ನಂದಿನಿಯಲ್ಲಿ ಹೂಳು ತುಂಬಿ ಕೃತಕ ನೆರೆ
Team Udayavani, May 12, 2022, 10:20 AM IST
ಸುರತ್ಕಲ್: ಚೇಳ್ಯಾರು ಗ್ರಾಮದ ಸರಹದ್ದಿನಲ್ಲಿ ಹರಿಯುವ ನಂದಿನಿ ನದಿಯಲ್ಲಿ ಹೂಳು ತುಂಬಿ ಕೃಷಿಕರ ಪಾರಂಪರಿಕ ಜೀವನಕ್ಕೆ ಹೊಡೆತ ನೀಡಿದ್ದು ಇದರ ಜತೆಗೆ ಮಾಲಿನ್ಯದಿಂದ ಮೀನುಗಾರಿಕೆಗೂ ಧಕ್ಕೆ ಉಂಟಾಗಿದೆ. ಖಂಡಿಗೆ ಧರ್ಮರಸು ಉಳ್ಳಾಯ ಜಾತ್ರೆಗೆ ಮೀನು ಹಿಡಿಯುವ ಹಬ್ಬಕ್ಕೆ ಹೂಳು ತುಂಬಿ ಸಂತಸಕ್ಕೆ ಹೊಡೆತ ನೀಡಿದೆ.
ಹೂಳಿನ ಸಮಸ್ಯೆ ಜತೆಗೆ ನಗರ ಪ್ರದೇಶದ ಕೊಳಚೆ ನೀರು ಹಳ್ಳಕೊಳ್ಳ ದಾಟಿ ನಂದಿನಿ ನದಿಗೆ ಸೇರುತ್ತಿದ್ದು, ಒಳಚರಂಡಿ ತ್ಯಾಜ್ಯ ಸೋರಿಕೆ ಪರಿಣಾಮ ನೀರು ಕಪ್ಪು ಬಣ್ಣಕ್ಕೆ ತಿರುಗಿದೆ. ನೀರಿಗಿಳಿದರೆ ಎಲ್ಲಿ ತುರಿಕೆ, ಹುಣ್ಣು ಮತ್ತಿತರ ಚರ್ಮ ಕಾಯಿಲೆ ಆಂಟಿಕೊಳ್ಳುವ ಭೀತಿ ಉಂಟಾಗಿದೆ.
ಖಂಡಿಗೆ ಧರ್ಮರಸು ಉಳ್ಳಾಯನ ಕಂಡೇವು ಜಾತ್ರೆ ಮೇ 14ರಂದು ನಡೆಯಲಿದೆ. ಅಂದು ಮುಂಜಾನೆ ದೈವದ ಮುಂದೆ ಪ್ರಾರ್ಥನೆ ನೆರವೇರಿಸಿದ ಬಳಿಕ ಚೇಳ್ಯಾರು ನಂದಿನಿ ನದಿಯಲ್ಲಿ ಮಕ್ಕಳಿಂದ ವೃದ್ಧರವರೆಗೂ ತಂಡೋಪತಂಡವಾಗಿ ನದಿಗೆ ಹಾರಿ ಮೀನು ಹಿಡಿಯುವ ಕಾಲವೊಂದಿತ್ತು. ಆದರೆ ಇದೀಗ ದೂರದ ಪ್ರದೇಶದಿಂದ ಬರುವ ಮೀನುಗಾರರು ಒಂದಿಷ್ಟು ಮಂದಿ ಆಗಮಿಸಿ ಮೀನು ಹಿಡಿದು ಮಾರುತ್ತಾರೆ. ಸ್ಥಳೀಯರಲ್ಲಿ ಕೆಲವರು ಅಂಜಿಕೆ ಯಿಂದಲೇ ನದಿಗಿಳಿದು ಮೀನು ಹಿಡಿಯುವ ಸಾಹಸ ಪ್ರದರ್ಶಿಸುತ್ತಾರೆ. ಆದರೆ ಈ ಹಿಂದಿನ ಹುಮ್ಮಸ್ಸು, ಜಾತ್ರೆ ಸಂಭ್ರಮ ಮಾಲಿನ್ಯದಿಂದಾಗಿ ಕಳೆಗುಂದಿದೆ ಎನ್ನಬಹುದು.
