ಮುಜುಗರ ತರುವ ಹೇಳಿಕೆ ಸಹಿಸುವುದಿಲ್ಲ: ಗುಂಡೂರಾವ್‌


Team Udayavani, Feb 4, 2019, 4:35 AM IST

dinesh.jpg

ಮಂಗಳೂರು: ಸಮ್ಮಿಶ್ರ ಸರಕಾರಕ್ಕೆ ಮುಜುಗರ ತರುವ ಹೇಳಿಕೆ ಗಳನ್ನು ಕಾಂಗ್ರೆಸ್‌ನ ಶಾಸಕರು ಅಥವಾ ನಾಯಕರು ನೀಡಿದರೂ ಪಕ್ಷ ಸಹಿಸುವುದಿಲ್ಲ. ಇಂಥ ವರ್ತನೆ ಗಳನ್ನು ಗಂಭೀರ ವಾಗಿ ಪರಿಗಣಿ ಸಿ ಕಠಿನ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದರು.

ನಗರದ ಸಕೀಟ್‌ ಹೌಸ್‌ನಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ ಅವರು, ಪಕ್ಷದ ಪ್ರತಿಯೋರ್ವರೂ ಪಕ್ಷದ ಶಿಸ್ತು ಪಾಲನೆ ಮಾಡಬೇಕು. ಅನಗತ್ಯ ಹೇಳಿಕೆಗಳಿಂದ ಜನರಿಗೆ ಸರಕಾರದ ಬಗ್ಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಗ್ಗೆ ಶಾಸಕ ಸೋಮಶೇಖರ್‌ ವ್ಯತಿರಿಕ್ತ ಹೇಳಿಕೆ ಗಳನ್ನು ನೀಡಿದ್ದಾರೆ ಎಂಬ ವರದಿ ಹಿನ್ನೆಲೆಯಲ್ಲಿ ನೋಟಿಸ್‌ ನೀಡಿದ್ದು, ಸ್ಪಷ್ಟೀಕರಣ ನೀಡಿದ್ದಾರೆ ಎಂದರು. 

ಸಮ್ಮಿಶ್ರ ಸರಕಾರದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆ ಹೊಂದಾಣಿಕೆ ಇದೆ. ನಿಗಮ, ಸಂಸದೀಯ ಕಾರ್ಯದರ್ಶಿ ಗಳ ನೇಮಕಗಳಲ್ಲಿ ಕಾಂಗ್ರೆಸ್‌ ಸೂಚಿ ಸಿದ ಹೆಸರುಗಳನ್ನು ಮುಖ್ಯಮಂತ್ರಿಯವರು ಅನುಮೋದಿಸಿದ್ದಾರೆ ಎಂದರು. ಲೋಕಸಭಾ ಸೀಟು ಹಂಚಿಕೆ ವಿಚಾರ ದಲ್ಲಿ ಪ್ರತಿಷ್ಠೆಯ ಪ್ರಶ್ನೆ ಇಲ್ಲ, ಗೆಲುವು ಮುಖ್ಯ. ಮೈತ್ರಿಕೂಟ ಪಕ್ಷ ಗರಿಷ್ಠ ಸ್ಥಾನಗಳನ್ನು ಗೆಲ್ಲುವುದು ಹಾಗೂ ಬಿಜೆಪಿ ಕನಿಷ್ಠ ಸ್ಥಾನ ಪಡೆಯುವಂತೆ ಮಾಡುವುದು ನಮ್ಮ ಗುರಿ ಎಂದವರು ಹೇಳಿದರು.

ಬಿಜೆಪಿ ಭ್ರಷ್ಟ ರಾಜಕಾರಣ
ಸಂಸದ ನಳಿನ್‌ ಅವರು 24 ತಾಸುಗಳೊಳಗೆ ಸರಕಾರ ಬೀಳುತ್ತದೆ ಎಂಬ ಹೇಳಿಕೆ ನೀಡುತ್ತಾರೆ. ಬಿಜೆಪಿಯವರು ಕುದುರೆ ವ್ಯಾಪಾರದಲ್ಲಿ ತೊಡಗಿದ್ದಾರೆ ಎಂಬುದಕ್ಕೆ ಇದು ಸಾಕ್ಷಿ. ಬಿಜೆಪಿಯವರ ಈ ರೀತಿಯ ಧೋರಣೆ ಅವರ ಭ್ರಷ್ಟ ರಾಜಕಾರಣಕ್ಕೆ ನಿದರ್ಶನ ಎಂದು ದಿನೇಶ್‌ ಗುಂಡೂರಾವ್‌ ಟೀಕಿಸಿದರು.

