ಸೌಕರ್ಯದ ನಿರೀಕ್ಷೆಯಲ್ಲಿ ಹಾರಾಡಿ ಶಾಲೆ

ಸರಕಾರಿ ಶಾಲೆಗಳಲ್ಲಿಯೇ ವಿದ್ಯಾರ್ಥಿಗಳ ಸಂಖ್ಯೆ ಅತ್ಯಧಿಕ

Team Udayavani, Jun 29, 2022, 11:00 AM IST

2

ಪುತ್ತೂರು: ಸರಕಾರಿ ಶಾಲೆಗಳ ಪೈಕಿ ಗರಿಷ್ಠ ಸಂಖ್ಯೆಯ ವಿದ್ಯಾರ್ಥಿಗಳನ್ನು ಹೊಂದಿರುವ ಹಾರಾಡಿ ಸರಕಾರಿ ಮಾದರಿ ಉನ್ನತಿ ಹಿರಿಯ ಪ್ರಾಥಮಿಕ ಶಾಲೆಯು ಈ ಶೈಕ್ಷಣಿಕ ವರ್ಷದಲ್ಲಿಯು ದಾಖಲೆಯ ದಾಖಲಾತಿ ಹೊಂದಿದ್ದು ಇಲ್ಲಿಗೆ ಇನ್ನಷ್ಟು ಮೂಲ ಸೌಕರ್ಯ ದೊರೆತರೆ ವಿದ್ಯಾರ್ಥಿಗಳ ಸಂಖ್ಯೆ 1000 ಗಡಿ ದಾಟಬಹುದು.

ಆಂಗ್ಲ ಮತ್ತು ಕನ್ನಡ ಮಾಧ್ಯಮದಲ್ಲಿ ಬೋಧನ ವ್ಯವಸ್ಥೆ ಹೊಂದಿರುವ ಹಾರಾಡಿ ಪ್ರಾಥಮಿಕ ಶಾಲೆ ಸರಕಾರಿ ಶಾಲೆಗಳ ಪೈಕಿ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಶಾಲೆ ಎಂಬ ಹೆಗ್ಗಳಿಕೆ ಹೊಂದಿದೆ. ಈ ವರ್ಷದ ಶೈಕ್ಷಣಿಕ ಸಾಲಿನಲ್ಲಿ 1 ರಿಂದ 8 ನೇ ತರಗತಿ ತನಕ ಒಟ್ಟು 736 ವಿದ್ಯಾರ್ಥಿಗಳಿದ್ದಾರೆ. ಕಳೆದ ವರ್ಷ 670 ವಿದ್ಯಾರ್ಥಿಗಳಿದ್ದರು.

ವಿದ್ಯಾರ್ಥಿ ಸಂಖ್ಯೆಗೆ ತಕ್ಕಷ್ಟು ಕೊಠಡಿಗಳಿಲ್ಲ

ಶಾಲೆಯಲ್ಲಿ ಹೊಸ-ಹಳತು ಸೇರಿ 22 ಕೊಠಡಿಗಳಿವೆ. ಆದರೆ ಹಳೆ ಕಟ್ಟಡದ ಕೊಠಡಿಗಳು ಕಿರಿದಾಗಿದ್ದು ಈಗಿನ ವ್ಯವಸ್ಥೆಗೆ ಪೂರಕವಾಗಿಲ್ಲ. ಹಳೆ ಕಟ್ಟಡದಲ್ಲಿ 6, 7ನೇ ತರಗತಿ, ಕಂಪ್ಯೂಟರ್‌ ತರಗತಿ ಹಾಗೂ ಸ್ಟೇಜ್‌ ಇದೆ. ಉಳಿದ ತರಗತಿಗಳು ಹೊಸ ಕಟ್ಟಡದಲ್ಲಿ ನಡೆಯುತ್ತಿದೆ. 40 ವಿದ್ಯಾರ್ಥಿಗಳಿಗೆ ಒಂದು ತರಗತಿ ಕೊಠಡಿಯ ಆವಶ್ಯಕತೆ ಇದ್ದು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸುಸಜ್ಜಿತ 10 ಕೊಠಡಿಯ ಅಗತ್ಯವಿದೆ.

