Udayavni Special

 ವಿಶೇಷ ವರದಿ: ಆಸ್ತಿ ಮಾಲಕತ್ವ ಹಕ್ಕು ವರ್ಗಾವಣೆಗೆ ಆನ್‌ಲೈನ್‌ ವ್ಯವಸ್ಥೆ

ಇ-ಆಸ್ತಿ ತಂತ್ರಾಂಶವನ್ನು ಕಾವೇರಿ ತಂತ್ರಾಂಶದೊಂದಿಗೆ ಜೋಡಣೆ

Team Udayavani, Jul 25, 2020, 3:18 PM IST

 ವಿಶೇಷ ವರದಿ: ಆಸ್ತಿ ಮಾಲಕತ್ವ ಹಕ್ಕು ವರ್ಗಾವಣೆಗೆ ಆನ್‌ಲೈನ್‌ ವ್ಯವಸ್ಥೆ

ಮಹಾನಗರ: ಇ-ಆಸ್ತಿ ತಂತ್ರಾಂಶವನ್ನು ಕಾವೇರಿ ತಂತ್ರಾಂಶ ದೊಂದಿಗೆ ಜೋಡಣೆ ಮಾಡಿ ಆಸ್ತಿಗಳ ನೋಂದಣಿ ಹಾಗೂ ಆಸ್ತಿ ಮಾಲಕತ್ವ ಹಕ್ಕು ವರ್ಗಾವಣೆಯನ್ನು ಸಂಪೂರ್ಣವಾಗಿ ಆನ್‌ಲೈನ್‌ ಮಾಡಲು ಸರಕಾರ ತೀರ್ಮಾನಿಸಿದ್ದು, ಮುಂಬರುವ ದಿನಗಳಲ್ಲಿ ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿಯೂ ಈ ನಿಯಮ ಜಾರಿಗೆ ಬರುವ ಸಾಧ್ಯತೆಯಿದೆ.

ಆಸ್ತಿ ಮಾಲಕತ್ವ ಹಕ್ಕು ವರ್ಗಾವಣೆಯನ್ನು ಸಂಪೂರ್ಣವಾಗಿ ಆನ್‌ಲೈನ್‌ ಮಾಡುವ ಉದ್ದೇಶದಿಂದ ರಾಜ್ಯದ ರಾಮ ನಗರ, ಕನಕಪುರ ನಗರಸಭೆಗಳಲ್ಲಿ ಪ್ರಾಯೋಗಿ ಕವಾಗಿ ಇದನ್ನು ಅನುಷ್ಠಾನಿಸಲಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಮಂಗಳೂರು ಮಹಾ ನಗರ ಪಾಲಿಕೆ ಸಹಿತ ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿಯೂ ವಿಸ್ತರಿಸಲು ಸರಕಾರ ಉದ್ದೇಶಿಸಿದೆ. ಸದ್ಯದ ಮಾಹಿತಿ ಪ್ರಕಾರ, ಕೆಲವು ಪಾಲಿಕೆ ಗಳಲ್ಲಿ ಇ-ಆಸ್ತಿ ತಂತ್ರಾಂಶದ ಬಳಕೆಯು ತುಂಬ ನಿಧಾನಗತಿಯಲ್ಲಿ ಇರುವುದರಿಂದ ಸರಕಾರದ ಈ ತಂತ್ರಾಂಶ ಜೋಡಣೆಗೆ ಹಿನ್ನಡೆಯಾಗುತ್ತಿದೆ ಎನ್ನಲಾಗುತ್ತಿದೆ.

ಮಂಗಳೂರು-350 ಆಸ್ತಿಗಳಿಗೆ ಇ-ಖಾತಾ
ಗ್ರಾಮಾಂತರ ಭಾಗದಲ್ಲಿ ಆರ್‌ಟಿಸಿ ಇದ್ದ ಹಾಗೆ, ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಈ ಹಿಂದೆ ಖಾತಾ ನೀಡಲಾಗುತ್ತಿತ್ತು. ಬಳಿಕ ಕರ್ನಾಟಕ ಮುನಿಸಿಪಲ್‌ ಡಾಟಾ ಸೊಸೈಟಿ, ರಾಷ್ಟ್ರೀಯ ಸೂಚ್ಯಂಕ ಕೇಂದ್ರದ ಸಹಯೋಗದೊಂದಿಗೆ ಆಸ್ತಿ ತಂತ್ರಾಂಶವನ್ನು ಅಭಿವೃದ್ಧಿಪಡಿಸಿ ಇ-ಖಾತಾ ಅನುಷ್ಠಾನಿಸಲಾಗಿದೆ. ತಂತ್ರಾಂಶದ ಮೂಲಕ ನಗರ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಅಧಿಕೃತ, ಅನಧಿಕೃತವಲ್ಲದ, ಅಕ್ರಮ ಆಸ್ತಿಗಳ ಮಾಹಿತಿಯನ್ನು ದಾಖಲಿಸಲು/ತಿದ್ದುಪಡಿ ಮಾಡಲು ಆಸ್ತಿಗಳ ಮಾಲಕತ್ವ ಹಕ್ಕು ವರ್ಗಾವಣೆ ಮಾಡಲು, ಆಸ್ತಿ ತೆರಿಗೆಯ ನಕಲನ್ನು ಡಿಜಿಟಲ್‌ ಸಹಿಯೊಂದಿಗೆ ತಂತ್ರಾಂಶದಿಂದ ಪಡೆಯಲು ಅವ ಕಾಶ ನೀಡಲಾಗಿದೆ. ಇದರಂತೆ ಮಂಗಳೂರಿ ನಲ್ಲಿ ಸುಮಾರು 350 ಆಸ್ತಿಗಳಿಗೆ ಇ-ಖಾತಾ ನೀಡಲಾಗಿದೆ.

