ಎಣ್ಮೂರು ಶಾಲೆ: ‘ಆಟಿಡೊಂಜಿ ದಿನ’
ವಿವಿಧ ಭಕ್ಷ್ಯಗಳನ್ನು ತಯಾರಿಸಿದ ವಿದ್ಯಾರ್ಥಿಗಳು
Team Udayavani, Aug 4, 2019, 5:00 AM IST
ಅರಂತೋಡು: ಗ್ರಾಮೀಣ ಭಾಗದ ಜನರ ನಂಬಿಕೆಗಳು ಮತ್ತು ಆಚರಣೆಗಳ ಮಹತ್ವ ವನ್ನು ತಿಳಿಯುವ ಉದ್ದೇಶದಿಂದ ಎಣ್ಮೂರಿನ ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ‘ಆಟಿಡೊಂಜಿ ದಿನ’ ಕಾರ್ಯಕ್ರಮ ನಡೆಸಲಾಯಿತು.
ನಿವೃತ್ತ ಶಿಕ್ಷಣ ಸಂಯೋಜಕ ಕೇಶವ ಸಿ.ಎ. ಅವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಪಬ್ಲಿಕ್ ಶಾಲೆಯ ಶಿಕ್ಷಕರು ಮತ್ತು ಸಿ.ಸಿ.ಆರ್.ಟಿ. ಘಟಕದ ಅಧ್ಯಕ್ಷ ಚಿನ್ನಪ್ಪ ಗೌಡ ಮತ್ತು ಎಣ್ಮೂರು ಹಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕ ತೇಜಪ್ಪ ಮಾಸ್ತರ್, ಪ್ರೌಢ ಶಾಲಾ ಮುಖ್ಯಸ್ಥೆ ಶೀತಲ್ ಎಣ್ಮೂರು, ಎಸ್‌ಡಿಎಂಸಿ ಅಧ್ಯಕ್ಷ ಮುತ್ತಪ್ಪ, ಭೋಜಪ್ಪ ಹಾಗೂ ಹೆತ್ತವರು ಭಾಗವಹಿಸಿದ್ದರು.
ಎಲ್ಲ ತರಗತಿಯ ವಿದ್ಯಾರ್ಥಿಗಳು ಆಟಿ ಖಾದ್ಯ ಸ್ಪರ್ಧೆಯಲ್ಲಿ ವಿವಿಧ ಭಕ್ಷ್ಯಗಳನ್ನು ತಯಾರಿಸಿ ಭಾಗವಹಿಸಿದ್ದರು. ಸ್ಪರ್ಧೆಯ ತೀರ್ಪುಗಾರರಾಗಿ ಚಿನ್ನಪ್ಪ ಮಾಸ್ತರ್, ಗಾಂಧಿನಗರ ಕೆ.ಪಿ.ಎಸ್. ಶಾಲೆ, ತೇಜಪ್ಪ ಮಾಸ್ತರ್, ಕೇಶವ ಸಿ.ಎ. ಹಾಗೂ ಶಾಲಾ ಶಿಕ್ಷಕರು ಭಾಗವಹಿಸಿದ್ದರು.
ಸಮಾರೋಪಲ್ಲಿ ಚಿನ್ನಪ್ಪ ಮಾಸ್ತರ್, ಆಯುರ್ವೇದ ಪರಂಪರೆಯ ತಿನಿಸು ಹಾಗೂ ಔಷಧಗಳ ಪ್ರಾಮುಖ್ಯವನ್ನು ವಿದ್ಯಾರ್ಥಿಗಳು ತಿಳಿಯುವುದು ಆವಶ್ಯ ಎಂದರು. ಜನಪದ ನಂಬಿಕೆಗಳು ಮತ್ತು ಸಮಾಜ ಸ್ವಾಸ್ಥ್ಯದ ಬಗ್ಗೆ ಕೇಶವ ಸಿ.ಎ. ಮಾತನಾಡಿದರು. ಶಿಕ್ಷಕ ಸಂತೋಷ್ ಸ್ವಾಗತಿಸಿ, ಕನ್ನಡ ಭಾಷಾ ಶಿಕ್ಷಕಿ ಉಷಾ ವಂದಿಸಿದರು. ವಿದ್ಯಾರ್ಥಿಗಳು ಆಟಿ ಖಾದ್ಯದ ಸಹಭೋಜನ ಮಾಡಿದರು. ಚಿತ್ರಕಲಾ ಶಿಕ್ಷಕ ಮೋಹನ್ ಕಾರ್ಯಕ್ರಮ ಸಂಯೋಜಿಸಿದ್ದರು.
ಆಟಿ ಸೊಪ್ಪಿನ ಪಾಯಸ, ಪತ್ರಡೆ, ಕೆಸುವಿನ ಹುಳಿ, ಹಲಸಿನ ಬೀಜದ ಚಟ್ನಿ, ಹಲಸಿನ ಹಣ್ಣಿನ ಬರ್ಫಿ, ನುಗ್ಗೆ ಚಟ್ನಿ ಮುಂತಾದ ಖಾದ್ಯಗಳನ್ನು ಅತಿಥಿಗಳು ಹಾಗೂ ಮಕ್ಕಳು ಸವಿದರು.