ಮಂಗಳೂರಿನಲ್ಲಿ ಜುಲೈ 7ರಿಂದ 10ರವರೆಗೆ ಬುಕ್‌ ಚೋರ್‌ ನ ‘ಲಾಕ್ ದಿ ಬಾಕ್ಸ್ ಮಿನಿ’ ಕಾರ್ಯಕ್ರಮ


Team Udayavani, Jul 7, 2022, 3:18 PM IST

ಮಂಗಳೂರಿನಲ್ಲಿ ಜುಲೈ 7ರಿಂದ 10ರವರೆಗೆ ಬುಕ್‌ಚೋರ್‌ನ ‘ಲಾಕ್ ದಿ ಬಾಕ್ಸ್ ಮಿನಿ’ ಕಾರ್ಯಕ್ರಮ

ಮಂಗಳೂರು: ಪೂರ್ವ ಸ್ವಾಮ್ಯದ ಕೃತಿಗಳ ಆನ್‌ಲೈನ್ ಪುಸ್ತಕ ಮಳಿಗೆಯಾಗಿರುವ ಬುಕ್‌ಚೋರ್, “ಲಾಕ್ ದಿ ಬಾಕ್ಸ್ ಮಿನಿ’ ಎಂಬ ವಿಶೇಷ ಪುಸ್ತಕ ಮಾರಾಟವನ್ನು ಆಯೋಜಿಸಿದೆ. ಈ ವಿಶಿಷ್ಟ ರೀತಿಯ ಮಾರಾಟದಲ್ಲಿ ನೀವು ಒಂದೊಂದು ಪುಸ್ತಕಕ್ಕೆ ಇಂತಿಷ್ಟು ಎಂದು ಹಣ ಪಾವತಿಸಬೇಕಾಗಿಲ್ಲ; ಬದಲಿಗೆ, ನೀವು ಒಂದು ಬಾಕ್ಸ್ಗೆ ಹಣ ಪಾವತಿಸಿದರೆ ಸಾಕು. ಆ ಬಾಕ್ಸ್ ನಲ್ಲಿ ಎಷ್ಟು ಪುಸ್ತಕಗಳು ತುಂಬುತ್ತವೆಯೋ, ಅಷ್ಟೂ ಪುಸ್ತಕಗಳನ್ನು ತುಂಬಿಸಿ ಮನೆಗೆ ಒಯ್ಯಬಹುದು.

ಹಂಪನಕಟ್ಟೆಯ ಕೆಎಂಸಿ ಮರ್ಕೆರ ಟ್ರಂಕ್ ರಸ್ತೆಯ ವಿಆರ್‌ಸಿವಿ+ಎಫ್‌ಪಿಡಬ್ಲೂ, ಲೇಡೀಸ್ ಕ್ಲಬ್‌ನಲ್ಲಿ ಜುಲೈ 7ರಿಂದ 10ರವರೆಗೆ ಈ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕಾಲ್ಪನಿಕ, ಕಾಲ್ಪನಿಕವಲ್ಲದ, ಅಪರಾಧ, ಪ್ರಣಯ, ಯುವಜನತೆ ಮತ್ತು ಮಕ್ಕಳಿಗೆ ಬೇಕಾದ ಪುಸ್ತಕಗಳು, ಸಾಹಸ, ವೈಜ್ಞಾನಿಕ ಕಾದಂಬರಿ ಸೇರಿದಂತೆ ಅನೇಕ ಪ್ರಕಾರಗಳಿಗೆ ಸೇರಿರುವ ಸುಮಾರು 2 ಲಕ್ಷದಷ್ಟು ಕೃತಿಗಳು ಇರಲಿವೆ.

ಪುಸ್ತಕಪ್ರೇಮಿಗಳು ಈ ಕಾರ್ಯಕ್ರಮದಲ್ಲಿ ಗ್ರೀಕ್ ಪುರಾಣ ವೀರರ ಹೆಸರಿನಲ್ಲಿರುವ ಮೂರು ವಿಭಿನ್ನ ಗಾತ್ರಗಳ ಬಾಕ್ಸ್ ಗಳಿಂದ ತಮ್ಮ ಆಯ್ಕೆಯ ಪುಸ್ತಕಗಳನ್ನು ಆಯ್ದುಕೊಳ್ಳಬಹುದು. ಅವೆಂದರೆ – ಒಡಿಸ್ಸಿಯಸ್ ಬಾಕ್ಸ್, ಪರ್ಷಿಯಸ್ ಬಾಕ್ಸ್ ಮತ್ತು ಅತಿದೊಡ್ಡ ಹಾಗೂ ಬೃಹತ್ತಾದ ಹರ್ಕ್ಯುಲಸ್ ಬಾಕ್ಸ್.

