ಮಾರುಕಟ್ಟೆಗೆ ಪಯಣ…ಇರಲಿ ಕಟ್ಟೆಚ್ಚರ

Team Udayavani, May 28, 2020, 6:45 AM IST

ಮಾರುಕಟ್ಟೆಗೆ ಪಯಣ…ಇರಲಿ ಕಟ್ಟೆಚ್ಚರ

ಕೋವಿಡ್ ಲಾಕ್‌ಡೌನ್‌ ನಿಯಮಾವಳಿಗಳಲ್ಲಿ ಈಗಾಗಲೇ ಭಾರೀ ಸಡಿಲಿಕೆಗಳನ್ನು ಮಾಡಿದ್ದು ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ. ನಾವೂ ವಿವಿಧ ಕೆಲಸಕಾರ್ಯಗಳಿಗಾಗಿ ಮನೆಯಿಂದ ಹೊರಬರ ಲಾರಂಭಿಸಿದ್ದೇವೆ. ಆದರೆ ಈ ಹಿಂದಿನಂತೆ ರಾಜಾರೋಷವಾಗಿ ಗಲ್ಲಿಗಲ್ಲಿ ತಿರುಗಾಡಿದರೆ ನಮಗೆ ಅಪಾಯ ಕಟ್ಟಿಟ್ಟ ಬುತ್ತಿ. ಯಾವುದೇ ಉದ್ಯೋಗ ಅಥವಾ ತಮ್ಮ ದೈನಂದಿನ ವ್ಯವಹಾರಕ್ಕಾಗಿ ಹೊರಹೋಗುವಾಗ ಕೆಲವೊಂದು ನಿಯಮಗಳನ್ನು ಪಾಲಿಸುವುದು ನಮ್ಮ ಹಿತದೃಷ್ಟಿಯಿಂದ ಒಳಿತು. ಅದರಲ್ಲೂ ದಿನಸಿ ಮತ್ತು ತರಕಾರಿ ಖರೀದಿಗಾಗಿ ಅಂಗಡಿ ಯಾ ಮಾರುಕಟ್ಟೆಗೆ ತೆರಳುವ ಸಂದರ್ಭದಲ್ಲಿ ಅತೀ ಹೆಚ್ಚಿನ ಮುನ್ನೆಚ್ಚರಿಕೆಯನ್ನು ವಹಿಸುವ ಅಗತ್ಯವಿದೆ. ಇಲ್ಲಿಗೆ ಎಲ್ಲ ವರ್ಗದ ಜನರು ಬರುವುದರಿಂದ ಪ್ರತಿಯೋರ್ವರು ತಮ್ಮ ಆರೋಗ್ಯದತ್ತ ಹೆಚ್ಚಿನ ನಿಗಾ ಇರಿಸುವುದು ಸೂಕ್ತ. ನಾವು ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಅಂಗಡಿ, ಮಾರುಕಟ್ಟೆಯತ್ತ ಹೆಜ್ಜೆ ಇರಿಸಿದಲ್ಲಿ ಅದು ಕೇವಲ ನಮ್ಮ ಆರೋಗ್ಯದ ದೃಷ್ಟಿಯಿಂದ ಮಾತ್ರವಲ್ಲದೆ ಸ್ವಸ್ಥ ಸಮಾಜಕ್ಕೂ ಪೂರಕ.

ದಿನಸಿ ಸಾಮಗ್ರಿ, ಹಣ್ಣು-ತರಕಾರಿಗಳು ನಮ್ಮ ದೈನಂದಿನ ಆಹಾರ ಕ್ರಮದ ಪ್ರಮುಖ ವಸ್ತುಗಳಾಗಿವೆ. ಇವುಗಳನ್ನು ಖರೀದಿಸಲೆಂದು ಅಂಗಡಿ ಯಾ ಮಾರುಕಟ್ಟೆಗೆ ಹೋಗಲೇಬೇಕು. ಈ ಸಂದರ್ಭ ಯಾವ ಮುನ್ನೆಚ್ಚರಿಕೆ ವಹಿಸಬೇಕು. ಮಾಹಿತಿ ಇಲ್ಲಿದೆ.