ಪ್ರಾಪರ್ಟಿ ಐಡಿ ಇಲ್ಲದೆ ಪರದಾಟ!
“ಮಹಾನಗರ ಪಾಲಿಕೆ ವ್ಯಾಪ್ತಿಯ ಪ್ರತಿ ಭೂಮಿಯನ್ನು ಪಾಲಿಕೆಯು ಸರ್ವೆ ಮಾಡಿ ನಿಗದಿತ ಐಡಿಯನ್ನು ನೀಡಲಾಗುತ್ತದೆ. 2002ರಲ್ಲಿ ಕೇಂದ್ರ ಸರಕಾರದ ನಿರ್ಮಲ ನಗರ ಯೋಜನೆಯಲ್ಲಿ ಐಡಿ ನೀಡುವ ಪ್ರಕ್ರಿಯೆ ಆರಂಭವಾಯಿತಾದರೂ ಇದು ಶೇ. 50ರಷ್ಟು ಪ್ರದೇಶಕ್ಕೆ ಮಾತ್ರ ಆಗಿದೆ. ಉಳಿದ ಶೇ. 50ರಷ್ಟು ಭೂಮಿಗೆ ಪ್ರಾಪರ್ಟಿ ಐಡಿ ಆಗಿಲ್ಲ. ಸದ್ಯ ಇ-ಖಾತಾ ಮಾಡುವ ವೇಳೆಯಲ್ಲಿ ಪ್ರಾಪರ್ಟಿ ಐಡಿ ಕೂಡ ನಮೂದು ಮಾಡಬೇಕಾದ ಹಿನ್ನೆಲೆಯಲ್ಲಿ ಬಹುತೇಕ ಮಂದಿಗೆ ಈ ಐಡಿ ಇಲ್ಲದೆ ಸಮಸ್ಯೆ ಆಗಿದೆ.

ಒಂದು ವೇಳೆ ಸಮೀಪದ ಭೂಮಿಯ ಐಡಿಯನ್ನು ಅವಲೋಕಿಸಿ ಅಂದಾಜು ಐಡಿಯನ್ನು ಹಾಕಿದರೆ, ಮುಂದೆ ಸಮಸ್ಯೆ ಆಗುವ ಸಾಧ್ಯತೆಯಿದೆ. ಹೀಗಾಗಿ ಈ ಸಮಸ್ಯೆ ನಿವಾರಣೆ ಮಾಡದೆ ಇ-ಖಾತಾ ಮಾಡುವುದು ಎಷ್ಟು ಸರಿ?’ ಎನ್ನುವುದು ಸಾಮಾಜಿಕ ಹೋರಾಟಗಾರ ಹನುಮಂತ ಕಾಮತ್‌ ಅವರ ಪ್ರಶ್ನೆ.

ಈ ಮಧ್ಯೆ, ಇ-ಖಾತಾ ಆದ ಬಳಿಕ ಅದನ್ನು ಪರಿಶೀಲಿಸಿದಾಗ ಅಕ್ಷರ ತಪ್ಪು, ಅಥವಾ ಸಂಖ್ಯೆ ತಪ್ಪು ಕಣ್ತಪ್ಪಿನಿಂದ ನಮೂದಾಗಿದ್ದರೆ ಮತ್ತೆ ಅದನ್ನು ಪಾಲಿಕೆಯಲ್ಲಿ ಸರಿ ಮಾಡುವಂತಿಲ್ಲ. ಅದನ್ನು ಬೆಂಗಳೂರಿನ ಪೌರಾಡಳಿತ ಇಲಾಖೆಗೆ ಕಳುಹಿಸಿ ಸರಿಪಡಿಸಬೇಕು. ಪಾಲಿಕೆಯ ಕಂದಾಯ ಇಲಾಖೆಯಲ್ಲಿ ಸಿಬಂದಿ ಕೊರತೆಯಿಂದಾಗಿ ಕೊಂಚ ಅಕ್ಷರ ತಪ್ಪಾದರೂ ಈ ಸಮಸ್ಯೆ ಎದುರಾಗಲಿದೆ ಎನ್ನುತ್ತಾರೆ ಸಾರ್ವಜನಿಕರೊಬ್ಬರು.