ದಿ ಒಡಿಸ್ಸಿಯಸ್ ಬಾಕ್ಸ್: ಇದರ ದರ 1199/- ರೂಪಾಯಿಗಳು

ದಿ ಪರ್ಷಿಯಸ್ ಬಾಕ್ಸ್: ಇದರ ದರ 1799/- ರೂಪಾಯಿಗಳು

ದಿ ಹರ್ಕ್ಯುಲಸ್ ಬಾಕ್ಸ್: ಅತಿದೊಡ್ಡ ಬಾಕ್ಸ್ ಗೆ ನಿಗದಿಪಡಿಸಲಾದ ದರ 2999/- ರೂಪಾಯಿಗಳು

ಓದುಗರು ತಮ್ಮ ಆಯ್ಕೆಯ ಎಷ್ಟು ಪುಸ್ತಕಗಳು ಬೇಕೋ ಅಷ್ಟನ್ನು ಬಾಕ್ಸ್ ನೊಳಗೆ ತುಂಬಿಕೊಳ್ಳಬಹುದು. ಆದರೆ ಇಲ್ಲಿರುವ ಏಕೈಕ ಷರತ್ತು ಎಂದರೆ, ಬಾಕ್ಸ್ ಅನ್ನು ಸಮತಟ್ಟಾಗಿ ಮುಚ್ಚಲು ಸಾಧ್ಯವಾಗುವಂತಿರಬೇಕು. ಹೀಗಾಗಿ, ಪುಸ್ತಕಗಳ ಸಂಖ್ಯೆಗೆ ಅಕ್ಷರಶಃ ಯಾವುದೇ ಮಿತಿಯಿರುವುದಿಲ್ಲ.

ಕಾರ್ಯಕ್ರಮದ ಕುರಿತು ಮಾತನಾಡಿದ ಬುಕ್‌ಚೋರ್ ಸ್ಥಾಪಕರಾದ ವಿದ್ಯುತ್ ಶರ್ಮಾ, ‘ಮಂಗಳೂರಿನಲ್ಲಿ ‘ಲಾಕ್ ದಿ ಬಾಕ್ಸ್ ಮಿನಿ’ ಆಯೋಜಿಸಲು ನಾವು ಉತ್ಸುಕರಾಗಿದ್ದೇವೆ. ಈಗಾಗಲೇ ಹೈದರಾಬಾದ್, ಬೆಂಗಳೂರು, ಕೋಲ್ಕತ್ತಾ, ಪುಣೆ, ಇಂದೋರ್ ಮುಂತಾದ ನಗರಗಳಲ್ಲಿ ನಮ್ಮ ಈ ಕಾರ್ಯಕ್ರಮಕ್ಕೆ ಅತ್ಯುತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಮಂಗಳೂರಿನಲ್ಲೂ ಅಂಥದ್ದೇ ಪ್ರತಿಕ್ರಿಯೆ ಬರಲಿದೆ ಎಂಬ ವಿಶ್ವಾಸವಿದೆ. ಭಾರತೀಯ ಮತ್ತು ಅಂತಾರಾಷ್ಟ್ರೀಯ ಲೇಖಕರ ವಿವಿಧ ಪ್ರಕಾರಗಳಿಗೆ ಸೇರಿರುವ ಸುಮಾರು ಎರಡು ಲಕ್ಷದಷ್ಟು ಪುಸ್ತಕಗಳಿಂದ ತಮ್ಮಿಚ್ಛೆಯ ಪುಸ್ತಕಗಳನ್ನು ಆಯ್ಕೆ ಮಾಡುವ ಅವಕಾಶವು ಪುಸ್ತಕಪ್ರೇಮಿಗಳಿಗೆ ಸಿಗಲಿದೆ. ನಾವು ಪ್ರತಿದಿನವೂ ಪುಸ್ತಕಗಳ ಮರುಪೂರಣ ಮಾಡುವ ಮೂಲಕ ಓದುಗರಿಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯುತ್ತಮ ಕೃತಿಗಳು ಸಿಗುವಂತೆ ಮಾಡುತ್ತಿದ್ದೇವೆ” ಎಂದರು.

Bookchor.com ಎನ್ನುವುದು ಅಗ್ಗದ ದರದಲ್ಲಿ ಪುಸ್ತಕಗಳನ್ನು ಒದಗಿಸುವ ಮೂಲಕ ಭಾರತದ ಯುವಜನತೆಯಲ್ಲಿ ಓದುವ ಹವ್ಯಾಸವನ್ನು ಬೆಳೆಸುವ ಉದ್ದೇಶದಿಂದ ಆರು ವರ್ಷಗಳ ಹಿಂದೆ ಸ್ಥಾಪಿಸಲಾದ ಸ್ಟಾರ್ಟಪ್ ಆಗಿದೆ. ಲಾಕ್‌ದಿಬಾಕ್ಸ್ ಕಾರ್ಯಕ್ರಮವು 2018ರಲ್ಲಿ ದೆಹಲಿಯಲ್ಲಿ ಆರಂಭವಾಗಿದ್ದು, ಬೆಂಗಳೂರಿನಲ್ಲಿ ಮೂರನೇ ಆವೃತ್ತಿ ಇತ್ತೀಚೆಗೆ ನಡೆದಿದೆ.