ತರಕಾರಿ ಅಥವಾ ದಿನಸಿ ಸಾಮಗ್ರಿಗಳ ಖರೀದಿಗಾಗಿ ನಾವು ಅಂಗಡಿ ಅಥವಾ ಮಾರುಕಟ್ಟೆಗೆ ತೆರಳುವ ಮುನ್ನ ಮಾಸ್ಕ್, ಗ್ಲೌಸ್‌ ಧರಿಸುವುದು ಅತ್ಯಗತ್ಯ. ಜತೆಯಲ್ಲಿ ಮನೆಯಿಂದ ಕೈಚೀಲ ಕೊಂಡೊಯ್ಯುವುದನ್ನು ಮರೆಯದಿರಿ.

ಮಾರುಕಟ್ಟೆಗೆ ಹೋಗುವ ಮುನ್ನ ಅಗತ್ಯವಿರುವ ವಸ್ತುಗಳ ಪಟ್ಟಿಯನ್ನು ಮಾಡಿಕೊಳ್ಳಿ. ಇದರಿಂದ ಪದೇ ಪದೆ ಗಿರಕಿ ಹೊಡೆಯುವುದು ತಪ್ಪುತ್ತದೆ. ಈ ರೀತಿ ಮಾಡಿ ನೀವು ಚೀಟಿಯನ್ನು ಕೊಟ್ಟು ದೂರ ನಿಂತು ಮತ್ತೆ ಸಾಮಗ್ರಿಗಳನ್ನು ಪಡೆಯಲು ಸಾಧ್ಯ.

ನಗರದಲ್ಲಿ ಶಾಪಿಂಗ್‌ಗೆ ಹೋಗುವುದು ಎಂದರೆ ಮನೆ ಮಂದಿಯೆಲ್ಲ ಒಟ್ಟಾಗಿ ಹೋಗುವವರೇ ಹೆಚ್ಚು. ಆದರೆ ಈಗ ಪರಿಸ್ಥಿತಿ ಸರಿಯಾಗಿಲ್ಲ. ಮಕ್ಕಳು, ಹಿರಿಯ ನಾಗರಿಕರು ಸಾಧ್ಯವಾದಷ್ಟು ಈ ಕಾರ್ಯದಿಂದ ದೂರ ಉಳಿಯುವುದು ಒಳಿತು.

ನೀವು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಳಸುತ್ತೀರಿ ಎಂದಾದರೆ ನಿಮ್ಮ ಸುರಕ್ಷತೆಯ ಬಗೆಗೆ ಎಚ್ಚರ ಇರಲಿ. ಜನದಟ್ಟಣೆ ಇದ್ದರೆ ಒಂದಷ್ಟು ಸಮಯದ ಬಳಿಕ ಹೋಗಿ. ಸ್ನೇಹಿತರೊಂದಿಗೆ ಉಭಯಕುಶಲೋಪರಿಗೆ ಕಡಿವಾಣ ಹಾಕಿ.

ಯಾವುದೇ ವಸ್ತುಗಳನ್ನು ನೀವಾಗಿ ಸ್ಪರ್ಶಿಸಬೇಡಿ. ಗ್ಲೌಸ್‌ ಧರಿಸದೇ ಇದ್ದ ಸಂದರ್ಭ ಅನಿವಾರ್ಯವಾಗಿ ಸ್ಪರ್ಶಿಸಿದ್ದೇ ಆದಲ್ಲಿ ತತ್‌ಕ್ಷಣ ಸ್ಯಾನಿಟೈಸರ್‌ ಬಳಸಿ ಕೈಗಳನ್ನು ಉಜ್ಜಿಕೊಳ್ಳಿ. ಅಷ್ಟೇ ಅಲ್ಲದೆ ಅಲ್ಲಿನ ಇತರ ಯಾವುದೇ ವಸ್ತುಗಳನ್ನು ಅನಗತ್ಯವಾಗಿ ಮುಟ್ಟದಿರಿ.

