ಮೂಡುಬಿದಿರೆ ಮಾಜಿ ಶಾಸಕ ರತನ್ ಕುಮಾರ್ ಕಟ್ಟೇಮಾರ್ ನಿಧನ
Team Udayavani, Nov 8, 2020, 11:21 AM IST
ಮೂಡುಬಿದಿರೆ: ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ರತನ್ ಕುಮಾರ್ ಕಟ್ಟೇಮಾರ್ (82) ಅವರು ಇಂದು ನಿಧನ ಹೊಂದಿದರು.
1967ರಿಂದ 1972ರವರೆಗೆ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ರತನ್ ಕುಮಾರ್ ಕಟ್ಟೇಮಾರ್ ಅವರು ಸ್ವತಂತ್ರ ಪಕ್ಷದಿಂದ ಸ್ಪರ್ಧಿಸಿದ್ದರು. ಕಾಂಗ್ರೆಸ್ ನ ಬಿ.ಗಂಗಾಧರ ದಾಸ್ ವಿರುದ್ಧ ಜಯ ಗಳಿಸಿದ್ದರು. ನಂತರ 1972 ರ ಚುನಾವಣೆಯಲ್ಲಿ ಅವರು ಸುರತ್ಕಲ್ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು.
ಇದನ್ನೂ ಓದಿ:ತಮಿಳುನಾಡು: ಮಾಜಿ ಐಎಎಸ್ ಅಧಿಕಾರಿ ಶಶಿಕಾಂತ್ ಸೆಂಥಿಲ್ ರಾಜಕೀಯ ಪ್ರವೇಶಕ್ಕೆ ವೇದಿಕೆ ಸಜ್ಜು
ರತನ್ ಕುಮಾರ್ ಕಟ್ಟೇಮಾರ್ ನಿಧನಕ್ಕೆ ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಕೆ. ಅಭಯಚಂದ್ರ, ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.