೇಲೆ ಗಣಿಗಾರಿಕೆ ಪರಿಣಾಮ ಬೀರಲಿದೆ. ಮನೆ ಹಾಳದವರಿಗೆ ಕೂಡಲೇ ಪರಿಹಾರ ನೀಡಬೇಕು ಎಂದು ಯು.ಟಿ.ಖಾದರ್ ಮಂಗಳೂರಿನಲ್ಲಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ವೀರ ಹನುಮಂತನ ಚಿತ್ರದ ಜತೆ ಟ್ವೀಟ್… ಪ್ರಧಾನಿ ಮೋದಿಗೆ ಬ್ರೆಜಿಲ್ ಅಧ್ಯಕ್ಷ ಜೈರ್ ಧನ್ಯವಾದ
ಇದನ್ನೂ ಓದಿ: ಹುಣಸೋಡು ದುರಂತ: ಸಿಎಂ ಸ್ಥಳ ಪರಿಶೀಲನೆ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಎಂದ ಬಿಎಸ್ ವೈ