ಅಂಗಡಿ/ಮಾರುಕಟ್ಟೆಯಿಂದ ಹಿಂದಿರುಗಿದಾಕ್ಷಣ ನಿಮ್ಮ ಸ್ವಚ್ಛತೆಯತ್ತ ಗಮನ ಹರಿಸಿ. ಸ್ನಾನ ಮಾಡಿ ಬಟ್ಟೆಗಳನ್ನು ತೊಳೆದು ಬಿಸಿಲಿನಲ್ಲಿ ಒಣಗಿಸಿ. ತರಕಾರಿಗಳನ್ನು ನೀರಿನಲ್ಲಿ ಅದರಲ್ಲೂ ಉಪ್ಪು ನೀರಿನಲ್ಲಿ ಚೆನ್ನಾಗಿ ತೊಳೆದು ಆ ಬಳಿಕ ಅಡುಗೆಗೆ ಬಳಸಿ.

ಟಾಪ್ ನ್ಯೂಸ್

ಸನ್‌ರೈಸರ್ ಹೈದರಾಬಾದ್‌ ವಿರುದ್ದ ಪಂಜಾಬ್‌ ಕಿಂಗ್ಸ್‌ ಗೆ 5 ವಿಕೆಟ್‌ ಜಯ

ಸನ್‌ರೈಸರ್ ಹೈದರಾಬಾದ್‌ ವಿರುದ್ದ ಪಂಜಾಬ್‌ ಕಿಂಗ್ಸ್‌ ಗೆ 5 ವಿಕೆಟ್‌ ಜಯ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಗೆ ಧನ್ಯವಾದ ಹೇಳಿದ ಲಂಕಾ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಗೆ ಧನ್ಯವಾದ ಹೇಳಿದ ಲಂಕಾ

ಕಾರು ಚಾಲಕನ ಆಟಾಟೋಪ: ಮಹಿಳೆಯರು ಕಕ್ಕಾಬಿಕ್ಕಿ; ಆರೋಪಿ ಪೊಲೀಸರ ವಶ

ಕಾರು ಚಾಲಕನ ಆಟಾಟೋಪ: ಮಹಿಳೆಯರು ಕಕ್ಕಾಬಿಕ್ಕಿ; ಆರೋಪಿ ಪೊಲೀಸರ ವಶ

ಸಣ್ಣ ಸಾಧನೆಯಲ್ಲ, ಇದನ್ನು ಮುಂದುವರಿಸಿ: ಮೋದಿ

ಸಣ್ಣ ಸಾಧನೆಯಲ್ಲ, ಇದನ್ನು ಮುಂದುವರಿಸಿ: ಮೋದಿ

ಜಾನುವಾರುಗಳ ಹಾನಿಗೆ ಪರಿಹಾರ: ಸಚಿವ ಪ್ರಭು ಚವ್ಹಾಣ್‌

ಜಾನುವಾರುಗಳ ಹಾನಿಗೆ ಪರಿಹಾರ: ಸಚಿವ ಪ್ರಭು ಚವ್ಹಾಣ್‌

“ಅಭ್ಯುದಯಕ್ಕೆ ಸಾಧು, ಸಂತರು ಪ್ರೇರಣೆ’

“ಅಭ್ಯುದಯಕ್ಕೆ ಸಾಧು, ಸಂತರು ಪ್ರೇರಣೆ’

ರೈತರಿಗೆ ಸರ್ಕಾರವನ್ನೇ ಬದಲಿಸುವ ತಾಕತ್ತಿದೆ’: ಚಂದ್ರಶೇಖರ್‌ ರಾವ್‌

ರೈತರಿಗೆ ಸರ್ಕಾರವನ್ನೇ ಬದಲಿಸುವ ತಾಕತ್ತಿದೆ’: ಚಂದ್ರಶೇಖರ್‌ ರಾವ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶಿಕ್ಷಕರ ನೇಮಕಾತಿ ಪರೀಕ್ಷೆ ದ.ಕ.: 1,606 ಅಭ್ಯರ್ಥಿಗಳು ಗೈರು

