5 ರೂ.ಗೆ 20 ಲೀಟರ್ ನೀರು
ನಗರದ 2 ಕಡೆ ಶುದ್ಧ ನೀರಿನ ಘಟಕ
Team Udayavani, May 28, 2019, 6:00 AM IST
ಸುಳ್ಯ: ನಗರದ ಎರಡು ಕಡೆಯಲ್ಲಿ 5 ರೂ.ಗೆ 20 ಲೀಟರ್ ನೀರೊದಗಿಸುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಸೋಮವಾರ ಉದ್ಘಾಟಿಸಲಾಯಿತು. ನ.ಪಂ. ವತಿಯಿಂದ ಈ ಘಟಕ ಸ್ಥಾಪಿಸಲಾಗಿದೆ. ನ.ಪಂ. ಮೀನು ಮಾರುಕಟ್ಟೆ ಸನಿಹ ಮತ್ತು ಗಾಂಧಿ ನಗರದಲ್ಲಿ ಘಟಕ ತೆರೆಯಲಾಗಿದೆ. ಗ್ರಾಮಾಂತರ ಶುದ್ಧ ನೀರಿನ ಘಟಕಗಳಂತೆ ಇದು ಕಾರ್ಯ ನಿರ್ವಹಿಸಲಿದೆ. ನೀರಿನ ಅಭಾವದ ಹಿನ್ನೆಲೆಯಲ್ಲಿ ನ.ಪಂ. ಆಡಳಿತಾಧಿಕಾರಿ ಕುಂಞಿ ಅಹ್ಮದ್ ಹಾಗೂ ಮುಖ್ಯಾಧಿಕಾರಿ ಶ್ರೀಧರ ಅವರ ನೇತೃತ್ವದಲ್ಲಿ ಈ ಘಟಕ ನಿರ್ಮಿಸಲಾಗಿದೆ.
ನ.ಪಂ. ಆಡಳಿತಾಧಿಕಾರಿ, ತಹಶೀಲ್ದಾರ್ ಕುಂಞಿ ಅಹ್ಮದ್ ಎರಡು ಘಟಕಗಳನ್ನು ಉದ್ಘಾಟಿಸಿದರು. ಮುಖ್ಯಾಧಿಕಾರಿ ಶ್ರೀಧರ್, ಎಂಜಿನಿಯರ್ ಶಿವಕುಮಾರ್, ಆರೋಗ್ಯ ನಿರೀಕ್ಷಕ ರವಿಕೃಷ್ಣ ನಾಯ್ಕ, ಕಂದಾಯ ನಿರೀಕ್ಷಕ ಧನಂಜಯ ಉಪಸ್ಥಿತರಿದ್ದರು.