ಗಾಂಧೀಜಿಗೆ ಅವಮಾನ: ಪ್ರತಿಭಟನೆ
ಗಾಂಧೀಜಿ ಪುಣ್ಯತಿಥಿಯಂದು ಹಿಂದೂ ಮಹಾಸಭಾದ ಹೆಸರಿನಲ್ಲಿ ಕೆಲವು ವ್ಯಕ್ತಿಗಳು ಗಾಂಧೀಜಿಯವರಿಗೆ ಅವಮಾನ ಮಾಡಿರುವುದು ಹಾಗೂ ಗಾಂಧೀಜಿಯವರ ಹತ್ಯೆ ಮಾಡಿರುವ ಗೋಡ್ಸೆಗೆ ಜೈಕಾರ ಹಾಕಿರುವ ಕೃತ್ಯವನ್ನು ಖಂಡಿಸಿ ಕಾಂಗ್ರೆಸ್‌ ಬೆಂಗಳೂರಿನಲ್ಲಿ ಫೆ.4ರಂದು ಪ್ರತಿಭಟನೆ ಹಮ್ಮಿ ಕೊಂಡಿದೆ. ಕೇಂದ್ರ ಸರಕಾರ ಕೂಡಲೇ ಇಂಥ ಕೃತ್ಯಗಳ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕು ಎಂದವರು ಆಗ್ರಹಿಸಿದರು.

ಶಾಸಕಾಂಗ ಸಭೆಗೆ ಎಲ್ಲ ಶಾಸಕರು
ಫೆ.6 ಅಥವಾ 7ರಂದು ನಡೆಯುವ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಕ್ಷದ ಎಲ್ಲ 80 ಶಾಸಕರು ಭಾಗವಹಿಸುತ್ತಾರೆ ಎಂದು ದಿನೇಶ್‌ ಗುಂಡೂರಾವ್‌ ಹೇಳಿದರು. ಕಂಪ್ಲಿ ಶಾಸಕ ಗಣೇಶ್‌ ತಲೆಮರೆಸಿಕೊಂಡಿದ್ದಾರೆ. ಅವರ ಮೇಲೆ ಮುಂದಿನ ಕ್ರಮದ ಬಗ್ಗೆ ಸೋಮವಾರ ಪಕ್ಷದ ಸಮಿತಿ ಸಭೆ ನಡೆಸಲಿದೆ. ಸಮಿತಿಯ ವರದಿ ಆಧಾರದ ಮೇಲೆ ಕೆಪಿಸಿಸಿ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದರು.

ನಮ್ಮದೇ ಬಜೆಟ್‌
ಸಮ್ಮಿಶ್ರ ಸರಕಾರವು ಭದ್ರವಾಗಿದೆ. ನಾವೇ ಈ ಬಾರಿಯೂ ಬಜೆಟ್‌ ಮಂಡನೆ ಮಾಡಲಿದ್ದೇವೆ ಎಂದು ದಿನೇಶ್‌ ಗುಂಡೂರಾವ್‌ ತೆಂಕ ಎರ್ಮಾಳಿನ ರಾಜೀವ್‌ ಗಾಂಧಿ ಎಕಾಡೆಮಿ ಫಾರ್‌ ಪೊಲಿಟಿಕಲ್‌ ಸ್ಟಡೀಸ್‌ ಮುಖ್ಯ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತ ಹೇಳಿದರು.  ಐವನ್‌ ಡಿ”ಸೋಜ, ಎಂ. ಎ. ಗಫೂರ್‌, ನವೀನ್‌ಚಂದ್ರ ಶೆಟ್ಟಿ ಉಪಸ್ಥಿತರಿದ್ದರು.  ಬಳಿಕ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ದಿನೇಶ್‌ ಗುಂಡೂ ರಾವ್‌ ರವಿವಾರ ದೇವರ ದರ್ಶನ ಮಾಡಿದ ಬಳಿಕ ಪರ್ಯಾಯ ಶ್ರೀಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು.

