ಮಳೆಗಾಲದ ವಿತರಣೆಗೆ 32 ಸಾವಿರ ಗಿಡಗಳ ಪೋಷಣೆ


Team Udayavani, May 5, 2021, 4:40 AM IST

ಮಳೆಗಾಲದ ವಿತರಣೆಗೆ 32 ಸಾವಿರ ಗಿಡಗಳ ಪೋಷಣೆ

ಬೆಳ್ತಂಗಡಿ: ಹಸಿರು ಕರ್ನಾಟಕ ಯೋಜನೆಯಡಿ ಹಸಿರೇ ಉಸಿರು ಎಂಬ ಧ್ಯೇಯದೊಂದಿಗೆ ಪ್ರತಿ ವರ್ಷ ಸಾಮಾಜಿಕ ಅರಣ್ಯ ವಲಯ ಹಾಗೂ ವಲಯ ಅರಣ್ಯ ವಿಭಾಗದಿಂದ ಮಳೆಗಾಲದಲ್ಲಿ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳಿಗೆ ವಿತರಣೆಯಲ್ಲದೆ ನೆಡುತೋಪು ನಿರ್ಮಾಣಕ್ಕಾಗಿ ಗಿಡಗಳನ್ನು ಬೆಳೆಸಲಾಗುತ್ತದೆ.

ಬೆಳ್ತಂಗಡಿ ಸಾಮಾಜಿಕ ಅರಣ್ಯ ವಲಯ ದಿಂದ ಇಲಾಖೆಯ ನಡ ನರ್ಸರಿಯಲ್ಲಿ 2021ನೇ ಸಾಲಿನ ಮಳೆಗಾಲದಲ್ಲಿ ಸರಕಾರಿ ಸ್ಥಳ, ಶಾಲಾ ವಠಾರ, ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಹಾಗೂ ರೈತರಿಗೆ ಮತ್ತು ಸಾರ್ವಜನಿಕರಿಗೆ ವಿತರಣೆಗಾಗಿ 15,000 ಗಿಡಗಳನ್ನು ಬೆಳಸಲಾಗಿದೆ.

ಧರ್ಮಸ್ಥಳ ಸಹಭಾಗಿತ್ವದಲ್ಲಿ ಹಣ್ಣಿನ ಗಿಡ ನಾಟಿ :

ಕಾಡುಪ್ರಾಣಿಗಳು ಆಹಾರವಿಲ್ಲದೆ ಊರಿಗೆ ಬಂದು ಬೆಳೆ ನಾಶ ಮಾಡುತ್ತಿದ್ದು, ಇದಕ್ಕಾಗಿ ಕಾಡಿನಲ್ಲಿ ಹಣ್ಣಿನ ಗಿಡ ನೆಡಬೇಕೆಂಬ ಉದ್ದೇಶದಿಂದ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅರಣ್ಯ ಇಲಾಖೆಗೆ ಮನವಿ ಮಾಡಿಕೊಂಡಿದ್ದರು. ಹೀಗಾಗಿ ಅರಣ್ಯ ಸಚಿವರು ಸಭೆ ನಡೆಸಿ 100 ಎಕ್ರೆ ಗುರುತಿಸುವಂತೆ ಸೂಚಿಸಿದ್ದರು. ಅದರಂತೆ ವಲಯ ಅರಣ್ಯ, ಸಾಮಾಜಿಕ ಅರಣ್ಯ ಇಲಾಖೆ ಬೆಳೆಸಿದ 10,000 ಗಿಡ ಒದಗಿಸಲಿದ್ದು, ಹೆಚ್ಚುವರಿ ಗಿಡಗಳನ್ನು ಸಿದ್ಧಪಡಿಸಲಾಗುತ್ತಿದೆ.

