ಶಿಕ್ಷಕಿಯ ಕರಿಮಣಿ ಸರ ಸೆಳೆದು ಪರಾರಿಯಾದ ಯುವಕ; ಪೊಲೀಸರ ಕ್ಷಿಪ್ರ ಕಾರ್ಯಾಚರಣೆ, ಆರೋಪಿ ಬಂಧನ
Team Udayavani, Aug 5, 2021, 11:59 AM IST
ಸುರತ್ಕಲ್: ಶಿಕ್ಷಕಿಯೊಬ್ಬರು ಶಾಲೆಗೆ ಬರುತ್ತಿದ್ದ ಸಂದರ್ಭ ಅಪರಿಚಿತ ಯುವಕನೊಬ್ಬ ಸುಮಾರು 2 ಪವನ್ ಚಿನ್ನದ ಕರಿಮಣಿ ಸರ ಸೆಳೆದು ಪರಾರಿಯಾದರೂ ಕ್ಷಿಪ್ರ ಕಾರ್ಯಚರಣೆ ನಡೆಸಿದ ಸುರತ್ಕಲ್ ಪೊಲೀಸರು ಆರೋಪಿಯನ್ನು ಬಂಧಿಸಿ ಕಂಬಿ ಎಣಿಸುವಂತೆ ಮಾಡಿದ್ದಾರೆ.
ಬಿಸಿಎ ಪದವೀಧರ ಚಿಕ್ಕಮಗಳೂರಿನ ಕೆ.ಎಸ್.ಶ್ರೀಸ್ (24) ಆರೋಪಿಯಾಗಿದ್ದಾನೆ.
ಸುರತ್ಕಲ್ ನ ಶಾಲೆಯ ಶಿಕ್ಷಕಿಯೊಬ್ಬರು ಬುಧವಾರ ಮಧ್ಯಾಹ್ನ 1.30ರ ಸುಮಾರಿಗೆ ಮನೆಯಿಂದ ಶಾಲೆಗೆ ಬರುತ್ತಿದ್ದಾಗ ವಿದ್ಯಾದಾಯಿನಿ ಬಳಿಯ ಅಂಡರ್ ಪಾಸ್ ಬಳಿ ಅಪರಿಚಿತನೊಬ್ಬ ಕರಿಮಣಿ ಸರ ಸೆಳೆದು ಪರಾರಿಯಾಗಿದ್ದ . ಸ್ಥಳೀಯ ಸಿಸಿ ಟಿವಿ ಚಿತ್ರ ಅಧರಿಸಿ ಸಮೀಪದಲ್ಲೇ ಬೈಕ್ ಶೋರೂಂ ಬಳಿ ನಿಂತಿದ್ದ ಈತನನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಸುಲಿಗೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ.
ಸುರತ್ಕಲ್ ಇನ್ಸ್ ಪೆಕ್ಟರ್ ಚಂದ್ರಪ್ಪ ನೇತೃತ್ವದಲ್ಲಿ ಸುರತ್ಕಲ್ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