Udayavni Special

ಶಾಲಾ ಪಠ್ಯದಲ್ಲಿ ಯಕ್ಷಗಾನ: ಪ್ರೊ| ಎಂ.ಎ. ಹೆಗಡೆ

ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರದಾನ

Team Udayavani, Nov 8, 2020, 11:23 PM IST

yaksha

ಕರ್ನಾಟಕ ಯಕ್ಷಗಾನ ಅಕಾಡೆಮಿಯ ಗೌರವ ಪ್ರಶಸ್ತಿ, ಯಕ್ಷಸಿರಿ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.

ಮಂಗಳೂರು: ಯಕ್ಷಗಾನವನ್ನು ಶಾಲಾ ಪಠ್ಯವಾಗಿಸುವ ನಿಟ್ಟಿನಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯು ಈಗಾಗಲೇ ಕಾರ್ಯಚಟುವಟಿಕೆ ಆರಂಭಿಸಿದೆ. ಸರಕಾರದ ಆದೇಶ ಶೀಘ್ರದಲ್ಲಿ ಪ್ರಕಟವಾಗಲಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ| ಎಂ.ಎ. ಹೆಗಡೆ ತಿಳಿಸಿದ್ದಾರೆ.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ರವಿವಾರ ನಡೆದ ಕರ್ನಾಟಕ ಯಕ್ಷಗಾನ ಅಕಾಡೆಮಿಯ 2019ನೇ ಸಾಲಿನ ಗೌರವ ಪ್ರಶಸ್ತಿ, ಯಕ್ಷಸಿರಿ ಪ್ರಶಸ್ತಿ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಾಲೆಯಲ್ಲಿ ಯೋಗ, ನೃತ್ಯ, ಸಂಗೀತದಂತೆ ಯಕ್ಷಗಾನಕ್ಕೂ ಅವಕಾಶ ನೀಡಬೇಕೆಂಬ ಆಗ್ರಹವನ್ನು ಈಗಾಗಲೇ ಸರಕಾರದ ಮುಂದಿಡಲಾಗಿದೆ. ಸಕಾರಾತ್ಮಕ ಸ್ಪಂದನೆ ದೊರಕಿದೆ. ಪಠ್ಯಪುಸ್ತಕ ನಿರ್ದೇಶನಾಲಯವು ಈ ಕುರಿತಂತೆ ಮುಂದಿನ ಹೆಜ್ಜೆ ಇಡಲಿದೆ. ಶೀಘ್ರದಲ್ಲಿ ಸರಕಾರದಿಂದ ಆದೇಶ ಬರುವ ನಿರೀಕ್ಷೆಯಿದ್ದು, ಪಠ್ಯ ಪುಸ್ತಕ ರಚನೆ ಸಮಿತಿ ನೇಮಕವಾಗಲಿದೆ ಎಂದರು.

ಪ್ರಶಸ್ತಿಗೆ ಅರ್ಜಿ ಬೇಕಿಲ್ಲ
ಯಕ್ಷಗಾನ ಅಕಾಡೆಮಿಯಲ್ಲಿ ಅರ್ಜಿ ಹಾಕದೆ ಪ್ರಶಸ್ತಿ ನೀಡಲಾಗುತ್ತಿದೆ. ಅರ್ಜಿ ಹಾಕಿದವರಿಗೆ ಪ್ರಶಸ್ತಿ ಕೊಡುವ ಸಂಪ್ರದಾಯವನ್ನು ನನ್ನ ಅವಧಿಯಲ್ಲಿ ಪಾಲಿಸಲಿಲ್ಲ ಎಂದರು.  ಕಾರ್ಯಕ್ರಮ ಉದ್ಘಾಟಿಸಿದ ಮಂಗಳೂರು ಮೇಯರ್‌ ದಿವಾಕರ ಪಾಂಡೇಶ್ವರ ಮಾತನಾಡಿ, ಮುಂದಿನ ಪೀಳಿಗೆಗಾಗಿ ಯಕ್ಷಗಾನವನ್ನು ಮತ್ತಷ್ಟು ವಿಸ್ತಾರವಾಗಿ ಬೆಳಸಬೇಕಾಗಿದೆ ಎಂದರು.

ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಎಸ್‌. ಪ್ರದೀಪ್‌ ಕುಮಾರ್‌ ಕಲ್ಕೂರ ಮಾತನಾಡಿ, ವ್ಯಾಕರಣ ಬದ್ಧ ಕನ್ನಡ ಕಾಣಬೇಕಾದರೆ ಅದು ಯಕ್ಷಗಾನ ವೇದಿಕೆಯಲ್ಲಿ ಮಾತ್ರ ಸಾಧ್ಯ. ಯಕ್ಷಗಾನದ ಸತ್ವ ಶಾಸ್ತ್ರೀಯ ಚೌಕಟ್ಟಿನೊಳಗೆ ಸೀಮೋಲ್ಲಂಘನೆವಾಗಲಿ ಎಂದು ಹಾರೈಸಿದರು.

ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ್‌ ಕತ್ತಲಸಾರ್‌ ಮಾತನಾಡಿ, ತುಳು ಸಾಹಿತ್ಯ ಅಕಾಡೆಮಿ ಯಕ್ಷಗಾನಕ್ಕೆ ಸದಾ ಪ್ರೋತ್ಸಾಹ ನೀಡಲು ಎಂದೆಂದಿಗೂ ಬದ್ಧವಿದೆ ಎಂದರು.

ಯಕ್ಷಗಾನ ಅಕಾಡೆಮಿ ರಿಜಿಸ್ಟ್ರಾರ್‌ ಎಸ್‌. ಎಚ್‌. ಶಿವರುದ್ರಪ್ಪ ಸ್ವಾಗತಿಸಿದರು. ರಾಧಾಕೃಷ್ಣ, ಯೋಗೀಶ್‌ ರಾವ್‌, ದಾಮೋದರ್‌ ಅವರು ಪ್ರಶಸ್ತಿ ಪುರಸ್ಕೃತರ ವಿವರ ಓದಿದರು. ಕದ್ರಿ ನವನೀತ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಪ್ರಶಸ್ತಿ ಪುರಸ್ಕೃತರು
ಚಂದ್ರಶೇಖರ ದಾಮ್ಲೆ ಅವರಿಗೆ 2019ನೇ ಸಾಲಿನ ಗೌರವ ಪ್ರಶಸ್ತಿ ಪುರಸ್ಕಾರ, ಕುರಿಯ ಗಣಪತಿ ಶಾಸ್ತ್ರಿ ಮತ್ತು ಉಬರಡ್ಕ ಉಮೇಶ್‌ ಶೆಟ್ಟಿ ಅವರಿಗೆ 2019ನೇ ಸಾಲಿನ ಯಕ್ಷಸಿರಿ ವಾರ್ಷಿಕ ಪ್ರಶಸ್ತಿ ಪುರಸ್ಕಾರ ಪ್ರದಾನಿಸಲಾಯಿತು. ಮಂಜುನಾಥ ಭಟ್‌ ಹೊಸ್ತೋಟ ಅವರು ರಚಿಸಿದ ಯಕ್ಷಗಾನ “ವೀರಾಂಜನೇಯ ವೈಭವ’ ಕೃತಿಯು 2019ನೇ ಸಾಲಿನ ಪುಸ್ತಕ ಬಹುಮಾನಕ್ಕೆ ಆಯ್ಕೆಯಾಗಿದ್ದು, ಲೇಖಕರು ನಿಧನಹೊಂದಿರುವ ಕಾರಣ ಪುಸ್ತಕ ಮುದ್ರಿಸಿದ ಶ್ರೀ ಗುರುದೇವ ಪ್ರಕಾಶನಕ್ಕೆ ಪ್ರಶಸ್ತಿ ಪ್ರಕಟಿಸಲಾಗಿದ್ದು, ಯಶವಂತ ವಿಟ್ಲ ಅವರು ಸ್ವೀಕರಿಸಿದರು. “ಅಗರಿ ಮಾರ್ಗ’ ಕೃತಿಗಾಗಿ ಕೃಷ್ಣಪ್ರಕಾಶ್‌ ಉಳಿತ್ತಾಯ ಅವರಿಗೆ ಪುಸ್ತಕ ಬಹುಮಾನ ಪ್ರಶಸ್ತಿ ಪ್ರದಾನಿಸಲಾಯಿತು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಈ ಬಾರಿ ಚಳಿಗಾಲದ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಮಂಡನೆ :ಸಚಿವ ಪ್ರಭು ಚವ್ಹಾಣ್

ಈ ಬಾರಿ ಚಳಿಗಾಲದ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಮಂಡನೆ :ಸಚಿವ ಪ್ರಭು ಚವ್ಹಾಣ್

