ಬೆಳ್ತಂಗಡಿ: ಅಡಿಕೆ ಕಳ್ಳರ ಹಿಡಿದು ಪೊಲೀಸರಿಗೊಪ್ಪಿಸಿದ ಸ್ಥಳೀಯರು
Team Udayavani, Dec 24, 2020, 9:45 AM IST
ಬೆಳ್ತಂಗಡಿ: ಅಡಿಕೆ ಬೆಲೆ ದಾಖಲೆ ಮಟ್ಟಕ್ಕೆ ಏರುತ್ತಲೆ ಕಳ್ಳ ಕಾಕರ ಹಾವಳಿ ಹೆಚ್ಚಾಗಿದ್ದು ಗುರುವಾರ ಮುಂಜಾನೆ ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾಮದಲ್ಲಿ ಓರ್ವ ಕಳ್ಳನನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
ಮಚ್ಚಿನ ಗ್ರಾಮದ ಪುಂಚಪಾದೆ ಎಂಬಲ್ಲಿ 50 ಕೆ.ಜಿ. (14) ಗೋಣಿ ಅಡಿಕೆ ಸಹಿತ ಇಬ್ಬರು ಆರೋಪಿಗಳನ್ನು ಸ್ಥಳೀಯರಾದ ಕರಾಟೆ ಕಿಟ್ಟ ಎಂಬುವರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಒಂದೂವರೆ ತಿಂಗಳುಗಳಿಂದ ಪಿಲಿಗೂಡು, ದೇವರುಪಲಿಕೆ ಆಸುಪಾಸಿನಲ್ಲಿ ಅಡಿಕೆ ಕಳ್ಳ ಸಾಗಾಣಿಕೆ ನಡೆಯುತ್ತಿದ್ದು, ಕಳ್ಳರ ಪತ್ತೆಗಾಗಿ ಸ್ಥಳೀಯರೇ ಕಾರ್ಯಾಚರಣೆಗೆ ಇಳಿದಿದ್ದರು.
ಚುನಾವಣೆ ಸಮಯವಾದ್ದರಿಂದ ಕೃಷಿಕರ ಬಂದೂಕು ಠಾಣೆಯಲ್ಲಿ ಡೆಪಾಸಿಟ್ ಇಟ್ಟಿರುವುದರಿಂದ ಕಳ್ಳಕಾಕರಿಗೆ ವರದಾನ ವಾದಂತಿದೆ. ಗುರುವಾರ ಬೆಳಗ್ಗೆ ಮಚ್ಚಿನ ಪುಂಚಪಾದೆಯಲ್ಲಿ ಅಡಿಕೆ ಗೋಣಿ, ಅಡಿಕೆ ಸುಲಿಯುವ ಮಣೆ ಎಲ್ಲವೂ ಪತ್ತೆಯಾಗಿದೆ.
ಕರಾಟೆ ಕಿಟ್ಟ ಎಂಬುವರು ಒಬ್ಬನನ್ನು ಹಿಡಿದು, ಪೊಲೀಸರಿಗೆ ಹಾಗೂ ಸ್ಥಳೀಯರಿಗೆ ತಿಳಿಸಿದ್ದು, ಓರ್ವ ತಪ್ಪಿಸಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಈ ಕುರಿತು ಪೂಂಜಾಲಕಟ್ಟೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಅಡಿಕೆ ಕಳ್ಳರನ್ನು ಹಾಗೂ ಸೊತ್ತುಗಳನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆಳ್ತಂಗಡಿ: ಗೋಡಂಬಿಯಾಕಾರದ ಮೊಟ್ಟೆ ಇಡುತ್ತಿರುವ ಕೋಳಿ
ಕಬಡ್ಡಿ ವಿಶ್ವಕಪ್ ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಆಟಗಾರ ಉದಯ ಚೌಟ ಇನ್ನಿಲ್ಲ
ಅಡಿಕೆ ಎಲೆ ಹಳದಿ ರೋಗ: ಸರಕಾರದ ನಿರ್ಲಕ್ಷ್ಯ: ಹರಿಪ್ರಸಾದ್
ತಾಲೂಕು ಮಟ್ಟದ ಶೈಕ್ಷಣಿಕ ಸೌಲಭ್ಯಗಳ ವಿತರಣೆ: ಮಾತೃಭಾಷಾ ಶಿಕ್ಷಣಕ್ಕೆ ಮಾದರಿ ಶಾಲೆ: ನಾಗೇಶ್
ಪಠ್ಯ ವಿಚಾರದಲ್ಲಿ ರಾಜಕೀಯ ದುರ್ಲಾಭಕ್ಕೆ ಕಾಂಗ್ರೆಸ್ ಯತ್ನ: ಸಚಿವ ನಾಗೇಶ್
MUST WATCH
ಹೊಸ ಸೇರ್ಪಡೆ
ಕುಷ್ಟಗಿ: ಕೃತಿಕಾ ಮಳೆಗೆ ಭರ್ತಿಯಾದ ರಾಯನಕೆರೆ; ಜನರಲ್ಲಿ ಸಂತಸ
ಕೆಸರು ತುಂಬಿ ಅವ್ಯವಸ್ಥೆಯ ಆಗರವಾದ ಕಲ್ಲಡ್ಕ ಪೇಟೆ
ದತ್ತಪೀಠದಲ್ಲಿ ಮತ್ತೊಂದು ವಿವಾದ: ಗುಹೆಯೊಳಗೆ ನಮಾಜ್, ಗೋರಿ ಪೂಜೆ ಆರೋಪ; ವಿಡಿಯೋ ವೈರಲ್
ಶಾರ್ಟ್ ಸರ್ಕ್ಯೂಟ್ನಿಂದ ಮನೆಯಲ್ಲಿ ಬೆಂಕಿ: ತಪ್ಪಿದ ಭಾರಿ ದುರಂತ
ಎಲ್ಲಾ ಪ್ರಾದೇಶಿಕ ಭಾಷೆ ಪೂಜನೀಯ: ಪ್ರಧಾನಿ ಮೋದಿ ಹೇಳಿಕೆಗೆ ಕಿಚ್ಚ ಸುದೀಪ್ ಹೇಳಿದ್ದೇನು?