Udayavni Special

ಸ್ಟೇಟ್‌ಬ್ಯಾಂಕ್‌ನಿಂದ ಬಸ್‌ ನಿಲ್ದಾಣ ಸ್ಥಳಾಂತರಕ್ಕೆ ಆಗ್ರಹ


Team Udayavani, Dec 22, 2018, 12:07 PM IST

22-december-8.gif

ಮಹಾನಗರ : ನಗರದ ಹೃದಯಭಾಗವಾದ ಸ್ಟೇಟ್‌ಬ್ಯಾಂಕ್‌ನಿಂದ ಸರ್ವಿಸ್‌ ಹಾಗೂ ಸಿಟಿ ಬಸ್‌ ನಿಲ್ದಾಣಗಳನ್ನು ಹೊರಗೆ ಸ್ಥಳಾಂತರ ಮಾಡಿದರೆ ಟ್ರಾಫಿಕ್‌, ಫುಟ್‌ಪಾತ್‌, ಪಾರ್ಕಿಂಗ್‌ ಸಮಸ್ಯೆಗಳಿಗೆ ಪರಿಹಾರ ಕಾಣಲು ಸಾಧ್ಯ ಎಂದು  ಸದಾಶಿವ ಎಂಬವರು ಸಲಹೆ ನೀಡಿದರು.

ನಗರದ ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ನಡೆದ ಫೋನ್‌-ಇನ್‌ ಕಾರ್ಯಕ್ರಮದಲ್ಲಿ ಕರೆ ಮಾಡಿ ಮಾತನಾಡಿದ ಅವರು, ನಗರದ ಸ್ಟೇಟ್‌ಬ್ಯಾಂಕ್‌ಗೆ ಬರುವ ವಾಹನಗಳನ್ನು ಏಕಮುಖ ಸಂಚಾರ ಮಾಡುವ ಬಗ್ಗೆ ಇತ್ತೀಚೆಗೆ ನಡೆದ ಆರ್‌ ಟಿಎ ಸಭೆಯಲ್ಲಿ ಸಲಹೆಗಳು ಬಂದಿದ್ದವು. ಇದರಿಂದ ತಾತ್ಕಾಲಿಕವಾಗಿ ಸಮಸ್ಯೆ ಪರಿಹಾರವಾಗಬಲ್ಲದು. ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಬಸ್‌ ನಿಲ್ದಾಣವನ್ನೇ ಸ್ಟೇಟ್‌ ಬ್ಯಾಂಕ್‌ನಿಂದ ಹೊರಗೆ ಕೊಂಡೊಯ್ಯಬೇಕು 
ಈ ಬಗ್ಗೆ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಇದಕ್ಕೆ ಪೊಲೀಸ್‌ ಕಮಿಷನರ್‌ ಟಿ.ಆರ್‌. ಸುರೇಶ್‌ ಪ್ರತಿಕ್ರಿಯಿಸಿ, ನಗರದ ಸ್ಟೇಟ್‌ಬ್ಯಾಂಕ್‌ ನಿಲ್ದಾಣವನ್ನು ಸ್ಥಳಾಂತರ ಮಾಡಬೇಕು ಎಂಬುದು ನಮ್ಮ ಇಚ್ಛೆಯೂ ಹೌದು. ಇದಕ್ಕೆ ಎಲ್ಲ ಇಲಾಖೆ ಹಾಗೂ ಸಾರ್ವಜನಿಕರ ಸಹಕಾರ ಅಗತ್ಯ ಎಂದರು.

ನಗರದ ಪೊಲೀಸ್‌ ಠಾಣೆಯ ಸುತ್ತಮುತ್ತ ಹಲವು ಸಮಯದ ಹಿಂದೆ ಮುಟ್ಟುಗೋಲು ಹಾಕಿದ ವಾಹನಗಳಿದ್ದು, ಅವು ತುಕ್ಕು ಹಿಡಿಯುತ್ತವೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಬರ್ಕೆ ನಿವಾಸಿಯೊಬ್ಬರು ದೂರು ನೀಡಿದರು. ಇದಕ್ಕೆ ಕಮಿಷನರ್‌ ಉತ್ತರಿಸಿ, ಪೊಲೀಸ್‌ ಠಾಣೆಗಳಲ್ಲಿ ಕೆಲವೊಂದು ಪ್ರಕರಣಗಳು ಕೋರ್ಟ್‌ನಲ್ಲಿದ್ದು ಅದಕ್ಕೆ ಸಂಬಂಧಿಸಿದ ಹಳೆಯ ವಾಹನಗಳು ಠಾಣೆಯಲ್ಲಿವೆ. ಇನ್ನು ಕೆಲವು ವಾಹನಗಳಿಗೆ ಕೋರ್ಟ್‌ ಬಿಡುಗಡೆಗೊಳಿಸಿ ಅನುಮತಿ ನೀಡಿದರೂ ಅದರ ವಾರಸುದಾರರು ಪಡೆದುಕೊಳ್ಳಲು ಬಂದಿಲ್ಲ. ಇನ್ನೊಂದೆಡೆ ಕೆಲವು ವಾಹನಗಳ ಮಾಲಕರ ಮಧ್ಯೆಯೂ ಗೊಂದಲವಿದೆ. ಹಕ್ಕು ಸ್ವಾಮ್ಯವಿಲ್ಲದ ವಾಹನಗಳನ್ನು ಶೀಘ್ರದಲ್ಲೇ ಟೆಂಡರ್‌ ಹಾಕಲಾಗುವುದು ಎಂದರು.

