Umrahಕ್ಕೆ ತೆರಳಿದ್ದವರ ಟ್ರಾಲಿ ಬ್ಯಾಗ್ ನಿಂದ ಹಣ ಕಳವು; ವಿಮಾನಯಾನ ಸಂಸ್ಥೆಯ ಮೇಲೆ ಆರೋಪ

Team Udayavani, Jun 19, 2024, 12:54 PM IST

10-mng

ಮಂಗಳೂರು: ಮಂಗಳೂರಿನಿಂದ ಉಮ್ರಾ ಯಾತ್ರೆಗೆ ಹೋದವರ ಟ್ರಾಲಿ ಬ್ಯಾಗ್ ನಿಂದ 26,432 ಸೌದಿ ರಿಯಾಲ್(6 ಲ.ರೂ) ಕಳವಾಗಿದ್ದು, ಇದಕ್ಕೆ ಖಾಸಗಿ ವಿಮಾನ ಯಾನ ಸಂಸ್ಥೆಯೇ ಕಾರಣವಾಗಿದ್ದು ಅದರ ಸಿಬಂದಿಯೇ ಹಣ ಕಳವು ಮಾಡಿರುವ ಸಂಶಯ ಇದೆ ಎಂದು ಹಣ ಕಳೆದುಕೊಂಡ ಮಂಗಳೂರಿನ ಬದ್ರುದ್ದೀನ್ ಜೂ. 19ರ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದ್ದಾರೆ.

ಘಟನೆಯ ವಿವರ: ಎ.30 ರಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಬೈ ಮಾರ್ಗವಾಗಿ ಸೌದಿ ಅರೇಬಿಯಾದ ಜೆದ್ದಾಕ್ಕೆ ಇತರ 34 ಮಂದಿಯೊಂದಿಗೆ  ಇಂಡಿಗೋ ವಿಮಾನದಲ್ಲಿ ಉಮ್ರಾ ಯಾತ್ರೆಗೆ ಹೊರಟಿದ್ದೆ. ಅದರಲ್ಲಿ 11 ಮಂದಿಯ ಜವಾಬ್ದಾರಿಯನ್ನು ಟ್ರಾವೆಲಿಂಗ್ ಏಜೆನ್ಸಿಯವರು ತನಗೆ ನೀಡಿದ್ದರು. ಅವರ ಹಣವನ್ನು ತನ್ನ ಬ್ಯಾಗ್ ನಲ್ಲೆ ಇಟ್ಟುಕೊಂಡಿದ್ದೆ ಎಂದರು.

ಮುಂದುವರೆದು ಮಾತನಾಡಿ, ವಿಮಾನ ಯಾನ ಸಂಸ್ಥೆಯ ಸಿಬಂದಿ ಬ್ಯಾಗ್ ನ್ನು ಎರಡು ಬಾರಿ ಸ್ಕ್ಯಾನ್ ಮಾಡಿದ್ದರು. ಮೇ.1 ರಂದು ರಾತ್ರಿ  ಜೆದ್ದಾ ತಲುಪಿ ವಿಮಾನ ನಿಲ್ದಾಣದಿಂದ ಹೊರಗಡೆ ಹೋಗಿ ನೋಡಿದಾಗ ಬ್ಯಾಗ್ ಗೆ ಬೀಗ ಹಾಕಿದ್ದು ಗಮನಕ್ಕೆ ಬಂದಿದೆ. ಒಳಗಡೆ ನೋಡಿದಾಗ ಅದರಲ್ಲಿದ್ದ ಹಣ ಕಳವಾಗಿತ್ತು ಎಂದರು.

ಘಟನೆಯ ಬಗ್ಗೆ ಈಗಾಗಲೇ ಪೊಲೀಸ್ ದೂರು ದಾಖಲಾಗಿದೆ. ಜಿಲ್ಲಾಧಿಕಾರಿಯವರಿಗೂ ಮನವಿ ಸಲ್ಲಿಸಲಾಗಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಂತಹ ಹಲವು ಘಟನೆಗಳು ನಡೆಯುತ್ತಿವೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ವಿಮಾನ ನಿಲ್ದಾಣದ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಹೇಳಿದರು.