ವಿವಿಧ ಜಾತಿಯ ಸಸ್ಯಗಳು :

ಪ್ರಮುಖವಾಗಿ ಹಲಸು, ಮಾವು, ರಾಂಪತ್ರೆ, ಕಹಿಬೇವು, ಬಿಲ್ವಪತ್ರೆ, ನೆಲ್ಲಿ, ಸಂಪಿಗೆ ಇತ್ಯಾದಿ ಜಾತಿಯ ಗಿಡಗಳನ್ನು ಬೆಳೆಯಲಾಗಿದೆ. ಇಲಾಖೆ ವತಿಯಿಂದ ಮುಂದಿನ ಮಳೆಗಾಲದಲ್ಲಿ ಅಳದಂಗಡಿ, ಕುತ್ಲೂರು ರಸ್ತೆಯಲ್ಲಿ 5 ಕಿ.ಮೀ. ಹಾಗೂ ಬಂದಾರು, ಬೆಳಾಲು ರಸ್ತೆಯ ಬದಿ 3 ಕಿ.ಮೀ. ನೆಡುತೋಪು ನಿರ್ಮಿಸುವ ಯೋಜನೆ ಇದೆ.

ನರೇಗಾದಲ್ಲೂ ಅವಕಾಶ : 

ಸಾರ್ವಜನಿಕರು ಹಾಗೂ ರೈತರು ನರ್ಸರಿಯಿಂದ ಸಸಿಗಳನ್ನು ರಿಯಾಯಿತಿ ದರದಲ್ಲಿ ಅಂದರೆ 8×12 ಗಾತ್ರದ ಚೀಲದ ಸಸಿಗಳಿಗೆ 3 ರೂ., ಹಾಗೂ 6×9 ಗಾತ್ರದ ಚೀಲದ ಸಸಿಗಳಿಗೆ ತಲಾ 1 ರೂ. ನಂತೆ ಪಡೆಯಬಹುದಾಗಿದೆ. ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ರೈತರು, ಸಾರ್ವಜನಿಕರು ಗಿಡಗಳನ್ನು ಪಡೆದು ನಾಟಿ ಮಾಡಬಹುದಾಗಿದೆ. ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಮಂಜೊಟ್ಟಿ ಸಸ್ಯ ಕ್ಷೇತ್ರದಿಂದ ಸಾರ್ವಜನಿಕರು ಸಸ್ಯ ಪಡೆಯಬಹುದಾಗಿದೆ.

ವಲಯ ಅರಣ್ಯ ಇಲಾಖೆ :

ಬೆಳ್ತಂಗಡಿ ವಲಯ ಅರಣ್ಯ ವಿಭಾಗದಿಂದಲೂ ಈ ಬಾರಿ 17,000 ಗಿಡಗಳನ್ನು ಬೆಳೆಸಲಾಗಿದೆ. ಕಳೆದ ವರ್ಷ 50,000 ಗಿಡಗಳನ್ನು ಬೆಳೆಸಿದ್ದು, ಸರಕಾರದ ಅನುದಾನ ಕೊರತೆಯಿಂದ ಈ ಬಾರಿ ಗಿಡಗಳ ಸಂಖ್ಯೆ ತೀರ ಕಡಿಮೆಯಾಗಿದೆ.

64 ಹೆಕ್ಟೇರ್‌ನಲ್ಲಿ ನಾಟಿ :

ಬೆಳ್ತಂಗಡಿ ತಾಲೂಕಿನಲ್ಲಿ ಸುಮಾರು 64 ಹೆಕ್ಟೇರ್‌ನಲ್ಲಿ ಬೆಳೆಯಲಾಗಿದ್ದ ಅಕೇಶಿಯಾ ಗಿಡಗಳನ್ನು ಈ ಬಾರಿ ತೆರವು ಮಾಡಲು ಕ್ರಮ ಕೈಗೊಳ್ಳಲಾಗಿದೆ. ಅಂತರ್ಜಲ ಮಟ್ಟಕ್ಕೆ ಅಕೇಶಿಯಾ ಗಿಡ ಮಾರಕ ಎಂಬುದನ್ನು ಕೆಲ ಸಂಶೋಧನೆಗಳು ಉಲ್ಲೇಖೀಸಿದ್ದರಿಂದ ಅದರ ತೆರವಿಗೆ ಆದೇಶಿಸಲಾಗಿದೆ ಎಂದು ಧರ್ಮಸ್ಥಳಕ್ಕೆ ಭೇಟಿ ನೀಡಿದ್ದ ಅರಣ್ಯ ಸಚಿವ ಅರವಿಂದ ಲಿಂಬಾವಳಿ ತಿಳಿಸಿದ್ದರು. ಅದರಂತೆ ಗೇರುಕಟ್ಟೆ-21 ಹೆಕ್ಟೇರ್‌, ಉಜಿರೆ-11 ಹೆಕ್ಟೇರ್‌, ಚಾರ್ಮಾಡಿ-17 ಹೆಕ್ಟೇರ್‌, ಪುದುವೆಟ್ಟು- 15 ಹೆಕ್ಟೇರ್‌ ಸೇರಿ 64 ಹೆಕ್ಟೇರ್‌ನಲ್ಲಿ ಗಾಳಿ ಹಾಗೂ ಪರಿಸರಕ್ಕೆ ಅನುಗುಣವಾಗಿ ಇತರ ಜಾತಿಯ ಗಿಡಗಳನ್ನು ನೆಡಲು ಸಿದ್ಧತೆ ನಡೆಸಲಾಗಿದೆ. ಇದಕ್ಕಾಗಿಯೇ ಮುಂಡಾಜೆ ನರ್ಸರಿಯಲ್ಲಿ 35,000 ಗಾಳಿ ಗಿಡಗಳನ್ನು ಪ್ರತ್ಯೇಕವಾಗಿ ಬೆಳೆಸಲಾಗಿದೆ.

