ಬಾಳೆಲೆ ಬದಲಿಗೆ ಬಟ್ಟಲಿನ ಬಳಕೆ ಆರಂಭ, ಶುಚಿತ್ವಕ್ಕೆ ಆದ್ಯತೆ
Team Udayavani, Feb 10, 2021, 3:12 PM IST
ಕಟೀಲು : ಇಲ್ಲಿ ನ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಅನ್ನಪ್ರಸಾದಕ್ಕೆ ಸ್ಟೀಲ್ ಬಟ್ಟಲಿನ ಬಳಕೆ ಆರಂಭಿಸಲಾಗಿದೆ. ಕಟೀಲು ಕ್ಷೇತ್ರದಲ್ಲಿ ದಿನಂಪ್ರತಿ ಸಹಸ್ರಾರು ಮಂದಿ ತ್ರಿಕಾಲ ನಡೆಯುವ ಅನ್ನಪ್ರಸಾದವನ್ನು ಸ್ವೀಕರಿಸುತ್ತಾರೆ. ಬೆಳಗ್ಗೆ ಗಂಜಿ ಊಟ, ಮಧ್ಯಾಹ್ನ ಹಾಗೂ ರಾತ್ರಿ ಪಾಯಸ ಸಹಿತ ಊಟವನ್ನು ನೀಡಲಾಗುತ್ತಿದ್ದು, ಭಕ್ತರ ಅನ್ನಪ್ರಸಾದಕ್ಕೆ ಬಾಳೆ ಎಲೆಯನ್ನು ಬಳಸಲಾಗುತ್ತಿತ್ತು.
ಇಲ್ಲಿ ವರ್ಷಕ್ಕೆ ಸುಮಾರು ಇಪ್ಪತ್ತೈದು ಲಕ್ಷ ಮಂದಿ ಅನ್ನಪ್ರಸಾದ ಸ್ವೀಕರಿಸುತ್ತಾರೆ. ಕ್ಷೇತ್ರದಲ್ಲಿ ಸ್ವತ್ಛತೆ ಕಾಪಾಡಿ ಕೊಳ್ಳುವುದು ಮತ್ತು ತ್ಯಾಜ್ಯ ವಿಲೇವಾರಿ ಒಂದು ಸಮಸ್ಯೆಯೇ ಆಗಿತ್ತು. ದ್ರವ ತ್ಯಾಜ್ಯ ಘಟಕವನ್ನು ಆರಂಭಿ ಸಿದ ಮುಜರಾಯಿ ದೇಗುಲಗಳಲ್ಲಿಯೇ ಕಟೀಲು ಮೊದಲನೆಯದ್ದು ಆಗಿದ್ದು, ಘನ ತ್ಯಾಜ್ಯ ಸಂಸ್ಕರಣ ಘಟಕದ ಯೋಜನೆ ಪ್ರಗತಿಯಲ್ಲಿದೆ. ಆರ್ಟ್ ಆಫ್ ಲಿವಿಂಗ್‌ನವರು ಬಾಳೆ ಎಲೆಗಳನ್ನು ಗೊಬ್ಬರವಾಗಿಸುವ ವ್ಯವಸ್ಥೆಯನ್ನು ನೀಡಿದ್ದರೂ, ಬಾಳೆ ಎಲೆಗಳು ಹಾಳಾಗು ವುದು, ಹರಿದುಹೋಗುವುದು ನಷ್ಟದ ವಿಚಾರವಾಗಿದ್ದರೆ, ಊಟವಾದ ಮೇಲೆ ಸ್ವತ್ಛತೆ, ವಿಲೇವಾರಿ ಕೂಡ ಶ್ರಮದ ಹಾಗೂ ಸಮಸ್ಯೆಯ ಸಂಗತಿಯಾಗುತ್ತಿತ್ತು.
