ಸುಳ್ಯ, ಪುತ್ತೂರು, ಬೆಳ್ತಂಗಡಿ ಬರಪೀಡಿತ: ಘೋಷಣೆಗೆ ಆಗ್ರಹ

Team Udayavani, Feb 9, 2017, 3:45 AM IST

08-LOC-12.jpg

ಮಂಗಳೂರು: ದ.ಕ.ಜಿಲ್ಲೆಯ ಸುಳ್ಯ, ಪುತ್ತೂರು ಹಾಗೂ ಬೆಳ್ತಂಗಡಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗುವುದು ಎಂದು ಕೆಪಿಸಿಸಿ ಕಿಸಾನ್‌ ಘಟಕದ ಅಧ್ಯಕ್ಷ ಸಚಿನ್‌ ಮಿಗಾ ಹೇಳಿದರು.

ಬುಧವಾರ ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಏರ್ಪಡಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಳ್ಯ, ಪುತ್ತೂರು, ಬೆಳ್ತಂಗಡಿಯನ್ನು ಕೂಡ ಬರಪೀಡಿತ ಪ್ರದೇಶವನ್ನಾಗಿ ಘೋಷಿಸಬೇಕೆಂದು ರೈತರ ಅಹವಾಲು ಇದೆ. ಮಂಗಳೂರು ಹಾಗೂ ಬಂಟ್ವಾಳ ತಾಲೂಕನ್ನು ಬರಪೀಡಿತ ಪ್ರದೇಶಧಿವನ್ನಾಗಿ ಘೋಷಿಸಲಾಗಿದೆ. ಇದು ನಗರ ಪ್ರದೇಶವಾಗಿದ್ದು, ಇಲ್ಲಿ ರೈತರಿ ರುವ ಪ್ರಮಾಣ ಕಡಿಮೆ. ಹೆಚ್ಚು ರೈತರಿರುವ ಸುಳ್ಯ, ಪುತ್ತೂರು, ಬೆಳ್ತಂಗಡಿಧಿಯನ್ನು ಕೂಡ ಬರ ಪೀಡಿತ ಪ್ರದೇಶವನ್ನಾಗಿ ರಾಜ್ಯದ ಮುಖ್ಯ ಮಂತ್ರಿಗಳು ಘೋಷಿಸಬೇಕು ಎಂದರು.

ಸಾಲ ವಸೂಲಿ: ಬಲವಂತ ಬೇಡ ರಾಜ್ಯದಲ್ಲಿ ಬರದ ಛಾಯೆ ಹಾಗೂ ನೋಟು ಅಮಾನ್ಯಿಕರಣದ ಸಮಸ್ಯೆಯಿರುವುದರಿಂದ ಯಾವುದೇ ಬ್ಯಾಂಕ್‌ಗಳು ರೈತರಿಂದ ಬಲವಂತವಾಗಿ ಸಾಲ ವಸೂಲಾತಿ ಮಾಡಬಾರದು. ಒಂದು ವೇಳೆ ಈ ರೀತಿ ಮಾಡಿದಲ್ಲಿ ಬ್ಯಾಂಕ್‌ ಮ್ಯಾನೇಜರ್‌ ಹಾಗೂ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗುವುದು ಎಂದು ಕಾಂಗ್ರೆಸ್‌ ಕಿಸಾನ್‌ ಘಟಕ ಎಚ್ಚರಿಸುತ್ತದೆ ಎಂದರು.