ಟಾಪ್ ನ್ಯೂಸ್

shivaraj kumar

ಶಕ್ತಿಧಾಮದ ಮಕ್ಕಳೊಂದಿಗೆ ಶಿವಣ್ಣ ಗಣರಾಜ್ಯೋತ್ಸವ ಆಚರಣೆ

ಮೂವರಿಂದ ಪದ್ಮ ಪ್ರಶಸ್ತಿ ತಿರಸ್ಕಾರ; ಗುಲಾಂ ನಬಿ ಆಜಾದ್‌ಗೆ ಪದ್ಮ ಗೌರವ

ಮೂವರಿಂದ ಪದ್ಮ ಪ್ರಶಸ್ತಿ ತಿರಸ್ಕಾರ; ಗುಲಾಂ ನಬಿ ಆಜಾದ್‌ಗೆ ಪದ್ಮ ಗೌರವ

ನನಗೆ ಸಚಿವ ಸ್ಥಾನ ಬೇಕೇ ಬೇಕು: ಪಟ್ಟು ಹಿಡಿದ ಉಪ ಸ್ಪೀಕರ್ ಆನಂದ್ ಮಾಮನಿ

ನನಗೆ ಸಚಿವ ಸ್ಥಾನ ಬೇಕೇ ಬೇಕು: ಪಟ್ಟು ಹಿಡಿದ ಉಪ ಸ್ಪೀಕರ್ ಆನಂದ್ ಮಾಮನಿ

CM @ 2

ನಾಳೆ‌ ಬೊಮ್ಮಾಯಿ ಸರಕಾರಕ್ಕೆ 6 ತಿಂಗಳು : ಮುಂದೆ ಸಾಲು ಸಾಲು ಸವಾಲು

siddaramaiah

ಸಿದ್ದುಗೆ ಹೈಕಮಾಂಡ್ ಟಕ್ಕರ್ : ಮೇಲ್ಮನೆ ವಿಪಕ್ಷ ನಾಯಕತ್ವದ ಹಿಂದೆ ಲೆಕ್ಕಾಚಾರ

Gurgaon man arrested bought 5 Mercedes cars in 3 Years

ಹೀಗೊಂದು ಹಗರಣ: ಮೂರು ವರ್ಷದಲ್ಲಿ ಐದು ಮರ್ಸಿಡಿಸ್ ಕಾರು ಖರೀದಿ ಮಾಡಿದಾತನ ಬಂಧನ!

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 1,000 ಅಂಕ ಇಳಿಕೆ; ಜ.27ರಂದು ಲಾಭಗಳಿಸಿದ ಷೇರು ಯಾವುದು?

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 1,000 ಅಂಕ ಇಳಿಕೆ; ಜ.27ರಂದು ಲಾಭಗಳಿಸಿದ ಷೇರು ಯಾವುದು?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6marakada

