ಸುಳ್ಯ: ವಿದ್ಯುತ್ ಶಾಕ್ ತಗುಲಿ ನಾಲ್ಕು ವರ್ಷದ ಬಾಲಕ ಮೃತ್ಯು
Team Udayavani, Jul 2, 2022, 5:36 PM IST
ಸುಳ್ಯ: ವಿದ್ಯುತ್ ಶಾಕ್ ತಗುಲಿ ನಾಲ್ಕು ವರ್ಷದ ಬಾಲಕ ಮೃತಪಟ್ಟಿರುವ ದಾರುಣ ಘಟನೆ ಸುಳ್ಯ ತಾಲೂಕಿನ ಬೆಳ್ಳಾರೆ ಠಾಣಾ ವ್ಯಾಪ್ತಿಯ ಐವರ್ನಾಡಿನಲ್ಲಿ ಇಂದು (ಶನಿವಾರ) ಸಂಭವಿಸಿದೆ.
ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಗಟ್ಟಮನೆ ನಿವಾಸಿ ಅಪ್ಸರ ಎಂಬವರ ನಾಲ್ಕು ವರ್ಷದ ಮಗ ಹೈದರ್ ಅಲಿ ಮೃತ ಬಾಲಕ.
ಅಪ್ಸರ ಅವರು ತವರು ಮನೆ ಬೆಳ್ಳಾರೆಯ ಐವರ್ನಾಡಿಗೆ ಬಂದಿದ್ದು, ಅಲ್ಲಿ ಬಾಲಕನಿಗೆ ವಿದ್ಯುತ್ ಶಾಕ್ ತಗುಲಿ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.