ಟಾಪ್ ನ್ಯೂಸ್

Fraud Case ಕ್ರಿಪ್ಟೊ ಕರೆನ್ಸಿ ಹೂಡಿಕೆ ನೆಪದಲ್ಲಿ 10 ಲ.ರೂ. ವಂಚನೆ

Fraud Case ಇನ್‌ಸ್ಟಾಗ್ರಾಂ ಖಾತೆಗೆ ಸಂದೇಶ ಕಳುಹಿಸಿ 3.50 ಲಕ್ಷ ರೂ. ವಂಚನೆ

Mangaluru “ಮುಡಾ’ ಕಚೇರಿಯಲ್ಲಿ ಶಾರ್ಟ್ ಸರ್ಕ್ಯೂಟ್

Missing Case ಪತಿಗೆ ಮೆಸೇಜ್‌ ಮಾಡಿ ಪತ್ನಿ ನಾಪತ್ತೆ

Theft Case ಕಾಲೇಜು ವಿದ್ಯಾರ್ಥಿಯ ಮೊಬೈಲ್‌ ಕಳವು

Ayyanakatte School: ಅಕ್ಷರ ದಾಸೋಹದ ಸಾಮಗ್ರಿ ನಾಯಿಪಾಲು!

Theft Case ವರ್ಕ್‌ಶಾಪ್‌ನಿಂದ ಲಕ್ಷಾಂತರ ಮೌಲ್ಯದ ಪಂಪ್‌ಸೆಟ್‌ ಕಳ್ಳತನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Fraud Case ಕ್ರಿಪ್ಟೊ ಕರೆನ್ಸಿ ಹೂಡಿಕೆ ನೆಪದಲ್ಲಿ 10 ಲ.ರೂ. ವಂಚನೆ

Fraud Case ಕ್ರಿಪ್ಟೊ ಕರೆನ್ಸಿ ಹೂಡಿಕೆ ನೆಪದಲ್ಲಿ 10 ಲ.ರೂ. ವಂಚನೆ

Mangaluru “ಮುಡಾ’ ಕಚೇರಿಯಲ್ಲಿ ಶಾರ್ಟ್ ಸರ್ಕ್ಯೂಟ್

Mangaluru “ಮುಡಾ’ ಕಚೇರಿಯಲ್ಲಿ ಶಾರ್ಟ್ ಸರ್ಕ್ಯೂಟ್

Missing Case ಪತಿಗೆ ಮೆಸೇಜ್‌ ಮಾಡಿ ಪತ್ನಿ ನಾಪತ್ತೆ

Missing Case ಪತಿಗೆ ಮೆಸೇಜ್‌ ಮಾಡಿ ಪತ್ನಿ ನಾಪತ್ತೆ

ಮಂಗಳೂರು ಪಾಲಿಕೆ; “ಕಟ್ಟಡ ನಿರ್ಮಾಣ ನಿಯಮಾವಳಿಯಲ್ಲಿ ಬದಲಾವಣೆ?

ಪ್ರಕರಣ ಇಳಿಮುಖ; ಶಿಶು – ತಾಯಿ ಮರಣ ಗಣನೀಯ ಇಳಿಕೆ

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

Fraud Case ಕ್ರಿಪ್ಟೊ ಕರೆನ್ಸಿ ಹೂಡಿಕೆ ನೆಪದಲ್ಲಿ 10 ಲ.ರೂ. ವಂಚನೆ

Fraud Case ಕ್ರಿಪ್ಟೊ ಕರೆನ್ಸಿ ಹೂಡಿಕೆ ನೆಪದಲ್ಲಿ 10 ಲ.ರೂ. ವಂಚನೆ

Fraud Case ಇನ್‌ಸ್ಟಾಗ್ರಾಂ ಖಾತೆಗೆ ಸಂದೇಶ ಕಳುಹಿಸಿ 3.50 ಲಕ್ಷ ರೂ. ವಂಚನೆ

Fraud Case ಇನ್‌ಸ್ಟಾಗ್ರಾಂ ಖಾತೆಗೆ ಸಂದೇಶ ಕಳುಹಿಸಿ 3.50 ಲಕ್ಷ ರೂ. ವಂಚನೆ

Mangaluru “ಮುಡಾ’ ಕಚೇರಿಯಲ್ಲಿ ಶಾರ್ಟ್ ಸರ್ಕ್ಯೂಟ್

Mangaluru “ಮುಡಾ’ ಕಚೇರಿಯಲ್ಲಿ ಶಾರ್ಟ್ ಸರ್ಕ್ಯೂಟ್

Missing Case ಪತಿಗೆ ಮೆಸೇಜ್‌ ಮಾಡಿ ಪತ್ನಿ ನಾಪತ್ತೆ

Missing Case ಪತಿಗೆ ಮೆಸೇಜ್‌ ಮಾಡಿ ಪತ್ನಿ ನಾಪತ್ತೆ

Theft Case ಕಾಲೇಜು ವಿದ್ಯಾರ್ಥಿಯ ಮೊಬೈಲ್‌ ಕಳವು

Theft Case ಕಾಲೇಜು ವಿದ್ಯಾರ್ಥಿಯ ಮೊಬೈಲ್‌ ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.