ಖಾಸಗಿ ಬಸ್ ಆರಂಭ: ಮಂಗಳೂರಿನಲ್ಲಿ ಬಸ್ ಗಳಿಗೆ ಸ್ಯಾನಿಟೈಸೇಷನ್
Team Udayavani, Jun 1, 2020, 9:59 AM IST
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು ಎರಡುವರೆ ತಿಂಗಳ ಬಳಿಕ ಇಂದು ಖಾಸಗಿ ಬಸ್ ಗಳು ರಸ್ತೆಗಿಳಿದಿವೆ. ಕೋವಿಡ್ ಸಂಕಷ್ಟದ ನಡುವೆಯೂ ಖಾಸಗಿ ಬಸ್ ಗಳು ಇಂದು ಸಂಚಾರ ಆರಂಭಿಸಿದ್ದು, ಸುರಕ್ಷತಾ ಕ್ರಮವಾಗಿ ಇಂದು ಸ್ಯಾನಿಟೈಸೇಶನ್ ಮಾಡಲಾಯಿತು.
ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣದಲ್ಲಿ ಪೂರ್ತಿ ಬಸ್ ಗೆ ಸ್ಯಾನಿಟೈಸೇಷನ್ ಮಾಡಲಾಗುತ್ತಿದೆ. ಸುರಕ್ಷತೆಯ ದೃಷ್ಟಿಯಿಂದ ಬಸ್ಸುಗಳ ಒಳಗೆ ಮತ್ತು ಹೊರಗೆ ಸಂಪೂರ್ಣ ಸ್ಯಾನಿಟೈಸ್ ಮಾಡಲಾಗುತ್ತಿದೆ.
ಬಸ್ ಗಳ ಸೀಟ್, ಫುಟ್ ಬೋರ್ಡ್ ಗಳಿಗೆ ಸಂಪೂರ್ಣ ಸ್ಯಾನಿಟೈಝರ್ ಸಿಂಪಡನೆ ಮಾಡಲಾಗುತ್ತಿದ್ದು, ಪ್ರತೀ ಟ್ರಿಪ್ ನ ಬಳಿಕ ಸ್ಯಾನಿಟೈಝರ್ ಸಿಂಪಡಿಸಲಾಗುತ್ತದೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದಿನಿಂದ ಖಾಸಗಿ ಬಸ್ ಗಳ ಓಡಾಟ ಆರಂಭವಾಗಿದೆ. ಸರಕಾರದ ನಿಯಮದಂತೆ ಅರ್ಧದಷ್ಟು ಪ್ರಯಾಣಿಕರನ್ನು ತುಂಬಿಕೊಂಡು ಬಸ್ ಗಳು ಪ್ರಯಾಣ ಆರಂಭಿಸಿದೆ.