ಜೋಕಟ್ಟೆ ನಿವಾಸಿಯೊಬ್ಬರು ಕರೆ ಮಾಡಿ, ಅಬ್ದುಲ್‌ ಸಲಾಂ ಎಂಬವರು  ಪತ್ತೆಯಾಗಿದ್ದು, ಇನ್ನೂ ಪತ್ತೆಯಾಗಿಲ್ಲ. ಪ್ರಕರಣ ಯಾವ ಹಂತದಲ್ಲಿದೆ ಎಂದು ಕೇಳಿದ್ದಕ್ಕೆ ಉತ್ತರಿಸಿದ ಕಮಿಷನರ್‌ ‘ಕಚೇರಿಗೆ ಬಂದು ಮಾತನಾಡಿ, ಈ ಬಗ್ಗೆ ವಿವರ ನೀಡಲಾಗುವುದು’ ಎಂದರು.

ಟ್ರಾಫಿಕ್‌ ಸಿಬಂದಿ ನೇಮಿಸಿ
ಕಾವೂರು ಜಂಕ್ಷನ್‌ನಲ್ಲಿ ನಾಲ್ಕು ಕಡೆಯಿಂದ ವಾಹನಗಳು ಬರುತ್ತಿರುವುದರಿಂದ ತೀರಾ ಅಪಘಾತ ವಲಯ ಆಗಿದೆ. ಬೆಳಗ್ಗೆ ಮತ್ತು ಸಂಜೆ ಹೊತ್ತು ಟ್ರಾಫಿಕ್‌ ದಟ್ಟಣೆಯಿರುವಾಗ ಈ ಪ್ರದೇಶದಲ್ಲಿ ಟ್ರಾಫಿಕ್‌ ಸಿಬಂದಿ ನೇಮಿಸಿದರೆ ಅವಘಡ ತಡೆಯಲು ಸಾಧ್ಯವಿದೆ ಎಂದು ಮಹಿಳೆಯೊಬ್ಬರು ಸಲಹೆ ನೀಡಿದರು.

ಕೋಡಿಕಲ್‌ ಬಸ್‌ ಸಮಸ್ಯೆ
ಕೋಡಿಕಲ್‌ಗೆ ಪರ್ಮಿಟ್‌ ಇರುವ 61ನಂಬರ್‌ ಬಸ್‌ ಬರುತ್ತಿಲ್ಲ. ಕೇಳಿದರೆ ದುರಸ್ತಿಗೆ ಹೋಗಿದೆ ಎನ್ನುತ್ತಾರೆ. ಪರ್ಯಾಯ ಬಸ್‌ ಕೂಡಾ ಹಾಕಲ್ಲ ಎಂದು ಸಾರ್ವಜನಿಕರೊಬ್ಬರು ನೀಡಿದ ದೂರಿಗೆ ಸ್ಪಂದಿಸಿದ ಕಮಿಷನರ್‌ ಕೂಡಲೇ ಆ ಬಸ್‌ಗಳ ಪರವಾನಿಗೆ ಮುಟ್ಟುಗೋಲು ಹಾಕಲು ಆರ್‌ ಟಿಒಗೆ ಪತ್ರ ಬರೆಯುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಮಂಗಳೂರು ನಗರ ಕಾನೂನು ಸುವ್ಯವಸ್ಥಾ ವಿಭಾಗದ ಡಿಸಿಪಿ ಹನುಮಂತರಾಯ, ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ಉಮಾಪ್ರಶಾಂತ್‌, ಟ್ರಾಫಿಕ್‌ ಇನ್‌ ಸ್ಪೆಕ್ಟರ್‌ ಶಿವಪ್ರಕಾಶ್‌, ಅಮಾನುಲ್ಲಾ, ಎಸ್‌ಐ ರವಿ ಪವಾರ್‌, ಪಿ. ಯೋಗೇಶ್ವರ, ಎಚ್‌ಸಿ ಪುರುಷೋತ್ತಮ, ಬಸ್‌ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್‌ ಉಪಸ್ಥಿತರಿದ್ದರು.

