ಸುರತ್ಕಲ್ ಬೀಚ್ ನಲ್ಲಿ ಶಿವಮೊಗ್ಗ ಮೂಲದ ಬಾಲಕ ಸಮುದ್ರ ಪಾಲು!
Team Udayavani, Feb 28, 2021, 3:18 PM IST
ಸುರತ್ಕಲ್: ಇಲ್ಲಿನ ಸಮೀಪದ ಗುಡ್ಡೆಕೊಪ್ಲ ಬೀಚ್ ನಲ್ಲಿ ಶಿವಮೊಗ್ಗ ಮೂಲದ ಬಾಲಕ ಸಮುದ್ರ ಪಾಲಾಗಿದ್ದು, ಈತನ ತಂದೆಯನ್ನು ಸ್ಥಳೀಯರು ರಕ್ಷಿಸಿದ ಘಟನೆ ರವಿವಾರ ನಡೆದಿದೆ.
ಮುಬಾರಕ್ (13) ವರ್ಷ ತನ್ನ ತಂದೆ ತಾಯಿ ಹಾಗೂ ಸಂಬಂಧಿಕರ ಜತೆ ಇಲ್ಲಿನ ಸಮುದ್ರ ತೀರದಲ್ಲಿ ಆಟದಲ್ಲಿ ನಿರತನಾಗಿದ್ದಾಗ ತೆರೆ ಅಪ್ಪಳಿಸಿ ಸಮುದ್ರ ಪಾಲಾಗಿದ್ದಾನೆ.
ಇದನ್ನೂ ಓದಿ:ಸಿ.ಡಿಯಿಂದ, ಫೋಟೊದಿಂದಲೋ ಯೋಗೇಶ್ವರ್ ಗೆ ಬಿಜೆಪಿ ಪರಿಷತ್ ಸ್ಥಾನ ಕೊಟ್ಟು ಮಂತ್ರಿ ಮಾಡಿದೆ
ಸಂಬಂಧಿಕರ ಮನೆಗೆ ಕಾರ್ಯಕ್ರಮ ನಿಮಿತ್ತ ಬಂದಿದ್ದರು ಎಂದು ತಿಳಿದು ಬಂದಿದೆ. ಸ್ಥಳೀಯರು, ಸಿಎಸ್ ಪಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಹಂಪ್ ಕಾಣದೆ ಬೈಕ್ ಸ್ಕಿಡ್: ಕಡಬದಲ್ಲಿ ಅವೈಜ್ಞಾನಿಕ ಹಂಪ್ ಗೆ ಬಲಿಯಾದ ಮಹಿಳೆ!