ಪುಸ್ತಕ ಪ್ರೇಮಿಗಳಿಗೆ ತಮ್ಮಲ್ಲಿರುವ ಓದಿರುವ ಪುಸ್ತಕಗಳನ್ನು ಈ ಕಾರ್ಯಕ್ರಮದಲ್ಲಿ ಮಾರಾಟ ಮಾಡುವ ಅವಕಾಶವೂ ಇದೆ. ಅವರು ಆಂಡ್ರಾಯ್ಡ್ ಮತ್ತು ಐಒಎಸ್‌ಗಳಲ್ಲಿ ಬುಕ್‌ಚೋರ್‌ನ ‘ಡಂಪ್’ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಂಡು, ತಾವು ಮಾರಾಟ ಮಾಡಲು ಬಯಸುತ್ತಿರುವ ಕೃತಿಗಳ ವಿವರಗಳನ್ನು ಅಲ್ಲಿ ಅಪ್‌ಲೋಡ್ ಮಾಡಬೇಕು.

ದಿನಾಂಕ: ಇದೇ ಜುಲೈ 7ರಿಂದ 10ರವರೆಗೆ. ದಿನಾಂಕವನ್ನು ಮರೆಯದಿರಿ!

ಸ್ಥಳ: ಲೇಡೀಸ್ ಕ್ಲಬ್, ವಿಆರ್‌ಸಿವಿ+ಎಫ್‌ಪಿಡಬ್ಲ್ಯೂ, ಕೆಎಂಸಿ ಮರ್ಕೆರಾ ಟ್ರಂಕ್ ರಸ್ತೆ, ಹಂಪನಕಟ್ಟೆ, ಮಂಗಳೂರು

ಸಮಯ: ಬೆಳಗ್ಗೆ 10ರಿಂದ ರಾತ್ರಿ 10ರವರೆಗೆ

ಬುಕ್‌ಚೋರ್ ಕುರಿತು: ಬುಕ್‌ಚೋರ್ ಲಿಟರರಿ ಸೊಲ್ಯೂಷನ್ಸ್ ಲಿಮಿಟೆಡ್‌ನ ಮಾಲೀಕತ್ವದ Bokkchor.com ಹೊಸ ಹಾಗೂ ಹಳೆಯ ಪುಸ್ತಕಗಳನ್ನು ಆನ್‌ಲೈನ್ ಮೂಲಕ ಮಾರಾಟ ಮಾಡುವ ಸಂಸ್ಥೆಯಾಗಿದ್ದು, ವೆಬ್, ಆಂಡ್ರಾಯ್ಡ್ ಹಾಗೂ ಐಒಎಸ್‌ನಲ್ಲಿ ಲಭ್ಯವಿದೆ. ದೇಶಾದ್ಯಂತ ಸುಮಾರು 9,00,000 ಓದುಗರನ್ನು ಹೊಂದಿದ್ದು, ಗ್ರಾಹಕರ ಸಂಖ್ಯೆ ಬೆಳೆಯುತ್ತಲೇ ಹೋಗುತ್ತಿದೆ. ಅದೇ ರೀತಿ ಸುಮಾರು 100ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಆಫ್‌ಲೈನ್‌ ನಲ್ಲಿಯೂ ತನ್ನ ಅಸ್ತಿತ್ವವನ್ನು ಸಾಬೀತುಪಡಿಸಿದೆ. ಬುಕ್‌ಚೋರ್, ಪುಸ್ತಕಗಳನ್ನು ಆನ್‌ಲೈನ್‌ ನಲ್ಲಿ ಮಾರಾಟ ಮಾಡುವ ಕೆಲಸವನ್ನಷ್ಟೇ ಮಾಡುತ್ತಿಲ್ಲ. ಗ್ರಾಹಕರಿಗೂ ಪುಸ್ತಕಗಳನ್ನು ಮಾರಲು ವೇದಿಕೆ ಕಲ್ಪಿಸುವ ಜತೆಗೆ ಗ್ರಾಹಕರಿಂದ- ಆಸಕ್ತ ಗ್ರಾಹಕರಿಗೆ ನೇರವಾಗಿ ಪುಸ್ತಕಗಳು ಮಾರಾಟ ಮಾಡಲು ಅವಕಾಶ ಕಲ್ಪಿಸಿದೆ.

ಪುಸ್ತಕಗಳು ಕಡಿಮೆ ಬೆಲೆಯಲ್ಲಿ ದೊರೆಯುವಂತೆ ಮಾಡುವ ಮೂಲಕ ಜಾಗತಿಕವಾಗಿ ಓದುವ ಹವ್ಯಾಸವನ್ನು ಹೆಚ್ಚಿಸುವ ಗುರಿಯನ್ನು ಬುಕ್‌ಚೋರ್ ಹೊಂದಿದೆ. ಈ ಸಂಸ್ಥೆಯನ್ನು ತರುಣರಿಬ್ಬರು ಆರಂಭಿಸಿದ್ದು, ಸಂಸ್ಥೆಯ ಗುರಿಯನ್ನು ಮುಟ್ಟುವ ನಿಟ್ಟಿನಲ್ಲಿ ಅವರಿಬ್ಬರು ನಿರಂತರ ಕಾರ್ಯೋನ್ಮುಮುಖರಾಗಿದ್ದಾರೆ.

ಟಾಪ್ ನ್ಯೂಸ್

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

12–uv-fusion

Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.