ಮರಕಡ ಪರಾಶಕ್ತಿ ಕ್ಷೇತ್ರದ ಶ್ರೀ ನರೇಂದ್ರನಾಥ ಸ್ವಾಮೀಜಿ ವಿಧಿವಶ

ಶಿರಾಡಿ ಘಾಟಿ: 6 ತಿಂಗಳು ರಸ್ತೆ ಮುಚ್ಚಿದರೆ ತತ್ತರಿಸಲಿದೆ ಆರ್ಥಿಕತೆ

ಶಿರಾಡಿ ಘಾಟಿ: 6 ತಿಂಗಳು ರಸ್ತೆ ಮುಚ್ಚಿದರೆ ತತ್ತರಿಸಲಿದೆ ಆರ್ಥಿಕತೆ

ಉಡುಪಿ: 1,392 ಪಾಸಿಟಿವ್‌, 1 ಸಾವು; ದ.ಕ.: 888 ಮಂದಿಗೆ ಕೋವಿಡ್‌, 4 ಸಾವು

ಉಡುಪಿ: 1,392 ಪಾಸಿಟಿವ್‌, 1 ಸಾವು; ದ.ಕ.: 888 ಮಂದಿಗೆ ಕೋವಿಡ್‌, 4 ಸಾವು

34 ಸಾವಿರ ಹೆ. ಡೀಮ್ಡ್ ಅರಣ್ಯ ರದ್ದು: ಸಚಿವ ಸುನಿಲ್‌ ಕುಮಾರ್‌

34 ಸಾವಿರ ಹೆ. ಡೀಮ್ಡ್ ಅರಣ್ಯ ರದ್ದು: ಸಚಿವ ಸುನಿಲ್‌ ಕುಮಾರ್‌

ಗುರಿ ತೋರಿದ ಗುರುವಿನ ಕಡೆಗೆ ಸ್ವಾಭಿಮಾನದ ಜಾಥಾ

ಗುರಿ ತೋರಿದ ಗುರುವಿನ ಕಡೆಗೆ ಸ್ವಾಭಿಮಾನದ ಜಾಥಾ

MUST WATCH

udayavani youtube

ರಾಜಪಥ ಪರೇಡ್ ನಲ್ಲಿ ಯುದ್ಧವಿಮಾನಗಳ ಪವರ್ ಶೋ

udayavani youtube

73ನೇ ಗಣರಾಜ್ಯೋತ್ಸವದಲ್ಲಿ NCC ತಂಡ ಮುನ್ನಡೆಸಿದ ಮೈಸೂರಿನ ಯುವತಿ

udayavani youtube

ಪುನೀತ್ ಗೆ ಸಿಗದ ಪದ್ಮಪ್ರಶಸ್ತಿ: ಮಾತು ತಪ್ಪಿದ ಬೊಮ್ಮಾಯಿ

udayavani youtube

BSF ಮಹಿಳಾ ‘ಸೀಮಾ ಭವಾನಿ’ ತಂಡದಿಂದ ರೋಮಾಂಚಕ ಬೈಕ್ ಸಾಹಸ

udayavani youtube

ಭಯಾನಕ ಹೆಬ್ಬಾವಿನ ಎದುರು ಈ ಬೆಕ್ಕಿನ ಧೈರ್ಯ ನೋಡಿ!!

ಹೊಸ ಸೇರ್ಪಡೆ

shivaraj kumar

ಶಕ್ತಿಧಾಮದ ಮಕ್ಕಳೊಂದಿಗೆ ಶಿವಣ್ಣ ಗಣರಾಜ್ಯೋತ್ಸವ ಆಚರಣೆ

cm

ಸಂಪುಟ ಸಭೆಯ ಅಜೆಂಡಾದಲ್ಲಿ ಏನೇನು ಇದೆ ?

8rice

4.92 ಲಕ್ಷ ಮೌಲ್ಯದ ಅಕ್ರಮ ಪಡಿತರ ಅಕ್ಕಿ ವಶ

ಮೂವರಿಂದ ಪದ್ಮ ಪ್ರಶಸ್ತಿ ತಿರಸ್ಕಾರ; ಗುಲಾಂ ನಬಿ ಆಜಾದ್‌ಗೆ ಪದ್ಮ ಗೌರವ

ಮೂವರಿಂದ ಪದ್ಮ ಪ್ರಶಸ್ತಿ ತಿರಸ್ಕಾರ; ಗುಲಾಂ ನಬಿ ಆಜಾದ್‌ಗೆ ಪದ್ಮ ಗೌರವ

ನನಗೆ ಸಚಿವ ಸ್ಥಾನ ಬೇಕೇ ಬೇಕು: ಪಟ್ಟು ಹಿಡಿದ ಉಪ ಸ್ಪೀಕರ್ ಆನಂದ್ ಮಾಮನಿ

ನನಗೆ ಸಚಿವ ಸ್ಥಾನ ಬೇಕೇ ಬೇಕು: ಪಟ್ಟು ಹಿಡಿದ ಉಪ ಸ್ಪೀಕರ್ ಆನಂದ್ ಮಾಮನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.