ನ್ಯಾಯಾಂಗ ನಿಂದನೆ
ಅಡಿಕೆ ಬೆಳೆಗಾರರ ಸಾಲ ಮನ್ನಾ ಮಾಡುವ ನಿಟ್ಟಿನಲ್ಲಿ ಗೋರಖ್‌ ಸಿಂಗ್‌ ವರದಿಯನ್ನು ಜಾರಿಗೊಳಿಸಲು ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಲಾಗಿದ್ದು, ಅದರ ತೀರ್ಪು ಫೆ. 20ರಂದು ಹೊರಬರಲಿದೆ. ತೀರ್ಪು ಘೋಷಣೆಯಾಗುವ ವರೆಗೂ ಯಾವುದೇ ಬ್ಯಾಂಕ್‌ ಅಡಿಕೆ ಬೆಳೆಗಾರರಿಂದ ಸಾಲದ ಹಣ ವಸೂಲಿಗೆ ಯತ್ನಿಸಿದಲ್ಲಿ ನ್ಯಾಯಾಂಗ ನಿಂದನೆಯಾಗುತ್ತದೆ ಎಂದರು. ಕೇಂದ್ರದ ಸರಕಾರ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಶೇ. 50ರಷ್ಟು ರೈತರ ಸಾಲ ಮನ್ನಾ ಮಾಡಿದಲ್ಲಿ ರಾಜ್ಯ ಸರಕಾರ ಸಹಕಾರಿ ಬ್ಯಾಂಕ್‌ಗಳಿಂದ ಶೇ. 50ರಷ್ಟು ರೈತರ ಸಾಲ ಮನ್ನಾ ಮಾಡುತ್ತದೆ ಎಂದು ತಿಳಿಸಿದ್ದರೂ ನಿರ್ಧಾರ ಕೈಗೊಂಡಿಲ್ಲ. ಕೇಂದ್ರ ರೈತ ಪರ ಬಜೆಟ್‌ ಮಂಡಿಸಧಿಲಾಗಿದೆ ಎಂದು ಹೇಳುತ್ತಿದ್ದು, ರೈತರ ಸಾಲ ಮನ್ನಾ ಮಾತ್ರ ಮಾಡುತ್ತಿಲ್ಲ. ಎನ್‌ಪಿಎ ಖಾತೆಯಲ್ಲಿ ರೈತರು 12 ತಿಂಗಳ ಪೈಕಿ 3 ತಿಂಗಳು ಸಾಲ ಬಾಕಿ ಮಾಡಿದಾಗ 12 ತಿಂಗಳ ಸಾಲವನ್ನು ಒಮ್ಮೆಲೆ ಕಟ್ಟಲು ಬ್ಯಾಂಕ್‌ಗಳು ನೋಟಿಸ್‌ ಕಳುಹಿಸಿವೆ. 3 ತಿಂಗಳ ಸಾಲ ಕಟ್ಟಲಾಗದ ರೈತರು 12 ತಿಂಗಳ ಸಾಲ ಒಮ್ಮೆಲೇ ಕಟ್ಟಲು ಹೇಗೆ ಸಾಧ್ಯ? ಇದು ಅವೈಜ್ಞಾನಿಕವಾಗಿದ್ದು, ಇದನ್ನು ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿದರು.

ಪ್ರಧಾನಿ ಮೋದಿಯವರ ನಡೆಯಿಂದ ರೈತರಿಗೆ, ಕಾರ್ಮಿಕರಿಗೆ, ಸಾಮಾನ್ಯ ಜನರಿಗೆ ಸಾಕಷ್ಟು ತೊಂದರೆಗಳಾಗಿವೆ. ಲೋಕಸಭೆಯ ಚುನಾವಣೆಯ ವೇಳೆ ಗೌತಮ್‌ ಅದಾನಿ, ಅಂಬಾನಿ ಅವರಿಂದ ಹಣ ಪಡೆದು ಹೆಚ್ಚಿನ ಪ್ರಚಾರ ನೀಡಿದರು. ಈಗ ಉದ್ಯಮಿಗಳ ಹಣ ಹಿಂದಿರುಗಿಸುವಲ್ಲಿ ಇಕ್ಕಟ್ಟಿಗೆ ಸಿಲುಕಿ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.

ರಾಷ್ಟ್ರದ ಗಮನವನ್ನು ಬೇರೆಡೆ ಸೆಳೆದು ನಮ್ಮಲ್ಲಿಯೇ ಕಪ್ಪು ಹಣ ಇರುವುದಾಗಿ ತೋರಿಸಿ ಉದ್ಯಮಿಗಳ 1.14 ಲಕ್ಷ ಕೋಟಿ ರೂ. ಅನ್ನು ಮನ್ನಾ ಅಥವಾ ಬ್ಲ್ಯಾಕ್‌ಲಿಸ್ಟ್‌ ಹಾಕಿದ್ದಾರೆ. ಅಲ್ಲದೇ ಜಿಯೋ ಸಿಮ್‌ ಮೂಲಕ ಯುವಕರು 24 ಗಂಟೆಗಳಲ್ಲಿ 18 ಗಂಟೆಗಳ ಕಾಲ ಅಂತರ್ಜಾಲದಲ್ಲೇ ತೊಡಗಿಕೊಳ್ಳುವಂತೆ ಮಾಡಿದ್ದಾರೆ. 1.14 ಲಕ್ಷ ಕೋಟಿ ರೂ. ಮನ್ನಾ ಅಥವಾ ಬ್ಲ್ಯಾಕ್‌ ಲಿಸ್ಟ್‌ ಹಾಕಿರುವ ಬಗ್ಗೆ ದೇಶದ ಜನರಿಗೆ ತಿಳಿದಿದ್ದರೆ ಬೀದಿಗಿಳಿದು ಹೋರಾಟ ಮಾಡುತ್ತಿದ್ದರು. ಪ್ರಧಾನಿ ಹಾಗೂ ಅಮಿತ್‌ ಶಾ ಅವರು ಪಕ್ಷದ ಮುಖಂಡರ ಕಪ್ಪು ಹಣವನ್ನು ವ್ಯವಸ್ಥಿತವಾಗಿ ರೂಪಾಂತರಗೊಳಿಸಿದ್ದಾರೆ ಎಂದು ಆರೋಪಿಸಿದರು.

