ಕೀಲಿ ಕೈ ಪುರಾಣ: 10 ಗಂಟೆಯಾದರೂ ಸುರತ್ಕಲ್ ಪೋಸ್ಟ್ ಆಫೀಸ್ ಬಂದ್ !
Team Udayavani, Aug 3, 2020, 12:46 PM IST
ಸುರತ್ಕಲ್: ಇಲ್ಲಿನ ಅಂಚೆ ಕಚೇರಿ ಬೆಳಿಗ್ಗೆ 10 ಗಂಟೆಯಾದರೂ ತೆರೆದಿರಲಿಲ್ಲ. ದಿನಾ ಬೆಳಿಗ್ಗೆ 8 ಗಂಟೆಗೆ ತೆರೆಯುವ ಅಂಚೆ ಕಚೇರಿ ಇಂದೇನು ತೆರೆದಿಲ್ಲ, ರಜೆ ಇರಬಹುದಾ ಎಂದು ಸಾರ್ವಜನಿಕರು ವಿಚಾರಿಸಿದಾಗ ತಿಳಿದು ಬಂದಿದ್ದು, ‘ಸಿಬ್ಬಂದಿಯ ಕೀಲಿ ಕೈ ಪುರಾಣ’
ಏನಿದು ಘಟನೆ; ಸುರತ್ಕಲ್ ಪೋಸ್ಟ್ ಆಫೀಸ್ ಸಿಬಂದಿಯೊಬ್ಬ ಕೀಲಿ ಕೈ ಕೊಂಡು ಹೋದ ಕಾರಣ 10 ಗಂಟೆಯಾದರೂ ಕಚೇರಿ ಬಾಗಿಲು ತೆರೆಯಲಾಗಲಿಲ್ಲ. ಕೊನೆಗೆ ಉಳಿದ ಸಿಬಂದಿ ಹಿಂಬಾಗಿಲ ಮೂಲಕ ಬಂದ ಗ್ರಾಹಕರಿಗೆ ಸೇವೆ ಒದಗಿಸಿದರು.
ಸೋಮವಾರವಾಗಿದ್ದರಿಂದ ಗ್ರಾಹಕರೂ ಹೆಚ್ಚಿದ್ದು ಸಿಬಂದಿಗಳು ಸಂಭಾಳಿಸಲು ಕಷ್ಟ ಪಡಬೇಕಾಯಿತು. ಇದೀಗ ಈ ಪಚೀತಿ ವಿಚಾರ ಪೋಸ್ಟ್ ಆಫೀಸಿನ ಹಿರಿಯ ಅಧಿಕಾರಿಗಳಿಗೆ ತಲುಪಿದ್ದು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.