ಶೌಚಾಲಯ ಕೊರತೆ

ಬಾಲಕರಿಗೆ ಇರುವುದು ಒಂದು ಶೌಚಾಲಯ ಮಾತ್ರ. ಸರಕಾರದ ನಿಯಮದ ಪ್ರಕಾರ ವಿದ್ಯಾರ್ಥಿ ಸಂಖ್ಯೆಗೆ ಅನುಗುಣವಾಗಿ ಒಟ್ಟು 30 ಶೌಚಾಲಯ ಬೇಕಿದೆ. ಬಾಲಕಿಯರ ವಿಭಾಗದಲ್ಲಿ ಪೋಷಕರ ಸಹಕಾರ ಪಡೆದು 6 ಶೌಚಾಲಯ ನಿರ್ಮಿಸಲಾಗಿದೆ.

ಎ,ಬಿ, ಸಿ, ವಿಭಾಗ

1961ರಲ್ಲಿ ಪ್ರಾರಂಭಗೊಂಡಿರುವ ಈ ಶಾಲೆಗೆ ಹಾರಾಡಿ, ಬನ್ನೂರು, ಪಟ್ನೂರು, ಚಿಕ್ಕಮುಟ್ನೂರು, ಕೋಡಿಂಬಾಡಿ, ಬಲ್ನಾಡು ಸೇರಿದಂತೆ ಹೊರವಲಯದ ಕುಂಬ್ರ, ಮಾಣಿ, ಉಪ್ಪಿನಂಗಡಿ ಮೊದಲಾದ ಭಾಗದಿಂದ ವಿದ್ಯಾರ್ಥಿಗಳು ಬರುತ್ತಾರೆ. ವರ್ಷದಿಂದ ವರ್ಷಕ್ಕೆ ಇಲ್ಲಿ ದಾಖಲಾತಿ ಹೆಚ್ಚಳವಾಗುತ್ತಿದೆ. 1ರಿಂದ 4ರ ತನಕ ಎ,ಬಿ,ಸಿ ವಿಭಾಗ, 5ರಿಂದ 8ರ ತನಕ ಎ, ಬಿ ವಿಭಾಗ ತೆರೆದು ತರಗತಿ ನಡೆಸಲಾಗುತ್ತಿದೆ.

ದಾನಿಗಳ ಕೊಡುಗೆ

ಶಾಲೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು ದಾನಿಗಳು. ಇನ್ನು ಹಳೆ ವಿದ್ಯಾರ್ಥಿಗಳು ಕೂಡ ಇದಕ್ಕೆ ಕೈ ಜೋಡಿಸಿದರೆ ಇನ್ನಷ್ಟು ಅಭಿವೃದ್ಧಿ ಸಾಧ್ಯವಾಗಲಿದೆ. ಸರಕಾರವು ಶಾಲೆಯ ದಾಖಲಾತಿ ಗಮನಿಸಿ ಹೆಚ್ಚುವರಿ ಸೌಕರ್ಯ ಒದಗಿಸುವ ಅಗತ್ಯ ಇದೆ ಅನ್ನುವುದು ಪೋಷಕರ ಅಭಿಪ್ರಾಯ.

ಶಿಕ್ಷಕರ ಕೊರತೆ

ಒಟ್ಟು 19 ಮಂಜೂರಾತಿ ಹುದ್ದೆಗಳಿವೆ.ಇದರಲ್ಲಿ ಈಗ ಪೂರ್ಣಕಾಲಿಕ ಶಿಕ್ಷಕರು ಇರುವುದು10 ಮಂದಿ ಮಾತ್ರ. 9 ಮಂದಿ ಮಾತ್ರ ಪಠ್ಯ ಬೋಧನೆಗೆ ಲಭ್ಯವಾಗುತ್ತಾರೆ. ಆರ್‌ಟಿಇ ಪ್ರಕಾರ 30 ವಿದ್ಯಾರ್ಥಿಗಳಿಗೆ ಓರ್ವ ಶಿಕ್ಷಕರ ಅಗತ್ಯವಿದ್ದು ಅದರ ಅನುಸಾರ 25 ಶಿಕ್ಷಕರ ಅಗತ್ಯತೆ ಇದೆ. 6 ಮಂದಿ ಅತಿಥಿ ಶಿಕ್ಷಕರನ್ನು ಸರಕಾರ ನೀಡಿದೆ.6 ಮಂದಿ ಶಿಕ್ಷಕರನ್ನು ಎಸ್‌ಡಿಎಂಸಿ ಮೂಲಕ ನೇಮಿಸಲಾಗಿದೆ. ತಾತ್ಕಾಲಿಕ ನೆಲೆಯಲ್ಲಿ ಶಿಕ್ಷಕರ ಹುದ್ದೆ ಭರ್ತಿ ಆಗಿದ್ದರೂ, ಪೂರ್ಣಕಾಲಿಕ ಶಿಕ್ಷಕರ ಅಗತ್ಯ ಇದ್ದೆ ಇದೆ. ಜತೆಗೆ ಕಚೇರಿ ನಿರ್ವಹಣೆಗೆ ಡಿ ದರ್ಜೆ ನೌಕರರ ನೇಮಕವು ಆಗಬೇಕಿದೆ.