ಸಾಮಾಜಿಕ ಅರಣ್ಯ ಇಲಾಖೆಯಿಂದ ಸಾರ್ವಜನಿಕರಿಗೆ, ಸಂಘ-ಸಂಸ್ಥೆಗಳಿಗೆ ಗಿಡಗಳು ಲಭ್ಯವಿವೆ. ಮಳೆಗಾಲ ಸಮೀಪಿ ಸುತ್ತಲೆ ಗಿಡ ವಿತರಣೆ, ನೆಡು ತೋಪು ನಿರ್ಮಾಣಕ್ಕೆ ಸಿದ್ಧತೆ ನಡೆಸಲಾಗುತ್ತದೆ.-ಸುಬ್ರಹ್ಮಣ್ಯ ಆಚಾರ್‌,ವಲಯ ಅರಣ್ಯಾಧಿಕಾರಿ, ಸಾಮಾಜಿಕ ಅರಣ್ಯ ಇಲಾಖೆ.

ವಲಯ ಅರಣ್ಯ ವಿಭಾಗದಿಂದ 17,000 ಗಿಡಗಳನ್ನು ಬೆಳೆಯಲಾಗಿದೆ. ಜತೆಗೆ 30,000 ಗಾಳಿ ಗಿಡ ನೆಡುವ ಉದ್ದೇಶ ಇದೆ. ರೈತರು ಗಿಡ ನೆಟ್ಟು ಪೋಷಿಸುವ ಸಲುವಾಗಿ ಮೂರು ವರ್ಷಕ್ಕೆ 135 ರೂ. ಪ್ರೋತ್ಸಾಹ ಧನ ನೀಡಲಾಗುತ್ತದೆ. ಹಸುರೀಕರಣಕ್ಕೆ ಒಲವು ತೋರಬೇಕು.-ತ್ಯಾಗರಾಜ್‌ ಎಚ್‌.ಎಸ್‌., ವಲಯ ಅರಣ್ಯಧಿಕಾರಿ, ಬೆಳ್ತಂಗಡಿ.

 

-ವಿಶೇಷ ವರದಿ

ಟಾಪ್ ನ್ಯೂಸ್

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

9-aranthodu

Aranthodu: ಬೆಂಕಿ ಅವಘಡ; ತಪ್ಪಿದ ಭಾರೀ ಅನಾಹುತ

8-

Kaniyoor: ಕೆರೆ ಸ್ವಚ್ಛಗೊಳಿಸುವಾಗ ಮುಳುಗಿ ವ್ಯಕ್ತಿ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

17-uv-fusion

UV Fusion: ನಿನ್ನೊಳಗೆ ನೀ ಇರುವಾಗ…

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

16-uv-fusion

UV Fusion: ದೃಷ್ಟಿಗೆ ತಕ್ಕ ಸೃಷ್ಟಿ

15-uv-fusion

Government School: ಸರಕಾರಿ ಶಾಲೆಯನ್ನು ಉಳಿಸಿ-ಬೆಳೆಸೋಣ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.