Udayavni Special

ಕೊಳವೆ ಬಾವಿ: ನೀತಿ ಸಂಹಿತೆ ಅಡಿಯಾಗದು


Team Udayavani, Mar 13, 2019, 6:22 AM IST

14-march-5.jpg

ಸುಳ್ಯ : ತಾಲೂಕಿನ ನಗರ ಅಥವಾ ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾದ ಸಂದರ್ಭ ಸ್ಥಳೀಯಾಡಳಿತ ಅಥವಾ ಇಲಾಖೆಗಳು ಕೊಳವೆಬಾವಿ ಅಥವಾ ಪರ್ಯಾಯ ಅಗತ್ಯ ಕ್ರಮ ಕೈಗೊಳ್ಳಲು ಲೋಕಸಭಾ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಡಾ| ಮಂಜುನಾಥ್‌ ಕೆ. ಹೇಳಿದರು.

ತಾಲೂಕು ಕಚೇರಿಯಲ್ಲಿ ವಿವಿಧ ಪಕ್ಷಗಳ ಪ್ರಮುಖರಿಗೆ ಮತ್ತು ಮಾಧ್ಯಮಗಳಿಗೆ ಮಾಹಿತಿ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಜಿಲ್ಲಾಧಿಕಾರಿ ಅವರಿಂದ ಒಪ್ಪಿಗೆ ಪಡೆದು ಹೊಸ ಕೊಳವೆ ಬಾವಿ ಕಾಮಗಾರಿ ಅಥವಾ ಪರ್ಯಾಯ ವ್ಯವಸ್ಥೆ ಕೈಗೆತ್ತಿಕೊಳ್ಳಬಹುದು ಎಂದರು.

ಉದ್ಘಾಟನೆ ಇಲ್ಲ
ಸರಕಾರಿ ಅನುದಾನದಡಿ ಯಾವುದೇ ಹೊಸ ಕಾಮಗಾರಿಗಳಿಗೆ ಶಿಲಾನ್ಯಾಸ ಅಥವಾ ಕೆಲಸ ಆರಂಭಿಸಲು ಅವಕಾಶ ಇಲ್ಲ. ಈ ಹಿಂದೆ ಕಾಮಗಾರಿ ಆರಂಭ ಗೊಂಡಿದ್ದರೆ ಅದನ್ನು ಮುಂದುವರಿಸಲು ತೊಂದರೆ ಇಲ್ಲ. ಕಾಮಗಾರಿ ಸಂಪೂರ್ಣಗೊಂಡರೂ ಉದ್ಘಾಟನೆ ಮಾಡುವಂತಿಲ್ಲ ಎಂದರು.

5 ಕಡೆ ಚೆಕ್‌ಪೋಸ್ಟ್‌
ಚುನಾವಣಾ ಸುವ್ಯವಸ್ಥೆ ಮತ್ತು ನೀತಿಸಂಹಿತೆ ಕಾಪಾಡುವ ನಿಟ್ಟಿನಲ್ಲಿ ತಾಲೂಕಿನ 5 ಗಡಿಪ್ರದೇಶಗಳಲ್ಲಿ ಪೊಲೀಸ್‌ ಚೆಕ್‌ಪೋಸ್ಟ್‌ ತೆರೆಯಲಾಗಿದೆ. ಮಂಡೆಕೋಲು, ಜಾಲ್ಸೂರು, ಸಂಪಾಜೆ, ಗುಂಡ್ಯ ಹಾಗೂ ನಾರ್ಕೋಡುವಿನಲ್ಲಿ ಪೊಲೀಸ್‌ ಚೆಕ್‌ಪೋಸ್ಟ್‌ ತೆರೆಯಲಾಗಿದ್ದು, 24 ಗಂಟೆಯೂ ಕಾರ್ಯ ನಿರ್ವಹಿಸಲಿವೆ ಎಂದು ಸಹಾಯಕ ಚುನಾವಣಾಧಿಕಾರಿ ಹೇಳಿದರು.