ದೇಶದ ಭದ್ರತೆಗೆ ಧಕ್ಕೆ: ಕೇಂದ್ರ ಸರ್ಕಾರದಿಂದ ಮತ್ತೆ ಚೀನಾದ 43 ಮೊಬೈಲ್ ಆ್ಯಪ್ ನಿಷೇಧ

ದೇಶದ ಭದ್ರತೆಗೆ ಧಕ್ಕೆ: ಕೇಂದ್ರ ಸರ್ಕಾರದಿಂದ ಮತ್ತೆ ಚೀನಾದ 43 ಮೊಬೈಲ್ ಆ್ಯಪ್ ನಿಷೇಧ

ಕಡಂದಲೆ: ಶಾಂಭವಿ ನದಿಯಲ್ಲಿ ಮುಳುಗಿ ನಾಲ್ವರು ಸಾವು

ಮೂಡುಬಿದಿರೆ: ಮದುವೆ ಸಮಾರಂಭಕ್ಕೆ ಬಂದ ನಾಲ್ವರು ಶಾಂಭವಿ ನದಿಯಲ್ಲಿ ಮುಳುಗಿ ಸಾವು

ವಿಶ್ವ ಚಿತ್ರ ಸಂತೆ…ಚಿಲ್ಡ್ರನ್‌ ಆಫ್‌ ಹೆವನ್‌: ಅಣ್ಣನ ಕಣ್ಣಿನಲ್ಲಿ ತಂಗಿಯ ಕನಸು

ವಿಶ್ವ ಚಿತ್ರ ಸಂತೆ…ಚಿಲ್ಡ್ರನ್‌ ಆಫ್‌ ಹೆವನ್‌: ಅಣ್ಣನ ಕಣ್ಣಿನಲ್ಲಿ ತಂಗಿಯ ಕನಸು

“ಬುಟ್ಟ ಬೊಮ್ಮ’ ಮತ್ತೆ ಟ್ರೆಂಡಿಂಗ್‌; ಟಾಲಿವುಡ್ ನಲ್ಲಿ ಹೊಸ ಮೈಲಿಗಲ್ಲು ಸೃಷ್ಟಿ

“ಬುಟ್ಟ ಬೊಮ್ಮ’ ಮತ್ತೆ ಟ್ರೆಂಡಿಂಗ್‌; ಟಾಲಿವುಡ್ ನಲ್ಲಿ ಹೊಸ ಮೈಲಿಗಲ್ಲು ಸೃಷ್ಟಿ

ಅಧಿಕಾರ ಎನ್ನುವುದು ನೀರ ಮೇಲಿನ ಗುಳ್ಳೆ ಇದ್ದಂತೆ, ಯಾವತ್ತೂ ಶಾಶ್ವತವಲ್ಲ : ಡಿಕೆಶಿ

ಅಧಿಕಾರ ಎನ್ನುವುದು ನೀರ ಮೇಲಿನ ಗುಳ್ಳೆ ಇದ್ದಂತೆ, ಯಾವತ್ತೂ ಶಾಶ್ವತವಲ್ಲ : ಡಿಕೆಶಿ

ಆಸೀಸ್ ಟೆಸ್ಟ್ ಸರಣಿಯಿಂದ ರೋಹಿತ್, ಇಶಾಂತ್ ಶರ್ಮಾ ಔಟ್! ವರದಿ

ಆಸೀಸ್ ಟೆಸ್ಟ್ ಸರಣಿಯಿಂದ ರೋಹಿತ್, ಇಶಾಂತ್ ಶರ್ಮಾ ಔಟ್! ವರದಿ





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಡಂದಲೆ: ಶಾಂಭವಿ ನದಿಯಲ್ಲಿ ಮುಳುಗಿ ನಾಲ್ವರು ಸಾವು