ಹೊರೆಕಾಣಿಕೆಯಲ್ಲಿ ಬಂದ 15 ಸಾವಿರ ಬಟ್ಟಲು
ಮೂರು ವರುಷಗಳಿಂದ ದಿನಂಪ್ರತಿ ಎರಡು ಸಾವಿರ ಶಾಲಾ ವಿದ್ಯಾರ್ಥಿಗಳಿಗೆ ಬಟ್ಟಲಿನಲ್ಲೇ ಊಟ ನೀಡ ಲಾಗುತ್ತಿದ್ದು, ಸಾರ್ವಜನಿಕ ಭೋಜನಾಲಯದಲ್ಲೂ ಇದೀಗ ಬಟ್ಟಲನ್ನೇ ಆರಂಭಿಸಲು ಮುಂದಾಗುತ್ತಿದ್ದಂತೆ ಹಿಂದೂಸ್ಥಾನ್ ಲಿವರ್ ಲಿಮಿಟೆಡ್‌ನವರು ಎರಡು ಸಾವಿರ ಬಟ್ಟಲು ನೀಡಿದರು. ಕಳೆದ ವರ್ಷ ಬ್ರಹ್ಮಕಲಶೋತ್ಸವ ಸಂದರ್ಭ ಮಂಗಳೂರು ಭಕ್ತರು ಹದಿನೈದು ಸಾವಿರದಷ್ಟು ಸ್ಟೀಲ್ ತಟ್ಟೆಗಳನ್ನು ಹೊರೆಕಾಣಿಕೆಯೊಂದಿಗೆ ತಂದು ಸಮರ್ಪಿಸಿದ್ದರು.
ಇದನ್ನೂ ಓದಿ:ಮೋದಿ ನೇತೃತ್ವದಲ್ಲಿ ಸಮರ್ಥ, ಸಶಕ್ತ ಭಾರತ ನಿರ್ಮಾಣ: ಕೋಟ ಶ್ರೀನಿವಾಸಪೂಜಾರಿ ವಿಶ್ವಾಸ
ತಟ್ಟೆ ತೊಳೆಯಲು ಯಂತ್ರ
ಕೊರೊನಾ ಸಂದರ್ಭ ಹಾಳೆತಟ್ಟೆಗಳನ್ನು ಬಳಸ ಲಾಗುತ್ತಿದ್ದು, ಇದೀಗ ಸ್ಟೀಲ್ ಬಟ್ಟಲುಗಳ ಬಳಕೆ ಆರಂಭವಾಗಿದೆ. ಇವುಗಳನ್ನು ತೊಳೆಯಲು ಸುಮಾರು 16.5 ಲಕ್ಷ ರೂ.ಗಳ ಡಿಶ್ ವಾಶ್ ಯಂತ್ರವನ್ನು ಖರೀದಿಸಲಾಗಿದ್ದು, ಕಾರ್ಯಾರಂಭಿಸಿದೆ. ಎಲೆಯ ಬದಲು ಸ್ಟೀಲ್ ಬಟಲನ್ನು ಉಪಯೋಗಿಸಲಾಗುತ್ತಿದ್ದು, ಬಟ್ಟಲು ಸ್ವತ್ಛಗೊಳಿಸಲು ನೂತನ ಯಂತ್ರವನ್ನು ಅಳಡಿಸಲಾಗಿದೆ. ಊಟಕ್ಕೆ ಬಳಸಿದ ಬಟ್ಟಲನ್ನು ಒಂದು ಪೈಬರ್ ಟ್ರೇಯಲ್ಲಿ ಅಳವಡಿಸಿ ಯಂತ್ರಕ್ಕೆ ಕೊಡಲಾಗುತ್ತದೆ. ಯಂತ್ರದಲ್ಲಿ ಸೋಪು ಆಯಿಲ್ ಮತ್ತು ಬಿಸಿ ನೀರಿನಿಂದ ಸ್ವತ್ಛವಾಗುತ್ತದೆ. ಸ್ವತ್ಛಗೊಂಡು ಹೊರ ಬಂದ ತಟ್ಟೆಗಳನ್ನು ಮತ್ತೆ ಉಪಯೋಗಿಸಲಾಗುತ್ತದೆ.
ಕಳೆದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಮಂಗಳೂರು ಹೊರೆಕಾಣಿಕೆ ಸಮಿತಿಯವರು ದೇವಸ್ಥಾನಕ್ಕೆ ಅಗತ್ಯ ಇರುವ ಸುಮಾರು 15 ಸಾವಿರ ಸ್ಟೀಲಿನ ತಟ್ಟೆಗಳನ್ನು ನೀಡಿದ್ದರು. ಅದನ್ನು ಅನ್ನ ಪ್ರಸಾದ ನೀಡಲು ಎಲೆಯ ಬದಲಿಗೆ ಬಳಸಲಾಗುತ್ತಿದೆ. ಭಕ್ತರು ನೀಡಿದ ಬಟ್ಟಲುಗಳು ಸದ್ಬಳ ಕೆ ಯೊಂದಿಗೆ ಸ್ವತ್ಛ ತೆಯ ಸಮಸ್ಯೆಗೂ ಪರಿಹಾರ ಹುಡುಕಿದಂತಾಗಿದೆ. ಬಟ್ಟಲುಗಳನ್ನು ಬಿಸಿನೀರಿನಲ್ಲಿ ತೊಳೆಯಲು ಯಂತ್ರವನ್ನೂ ಬಳಸಲಾಗುತ್ತಿದೆ.
-ಅನಂತಪದ್ಮನಾಭ ಆಸ್ರಣ ¡, ಅರ್ಚಕರು, ಶ್ರೀ ಕ್ಷೇತ್ರ ಕಟೀಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದರೋಡೆಕೋರರನ್ನು ಅಟ್ಟಾಡಿಸಿದ ಜನರು.. ಯಾವ ಸಿನಿಮಾಗೂ ಕಡಿಮೆಯಿಲ್ಲ ಚೇಸಿಂಗ್ ದೃಶ್ಯ
ಕುಮಾರಸ್ವಾಮಿಯನ್ನು ನಂಬಬೇಡಿ, ಅವರೊಂದಿಗೆ ಹೊಂದಾಣಿಕೆ ಬೇಡ: ಬಿಜೆಪಿ ವರಿಷ್ಠರಿಗೆ ಯೋಗೀಶ್ವರ್
CoWin App ಸಮಸ್ಯೆ ! ಎರಡು ದಿನ ಲಸಿಕೆ ಹಂಚಿಕೆ ಇಲ್ಲ ! | Udayavani
ದಾನದ ಪರಿಕಲ್ಪನೆಯ ಕುರಿತು Dr. Gururaj Karajagi ಹೇಳಿದ ಕತೆ ಕೇಳಿ.. Part-3
ಕಾಯಕದಲ್ಲಿ ಕಟ್ಟಡ ಕಟ್ಟುವ ಮೇಸ್ತ್ರಿ; ಬಿಡುವಿನಲ್ಲಿ ಹಾಳೆ ಮುಟ್ಟಾಳೆ ತಯಾರಕರು
ಹೊಸ ಸೇರ್ಪಡೆ
ಗೌಡ ಲಿಂಗಾಯತರಿಗೆ 2ಎ ನೀಡಲು ಒತ್ತಾಯಿಸಿ ಬೆಂಗಳೂರು ಚಲೋಗೆ ನಿರ್ಧಾರ
ಅಲೆಮಾರಿ ಜನಾಂಗದ ಬದುಕಿನ ಯಾತನೆ
ವಿಶ್ವ ಚಾಂಪಿಯನ್ ಮಣಿಸಿ ಚಿನ್ನಕ್ಕೆ ಮುತ್ತಿಕ್ಕಿದ ಭಾರತೀಯ ಕುಸ್ತಿ ಪಟು ವಿನೇಶ್ ಪೋಗಟ್
ಮಹಾ ಸಾಧಕಿ ಮಾನಸಿ ಜೋಶಿ; ಕಾಲು ಕಳೆದುಕೊಂಡರೂ ಆತ್ಮವಿಶ್ವಾಸ ಅಡ್ಡಿಯಾಗಲಿಲ್ಲ
ಅಂಬಾನಿ ನಿವಾಸದ ಬಳಿ ಜಿಲೆಟಿನ್ ತುಂಬಿದ ಕಾರು ನಿಲ್ಲಿಸಿದ್ದು ನಾವೇ ಎಂದ ಜೈಶ್-ಉಲ್-ಹಿಂದ್