ಫ್ಲೆಕ್ಸ್‌, ಬ್ಯಾನರ್‌ ತೆರವು
ಕಾರ್ಯಕ್ರಮ ಆಯೋಜಿಸುವ ಖಾಸಗಿ ಸ್ಥಳದಲ್ಲಿ ಹೊರತು ಪಡಿಸಿ, ಉಳಿದ ಕಡೆ ಅಳವಡಿಸಿರುವ ಎಲ್ಲ ಫ್ಲೆಕ್ಸ್‌, ಬ್ಯಾನರ್‌ ತೆರವುಗೊಳಿಸಬೇಕು. ಈ ಕಾರ್ಯ ನಡೆದಿದೆ. ಮೂರು ಫ್ಲೈಯಿಂಗ್‌ ಸ್ಕ್ವಾಡ್‌ ಗಳನ್ನು ರಚಿಸಲಾಗಿದೆ. ಈ ತಂಡ 24 ಗಂಟೆಯೂ ಲಭ್ಯವಿದ್ದು, ಅಗತ್ಯವಿದ್ದಲ್ಲಿ ಸಾರ್ವಜನಿಕರು ಸಂಪರ್ಕಿಸಬಹುದು ಎಂದು ಅವರು ಮಾಹಿತಿ ನೀಡಿದರು.

ದಾಖಲಾತಿ ತಂಡ
ರಾಜಕೀಯ ಪಕ್ಷಗಳ ಕಾರ್ಯಕ್ರಮಗಳ ವೀಡಿಯೋ ಚಿತ್ರೀಕರಣಕ್ಕೆ, ಖರ್ಚು-ವೆಚ್ಚಗಳ ದಾಖಲಾತಿಗೆ ತಂಡ ರಚಿಸಲಾಗಿದೆ.  ಯಾವುದೇ ಕಾರ್ಯಕ್ರಮ ಆಯೋಜನೆಗೆ ಮೊದಲು ಅನುಮತಿ ಪಡೆದುಕೊಳ್ಳಬೇಕು. ಸುವಿಧಾ ಆ್ಯಪ್‌ ಮೂಲಕ ದಾಖಲೆ ಸಲ್ಲಿಸಿ ಅನುಮತಿ ಪಡೆಯಬಹುದು. ಸಮಾಧಾನ್‌ ಆ್ಯಪ್‌ ಮೂಲಕ ವಿವಿಧ ಮಾಹಿತಿ ಪಡೆಯಬಹುದು ಎಂದು ಡಾ| ಮಂಜುನಾಥ್‌ ಹೇಳಿದರು.

ಅನುಮತಿ ಬೇಡ; ಗಮನಕ್ಕೆ ತನ್ನಿ
ವಿವಾಹ ಇನ್ನಿತರ ಖಾಸಗಿ ಸಮಾರಂಭಗಳಿಗೆ ಅನುಮತಿ ಪಡೆಯುವ ಅಗತ್ಯವಿಲ್ಲ. ಆದರೆ ಸಾರ್ವಜನಿಕರಿಗೆ ಊಟೋಪಹಾರದ ವ್ಯವಸ್ಥೆಯಿದ್ದಲ್ಲಿ ಅದನ್ನು ಗಮನಕ್ಕೆ ತರಬೇಕು. ರಾಜಕೀಯ ವ್ಯಕ್ತಿಗಳ ಭಾಗೀದಾರಿಕೆ ಇದ್ದರೂ ಮಾಹಿತಿ ನೀಡಬೇಕು ಎಂದು ಹೇಳಿದರು.