ಮೂಡುಬಿದಿರೆ: ಮದುವೆ ಸಮಾರಂಭಕ್ಕೆ ಬಂದ ನಾಲ್ವರು ಶಾಂಭವಿ ನದಿಯಲ್ಲಿ ಮುಳುಗಿ ಸಾವು

ಪ್ಲಾಸ್ಟಿಕ್‌ ಸಂಗ್ರಹಣೆ ಕೇಂದ್ರ ಸ್ಥಾಪನೆಗೆ ಪ್ರಸ್ತಾವ

ಪ್ಲಾಸ್ಟಿಕ್‌ ಸಂಗ್ರಹಣೆ ಕೇಂದ್ರ ಸ್ಥಾಪನೆಗೆ ಪ್ರಸ್ತಾವ

ಸಮುದ್ರದಲೆಯಲ್ಲಿ ನೀಲಿ ಬೆಳಕಿನಾಟ: ತಡರಾತ್ರಿಯವರೆಗೂ ಬೀಚ್ ನಲ್ಲಿ ಕುತೂಹಲಿಗರ ದಂಡು

ಸಮುದ್ರದಲೆಯಲ್ಲಿ ನೀಲಿ ಬೆಳಕಿನಾಟ: ತಡರಾತ್ರಿಯವರೆಗೂ ಬೀಚ್ ನಲ್ಲಿ ಕುತೂಹಲಿಗರ ದಂಡು

ನ.27ರಿಂದ ಪಾವಂಜೆ ನೂತನ ಮೇಳದ ತಿರುಗಾಟ ಆರಂಭ: ವರ್ಷದ ಬುಕ್ಕಿಂಗ್ ಪೂರ್ಣ

ನ.27ರಿಂದ ಪಾವಂಜೆ ನೂತನ ಮೇಳದ ತಿರುಗಾಟ ಆರಂಭ: ವರ್ಷದ ಬುಕ್ಕಿಂಗ್ ಪೂರ್ಣ

ಮಂಗಳೂರು: ಫಳ್ನೀರ್ ಬಳಿ ಯುವಕನ ಮೇಲೆ ತಲವಾರು ದಾಳಿ

ಮಂಗಳೂರು: ಫಳ್ನೀರ್ ಬಳಿ ಯುವಕನ ಮೇಲೆ ತಲವಾರು ದಾಳಿ

MUST WATCH

udayavani youtube

ಕೊರೊನಾ ಪರಿಣಾಮ ಅಧ್ಯಯನಕ್ಕಾಗಿ ರೋಡ್ ಆಶ್ರಮ್ ಅಭಿಯಾನ

udayavani youtube

Auto Rickshaw driver feeds stray dogs in Surathkal | Umesh Devadiga | Udayavani

udayavani youtube

ಸುರತ್ಕಲ್ ನ ಪ್ರಥಮ ರಿಕ್ಷಾ ಚಾಲಕಿ

udayavani youtube

ಭೂಲೋಕದ ಅಮೃತ ವಾದ ತುಪ್ಪವನ್ನು ಸರಿಯಾಗಿ ಬಳಸುವುದು ಹೇಗೆ ?

udayavani youtube

Nittur Swarna rice Brand ಶಾಲೆಯ ಮಕ್ಕಳು ಸಿದ್ಧಪಡಿಸಿದ ನಿಟ್ಟೂರು ಸ್ವರ್ಣ ಅಕ್ಕಿ ಬ್ರಾಂಡ್

ಹೊಸ ಸೇರ್ಪಡೆ

ಈ ಬಾರಿ ಚಳಿಗಾಲದ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಮಂಡನೆ :ಸಚಿವ ಪ್ರಭು ಚವ್ಹಾಣ್

ಈ ಬಾರಿ ಚಳಿಗಾಲದ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಮಂಡನೆ :ಸಚಿವ ಪ್ರಭು ಚವ್ಹಾಣ್

YG-TDY-1

ಪ್ರವಾಹಕ್ಕೆ 77 ಸಾವಿರ ಹೆಕ್ಟೇರ್‌ ಬೆಳೆಹಾನಿ

ವಾರ ಕಳೆದ್ರೂ ಏರಿಕೆಯಾಗದ ಹಾಜರಾತಿ

ವಾರ ಕಳೆದ್ರೂ ಏರಿಕೆಯಾಗದ ಹಾಜರಾತಿ

ಮಳೆ ನಂತರವೂ ಸುಧಾರಿಸದ ರೈತನ ಬದುಕು!

ಮಳೆ ನಂತರವೂ ಸುಧಾರಿಸದ ರೈತನ ಬದುಕು!

ದೇಶದ ಭದ್ರತೆಗೆ ಧಕ್ಕೆ: ಕೇಂದ್ರ ಸರ್ಕಾರದಿಂದ ಮತ್ತೆ ಚೀನಾದ 43 ಮೊಬೈಲ್ ಆ್ಯಪ್ ನಿಷೇಧ

ದೇಶದ ಭದ್ರತೆಗೆ ಧಕ್ಕೆ: ಕೇಂದ್ರ ಸರ್ಕಾರದಿಂದ ಮತ್ತೆ ಚೀನಾದ 43 ಮೊಬೈಲ್ ಆ್ಯಪ್ ನಿಷೇಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.