ಇ-ಖಾತಾ ನೋಂದಣಿಗೆ ವೇಗ
ಮಂಗಳೂರಿನಲ್ಲಿ ಇ-ಖಾತಾ ನೋಂದಣಿ ಈಗಾಗಲೇ ನಡೆ ಯು ತ್ತಿದೆ. ಜಾಗದ ಪೂರ್ಣ ದಾಖಲಾತಿ ನೀಡಿ ಇ- ಖಾತಾ ಮಾಡಬಹುದಾಗಿದೆ. ಮುಂದೆ ಆಸ್ತಿ ಮಾಲಕತ್ವ ಹಕ್ಕು ವರ್ಗಾವಣೆಯನ್ನು ಸಂಪೂರ್ಣವಾಗಿ ಆನ್‌ಲೈನ್‌ ಮಾಡಲು ಸರಕಾರ ಉದ್ದೇಶಿ ಸಿದೆ. ಈ ಬಗ್ಗೆ ಪಾಲಿಕೆ ಸಭೆಯಲ್ಲಿ ಸೂಕ್ತ ತೀರ್ಮಾನವಾಗಲಿದೆ. ಇ-ಖಾತಾ ಮಾಡಿಸುವಲ್ಲಿ ಜನರಿಗೆ ಸಮಸ್ಯೆ ಆಗದಂತೆ ಪಾಲಿಕೆಯಲ್ಲಿ ವ್ಯವಸ್ಥೆ ಮಾಡಲಾಗಿದೆ.
– ಸಂತೋಷ್‌ ಕುಮಾರ್‌, ಉಪ ಆಯುಕ್ತರು, ಮನಪಾ

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ದುರ್ಗಾ ಮೂರ್ತಿ ವಿಸರ್ಜನೆ ವೇಳೆ ದೋಣಿ ಅವಘಡ: ನಾಲ್ವರು ಸಾವು

ದುರ್ಗಾ ಮೂರ್ತಿ ವಿಸರ್ಜನೆ ವೇಳೆ ದೋಣಿ ಅವಘಡ: ನಾಲ್ವರು ಸಾವು, ಹಲವರು ನಾಪತ್ತೆ

ಹಾಡಹಗಲೇ ಗುಂಡಿನ ದಾಳಿ: ಶಿವಸೇನೆ ಮುಖಂಡ ರಾಹುಲ್‌ ಶೆಟ್ಟಿ ಹತ್ಯೆ

ಹಾಡಹಗಲೇ ಗುಂಡಿನ ದಾಳಿ: ಶಿವಸೇನೆ ಮುಖಂಡ ರಾಹುಲ್‌ ಶೆಟ್ಟಿ ಹತ್ಯೆ

ಕಲಿಕೆಗಾಗಿ ಸ್ವಾಭಿಮಾನಿ ವಿದ್ಯಾರ್ಥಿಯ ಕೂಲಿ

ಕಲಿಕೆಗಾಗಿ ಸ್ವಾಭಿಮಾನಿ ವಿದ್ಯಾರ್ಥಿಯ ಕೂಲಿ

ಸ್ವಾತಿ ಮಳೆ ನೀರಿನ ಬಗೆಬಗೆ ಪ್ರಯೋಜನ

ಸ್ವಾತಿ ಮಳೆ ನೀರಿನ ಬಗೆಬಗೆ ಪ್ರಯೋಜನ

ಪುಲ್ವಾಮಾ ಈಗ ಪೆನ್ಸಿಲ್‌ ಸ್ಲೇಟ್‌ ತಯಾರಿಕೆ ತಾಣ

ಪುಲ್ವಾಮಾ ಈಗ ಪೆನ್ಸಿಲ್‌ ಸ್ಲೇಟ್‌ ತಯಾರಿಕೆ ತಾಣ

ಮುಂದಿನ ಸಿಎಂ ಹೊಸ ಲೆಕ್ಕಾಚಾರ; ಕಾಂಗ್ರೆಸ್‌ನಲ್ಲಿ ಅಚ್ಚರಿಯ ಪ್ರಸ್ತಾವನೆ

ಮುಂದಿನ ಸಿಎಂ ಹೊಸ ಲೆಕ್ಕಾಚಾರ; ಕಾಂಗ್ರೆಸ್‌ನಲ್ಲಿ ಅಚ್ಚರಿಯ ಪ್ರಸ್ತಾವನೆ

ಬಲವಾದ ಗಾಳಿ ಭದ್ರವಾಗಿ ಬೇರೂರಲು ಸಿಕ್ಕಿದ ಅವಕಾಶ!