1,98,177 ಮತದಾರರು
ಈ ತನಕದ ಅಂಕಿ ಅಂಶಗಳ ಆಧಾರದಲ್ಲಿ 1,98,177 ಮತದಾರರು ಮತ ಚಲಾಯಿಸಲು ಅರ್ಹತೆ ಹೊಂದಿದ್ದಾರೆ. 98,753 ಪುರುಷ ಮತದಾರರು ಹಾಗೂ 99,424 ಮಹಿಳಾ ಮತದಾರರಿದ್ದಾರೆ. ಇನ್ನೂ ಪಟ್ಟಿ ಅಂತಿಮ ಆಗಿಲ್ಲ. ಒಂದಷ್ಟು ಬದಲಾವಣೆ ಆಗಬಹುದು. ಈ ಬಾರಿ 231 ಮತಗಟ್ಟೆಗಳಿವೆ. ಕಳೆದ ಬಾರಿಗಿಂತ ಎರಡು ಹೆಚ್ಚುವರಿ ಮತಗಟ್ಟೆಗಳಿರಲಿವೆ ಎಂದು
ಹೇಳಿದರು.

ಕಳೆದ ವಿಧಾನಸಭಾ ಚುನಾವಣೆ ವೇಳೆ ಸುಳ್ಯದಲ್ಲಿ ಚುನಾವಣಾಧಿಕಾರಿಯಾಗಿದ್ದೆ. ಆ ಚುನಾವಣೆ ಅತ್ಯಂತ ಶಾಂತಿಯುತವಾಗಿ ನಡೆಸಲು ಸರ್ವರು ಸಹಕಾರ ನೀಡಿದ್ದಾರೆ. ಈ ಚುನಾವಣೆಯಲ್ಲಿಯೂ ಎಲ್ಲರ ಸಹಕಾರ ಬಯಸುತ್ತೇನೆ ಎಂದು ಡಾ| ಮಂಜುನಾಥ ಹೇಳಿದರು.

ತಹಶೀಲ್ದಾರ್‌ ಕುಂಞಿ ಅಹ್ಮದ್‌, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮಧು ಕುಮಾರ್‌, ಸೆಕ್ಟರ್‌ ಆಫೀಸರ್‌ ಸೋಮಶೇಖರ ನಾಯಕ್‌ ಉಪಸ್ಥಿತರಿದ್ದರು.

ಸುಳ್ಯದಲ್ಲಿಯೇ ಅನುಮತಿಗೆ ಮನವಿ: ಒಪ್ಪಿಗೆ
ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಪುತ್ತೂರು, ಕಡಬ ತಾಲೂಕಿನ ವ್ಯಾಪ್ತಿಯೂ ಸೇರಿದ್ದು, ಚುನಾವಣಾ ಪ್ರಚಾರ ಸಭೆಗಳಿಗೆ ಅನುಮತಿ ಪಡೆದುಕೊಳ್ಳುವುದು ಕಷ್ಟವಾಗುತ್ತದೆ. ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸುಳ್ಯದಲ್ಲೇ ಅನುಮತಿ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್‌ ಪ್ರತಿನಿಧಿ ಪಿ.ಎಸ್‌. ಗಂಗಾಧರ ಮನವಿ ಮಾಡಿದರು. ಚುನಾವಣೆ ಹಿನ್ನಲೆಯಲ್ಲಿ ತಾಲೂಕು ಕಚೇರಿಯಲ್ಲಿ ಅಧಿಕಾರಿಗಳ, ವಿವಿಧ ಪಕ್ಷಗಳ ಪ್ರತಿನಿಧಿಗಳ ಸಭೆ ನಡೆದ ಸಂದರ್ಭ ಈ ಸಮಸ್ಯೆಯನ್ನು ಚುನಾವಣಾಧಿಕಾರಿ ಅವರ ಗಮನಕ್ಕೆ ತಂದರು. ಈ ಕ್ಷೇತ್ರದ ಉಳಿದ ತಾಲೂಕಿನಲ್ಲಿ ಸಭೆ ನಡೆಸಬೇಕಿದ್ದರೆ ಆಯಾ ತಾ.ಪಂ. ಹಾಗೂ ಪೊಲೀಸ್‌ ಠಾಣೆಗಳ ಅನುಮತಿ ಪಡೆಯಬೇಕಿದೆ. ಇದು ಕಷ್ಟವಾಗುತ್ತಿದೆ. ಹೀಗಾಗಿ ಪಂಚಾಯತ್‌ ಪರವಾನಿಗೆಯನ್ನು ಸುಳ್ಯ ತಾ.ಪಂ.ನಲ್ಲಿ ಹಾಗೂ ಪೊಲೀಸ್‌ ಇಲಾಖೆ ಅನುಮತಿಯನ್ನು ಸುಳ್ಯ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ನೀಡಲು ಕ್ರಮ ಕೈಗೊಳ್ಳಬೇಕು ಎಂದರು. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಸಹಾಯಕ ಚುನಾವಣಾಧಿಕಾರಿ ಡಾ|ಮಂಜುನಾಥ್‌ ಭರವಸೆ ನೀಡಿದರು.