ಸರಕಾರಕ್ಕೆ ವರದಿ ಸಲ್ಲಿಸಲು ಸೂಚಿಸಿದ್ದೇನೆ
ಸ್ಥಳೀಯ ರೈತರಿಗೆ, ಧಾರ್ಮಿಕ ಕೇಂದ್ರಕ್ಕೆ ನಂದಿನಿ ನದಿ ಮಾಲಿನ್ಯದಿಂದ ತೊಂದರೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಹೂಳು ತುಂಬಿ ಕೃಷಿಗೂ ಸಮಸ್ಯೆಯಾಗಿದೆ. ಇದಕ್ಕಾಗಿ ಡಿಸಿ ಅವರನ್ನು ಸ್ಥಳಕ್ಕೆ ಭೇಟಿ ನೀಡುವಂತೆ ತಿಳಿಸಿ, ಸಮಸ್ಯೆ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸಲು ಸೂಚಿಸಿದ್ದೇನೆ. ಹೂಳು ತೆಗೆಯಲು ಹೆಚ್ಚು ಅನುದಾನ ಅಗತ್ಯವಿದ್ದಲ್ಲಿ ಮುಖ್ಯಮಂತ್ರಿಯವರಲ್ಲಿ ಚರ್ಚಿಸಿ ಬಿಡುಗಡೆಗೆ ಮನವಿ ಮಾಡಲಾಗುವುದು. – ಉಮಾನಾಥ ಕೋಟ್ಯಾನ್, ಶಾಸಕರು, ಮೂಲ್ಕಿ – ಮೂಡುಬಿದಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಜ್ಞಾನವಾಪಿ ಮಸೀದಿ ಸರ್ವೇ ಸಂಪೂರ್ಣ; ಬಾವಿಯಲ್ಲಿ ‘ಶಿವಲಿಂಗ’ಪತ್ತೆ
ದತ್ತ ಜಯಂತಿ ಸಮಯದಲ್ಲಿ ಹೋಮದ ಹೊಗೆ.. ಬೇರೆ ಸಮಯದಲ್ಲಿ ಮಾಂಸದ ಹೊಗೆ
ಶಾಲಾ ಪ್ರಾರಂಭೋತ್ಸವ ಹಿರಿಯಡ್ಕ ಸರಕಾರಿ ಪಬ್ಲಿಕ್ ಸ್ಕೂಲ್ ನಲ್ಲಿ ಮಕ್ಕಳಿಗೆ ಸಂಭ್ರಮದ ಸ್ವಾಗತ
ಶಂಕರನಾರಾಯಣ : ಶಾಲಾರಂಭದ ದಿನದಂದೇ ಸರಕಾರಿ ಶಾಲೆಯಲ್ಲಿ ಪ್ರತಿಭಟನೆ ಬಿಸಿ
ಫಲಜ್ಯೋತಿಷ್ಯದಲ್ಲಿ ದೀರ್ಘಕಾಲೀನ ಫಲಾದೇಶ ಮಾಡುವುದು ಹೇಗೆ ?
ಹೊಸ ಸೇರ್ಪಡೆ
ಐಪಿಎಲ್ 2022: ಪಂಜಾಬ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ಗೆ 17 ರನ್ ಗೆಲುವು
ಪಿಎಸ್ಐ ಪರೀಕ್ಷಾ ಅಕ್ರಮ: ಆರೋಪಿ ಕಾರು, ಚಿನ್ನ, ದಾಖಲೆ ವಶ
ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ: ಗುಣಮಟ್ಟ ಶಿಕ್ಷಣಕ್ಕೆ ಕಲಿಕಾ ಚೇತರಿಕೆ: ಸಿಎಂ
ಮಳಲಿ ದರ್ಗಾದಲ್ಲಿ ದೇಗುಲ ಕುರುಹು : ಅಷ್ಟಮಂಗಲ ಪ್ರಶ್ನೆಗೆ ವಿಎಚ್ಪಿ ನಿರ್ಧಾರ
ಡೆಂಗ್ಯೂ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ : ಸಚಿವ ಅಂಗಾರ