ಆಂಗ್ಲಮಾಧ್ಯಮ ವಿಭಾಗ

ಸರಕಾರವು ಆಂಗ್ಲ ಮಾಧ್ಯಮ ತರಗತಿ ಪ್ರಾರಂಭಿಸುವ ಮೊದಲೇ ಹಾರಾಡಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ತರಗತಿ ಆರಂಭಗೊಂಡಿದೆ. 2012-13 ರಲ್ಲಿ 6 ನೇ ತರಗತಿಯಿಂದ ಆಂಗ್ಲ ಮಾಧ್ಯಮದಲ್ಲಿ ಕಲಿಕೆ ಪ್ರಾರಂಭಗೊಂಡು 8 ನೇ ತರಗತಿ ತನಕ ವಿಸ್ತರಿಸಲಾಗಿದೆ. 1 ರಿಂದ 4 ನೇ ತರಗತಿ ತನಕ ಆಂಗ್ಲ ವಿಭಾಗ ಇದ್ದು ಮುಂದಿನ ವರ್ಷ 5 ನೇ ತರಗತಿಯಲ್ಲಿಯು ಆಂಗ್ಲ ವಿಭಾಗ ಪ್ರಾರಂಭಗೊಳ್ಳಲಿದೆ. ತನ್ಮೂಲಕ ಕನ್ನಡ ಮತ್ತು ಇಂಗ್ಲಿಷ್‌ ಎರಡು ವಿಭಾಗದಲ್ಲಿಯು 1 ರಿಂದ8 ನೇ ತರಗತಿ ತನಕ ಇಲ್ಲಿ ಕಲಿಕೆಗೆ ಅವಕಾಶ ಸಿಗಲಿದೆ.

ಸಕಾರಾತ್ಮಕ ಸ್ಪಂದನೆ: ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಹೆಚ್ಚಳಗೊಂಡಿದೆ. ಶಾಸಕರಾದಿಯಾಗಿ ಜನಪ್ರತಿನಿಧಿಗಳು, ಇಲಾಖೆ, ದಾನಿಗಳು ಶಾಲೆಯ ಅಭಿವೃದ್ಧಿಗೆ ಗರಿಷ್ಠ ಸಹಕಾರ ನೀಡಿದ್ದಾರೆ. ಶಾಲೆಯ ಅಗತ್ಯದ ಬಗ್ಗೆ ಸಂಬಂಧಿಸಿದವರ ಗಮನಕ್ಕೆ ತಂದಿದ್ದು ಸಕಾರಾತ್ಮಕ ಸ್ಪಂದನೆ ದೊರೆತಿದೆ. -ಕೆ.ಕೆ.ಮಾಸ್ಟರ್‌, ಮುಖ್ಯಗುರು

ಪ್ರಸ್ತಾವನೆ ಸಲ್ಲಿಸಲಾಗಿದೆ: ಶೌಚಾಲಯ, ಹೊಸ ಕಟ್ಟಡದ ಆವಶ್ಯಕತೆಇದೆ. ಶಾಸಕರು ಪ್ರಾಕೃತಿಕ ವಿಕೋಪದಲ್ಲಿ 15 ಲಕ್ಷ ರೂ. ವೆಚ್ಚದಲ್ಲಿ ಕೊಠಡಿ ವ್ಯವಸ್ಥೆ ಒದಗಿಸಿದ್ದು ದಾನಿಗಳು ಕೂಡ ಸ್ಪಂದಿಸಿದ್ದಾರೆ. ಹೆಚ್ಚುವರಿ ಬೇಡಿಕೆಯ ಪ್ರಸ್ತಾವನೆ ಸಲ್ಲಿಸಲಾಗಿದೆ. ರಂಗಮಂದಿರ ನಿರ್ಮಾಣದ ಬೇಡಿಕೆಯು ಇದೆ. –ಕೃಷ್ಣ ನಾಯ್ಕ ಕೆ., ಅಧ್ಯಕ್ಷರು,  ಎಸ್‌ಡಿಎಂಸಿ ಹಾರಾಡಿ ಶಾಲೆ

