ಮನ ಮುದಗೊಳಿಸಿದ ಸುಖ್ವಿಂದರ್  ಸಿಂಗ್‌ ಗಾನ ತರಂಗ

Team Udayavani, Jan 6, 2019, 5:19 AM IST

sukhvindar-singh-1.jpg

ಮೂಡುಬಿದಿರೆ: ಆಳ್ವಾಸ್‌ ರಜತ ವಿರಾಸತ್‌ನ ದ್ವಿತೀಯ ದಿನವಾದ ಶನಿವಾರ ರಾತ್ರಿ ಹಿಂದಿ ಚಿತ್ರರಂಗದ ಪ್ರಸಿದ್ಧ ಗಾಯಕ ಸುಖ್ವಿಂದರ್  ಸಿಂಗ್‌ ಮತ್ತು ಬಳಗದವರು “ಗಾನ ತರಂಗ’ದಿಂದ ಸೇರಿದ 50,000ಕ್ಕೂ ಅಧಿಕ ಕಲಾಸಕ್ತರ ಮನಮುದಗೊಳಿಸಿದರು. ಆಸನಗಳು ಸಾಲದೆ ಗ್ಯಾಲರಿಯ ಬದಿಗಳಲ್ಲಿ ನಿಂತುಕೊಂಡೇ ಕಾರ್ಯಕ್ರಮವನ್ನು ಆಸ್ವಾದಿಸಿದರು.

ಸುಖ್ವಿಂದರ್  ಸಿಂಗ್‌ ಅವರೊಂದಿಗೆ ರಾಡ್ನಿ ಖಾಡಿಲ್ಕರ್‌ ಅವರೂ ಹಲವು ಹಾಡುಗಳ ಮೂಲಕ ಜನರನ್ನು ರಂಜಿಸಿದರು. “ಜೈಹೋ’, “ರಮ್ತಾ ಜೋಗಿ, ಚಂಯ ಚಂಯ ದಂಥ ಹಾಡುಗಳಿಗೆ ಪ್ರೇಕ್ಷಕರೂ ಸ್ಪಂದಿಸಿದರು. ಹಲವು ಹಾಡುಗಳಿಗೆ ಸಭಿಕರೂ ದನಿಗೂಡಿಸಿದರು. ವೇದಿಕೆಯ ಕೆಳಗಡೆ ಎರಡೂ ಪಾರ್ಶ್ವಗಳಲ್ಲಿ ನಿಂತಿದ್ದ ಯುವಜನರೆಡೆಗೆ ಮೈಕ್‌ ಎಸೆದು ಅವರಿಂದಲೂ ಹಾಡಿಸಿದರು.

ಸಹಕಲಾವಿದರಾಗಿ ಅಕ್ಷಯ್‌ ಆಚಾರ್ಯ, ಅಮರ್‌ ದೇಸಾಯಿ (ಕೀ ಬೋರ್ಡ್‌), ಗಿರೀಶ್‌ ವಿಶ್ವ , ಶಿವಂ ಎಡ್ವಾನ್ಕರ್‌ (ಪರ್ಕಶನ್‌) ಮನೋಜ್‌ ಭಾಟಿ (ತಬ್ಲಾ), ರೋಹಿತ್‌ ಪ್ರಸನ್ನ (ಕೊಳಲು), ಏಕತೆರಿನಾ ನಿಕೋಲಾವ್‌ (ಸ್ಯಾಕೊÕàಫೋನ್‌), ಸುನಿಲ್‌ ಗಂಗಾವನೆ, ಪ್ರವೀಣ್‌ ಆಯರೆ, ರಾಹುಲ್‌ ಶರ್ಮಾ (ಧ್ವನಿ ತಂತ್ರಜ್ಞರು), ಗಣೇಶ್‌ ಪೂಜಾರೆ (ಬೆಳಕು ತಂತ್ರಜ್ಞ) ಇವರೆಲ್ಲರೂ ಒಟ್ಟು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.