ಉದ್ಯಮಿಗಳ ಪರವಾಗಿ ಪ್ರಧಾನಿಯವರು ನಿಂತಿದ್ದು, ಗೌತಮ್‌ ಅದಾನಿ ಅವರ ಮೇಲೆ ಪರಿಸರ ನಾಶದ ಹಿನ್ನೆಲೆಯಲ್ಲಿ ಯುಪಿಎ ಸರಕಾರ 200 ಕೋಟಿ ರೂ. ದಂಡ ಹೇರಿತ್ತು. ಆದರೆ, ಅದನ್ನು ಪ್ರಧಾನಿಯವರು ಹಿಂಪಡೆ ದಿದ್ದಾರೆ. ಆರ್‌ಬಿಐ ಗವರ್ನರ್‌ ರಘುರಾಮ್‌ ಅವರ ಬದಲಿಗೆ ಕಾರ್ಯತಂತ್ರ ರೂಪಿಸಿ ಊರ್ಜಿತ್‌ ಪಟೇಲ್‌ ನೇಮಿಸಿ ಅವ್ಯವಹಾರ ನಡೆಸಲು ಅವರನ್ನು ಕಪಿಮುಷ್ಟಿಯಲ್ಲಿರಿಸಿದೆ. ಪ್ರಧಾನ ಮಂತ್ರಿ ಫಸಲ್‌ ವಿಮಾ ಯೋಜನೆ ಕೈಗೊಂಡು 15,000 ಕೋಟಿ ರೂ. ಹಣ ಇದಕ್ಕೆ ಇರಿಸಲಾಗಿದ್ದು, ಇದರ ಬಗ್ಗೆ ಚರ್ಚೆಯಾಗು ತ್ತಿದೆ ಎಂದರು.

ಕಾಂಗ್ರೆಸ್‌ ಮುಖಂಡರಾದ ಇಬ್ರಾಹಿಂ ಕೋಡಿಜಾಲ್‌, ಉಮಾನಾಥ ಶೆಟ್ಟಿ, ನವೀನ್‌ ಕುಮಾರ್‌ ರೈ, ಭರತೇಶ್‌ ಅಮಿನ್‌, ನೀರಜ್‌ಪಾಲ್‌, ನಿತ್ಯಾನಂದ ಶೆಟ್ಟಿ, ಸಂತೋಷ್‌ ಶೆಟ್ಟಿ, ಅಶೋಕ್‌ ಚೂಂತಾರು, ಆನಂದ ರಾವ್‌, ನಝೀರ್‌ ಬಜಾಲ್‌ ಮೊದಲಾದವರು ಉಪಸ್ಥಿತರಿದ್ದರು.

ಅವೈಜ್ಞಾನಿಕ ವಿಮಾ ಯೋಜನೆ
ಬೆಳೆ ನಷ್ಟದಿಂದಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಇದಕ್ಕೆ ಸರಕಾರ ಫಸಲು ವಿಮಾ ಯೋಜನೆ ತಂದಿಟ್ಟು, ಉದ್ಯಮಿಗಳಿಗೆ ದುಡ್ಡು ಕೊಡಲು ವ್ಯವಸ್ಥೆ ಮಾಡಿದಂತಿದೆ. ಈ ಯೋಜನೆಯಡಿ ಒಂದು ಹೋಬಳಿಯಲ್ಲಿ ಹೋಬಳಿ ಮಟ್ಟದ ಪೂರ್ತಿ ಕೃಷಿ ನಾಶವಾದಲ್ಲಿ ಮಾತ್ರ ರೈತರಿಗೆ ವಿಮೆ ಸಿಗುತ್ತದೆ. ಇದು ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಇದರಿಂದ ರೈತರಿಗೆ ಯಾವುದೇ ಲಾಭವಿಲ್ಲ. ಹೋಬಳಿ ಮಟ್ಟದ ಬದಲಾಗಿ ವ್ಯಕ್ತಿಗತವಾಗಿ ಬೆಳೆ ನಷ್ಟವಾದಲ್ಲಿ ರೈತರಿಗೆ ಫಸಲು ವಿಮಾ ಯೋಜನೆಯಡಿ ಪರಿಹಾರ ದೊರಕಬೇಕು. 15,000 ಕೋಟಿ ರೂ. ಬಜೆಟ್‌ನಲ್ಲಿರಿಸಿರುವ ಪ್ರಧಾನಿ ಗೌತಮ್‌ ಅದಾನಿ ಅವರ ಸಂಸ್ಥೆಗೆ ಲಾಭ ಮಾಡಲು ವ್ಯವಸ್ಥೆಯನ್ನು ಹಾಳು ಮಾಡಿದ್ದಾರೆ ಎಂದು ದೂರಿದರು.

ಟಾಪ್ ನ್ಯೂಸ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewqwqe

Pilikula; ಎ. 29, ಮೇ ತಿಂಗಳ ಎಲ್ಲ ಸೋಮವಾರವೂ ಪಿಲಿಕುಳ ಮುಕ್ತ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

6-court

Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.