ಟಾಪ್ ನ್ಯೂಸ್

ಈಜಲು ಹೋಗಿ ನಿರುಪಾಲಾದ ಎಂಜಿನಿಯರ್: ಎರಡನೇ ದಿನಕ್ಕೆ ಮುಂದುವರೆದ ಶೋಧ ಕಾರ್ಯ

ಈಜಲು ಹೋಗಿ ನಿರುಪಾಲಾದ ಇಂಜಿನಿಯರ್ : ಎರಡನೇ ದಿನಕ್ಕೆ ಮುಂದುವರೆದ ಶೋಧ ಕಾರ್ಯ

ರಾಯಚೂರನ್ನು ತೆಲಂಗಾಣದೊಳಕ್ಕೆ ವಿಲೀನಗೊಳಿಸಲು ಜನರು ಒತ್ತಾಯಿಸುತ್ತಿದ್ದಾರೆ: ಸಿಎಂ ಕೆಸಿಆರ್

ರಾಯಚೂರನ್ನು ತೆಲಂಗಾಣದೊಳಕ್ಕೆ ವಿಲೀನಗೊಳಿಸಲು ಜನರು ಒತ್ತಾಯಿಸುತ್ತಿದ್ದಾರೆ: ಸಿಎಂ ಕೆಸಿಆರ್

ಉಡುಪಿಯಲ್ಲಿ ನಾಳೆ ಕೃಷ್ಣಾಷ್ಟಮಿ, ನಾಡಿದ್ದು ವಿಟ್ಲ ಪಿಂಡಿ

ಉಡುಪಿಯಲ್ಲಿ ನಾಳೆ ಕೃಷ್ಣಾಷ್ಟಮಿ, ನಾಡಿದ್ದು ವಿಟ್ಲ ಪಿಂಡಿ

4CONGRESS

ಕಾಂಗ್ರೆಸ್ ನಾಯಕರ ಹೇಳಿಕೆ ವಿರುದ್ಧ ಮುಸ್ಲಿಂ ಮುಖಂಡನ ಆಕ್ರೋಶ: ವಿಡಿಯೋ ವೈರಲ್‌

thumb military

ಮಡಿಕೇರಿ; ದೇಶ ಕಾಯುವವನ ಹೆತ್ತವರಿಗೇ ರಕ್ಷಣೆ ಇಲ್ಲ!

ಬಿಜೆಪಿಯಲ್ಲಿ ಮತ್ತೆ ಬಿಎಸ್‌ವೈ ಜಪ; ರಾಜಕಾರಣದ ಲೆಕ್ಕಾಚಾರ ಬದಲಾಗುವ ಸಾಧ್ಯತೆ

ಬಿಜೆಪಿಯಲ್ಲಿ ಮತ್ತೆ ಬಿಎಸ್‌ವೈ ಜಪ; ರಾಜಕಾರಣದ ಲೆಕ್ಕಾಚಾರ ಬದಲಾಗುವ ಸಾಧ್ಯತೆ

2flag

ಸಿದ್ದರಾಮಯ್ಯಗೆ ಸಾವರ್ಕರ್ ಭಾವಚಿತ್ರ ನೀಡಿ, ಕಪ್ಪು ಬಾವುಟದ ಸ್ವಾಗತಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಎಪಿಕ್‌ ಕಾರ್ಡ್‌ಗೆ ಆಧಾರ್‌ ನಂಬರ್‌ ಲಿಂಕ್‌ : ಪ್ರಕ್ರಿಯೆ ಚುರುಕುಗೊಳಿಸಲು ಡಿಸಿ ಸೂಚನೆ