ಕಂಟ್ರೋಲ್‌ ರೂಂ
ಚುನಾವಣೆಗೆ ಸಂಬಂಧಿಸಿ ಯಾವುದೇ ಸಮಸ್ಯೆಗಳು, ಅಕ್ರಮಗಳು ಉಂಟಾದಲ್ಲಿ ತಾಲೂಕು ಕಚೇರಿಯಲ್ಲಿ ಸ್ಥಾಪಿಸಲಾದ ಕಂಟ್ರೋಲ್‌ ರೂಂ ಗೆ ಸಂಪರ್ಕಿಸಬಹುದು. ದಿನದ 24 ತಾಸು ಇದು ಕಾರ್ಯ ನಿರ್ವಹಿಸಲಿದೆ. ದಿನದ ಮೂರು ಹಂತದಲ್ಲಿ ಸಿಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ಸಂಪರ್ಕ ಸಂಖ್ಯೆ: 08257-231231.

ಟಾಪ್ ನ್ಯೂಸ್

ರಾಜಕೀಯದಲ್ಲಿ ನಶೆ ಗಲಾಟೆ!

ರಾಜಕೀಯದಲ್ಲಿ ನಶೆ ಗಲಾಟೆ!

ಬುದ್ಧನ ನಿರ್ವಾಣ ಸ್ಥಳದಲ್ಲಿ ಮೋದಿಯಿಂದ ಅಂ.ರಾ. ವಿಮಾನ ನಿಲ್ದಾಣ ಉದ್ಘಾಟನೆ

ಬುದ್ಧನ ನಿರ್ವಾಣ ಸ್ಥಳದಲ್ಲಿ ಮೋದಿಯಿಂದ ಅಂ.ರಾ. ವಿಮಾನ ನಿಲ್ದಾಣ ಉದ್ಘಾಟನೆ

ಮಧ್ಯಾಂತರ-ನಿಗದಿತ ಚುನಾವಣೆಯ ಲಾಭ ನಷ್ಟದ ಲೆಕ್ಕ

ಮಧ್ಯಾಂತರ-ನಿಗದಿತ ಚುನಾವಣೆಯ ಲಾಭ ನಷ್ಟದ ಲೆಕ್ಕ

ಇಂದು ಕೊನೆಯ ಅಭ್ಯಾಸ ಪಂದ್ಯ: ಭಾರತ-ಆಸ್ಟ್ರೇಲಿಯ ರಣತಂತ್ರ ಕೌತುಕ

ಇಂದು ಕೊನೆಯ ಅಭ್ಯಾಸ ಪಂದ್ಯ: ಭಾರತ-ಆಸ್ಟ್ರೇಲಿಯ ರಣತಂತ್ರ ಕೌತುಕ

ಅಂಗನವಾಡಿ ಕಾರ್ಯಕರ್ತೆಯರು ಉದ್ಯೋಗ ವ್ಯಾಪ್ತಿಗೆ!

ಅಂಗನವಾಡಿ ಕಾರ್ಯಕರ್ತೆಯರು ಉದ್ಯೋಗ ವ್ಯಾಪ್ತಿಗೆ!