ಪ್ರತಿಭಟನೆ ನೆಪದಲ್ಲಿ ತೊಂದರೆ ನೀಡಬೇಡಿ
ವೆನ್ಲಾಕ್‌ನಲ್ಲಿ ಗುತ್ತಿಗೆಯಾಧಾರದಲ್ಲಿರುವ ಡಿ ಗ್ರೂಪ್‌ ನೌಕರರು ವೇತನಕ್ಕೆ ಸಂಬಂಧಿಸಿ ಪ್ರತಿಭಟನೆ ಮಾಡುತ್ತಿದ್ದಾಗ ಪೊಲೀಸರು ಅವರ ವಿರುದ್ಧ ಕೇಸು ದಾಖಲಿಸಿದ್ದಾರೆ ಎಂದು ಮಹಿಳೆಯೊಬ್ಬರು ದೂರಿದರು ಇದಕ್ಕೆ ಪ್ರತಿಕ್ರಿಯೆ ನೀಡಿದ ಕಮಿಷನರ್‌ ವೇತನಕ್ಕೆ ಸಂಬಂಧಿಸಿ ಯಾವುದೇ ಸಮಸ್ಯೆಯಿದ್ದರೂ ಸಂಬಂಧಪಟ್ಟ ಗುತ್ತಿಗೆ ಸಂಸ್ಥೆಯ ವಿರುದ್ಧ ದೂರು ನೀಡಿ. ಅದು ಬಿಟ್ಟು ಪ್ರತಿಭಟನೆ ನೆಪದಲ್ಲಿ ಸಾರ್ವಜನಿಕರಿಗೆ, ರೋಗಿಗಳಿಗೆ ತೊಂದರೆ ಮಾಡುವುದು ಸರಿಯಲ್ಲ. ಹಾಗೇನು ತೊಂದರೆಯಿದ್ದರೆ ನೇರ ಇಲಾಖೆಯ ಪ್ರಮುಖರನ್ನು ಭೇಟಿಯಾಗಿ ಸಮಸ್ಯೆ ತಿಳಿಸಿ ಎಂದು ಸಲಹೆ ನೀಡಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಚಿತ್ರೀಕರಣದ ವೇಳೆ ಹೃದಯಾಘಾತ: ಹಿರಿಯ ನಟ ರಾಕ್ ಲೈನ್ ಸುಧಾಕರ್ ನಿಧನ

ಚಿತ್ರೀಕರಣದ ವೇಳೆ ಹೃದಯಾಘಾತ: ಹಿರಿಯ ನಟ ರಾಕ್ ಲೈನ್ ಸುಧಾಕರ್ ನಿಧನ

ಭ್ರಷ್ಟಾಚಾರ ಆರೋಪ: ಸಿಎಂ ಬಿಎಸ್ ವೈ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಕಾಂಗ್ರೆಸ್ ನಿರ್ಧಾರ

ಭ್ರಷ್ಟಾಚಾರ ಆರೋಪ:ಸಿಎಂ ಬಿಎಸ್ ವೈ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಕಾಂಗ್ರೆಸ್ ನಿರ್ಧಾರ