ಬಲವಾದ ಗಾಳಿ ಭದ್ರವಾಗಿ ಬೇರೂರಲು ಸಿಕ್ಕಿದ ಅವಕಾಶ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಎಕ್ಕೂರಿನಲ್ಲಿ ಫಿಶರೀಸ್‌ ವಿಶ್ವವಿದ್ಯಾನಿಲಯ?

ಎಕ್ಕೂರಿನಲ್ಲಿ ಫಿಶರೀಸ್‌ ವಿಶ್ವವಿದ್ಯಾನಿಲಯ?

ಯಕ್ಷಗಾನದಿಂದ ಜ್ಞಾನದ ಆರಾಧನೆ: ಡಾ| ನಿರಂಜನ ಭಟ್‌

ಯಕ್ಷಗಾನದಿಂದ ಜ್ಞಾನದ ಆರಾಧನೆ: ಡಾ| ನಿರಂಜನ ಭಟ್‌

ಕರಾವಳಿ: ಸಂಭ್ರಮದ ನವರಾತ್ರಿ, ದಸರಾ ಸಮಾಪನ

ಕರಾವಳಿ: ಸಂಭ್ರಮದ ನವರಾತ್ರಿ, ದಸರಾ ಸಮಾಪನ

ಪಿಲಿಕುಳ : ಹಳೇ ತಲೆಮಾರಿನ 21 ವರ್ಷದ ಹುಲಿ “ವಿಕ್ರಮ್” ಇನ್ನಿಲ್ಲ

ಪಿಲಿಕುಳ : ಹಳೇ ತಲೆಮಾರಿನ 21 ವರ್ಷದ ಹುಲಿ “ವಿಕ್ರಮ್” ಇನ್ನಿಲ್ಲ

mng-tdy-2

ಕ್ಷೇತ್ರದ ಅಭಿವೃದ್ಧಿ ನನ್ನ ಮುಖ್ಯಗುರಿ: ಡಾ| ಭರತ್‌ ಶೆಟ್ಟಿ

MUST WATCH

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

udayavani youtube

Story behind Vijayadashami celebration | ವಿಜಯದಶಮಿ ಆಚರಣೆಯ ಹಿಂದಿನ ಕಥೆ | Udayavani

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!

udayavani youtube

The Sharada statue embodied in the artist’s finesse | Navaratri Specialಹೊಸ ಸೇರ್ಪಡೆ

ದುರ್ಗಾ ಮೂರ್ತಿ ವಿಸರ್ಜನೆ ವೇಳೆ ದೋಣಿ ಅವಘಡ: ನಾಲ್ವರು ಸಾವು

ದುರ್ಗಾ ಮೂರ್ತಿ ವಿಸರ್ಜನೆ ವೇಳೆ ದೋಣಿ ಅವಘಡ: ನಾಲ್ವರು ಸಾವು, ಹಲವರು ನಾಪತ್ತೆ

ಹಾಡಹಗಲೇ ಗುಂಡಿನ ದಾಳಿ: ಶಿವಸೇನೆ ಮುಖಂಡ ರಾಹುಲ್‌ ಶೆಟ್ಟಿ ಹತ್ಯೆ

ಹಾಡಹಗಲೇ ಗುಂಡಿನ ದಾಳಿ: ಶಿವಸೇನೆ ಮುಖಂಡ ರಾಹುಲ್‌ ಶೆಟ್ಟಿ ಹತ್ಯೆ

ಕಲಿಕೆಗಾಗಿ ಸ್ವಾಭಿಮಾನಿ ವಿದ್ಯಾರ್ಥಿಯ ಕೂಲಿ

ಕಲಿಕೆಗಾಗಿ ಸ್ವಾಭಿಮಾನಿ ವಿದ್ಯಾರ್ಥಿಯ ಕೂಲಿ

ಸ್ವಾತಿ ಮಳೆ ನೀರಿನ ಬಗೆಬಗೆ ಪ್ರಯೋಜನ

ಸ್ವಾತಿ ಮಳೆ ನೀರಿನ ಬಗೆಬಗೆ ಪ್ರಯೋಜನ

ಪುಲ್ವಾಮಾ ಈಗ ಪೆನ್ಸಿಲ್‌ ಸ್ಲೇಟ್‌ ತಯಾರಿಕೆ ತಾಣ

ಪುಲ್ವಾಮಾ ಈಗ ಪೆನ್ಸಿಲ್‌ ಸ್ಲೇಟ್‌ ತಯಾರಿಕೆ ತಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.