ಈಶಾನ್ಯಕ್ಕೆ 6 ಆರು ಹೊಸ ವಾಯುಮಾರ್ಗ

ಈಶಾನ್ಯಕ್ಕೆ 6 ಆರು ಹೊಸ ವಾಯುಮಾರ್ಗ

ಆರ್ಯನ್‌ ಡ್ರಗ್‌ ಕೇಸ್‌: ಸುಪ್ರೀಂ ಮೆಟ್ಟಿಲೇರಿದ ಶಿವಸೇನೆ ನಾಯಕ

ಆರ್ಯನ್‌ ಡ್ರಗ್‌ ಕೇಸ್‌: ಸುಪ್ರೀಂ ಮೆಟ್ಟಿಲೇರಿದ ಶಿವಸೇನೆ ನಾಯಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ನಮ್ಮ ಸೇನೆಗೊಂದು ಸಲಾಂ

udayavani youtube

ಮೋದಿ ಹೆಬ್ಬೆಟ್ಟ್ ಗಿರಾಕಿ ಟ್ವಿಟ್‍ಗೆ ಶಿವಕುಮಾರ್ ವಿಷಾದ

udayavani youtube

ಗೋವಿನಲ್ಲಿ ಶ್ರೇಷ್ಠ ‘ಕಪಿಲಾ’ ಗೋವಿನ ವಿಶೇಷತೆಗಳೇನು ?

udayavani youtube

‘ಡೀಮ್ಡ್ ಫಾರೆಸ್ಟ್’ ಎಂದು ಈ ಕಾರಣಗಳಿಗೆ ಘೋಷಣೆಯಾಗುತ್ತೆ

udayavani youtube

ಚಿಂತಾಮಣಿಯಲ್ಲೊಂದು ದುರಂತ : ಕುರಿ ತೊಳೆಯಲು ಹೋದ ಮೂವರು ಯುವಕರು ನೀರು ಪಾಲು

ಹೊಸ ಸೇರ್ಪಡೆ

ಜಮ್ಮು-ಕಾಶ್ಮೀರದಲ್ಲೀಗ ಟಾರ್ಗೆಟ್‌ ಕಿಲ್ಲಿಂಗ್‌

ಜಮ್ಮು-ಕಾಶ್ಮೀರದಲ್ಲೀಗ ಟಾರ್ಗೆಟ್‌ ಕಿಲ್ಲಿಂಗ್‌

ಇಂಗ್ಲೆಂಡಿಗೆ ಒಲಿಯಿತು ಮೊದಲ ಐಸಿಸಿ ವಿಶ್ವಕಪ್‌

ಇಂಗ್ಲೆಂಡಿಗೆ ಒಲಿಯಿತು ಮೊದಲ ಐಸಿಸಿ ವಿಶ್ವಕಪ್‌

ರಾಜಕೀಯದಲ್ಲಿ ನಶೆ ಗಲಾಟೆ!

ರಾಜಕೀಯದಲ್ಲಿ ನಶೆ ಗಲಾಟೆ!

ಬದಲಾವಣೆಯನ್ನೇ ಭರವಸೆಯಾಗಿಸಿದ ಶಿಕ್ಷಣ

ಬದಲಾವಣೆಯನ್ನೇ ಭರವಸೆಯಾಗಿಸಿದ ಶಿಕ್ಷಣ

ಅಯೋಧ್ಯೆಗೆ ಆರ್‌ಎಸ್‌ಎಸ್‌ ಮುಖ್ಯಸ್ಥರಾಗಿರುವ ಮೋಹನ್‌ ಭಾಗವತ್‌ ಭೇಟಿ

ಅಯೋಧ್ಯೆಗೆ ಆರ್‌ಎಸ್‌ಎಸ್‌ ಮುಖ್ಯಸ್ಥರಾಗಿರುವ ಮೋಹನ್‌ ಭಾಗವತ್‌ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.