ಶಿಕ್ಷಕರ ನೇಮಕಾತಿ ಪರೀಕ್ಷೆ ದ.ಕ.: 1,606 ಅಭ್ಯರ್ಥಿಗಳು ಗೈರು

ಆಸ್ಟ್ರೇಲಿಯಾದ ಫೆಡರಲ್‌ ಚುನಾವಣೆಯಲ್ಲಿ ಮೀರಾ ಡಿ’ಸಿಲ್ವ ಸೋಲು

ಆಸ್ಟ್ರೇಲಿಯಾದ ಫೆಡರಲ್‌ ಚುನಾವಣೆಯಲ್ಲಿ ಮೀರಾ ಡಿ’ಸಿಲ್ವ ಸೋಲು

ಚುನಾವಣೆಗಾಗಿ ಕಾಂಗ್ರೆಸ್‌ ವಿವಾದ ಸೃಷ್ಟಿ: ಹರಿಕೃಷ್ಣ ಬಂಟ್ವಾಳ್‌

ಚುನಾವಣೆಗಾಗಿ ಕಾಂಗ್ರೆಸ್‌ ವಿವಾದ ಸೃಷ್ಟಿ: ಹರಿಕೃಷ್ಣ ಬಂಟ್ವಾಳ್‌

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿರುಸು ಪಡೆದ ಮಳೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿರುಸು ಪಡೆದ ಮಳೆ

ವಿಮಾನ ದುರಂತದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಅರ್ಪಣೆ

ವಿಮಾನ ದುರಂತದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಅರ್ಪಣೆ

MUST WATCH

udayavani youtube

ಉಡುಪಿಯಲ್ಲಿ ‘ ಮಾವಿನ ಮೇಳ ‘ | ನಾಳೆ ( may 23) ಕೊನೇ ದಿನ

udayavani youtube

ಶಿರ್ವ : ನೂತನ ಹೈಟೆಕ್‌ ಬಸ್ಸು ನಿಲ್ದಾಣ ಲೋಕಾರ್ಪಣೆ

udayavani youtube

ಬೆಳ್ತಂಗಡಿಯಲ್ಲೊಂದು ಗೋಡಂಬಿಯಾಕಾರದ ಮೊಟ್ಟೆ ಇಡುವ ಕೋಳಿ..

udayavani youtube

ಆಗ ನಿಮ್ಮಲ್ಲಿ 2 ಆಯ್ಕೆಗಳಿರುತ್ತವೆ .. ಅದೇನಂದ್ರೆ..

udayavani youtube

ದತ್ತಪೀಠದಲ್ಲಿ ನಮಾಜ್.. ವಿಡಿಯೋ ವೈರಲ್ : ಜಿಲ್ಲಾಧಿಕಾರಿ ಹೇಳಿದ್ದೇನು ?

ಹೊಸ ಸೇರ್ಪಡೆ

ಸನ್‌ರೈಸರ್ ಹೈದರಾಬಾದ್‌ ವಿರುದ್ದ ಪಂಜಾಬ್‌ ಕಿಂಗ್ಸ್‌ ಗೆ 5 ವಿಕೆಟ್‌ ಜಯ

ಸನ್‌ರೈಸರ್ ಹೈದರಾಬಾದ್‌ ವಿರುದ್ದ ಪಂಜಾಬ್‌ ಕಿಂಗ್ಸ್‌ ಗೆ 5 ವಿಕೆಟ್‌ ಜಯ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಗೆ ಧನ್ಯವಾದ ಹೇಳಿದ ಲಂಕಾ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಗೆ ಧನ್ಯವಾದ ಹೇಳಿದ ಲಂಕಾ

ಕಾರು ಚಾಲಕನ ಆಟಾಟೋಪ: ಮಹಿಳೆಯರು ಕಕ್ಕಾಬಿಕ್ಕಿ; ಆರೋಪಿ ಪೊಲೀಸರ ವಶ

ಕಾರು ಚಾಲಕನ ಆಟಾಟೋಪ: ಮಹಿಳೆಯರು ಕಕ್ಕಾಬಿಕ್ಕಿ; ಆರೋಪಿ ಪೊಲೀಸರ ವಶ

ಸಣ್ಣ ಸಾಧನೆಯಲ್ಲ, ಇದನ್ನು ಮುಂದುವರಿಸಿ: ಮೋದಿ

ಸಣ್ಣ ಸಾಧನೆಯಲ್ಲ, ಇದನ್ನು ಮುಂದುವರಿಸಿ: ಮೋದಿ

ಜಾನುವಾರುಗಳ ಹಾನಿಗೆ ಪರಿಹಾರ: ಸಚಿವ ಪ್ರಭು ಚವ್ಹಾಣ್‌

ಜಾನುವಾರುಗಳ ಹಾನಿಗೆ ಪರಿಹಾರ: ಸಚಿವ ಪ್ರಭು ಚವ್ಹಾಣ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.