ಡ್ರಗ್ಸ್‌ ತನಿಖಾ ಮಾಹಿತಿ ಲೀಕ್‌: ಎಸಿಪಿ ಸೇರಿ ಇಬ್ಬರ ಅಮಾನತು

ಡ್ರಗ್ಸ್‌ ತನಿಖಾ ಮಾಹಿತಿ ಲೀಕ್‌: ಎಸಿಪಿ ಸೇರಿ ಇಬ್ಬರ ಅಮಾನತು

ಉಪ್ಪಿನಂಡಿ ಕೊಣಾಲು: ಪತಿಯಿಂದ ಪತ್ನಿ, ಪತ್ನಿಯ ಚಿಕ್ಕಮ್ಮನ ಮೇಲೆ ಆಸಿಡ್ ದಾಳಿ

ಉಪ್ಪಿನಂಗಡಿ ಕೊಣಾಲು: ಪತಿಯಿಂದ ಪತ್ನಿ, ಪತ್ನಿಯ ಚಿಕ್ಕಮ್ಮನ ಮೇಲೆ ಆಸಿಡ್ ದಾಳಿ

ಹಿರಿಯ ವಿದ್ವಾಂಸ ಇಬ್ರಾಹೀಂ ಮುಸ್ಲಿಯಾರ್ ಬೇಕಲ್ ನಿಧನ

ಹಿರಿಯ ವಿದ್ವಾಂಸ ಇಬ್ರಾಹೀಂ ಮುಸ್ಲಿಯಾರ್ ಬೇಕಲ್ ನಿಧನ

ಮಗ ಬಂದೇ ಬರುತ್ತಾನೆ‌.. ಮಗನನ್ನು ಕಳೆದುಕೊಂಡ ಸುರೇಶ್ ಅಂಗಡಿ ತಾಯಿಯ ರೋದನೆ

ಮಗ ಬಂದೇ ಬರುತ್ತಾನೆ‌.. ಮಗನನ್ನು ಕಳೆದುಕೊಂಡ ಸುರೇಶ್ ಅಂಗಡಿ ತಾಯಿಯ ರೋದನೆ

ಗುಜರಾತ್ ನ ಒಎನ್​ಜಿಸಿ ಘಟಕದಲ್ಲಿ ಭಾರಿ ಸ್ಫೋಟ : ಬೆಂಕಿಯ ಕೆನ್ನಾಲಿಗೆಗೆ ಬೆಚ್ಚಿದ ಜನತೆ

ಗುಜರಾತ್ ನ ಒಎನ್​ಜಿಸಿ ಘಟಕದಲ್ಲಿ ಭಾರಿ ಸ್ಫೋಟ : ಬೆಂಕಿಯ ಕೆನ್ನಾಲಿಗೆಗೆ ಬೆಚ್ಚಿದ ಜನತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಕೋವಿಡ್ ‌ಕಾಲದಲ್ಲಿ ರಸ್ತೆ ರಾಜಕಾರಣ: ಪ್ರತಿಕ್ರಿಯಿಸಿದ ಸಂತ ಅಲೋಶಿಯಸ್ ಸಂಸ್ಥೆ

udayavani youtube

ಮಂಗಳೂರು ನಗರದ ಲೈಟ್ ಹೌಸ್ ರೋಡ್ ಗೆ ‘ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ’ ಎಂದು ಮರುನಾಮಕರಣ

udayavani youtube

District Excise Department seized Millions worth of Marijuana | Udayavani

udayavani youtube

Hospet : Tungabhadra Dam Gates Are Opened | TB Dam | Udayavani

udayavani youtube

ಸುರತ್ಕಲ್ ಕಳ್ಳತನ ಪ್ರಕರಣ: ಕೇರಳದ ಇಬ್ಬರು ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರುಹೊಸ ಸೇರ್ಪಡೆ

ಕನ್ನಡ-ಮರಾಠಿಗರೊಂದಿಗೆ ಸುಮಧುರ ಸಂಬಂಧ ಹೊಂದಿದ್ದ ಸುರೇಶ ಅಂಗಡಿ

ಕನ್ನಡ-ಮರಾಠಿಗರೊಂದಿಗೆ ಸುಮಧುರ ಸಂಬಂಧ ಹೊಂದಿದ್ದ ಸುರೇಶ ಅಂಗಡಿ

ಚಿತ್ರೀಕರಣದ ವೇಳೆ ಹೃದಯಾಘಾತ: ಹಿರಿಯ ನಟ ರಾಕ್ ಲೈನ್ ಸುಧಾಕರ್ ನಿಧನ

ಚಿತ್ರೀಕರಣದ ವೇಳೆ ಹೃದಯಾಘಾತ: ಹಿರಿಯ ನಟ ರಾಕ್ ಲೈನ್ ಸುಧಾಕರ್ ನಿಧನ

ಮೆಟ್ರೋ ಬಳಿ ಡ್ರಗ್ಸ್‌ ಮಾರಾಟ: ಇಬ್ಬರ ಸೆರೆ

ಮೆಟ್ರೋ ಬಳಿ ಡ್ರಗ್ಸ್‌ ಮಾರಾಟ: ಇಬ್ಬರ ಸೆರೆ

ಹೆಸ್ಕಾಂ ಕಚೇರಿಗೆ ತೆರಳುವ ಮಾರ್ಗ ಕೆಸರುಮಯ :

ಹೆಸ್ಕಾಂ ಕಚೇರಿಗೆ ತೆರಳುವ ಮಾರ್ಗ ಹೊಂಡಗುಂಡಿ : ಗ್ರಾಹಕರು ನೀರಿನಲ್ಲಿ ಜಾರಿ ಬೀಳುವ ಸಾಧ್ಯತೆ

ಡಯಾಲಿಸಿಸ್‌ ರೋಗಿಗೆ ಚಿಕಿತ್ಸೆ ಸಿಗದೆ ನರಳಾಟ : ಮನೆಗೆ ವಾಪಸ್ಸಾದ ರೋಗಿ

ಡಯಾಲಿಸಿಸ್‌ ರೋಗಿಗೆ ಚಿಕಿತ್ಸೆ ಸಿಗದೆ ನರಳಾಟ : ಮನೆಗೆ ವಾಪಸ್ಸಾದ ರೋಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.