ಎಪಿಕ್‌ ಕಾರ್ಡ್‌ಗೆ ಆಧಾರ್‌ ನಂಬರ್‌ ಲಿಂಕ್‌ : ಪ್ರಕ್ರಿಯೆ ಚುರುಕುಗೊಳಿಸಲು ಡಿಸಿ ಸೂಚನೆ

ಹೆಚ್ಚುತ್ತಿರುವ ಅಪರಾಧ ಪ್ರಕರಣ : ಮತ್ತೆ ವಾಹನಗಳ ಟಿಂಟ್‌ ಮೇಲೆ ಪೊಲೀಸ್‌ ಕಣ್ಣು

ಹೆಚ್ಚುತ್ತಿರುವ ಅಪರಾಧ ಪ್ರಕರಣ : ಮತ್ತೆ ವಾಹನಗಳ ಟಿಂಟ್‌ ಮೇಲೆ ಪೊಲೀಸ್‌ ಕಣ್ಣು

ಫಾಝಿಲ್‌ ಹತ್ಯೆ ಪ್ರಕರಣ : ಕೊಲೆ ಆರೋಪಿಗಳಿಗೆ ಆಶ್ರಯ ನೀಡಿದಾತ ಪೊಲೀಸರ ವಶಕ್ಕೆ

ಫಾಝಿಲ್‌ ಹತ್ಯೆ ಪ್ರಕರಣ : ಕೊಲೆ ಆರೋಪಿಗಳಿಗೆ ಆಶ್ರಯ ನೀಡಿದಾತ ಪೊಲೀಸರ ವಶಕ್ಕೆ

ತಲಪಾಡಿ-ಕಾಸರಗೋಡು ಷಟ್ಪಥ 2024ರಲ್ಲಿ ಪೂರ್ತಿ : ರಿಯಾಸ್‌

ತಲಪಾಡಿ-ಕಾಸರಗೋಡು ಷಟ್ಪಥ 2024ರಲ್ಲಿ ಪೂರ್ತಿ : ರಿಯಾಸ್‌

ಮಂಗಳೂರು : ಕೊಟ್ಟಿಗೆಯಿಂದ ದನ ಕಳವು : ಐವರು ಆರೋಪಿಗಳ ಬಂಧನ

ಮಂಗಳೂರು : ಕೊಟ್ಟಿಗೆಯಿಂದ ದನ ಕಳವು : ಐವರು ಆರೋಪಿಗಳ ಬಂಧನ

MUST WATCH

udayavani youtube

udayavani youtube

ಸಂಸದೀಯ ಮಂಡಳಿ, ಚುನಾವಣಾ ಸಮತಿಯಲ್ಲಿ BSYಗೆ ಮಹತ್ವದ ಸ್ಥಾನ

udayavani youtube

ಈ ನಡಿಗೆಯನ್ನು ಇಡೀ ದೇಶವೇ ಹಿಂತಿರುಗಿ ನೋಡಿತು!!

udayavani youtube

ಆಳವಾದ ಕಂದಕಕ್ಕೆ ಬಸ್ ಉರುಳಿ ಬಿದ್ದು, ಐಟಿಬಿಪಿಯ 6 ಯೋಧರು ಸಾವು

udayavani youtube

ಈ ನಡಿಗೆಯನ್ನು ಇಡೀ ದೇಶವೇ ಹಿಂತಿರುಗಿ ನೋಡಿತು!!

ಹೊಸ ಸೇರ್ಪಡೆ

ಈಜಲು ಹೋಗಿ ನಿರುಪಾಲಾದ ಎಂಜಿನಿಯರ್: ಎರಡನೇ ದಿನಕ್ಕೆ ಮುಂದುವರೆದ ಶೋಧ ಕಾರ್ಯ

ಈಜಲು ಹೋಗಿ ನಿರುಪಾಲಾದ ಇಂಜಿನಿಯರ್ : ಎರಡನೇ ದಿನಕ್ಕೆ ಮುಂದುವರೆದ ಶೋಧ ಕಾರ್ಯ

ರಾಯಚೂರನ್ನು ತೆಲಂಗಾಣದೊಳಕ್ಕೆ ವಿಲೀನಗೊಳಿಸಲು ಜನರು ಒತ್ತಾಯಿಸುತ್ತಿದ್ದಾರೆ: ಸಿಎಂ ಕೆಸಿಆರ್

ರಾಯಚೂರನ್ನು ತೆಲಂಗಾಣದೊಳಕ್ಕೆ ವಿಲೀನಗೊಳಿಸಲು ಜನರು ಒತ್ತಾಯಿಸುತ್ತಿದ್ದಾರೆ: ಸಿಎಂ ಕೆಸಿಆರ್

ಉಡುಪಿಯಲ್ಲಿ ನಾಳೆ ಕೃಷ್ಣಾಷ್ಟಮಿ, ನಾಡಿದ್ದು ವಿಟ್ಲ ಪಿಂಡಿ

ಉಡುಪಿಯಲ್ಲಿ ನಾಳೆ ಕೃಷ್ಣಾಷ್ಟಮಿ, ನಾಡಿದ್ದು ವಿಟ್ಲ ಪಿಂಡಿ

4CONGRESS

ಕಾಂಗ್ರೆಸ್ ನಾಯಕರ ಹೇಳಿಕೆ ವಿರುದ್ಧ ಮುಸ್ಲಿಂ ಮುಖಂಡನ ಆಕ್ರೋಶ: ವಿಡಿಯೋ ವೈರಲ್‌

thumb military

ಮಡಿಕೇರಿ; ದೇಶ ಕಾಯುವವನ ಹೆತ್ತವರಿಗೇ ರಕ್ಷಣೆ ಇಲ್ಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.