ಪುಟಾಣಿಗಳನ್ನೂ ಹಾಡಿಸಿ, ಕುಣಿಸಿದ ಸುಖ್ವಿಂದರ್ 
ಗಾನ ಮಾಧುರ್ಯದಿಂದ ಸಭಿಕರ ಮನ ಸೆಳೆದ ಸುಖ್ವಿಂದರ್ ಸಿಂಗ್‌ ಸಭೆಯಲ್ಲಿದ್ದ ಪುಟಾಣಿಗಳನ್ನು ವೇದಿಕೆಗೆ ಬರಮಾಡಿಕೊಂಡು ಹಾಡಿಸಿ, ಕುಣಿಸಿ ರಂಜಿಸಿದರು. “ಚಕ್‌ದೇ ಇಂಡಿಯಾ’ ಹಾಡಿಗೆ ಧ್ವನಿಗೂಡಿಸಿದ ಮಕ್ಕಳು, “ಹುಡ್‌ ದಬಂಗ್‌’ ಹಾಡಿಗೆ ಸಿಂಗ್‌ ನರ್ತಿಸಿದಂತೆ ಲಘುವಾಗಿ ಹೆಜ್ಜೆಹಾಕಿ ಖುಷಿಪಟ್ಟರು. “ಇಂದಿನ ಕಾರ್ಯಕ್ರಮ ನನ್ನ ಜೀವನದ ಅತ್ಯುತ್ತಮ ಪ್ರಸ್ತುತಿಯಾಗಬಹುದು’ ಎಂದು ಮೊದಲಲ್ಲೇ ಆಶಾವಾದ ವ್ಯಕ್ತಪಡಿಸಿದ ಸುಖ್ವಿಂದರ್ ಕೊನೆಗೂ ತನ್ನ ಸಂತೃಪ್ತಿಯನ್ನು ವ್ಯಕ್ತಪಡಿಸಿದರು.

ವಿರಾಸತ್‌ ಇಂದು (ಜ. 6) ಮುಕ್ತಾಯ
* ಸೂರ್ಯಪ್ರಕಾಶ್‌ ಅವರಿಗೆ ಆಳ್ವಾಸ್‌ ವರ್ಣ ವಿರಾಸತ್‌ ಪ್ರಶಸ್ತಿ ಪ್ರದಾನ
* ಶಂಕರ್‌ ಮಹಾದೇವನ್‌ ಬಳಗದ ಚಿತ್ರಸಂಜೆ
ಮೂಡುಬಿದಿರೆ: ಆಳ್ವಾಸ್‌ ವಿರಾಸತ್‌ ರಜತ ಸಂಭ್ರಮದ ಕೊನೆಯ ದಿನವಾದ ರವಿವಾರ ಸಂಜೆ 5.45ಕ್ಕೆ ಹೈದರಾಬಾದ್‌ನ ಕಲಾವಿದ ಸೂರ್ಯಪ್ರಕಾಶ್‌ ಅವರಿಗೆ ಆಳ್ವಾಸ್‌ ವರ್ಣ ವಿರಾಸತ್‌ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಸಂಜೆ 6ರಿಂದ ಶಂಕರ್‌ ಮಹಾದೇವನ್‌, ಸಿದ್ದಾರ್ಥ್ ಮಹಾದೇವನ್‌ ಮತ್ತು ಶಿವನ್‌ ಮಹಾದೇವನ್‌ ಅವರು “ಚಿತ್ರ ರಸ ಸಂಜೆ’, ಕೋಲ್ಕತಾದ ಪರಂಪರಾ ತಂಡದವರು “ಕಲರ್ ಆಫ್‌ ಭರತನಾಟ್ಯಂ, ಆಳ್ವಾಸ್‌ ತಂಡಗಳಿಂದ ಭರತನಾಟ್ಯ, ಮಣಿಪುರದ ಧೋಲ್‌ ಚಲಮ್‌, ಪಂಜಾಬಿನ ಬಾಂಗಾ ನೃತ್ಯ ಹಾಗೂ ತೆಂಕುತಿಟ್ಟು ಯಕ್ಷಗಾನ “ಅಗ್ರಪೂಜೆ’ ಪ್ರಸ್ತುತಪಡಿಸಲಿದ್ದಾರೆ.

ಟಾಪ್ ನ್ಯೂಸ್

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.